Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಜ್ವಲಂತಂ: ಆಪರೇಷನ್ ಸಕ್ಸೆಸ್ ಪೇಶಂಟ್ ಡೆಡ್

$
0
0

* ಎಚ್. ಮಹೇಶ್

ಹೊಸ ಹುಡುಗರು ಚಿತ್ರರಂಗದಲ್ಲಿ ಏನಾದರೂ ಮ್ಯಾಜಿಕ್ ಮಾಡುತ್ತಾರೆ ಎಂಬ ಭರವಸೆ ಮತ್ತೊಮ್ಮೆ ಹುಸಿಯಾಗಿದೆ. ಜ್ವಲಂತಂ ಚಿತ್ರದ ಟ್ರೈಲರ್ ನೋಡಿ ಚಿತ್ರಮಂದಿರಕ್ಕೆ ಹೋದ ಪ್ರೇಕ್ಷಕ ಜೀವ ಇಲ್ಲದ ಜ್ವಲಂತಂ ನೋಡಿ ವಾಪಸ್ಸು ಬರುತ್ತಾನೆ. ಸಮುದ್ರ ದಡದಲ್ಲಿ ಕತ್ತಿನವರೆಗೂ ನಾಯಕ ಜ್ವಾಲಾನನ್ನು ಹೂತು ಹಾಕಿರುತ್ತಾರೆ. ಅನ್ನ, ನೀರಿಲ್ಲದೇ ಬಸವಳಿದಿರುವಾಗ ಅಲೆಯೊಂದು ಸತ್ತ ಮೀನನ್ನು ನಾಯಕನ ಬಾಯಿ ಹತ್ತಿರ ತಂದು ಬಿಡುತ್ತದೆ. ಹಸಿ ಮೀನನ್ನು ನಾಯಕ ತಿನ್ನುತ್ತಾನೆ. ಅದೇ ರೀತಿ ನಾಯಕನ ಮುಖದ ಮೇಲೆ ಹುಳವೊಂದು ಓಡಾಡುತ್ತದೆ. ಅದನ್ನು ನಾಯಕ ಕಚ ಕಚ ಎಂದು ತಿಂದು ಮುಗಿಸುತ್ತಾನೆ. ನಾಯಕನನ್ನು ಕೊಲ್ಲಲು ಖಳ ನಾಯಕ ಬರುತ್ತಾನೆ. ಕಾಲಿನಿಂದ ನಾಯಕನ ಮುಖಕ್ಕೆ ಹೊದೆಯುವಾಗ ಕಾಲ ಬೆರಳನ್ನೇ ನಾಯಕ ತಿನ್ನುತ್ತಾನೆ. ಹೀಗೆ ನಾಯಕ ವಿರಾಮದ ನಂತರ ಬರೀ ಮಾಂಸ ತಿನ್ನುವ ಕಾಯಕದಲ್ಲೇ ತೊಡಗುತ್ತಾನೆ. ಈ ದೃಶ್ಯ ನೋಡುವ ಪ್ರೇಕ್ಷಕ ಮುಖವನ್ನು ಪಕ್ಕಕ್ಕೆ ತಿರುಗಿಸಿಕೊಳ್ಳುತ್ತಾನೆ. ಹೀಗೆ ಚಿತ್ರದ ಕತೆ ಪ್ರಾರಂಭವಾಗುವುದೇ ವಿರಾಮದ ನಂತರ.

ಕಡಲ ತೀರದಲ್ಲಿ ವಾಸವಾಗಿರುವ ಮನುಷ್ಯರನ್ನು ಕೊಲ್ಲುವ ಜನಾಂಗದ ಕತೆಯೇ ಜ್ವಲಂತಂ ಚಿತ್ರದ ಡಿಫರೆಂಟ್ ಸ್ಟೋರಿ ಲೈನ್. ಆದರೆ ಅದು ನಿಜಕ್ಕೂ ತೆರೆಮೇಲೆ ನೋಡಿದಾಗ ಚಿತ್ರದ ಕತೆ ರೈಲ್ವೆ ಹಳಿಯಿಂದ ಜಾರಿ ಅಪಘಾತಕ್ಕೆ ಹೀಡಾಗಿರುವಂತೆ ಕಾಣಿಸುತ್ತದೆ. ಚಿತ್ರದ ಮೊದಲಾರ್ಧ ನಿಜಕ್ಕೂ ಬೋರಿಂಗ್. ಅದೇ ನಾಯಕನಿಗೆ ಸೇಮ್ ಓಲ್ಡ್ ಬಿಲ್ಡ್ ಅಪ್ ಶಾಟ್ಸ್ . ನಾಯಕನಿಗೆ ಇಂಟ್ರಡಕ್ಷನ್ ಹಾಡು. ಒಂದೊಳ್ಳಿ ಕತೆಯನ್ನು ಇಟ್ಟುಕೊಂಡು ನಿರ್ದೇಶಕರು ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಜೋತು ಬಿದ್ದು ಸಿನಿಮಾ ಮಾಡಿದ್ದಾರೆ. ಕಾಡಿನಲ್ಲಿ ಐಟಂ ಸಾಂಗ್ ಪ್ಲೇ ಮಾಡುತ್ತಾರೆ. ಈ ಮೂಲಕ ಕತೆಯ ಗಾಂಭೀರ್ಯತೆಗೆ ದಕ್ಕೆ ತರುತ್ತಾರೆ. ನಾಯಕ ಜ್ವಾಲಾ ಮುದ್ದಾಗಿ ಕಾಣುತ್ತಾರೆ. ಪಾಪಾ ಅವರು ಹಸಿ ಮೀನನ್ನು ರಿಯಲ್ ಆಗಿಯೇ ತಿನ್ನುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ಚಿತ್ರಕ್ಕೆ ಪ್ಲಸ್ ಆಗಿದೆ ಎಂಬುದೇ ಯಕ್ಷ ಪ್ರಶ್ನೆ.

ಚಿತ್ರದ ಡೈಲಾಗ್‌ಗಳಲ್ಲಿ ಪಂಚಿಂಗ್ ಇದೆ. ಆದರೆ ಅದು ಕೂಡ ಕ್ಲೀಷೆ ಅನಿಸುತ್ತದೆ. ನಾಯಕಿ ದೀಪ್ತಿಗೆ ಇದು ಹೊಸ ಚಿತ್ರ. ಹೊಸ ಅನುಭವ. ಹಾಗಾಗಿ ಅವರ ಅಪ್ರಬುದ್ಧ ನಟನೆ ಎದ್ದು ಕಾಣುತ್ತದೆ. ದೀಪಾ ಗೌಡ ಬೋಲ್ಡ್ ಆಗಿ ನಟಿಸಲು ಪ್ರಯತ್ನಿಸಿದ್ದಾರೆ. ಜರ್ನಲಿಸ್ಟ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟನೆ ಗಮನ ಸೆಳೆಯಲು ವಿಫಲವಾಗಿದೆ. ಹಾಡುಗಳಲ್ಲೂ ಅಂಥಹ ಗಮ್ಮತ್ತಿಲ್ಲ. ಕ್ಯಾಮೆರಾ ಕೆಲಸ ಓಕೇ. ನಿರ್ದೇಶಕರು ಒಳ್ಳೆ ಕತೆಯನ್ನು ಆಯ್ಕೆ ಮಾಡಿಕೊಂಡು ಬೋರಿಂಗ್ ಸ್ಕ್ರೀನ್ ಪ್ಲೇ ಹೆಣಿದಿರುವುದರಿಂದ ಚಿತ್ರ ಕೂಡ ಬೋರ್ ಅನಿಸುತ್ತದೆ. ಜ್ವಲಂತಂಗೆ ನಿರ್ದೇಶಕರು ಇನ್ನಷ್ಟು ಜೀವ ತುಂಬುವ ಕೆಲಸ ಮಾಡಬೇಕಿತ್ತು. ತಾವು ಅಂದುಕೊಂಡ ಕತೆಯನ್ನು ಅವರು ತೆರೆಮೇಲೆ ತರಲು ಪರಿಣಾಮಕಾರಿಯಾಗಿ ತೋರಿಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಆಪರೇಷನ್ ಸಕ್ಸೆಸ್ ಪೇಶಂಟ್ ಡೆಡ್ ಎಂಬಂತೆ ಆಗಿದೆ.


Viewing all articles
Browse latest Browse all 7056

Latest Images

Trending Articles



<script src="https://jsc.adskeeper.com/r/s/rssing.com.1596347.js" async> </script>