Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಆರ್‌ಟಿಇ ಗೊಂದಲ ಸರಿಪಡಿಸಿ

$
0
0

ಬಡ ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಮೀಸಲು ಕಲ್ಪಿಸುವ ಶಿಕ್ಷಣ ಹಕ್ಕು ಕಾಯಿದೆ ಜಾರಿಯಾದಾಗಿನಿಂದಲೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇದೆ. ಖಾಸಗಿ ಶಾಲೆಗಳ ಪ್ರತಿರೋಧ ಒಂದೆಡೆಯಾದರೆ, ಈ ಹಕ್ಕನ್ನು ಜಾರಿಗೊಳಿಸುವ ಅಧಿಕಾರ ಶಾಹಿಯ ಜಡತೆ ಇನ್ನೊಂದೆಡೆ. ಹೀಗಾಗಿ ಹತ್ತಾರು ಪ್ರಯೋಗಗಳು, ನಾನಾ ರೀತಿಯ ನಿಯಮಗಳು, ಉಪ ನಿಯಮಗಳಿಂದ ಇದೊಂದು ಬಿಡಿಸಲಾರದ ಕಗ್ಗಂಟಾಗಿ ಪರಿಣಮಿಸಿದೆ. ಇದೀಗ ಆರ್‌ಟಿಇ ಅಡಿಯಲ್ಲಿ ಶಾಲೆಗಳಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸುವುದಕ್ಕೆ ವಿಘ್ನಗಳು ತಲೆದೋರಿವೆ. ಶಿಕ್ಷಣ ಇಲಾಖೆ ಜ. 15ರಿಂದಲೇ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ನೀಡಿತ್ತು. ಆನಂತರ ಎರಡು ಬಾರಿ ದಿನಾಂಕವನ್ನು ಮುಂದೂಡಿತು. 19ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದ್ದರೂ ಹಲವು ತಾಂತ್ರಿಕ ತೊಡಕುಗಳಿಂದ ಇದುವರೆಗೆ ಒಂದೇ ಒಂದು ಅರ್ಜಿ ಕೂಡ ಸಲ್ಲಿಕೆಯಾಗಿಲ್ಲ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರ್‌ಟಿ ಇ ಕೋಟಾದಡಿ 1, 32, 706 ಸೀಟುಗಳಿವೆ. ಪರಿಶಿಷ್ಟ ಜಾತಿ, ಪಂಗಡ, ಮತ್ತು ಹಿಂದುಳಿದ ವರ್ಗದವರಿಗೆ ಮೀಸಲು ಸೌಲಭ್ಯವಿದೆ. ಲಕ್ಷಾಂತರ ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಬೇಕಾದರೆ ಅದಕ್ಕೆ ವ್ಯಾಪಕ ಸಿದ್ಧತೆ, ಕಾರ್ಯಯೋಜನೆ ಬೇಕಾಗುತ್ತದೆ. ಆದರೆ ಶಿಕ್ಷಣ ಇಲಾಖೆಯ ಸದ್ಯದ ಕಾರ್ಯವೈಖರಿಯನ್ನು ಗಮನಿಸಿದರೆ ಈ ವಿಷಯದಲ್ಲಿ ಇರಬೇಕಾದ ಕನಿಷ್ಠ ಕಾಳಜಿ ಮತ್ತು ಬದ್ಧತೆ ಕೂಡ ಅಧಿಕಾರಿಗಳಿಗೆ ಇಲ್ಲ ಎಂಬುದು ಮನದಟ್ಟಾಗುತ್ತದೆ. ತಂತ್ರಜ್ಞಾನ ಎಂಬುದು ನಿತ್ಯದ ಕೆಲಸಗಳನ್ನು ಸುಲಭ ಮತ್ತು ಹಗುರಗೊಳಿಸಬೇಕೇ ಹೊರತು ಅದನ್ನು ಜಟಿಲಗೊಳಿಸಬಾರದು. ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಿದಾಗ ಅದನ್ನು ಹತ್ತಾರು ಬಾರಿ ಪ್ರಯೋಗ ಮಾಡಿ, ಅದು ಲೋಪ ಮುಕ್ತವಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿತ್ತು. ಆದರೆ ಇದರ ಕಡೆ ಯಾರಿಗೂ ಗಮನವಿರುವಂತೆ ಕಾಣುವುದಿಲ್ಲ. ಸಾರ್ವಜನಿಕರು ದೂರು ಕೊಟ್ಟ ನಂತರ ನಿಧಾನಕ್ಕೆ ಕಣ್ಣು ತೆರೆಯುವ ಶಿಕ್ಷಣ ಇಲಾಖೆ ಧೋರಣೆ ಅಕ್ಷಮ್ಯ. ಒಂದು ಅಂಶವನ್ನು ಎಲ್ಲರೂ ಗಮನಿಸಬೇಕು. ಪ್ರತಿಬಾರಿ ಚುನಾವಣೆ ನಡೆದಾಗ, ಸರಕಾರಿ ನೌಕರರಿಗೆ, ಕಾಲೇಜು ಅಧ್ಯಾಪಕರಿಗೆ ವಿದ್ಯುನ್ಮಾನ ಯಂತ್ರಗಳ ಬಳಕೆ ಕುರಿತು ನಾಲ್ಕೈದು ದಿನಗಳ ಕಾಲ ತರಬೇತಿ ನೀಡಲಾಗುತ್ತದೆ. ವಿದ್ಯಾವಂತರಿಗೆ ಒಂದು ಸಾಮಾನ್ಯ ವಿಷಯದ ಕುರಿತು ಇಂಥ ತರಬೇತಿ ಇದೆ. ಆದರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಎಂದೆನಿಸುವ ಶಾಲಾ ದಾಖಲಾತಿ ಪ್ರಕ್ರಿಯೆಗಳಿಗೆ ಯಾರಿಗೂ ಎಲ್ಲಿಯೂ ತರಬೇತಿ ಇರಲಿ, ಸಣ್ಣ ಪುಟ್ಟ ಮಾಹಿತಿಗಳಿಗೂ ಸರಕಾರಿ ಸಿಬ್ಬಂದಿಗಳ ಮೊರೆ ಹೋಗಬೇಕಾಗಿದೆ. ಸೈಬರ್‌ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಆಧಾರ್‌ ಸಂಖ್ಯೆ ಕಡ್ಡಾಯಗೊಳಿಸಿರುವುದರಿಂದ ಇದು ಸಮಸ್ಯೆಯನ್ನು ಇನ್ನಷ್ಟು ಗೋಜಲುಗೊಳಿಸಿದೆ. ಆಧಾರ್‌ ನೋಂದಣಿ ಮಾಡಿಸುವಾಗ ಮನೆ ವಿಳಾಸ, ಮೊಬೈಲ್‌ ಸಂಖ್ಯೆ ಇತ್ಯಾದಿ ಬದಲಾಗಿದ್ದರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ತೊಡಕಾಗುತ್ತದೆ. ಆಧಾರ್‌ ವಿವರಗಳನ್ನು ನಿರಂತರವಾಗಿ ಯಾರೂ ಕೂಡ ಅಪ್‌ಡೇಟ್‌ ಮಾಡಲು ಹೋಗುವುದಿಲ್ಲ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಆಯಾ ಬಿಇಒ ಕಚೇರಿಗಳಿಗೋ, ತರಬೇತಿ ಪಡೆದ ಶಿಕ್ಷಕರಿಗೋ ವಹಿಸಿದರೆ ಈ ಕಗ್ಗಂಟು ಬಗೆಹರಿಯುತ್ತದೆ. ಆಧಾರ್‌ ಕಾರ್ಡ್‌ ಮಾಹಿತಿಯ ಗೊಂದಲಗಳನ್ನು ಸ್ಥಳದಲ್ಲೇ ಬದಲಾಯಿಸುವ ವ್ಯವಸ್ಥೆ ಮಾಡಬೇಕು. ಸುಧಾರಿತ ತಂತ್ರಜ್ಞಾನವಿರುವ ಈ ಕಾಲದಲ್ಲಿ ಇದೇನು ಕಷ್ಟಕರವಲ್ಲ.

ಸರಕಾರವಿನ್ನೂ ಆರ್‌ಟಿಇ ಪ್ರವೇಶದ ಸಮಸ್ಯೆಗಳನ್ನು ಸರಿಪಡುವ ಹಂತದಲ್ಲೇ ಇದೆ. ಈ ಸೌಲಭ್ಯ ಪಡೆದ ಮಕ್ಕಳ ಕಲಿಕೆ ಹೇಗಿದೆ? ಸಾಮಾನ್ಯ ಪ್ರವೇಶ ಪಡೆದ ಮಕ್ಕಳಿಗೂ ಆರ್‌ಟಿಇ ಅಡಿ ಸೀಟು ಪಡೆದ ಮಕ್ಕಳ ಕಲಿಕೆಯಲ್ಲಿ ಗುಣಾತ್ಮಕ ಭಿನ್ನತೆ ಇದೆಯೇ? ಖಾಸಗಿ ಶಾಲೆಗಳ ಕೊಠಡಿಗಳ 'ಒಳಗೆ' ಈ ಮಕ್ಕಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎನ್ನುವ ವಿಚಾರಗಳತ್ತ ಗಮನಹರಿಸಬೇಕಾದ ತುರ್ತು ಇದ್ದೇ ಇದೆ. ಇದು ಆಗಬೇಕಾದರೆ ನಾಗರಿಕ ಸಂಘಟನೆಗಳಿಂದ ದೊಡ್ಡ ಆಂದೋಲನವೇ ಆಗಬೇಕಾದ ಅಗತ್ಯವಿದೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>