Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಮಹಿಳೆಯರು ಸಂಘಟನೆ ಸಕ್ರಿಯವಾಗಿ ಪಾಲ್ಗೊಳ್ಳಿ

$
0
0

ಚಿತ್ರದುರ್ಗ : ಮಹಿಳೆಯರು ಸಕ್ರಿಯವಾಗಿ ಪಕ್ಷದ ಸಂಘಟನಾ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಬೇಕು ಎಂದು ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್‌ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯ ಕಾರಿಣಿ ಸಭೆಯಲ್ಲಿ ಮಾತನಾಡಿ, 'ರಾಜಕೀಯದಲ್ಲಿ ಮಹಿಳೆಯರಿ ಶೇ.33ರಷ್ಟು ಮೀಸಲಾತಿ ಇದೆ. ಮಹಿಳೆಯರು ಸಕ್ರಿಯವಾಗದಿದ್ದಲ್ಲಿ ಪುರುಷರು ಅಧಿಕಾರ ಚಲಾಯಿಸುವ ಸನ್ನಿವೇಶ ನಿರ್ಮಾಣವಾಗುತ್ತದೆ. ನಿಮ್ಮ ಪಾತ್ರ ನೀವು ನಿರ್ವಹಿಸಲೇಬೇಕು' ಎಂದು ಹೇಳಿದರು.

ಮೀಸಲಾತಿ ಅನ್ವಯ ಪ್ರತಿ ಮಂಡಲದಲ್ಲಿ ಇಬ್ಬರನ್ನು ನೇಮಿಸಿಕೊಳ್ಳಬೇಕು. ಬೇರೆ ಪಕ್ಷ ಗಳು ಚುನಾವಣೆ ಸಮಯದಲ್ಲಿ ಸಕ್ರಿಯವಾಗುತ್ತವೆ. ಬಿಜೆಪಿ ನಿರಂತರವಾಗಿ ಚಟುವಟಿಕೆ ನಡೆಸುತ್ತಿರುತ್ತದೆ. ಈ ಪ್ರಕ್ರಿಯೆಯಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ತೊಡಗಿಕೊಳ್ಳಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌.ನವೀನ್‌ ಮಾತನಾಡಿ, 'ಮುಂಬರುವ ಚುನಾವಣೆಗೆ ಇದು ಪರ್ವಕಾಲವಾಗಿರುವುದರಿಂದ ಮಹಿಳಾ ಮೋರ್ಚಾದಿಂದ ದಿನನಿತ್ಯವು ಪಕ್ಷ ದ ಕಾರ್ಯಕ್ರಮ ಸಂಘಟಿಸಬೇಕು. ಹೊಸ ಮತದಾರರನ್ನು ಮತಪಟ್ಟಿಗೆ ಸೇರ್ಪಡೆ ಮಾಡಬೇಕು. ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಹೆಸರು ಸೇರ್ಪಡೆ ಮಾಡಿದರೆ, ಪಕ್ಷ ಕ್ಕೆ ಒಂದು ಮತ ಸಿಕ್ಕಂತಾಗುತ್ತದೆ. ಎಲ್ಲಕ್ಕೂ ಮಿಗಿಲಾಗಿ ನಿಮ್ಮನ್ನು ಪ್ರೀತಿ ಗೌರವದಿಂದ ಕಾಣುತ್ತಾರೆ' ಎಂದರು.

ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಶಿವಪ್ರಕಾಶ್‌ ಮಾತನಾಡಿ, 'ಪ್ರಧಾನಿ ನರೇಂದ್ರಮೋದಿ ದೇಶದ ಬಡವರಿಗಾಗಿ ಅನೇಕ ಯೋಜನೆಗಳನ್ನು ಕೊಡುಗೆ ಯಾಗಿ ನೀಡಿದ್ದಾರೆ. ಅವುಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುವ ಮೂಲಕ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮಾಡಬೇಕು' ಎಂದು ಹೇಳಿದರು.

ರಾಜ್ಯ ಮಹಿಳಾ ಕಾರ್ಯದರ್ಶಿ ಜಯಲಕ್ಷ್ಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರತ್ನಮ್ಮ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಶೈಲಜಾರೆಡ್ಡಿ, ಪಿ.ಲೀಲಾಧರ್‌ ಠಾಕೂರ್‌ ಮಾತನಾಡಿದರು.

ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ಆಶಾರಾಣಿ, ಶಾರದ, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್‌, ದಾವಣಗೆರೆ ಜಿಲ್ಲಾ ಮಹಿಳಾ ಕಾರ್ಯದರ್ಶಿ ಭಾರತಿ ವೇದಿಕೆಯಲ್ಲಿದ್ದರು.

ಮಂಡಲ ಅಧ್ಯಕ್ಷ ರುಗಳಾದ ವೇದಾವತಿ, ಕವಿತ, ಬೊಮ್ಮಕ್ಕ, ಶ್ರೀದೇವಿ, ಪಾರ್ವತಮ್ಮ, ನಂದ, ಉಪಾಧ್ಯಕ್ಷೆ ಚಂದ್ರಿಕ ಲೋಕನಾಥ್‌ ಮತ್ತಿತರ ಮಹಿಳಾ ಪದಾಧಿಕಾರಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>