Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಜ.18ರಿಂದ ಚಿನ್ನದ ಬಾಂಡ್ ಯೋಜನೆ ಶುರು

$
0
0

ಹೊಸದಿಲ್ಲಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಚಿನ್ನದ ನಗದೀಕರಣ ಬಾಂಡ್ ಯೋಜನೆಯ ಎರಡನೇ ಹಂತವು ಜ.18ರಂದು ಆರಂಭವಾಗಲಿದೆ.

ದೇಶದ ದೇವಸ್ಥಾನ ಮತ್ತು ಮನೆಗಳಲ್ಲಿ ವ್ಯರ್ಥವಾಗಿ ಬಿದ್ದಿರುವ ಚಿನ್ನವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರಕಾರವು ಬಾಂಡ್ ಯೋಜನೆಯ ಮೊದಲ ಹಂತದಲ್ಲಿ(ನವೆಂಬರ್ 2015) 246 ಕೋಟಿ ರೂ. ಮೌಲ್ಯದ 915.95 ಕೆ.ಜಿ. ಚಿನ್ನವನ್ನು ಸಾರ್ವಜನಿಕರಿಂದ ಠೇವಣಿ ರೂಪದಲ್ಲಿ ಸಂಗ್ರಹಿಸಿತ್ತು.

''ಎರಡನೇ ಹಂತವು ಜ.18ರಿಂದ 22ರ ತನಕ ಚಾಲನೆಯಲ್ಲಿರಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು,'' ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಶುಕ್ರವಾರ ತಿಳಿಸಿದ್ದಾರೆ.

ಬ್ಯಾಂಕ್‌ಗಳ ಮುಖ್ಯ ವ್ಯವಸ್ಥಾಪಕ ನಿರ್ದೇಶಕರ ಜತೆ ವಿಡಿಯೊ ಕಾನ್ಫರೆನ್ಸ್ ನಡೆಸಿದ ಜೇಟ್ಲಿ, ''ಬ್ಯಾಂಕ್‌ಗಳು ಹೆಚ್ಚಿನ ಪ್ರಯತ್ನದ ಮೂಲಕ ಬಾಂಡ್ ಯೋಜನೆಯತ್ತ ಹೂಡಿಕೆದಾರರನ್ನು ಆಕರ್ಷಿಸಬೇಕು,'' ಎಂದು ಸೂಚಿಸಿದರು.

''ಜನರಲ್ಲಿ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಆಕಾಶವಾಣಿ, ಎಫ್‌ಎಂ ರೇಡಿಯೊ, ಪತ್ರಿಕೆಗಳನ್ನು ಬಳಸಿಕೊಳ್ಳಲಾಗುವುದು. ಎಸ್‌ಎಂಎಸ್ ಆಂದೋಲನವನ್ನೂ ನಡೆಸಲಾಗುವುದು,'' ಎಂದು ವಿತ್ತ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಅವರು ಟ್ವೀಟ್ ಮಾಡಿದ್ದಾರೆ.

ಚಿನ್ನಕ್ಕೆ ಮಾರುಕಟ್ಟೆಗಿಂತಲೂ ಕಡಿಮೆ ದರ ನಿಗದಿ ಮಾಡುವುದು ಮತ್ತು ಕಡಿಮೆ ಬಡ್ಡಿ ದರದಿಂದ ಗ್ರಾಹಕರು ಯೋಜನೆ ಬಗ್ಗೆ ಮೊದಲ ಹಂತದಲ್ಲಿ ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ಅಲ್ಲದೇ ಠೇವಣಿಯಾಗಿ ಇಡುವ ಚಿನ್ನವನ್ನು ಕರಗಿಸಲಾಗುತ್ತದೆ ಎನ್ನುವ ಅಂಶವು ಜನರಿಗೆ ನಿರಾಶೆ ತಂದಿತ್ತು.


Viewing all articles
Browse latest Browse all 7056

Trending Articles


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಕಾರಿನಲ್ಲೇ 19 ದೇಶ ಸುತ್ತಿದ್ದಾರೆ ಈ ದಂಪತಿ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>