Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸ್ಟಾರ್ಟಪ್‌ಗಳಿಗೆ ಪ್ರತ್ಯೇಕ ಶಾಖೆ ತೆರೆದ ಎಸ್‌ಬಿಐ

$
0
0

ಬೆಂಗಳೂರು: ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿಯೇ ಮೊದಲ ಬಾರಿಗೆ ಸ್ಟಾರ್ಟಪ್‌ಗಳಿಗೆ ಮೀಸಲಾಗಿರುವ ಶಾಖೆಯನ್ನು ಬೆಂಗಳೂರಿನಲ್ಲಿ ಗುರುವಾರ ಆರಂಭಿಸಿದೆ.

ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಈ ನೂತನ ' ಎಸ್‌ಬಿಐ ಇನ್‌ಕ್ಯೂಬ್' ಶಾಖೆ ಯನ್ನು ಎಸ್‌ಬಿಐ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಟ್ಟಾಚಾರ್ಯ, ಬೆಂಗಳೂರು ಸ್ಟಾರ್ಟಪ್‌ಗಳಿಗೆ ದೇಶದಲ್ಲೇ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ಹೊಸ ಬಗೆಯ ಐಡಿಯಾಗಳೊಂದಿಗೆ ತಮ್ಮದೇ ಕಂಪನಿಯನ್ನು ಸ್ಥಾಪಿಸಲು ಬಯಸುವ ಯುವ ಉದ್ಯಮಿಗಳಿಗೆ ಎಸ್‌ಬಿಐ ಇನ್‌ಕ್ಯೂಬ್ ಶಾಖೆ ಹಣಕಾಸು ನೆರವು ಮತ್ತು ಮಾರ್ಗದರ್ಶನ ನೀಡಲಿದೆ ಎಂದರು.

ಬೆಂಗಳೂರು ಹೊರತುಪಡಿಸಿ ಪುಣೆ ಮತ್ತು ಎನ್‌ಸಿಆರ್ (ನ್ಯಾಶನಲ್ ಕ್ಯಾಪಿಟಲ್ ರೀಜನ್) ವ್ಯಾಪ್ತಿಯಲ್ಲಿ ಎಸ್‌ಬಿಐ ಇನ್‌ಕ್ಯೂಬ್ ಶಾಖೆ ಆರಂಭವಾಗಲಿದೆ. ಸ್ಟಾರ್ಟಪ್‌ಗಳಿಗೆ ಸಂಬಂಧಿಸಿದ ಹಣಕಾಸು ಪ್ರಕ್ರಿಯೆ, ನೋಂದಣಿ, ವಿದೇಶಿ ವಿನಿಮಯ ಪಾವತಿ, ವೆಂಚರ್ ಕ್ಯಾಪಿಟಲ್ ಇತ್ಯಾದಿಗಳಿಗೆ ಸಲಹೆ, ಮಾರ್ಗದರ್ಶನವನ್ನು ಕೂಡ ಈ ಶಾಖೆ ನೀಡಲಿದೆ. ಆರಂಭಿಕ ಹಂತದಲ್ಲಿ ಸ್ಟಾರ್ಟಪ್‌ಗಳಿಗೆ ಸಾಲವನ್ನು ಬ್ಯಾಂಕ್ ಮಂಜೂರು ಮಾಡುವುದಿಲ್ಲ. ಆದರೆ ಸ್ಟಾರ್ಟಪ್‌ಗಳಿಗೆ ಕಂಪನಿಯ ಲೆಕ್ಕಪತ್ರಗಳು, ತೆರಿಗೆ ಹಾಗೂ ವಿದೇಶಿ ಮೂಲದ ಸಾಲ ಸೇರಿದಂತೆ ಹಣಕಾಸು ವ್ಯವಸ್ಥೆಯನ್ನು ಹೇಗೆ ನಿರ್ವಹಿಸಬೇಕು ಬಗ್ಗೆ ತಜ್ಞರಿಂದ ಸಲಹೆ ಒದಗಿಸಲಿದೆ. ಸ್ಟಾರ್ಟಪ್ ಬೆಳವಣಿಗೆಯಾದ ನಂತರ ಸಾಲ ಸೌಲಭ್ಯವನ್ನೂ ನೀಡಲಾಗುವುದು. ಕೇವಲ ಮಾಹಿತಿ ತಂತ್ರಜ್ಞಾನ ಆಧಾರಿಯ ಸ್ಟಾರ್ಟಪ್‌ಗಳನ್ನು ಮಾತ್ರವಲ್ಲದೆ, ಇತರ ಯಾವುದೇ ಹೊಸತನದ ಐಡಿಯಾಗಳನ್ನು ಒಳಗೊಂಡಿರುವ ಸ್ಟಾರ್ಟಪ್‌ಗಳಿಗೆ ಕೂಡ ಎಸ್‌ಬಿಐ ಇನ್‌ಕ್ಯೂಬ್ ತನ್ನ ಸೇವೆ ನೀಡಲಿದೆ ಎಂದು ಅರುಂಧತಿ ಭಟ್ಟಾಚಾರ್ಯ ತಿಳಿಸಿದರು. ಎಸ್‌ಬಿಐ ಎಕ್ಸ್‌ಕ್ಲೂಸಿಫ್ ಎಂಬ ವೆಲ್ತ್ ಮ್ಯಾನೇಜ್‌ಮೆಂಟ್ ಸೇವೆಗೂ ಭಟ್ಟಾಚಾರ್ಯ ಈ ಸಂದರ್ಭ ಚಾಲನೆ ನೀಡಿದರು.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸಲು ಮನವಿ:

ಕೇಂದ್ರ ಬಜೆಟ್ ಪೂರ್ವ ಸಭೆಯಲ್ಲಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ವಿಸ್ತರಿಸುವುದು, ಕೃಷಿ ವಲಯಕ್ಕೆ ಸಾಲ ವಿಸ್ತರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಮುಂದಿಡಲಾಗಿದೆ ಎಂದು ಅರುಂಧತಿ ಭಟ್ಟಾಚಾರ್ಯ ತಿಳಿಸಿದರು.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>