Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಪ್ರಿಯಾಂಕಾ: ಕುಂಡದಲ್ಲಿ ಬೆಳೆದ ಕೆಂಗುಲಾಬಿ

$
0
0



ಕನ್ನಡ ಚಿತ್ರ



* ಪದ್ಮಾ ಶಿವಮೊಗ್ಗ

ಕೆಲ ವರ್ಷಗಳ ಹಿಂದೆ ದಿನೇಶ್ ಬಾಬು ಶರತ್, ಸುಹಾಸಿನಿ ಮತ್ತು ರಮೇಶ್ ಅರವಿಂದ್ ಅಭಿನಯದ ಅಮೃತವರ್ಷಿಣಿ ಚಿತ್ರ ಹಿಟ್ ಆಗಿತ್ತು. ಈಗ ಅವರದೇ ನಿರ್ದೇಶನದ 'ಪ್ರಿಯಾಂಕಾ' ಚಿತ್ರವನ್ನು ನೋಡುವಾಗ ಮತ್ತೆ ಅದು ನೆನಪಾದರೆ ಆಶ್ಚರ್ಯವಿಲ್ಲ. ಅದೇ ರೀತಿ ಪ್ರೀತಿಯ ಫ್ಲೇವರ್ ಇರುವ ಕ್ರೈಂ ಸ್ಟೋರಿ ಚಿತ್ರ 'ಪ್ರಿಯಾಂಕಾ'. ಬೆಂಗಳೂರಿನಲ್ಲಿ 2014ರಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ ಚಿತ್ರ ಅನ್ನೋದು ಇದರ ಸ್ಪೆಷಾಲಿಟಿ.

ಚಿತ್ರ ಕೊಲೆಯಾದ ಟೆಕ್ಕಿಯೊಬ್ಬನ ದೃಶ್ಯದೊಂದಿಗೆ ಪ್ರಾರಂಭವಾಗುತ್ತದೆ. ಟೆಕ್ಕಿ ಸಿದ್ಧಾಂತ್ ಪತ್ನಿ ಪ್ರಿಯಾಂಕಾ ಮತ್ತು ಪ್ರಿಯಕರ ಅಶ್ವತ್ಥ್‌ನ ಇನ್ವೇಷ್ಟಿಗೇಷನ್ ಮಧ್ಯೆ ಅಲ್ಲೀವರೆಗೆ ನಡೆದದ್ದು ಏನು ಎನ್ನುವುದು ಫ್ಲಾಶ್ ಬ್ಯಾಕ್‌ನಲ್ಲಿ ತೆರೆಯ ಮೇಲೆ ತೋರಿಸಲಾಗುತ್ತದೆ. ಮದುವೆಯಾದ ನಂತರ ಪ್ರೀತಿ ಮತ್ತು ಸಂಬಂಧದಲ್ಲಿ ಸ್ವಾರಸ್ಯ ಕಡಿಮೆಯಾಯಿತೆಂದು ಗಂಡ-ಹೆಂಡತಿಗೆ ಅನ್ನಿಸತೊಡಗುತ್ತದೆ. ಆದರೆ, ಒಮ್ಮೆ ನೋಡಿದ ಕ್ಷಣದಿಂದಲೇ ಪ್ರಿಯಾಂಕಳಿಗೆ ಮಾರುಹೋಗುವ ಯುವಕ ಅಶ್ವತ್ಥನಿಗೆ ಅವಳು ಪ್ರೀತಿಯ ಕೆಂಗುಲಾಬಿ. ಇಬ್ಬರ ನಡುವೆ ಫೇಸ್‌ಬುಕ್‌ನಲ್ಲಿ ಚ್ಯಾಟಿಂಗ್ ಶುರು. ಒಂದೆರಡು ಬಾರಿ ಮೆಸೇಜ್ ಕಳಿಸುತ್ತಿದ್ದಂತೆಯೇ ಅಶ್ವತ್ಥ ತನ್ನ ಪ್ರೀತಿಯನ್ನು ತಿಳಿಸಲು ಹಿಂಜರಿಯುವುದಿಲ್ಲ. ಈ ತಪ್ಪನ್ನು ತಿದ್ದಿಕೊಳ್ಳಲು ಗಂಡ ಅಶ್ವತ್ಥ್‌ಗೆ ಹೇಳುತ್ತಾನೆ. ಕೊನೆಗೆ ಸಿದ್ಧಾಂತ್ ಮತ್ತು ಪ್ರಿಯಾಂಕಾ ಅಮೆರಿಕಾದಲ್ಲಿ ನೆಲೆಸಲು ಹೊರಡುತ್ತಾರೆ. ಸಿದ್ಧಾಂತ್ ಕೊಲೆಯಾಗುತ್ತದೆ. ಮುಂದೆ ಏನಾಗುತ್ತದೆ ಅನ್ನೋದನ್ನು ಸಿನಿಮಾದಲ್ಲಿ ನೋಡಿ.

ಇಂಥ ಹಲವಾರು ಕ್ರೈಂ ಸ್ಟೋರಿಗಳನ್ನು ಟಿವಿಯಲ್ಲಿ ಜನ ಸಾಕಾಗುವಷ್ಟು ನೋಡಿದ್ದಾರೆ. ಹಾಗೆ ನೋಡಿದರೆ, ಚಿತ್ರದಲ್ಲಿ ಸಸ್ಪೆನ್ಸ್ ಕಾಪಾಡಲು ನಿರ್ದೇಶಕ ಪ್ರಯತ್ನಿಸಿಲ್ಲ. ಪ್ರಿಯಾಂಕಾ ಮತ್ತು ಅಶ್ವತ್ಥ್‌ರನ್ನು ಇಬ್ಬರು ಪೋಲಿಸ್ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ಮಾಡುತ್ತಾರೆ. ಈ ವಿಚಾರಣೆ ಸಂದರ್ಭದಲ್ಲಿ ಪದೇ ಪದೇ ಫ್ಲಾಶ್ ಬ್ಯಾಕ್‌ನಲ್ಲೇ ಎಲ್ಲವನ್ನೂ ನೋಡುವುದು ಮಜ ಅನ್ನಿಸುವುದಿಲ್ಲ. ಕತೆಗೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟಿದ್ದಾರೆ. ಉಳಿದಂತೆ ಪಾತ್ರಗಳ ಮಾನಸಿಕ ತೊಳಲಾಟ ಪ್ರೇಕ್ಷಕನ ಮನಸ್ಸನ್ನು ತಟ್ಟುವಷ್ಟು ಗಾಢವಾಗಿ ಚಿತ್ರಿತವಾಗಿಲ್ಲ. ಕ್ರೈಂ ರಿಪೋರ್ಟ್ ಓದಿದಂತೆ ನೀರಸ ಅನ್ನಿಸಿದರೆ ಆಶ್ಚರ್ಯವಿಲ್ಲ.

ಉತ್ತಮ ಅಭಿನಯ ನೀಡಿರುವ ಪ್ರಿಯಾಂಕಾ ಉಪೇಂದ್ರ ಮಿಂಚಿದ್ದಾರೆ. ಟಿಪಿಕಲ್ ಪೋಲಿಸ್ ಇನ್ವೆಸ್ಟಿಗೇಟಿವ್ ಆಫೀಸರ್ ಆಗಿ ಪ್ರಕಾಶ್ ರೈ ಮೆಚ್ಚುಗೆ ಗಳಿಸುತ್ತಾರೆ. ಚಿತ್ರಕ್ಕೆ ಛಾಯಾಗ್ರಹಣವನ್ನೂ ತಾವೇ ಮಾಡಿರುವ ನಿರ್ದೇಶಕ ದಿನೇಶ್ ಬಾಬು ಕಣ್ಣಿಗೆ ಹಿತವೆನಿಸುವಂತೆ ಸುಂದರವಾಗಿ ಚಿತ್ರಿಸಿದ್ದಾರೆ. ಪ್ರಿಯಾಂಕಾ ಟೈಟಲ್ ಸಾಂಗ್ ಹೆಚ್ಚು ಇಷ್ಟವಾಗುತ್ತದೆ. ಲಾಂಗು ಮಚ್ಚುಗಳ ಅಬ್ಬರದ ನಡುವೆ ತಣ್ಣಗೆ 'ಪ್ರಿಯಾಂಕಾ' ಚಿತ್ರ ಒಮ್ಮೆ ನೋಡಲು ಅಡ್ಡಿಯಿಲ್ಲ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!