Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಹಳೆಯ ವಿದ್ಯಾರ್ಥಿಗಳ ಸಮಾವೇಶ, ಸನ್ಮಾನ, ಸಂಗೀತ, ಬೃಹತ್‌ ಉದ್ಯೋಗ ಮೇಳ

$
0
0

ಹಾವೇರಿ:ಭಕ್ತರ ಕಲ್ಪತರು ಕಾಮಧೇನು ಹಾಗೂ ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿರುವ ಲಿಂ. ಶಿವಲಿಂಗ ಸ್ವಾಮೀಜಿ ಅವರ ಜನ್ಮ ಶತಮಾನೋತ್ಸವ 'ನೂರರ ನೆನಹಿಗೆ ನೂರು ನಮನ' ಕಾರ‍್ಯಕ್ರಮ ಮಾ. 1 ರಿಂದ 3 ರ ವರೆಗೆ ಅದ್ಧೂರಿಯಾಗಿ ನಡೆಯುವ ಜತೆಗೆ ವರ್ಷವಿಡಿ ನೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶ್ರೀಹುಕ್ಕೇರಿಮಠದ ಪೀಠಾಧ್ಯಕ್ಷ ಸದಾಶಿವ ಶ್ರೀಗಳು ತಿಳಿಸಿದ್ದಾರೆ.

ಶ್ರೀಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾ. 1 ರಂದು ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಲಿಂ.ಶಿವಲಿಂಗ ಶಿವಯೋಗಿಗಳ ಜನ್ಮಶತಮಾನೋ ತ್ಸವ ಉದ್ಘಾಟನೆ, ಶ್ರೀಗಳು ರಚಿಸಿದ್ದ ಆಯ್ದ ನುಡಿಮುತ್ತುಗಳ ಪುಸ್ತಕ ಬಿಡುಗಡೆ, ದಾಸೋಹಕ್ಕೆ ಶ್ರಮಿಸಿದ ದಾನಿಗಳಿಗೆ ಸನ್ಮಾನ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸಚಿವ ಎಚ್‌.ಕೆ.ಪಾಟೀಲ, ಮಾಜಿ ಸಚಿವ ಬಸವರಾಜ ಹೊರಟ್ಟಿ, ಜಿಪಂ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ವಿಧಾನ ಪರಿಷತ್‌ ಸದಸ್ಯ ಸೋಮಣ್ಣ ಬೇವಿನಮರದ, ನಾಡೋಜ ಡಾ.ಮಹೇಶ ಜೋಶಿ ಹಾಗೂ ಧಾರವಾಡದ ಖ್ಯಾತ ನ್ಯಾಯವಾದಿ ಬಿ.ಡಿ. ಹಿರೇ ಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಮಾ.2 ರಂದು ಶ್ರೀಹುಕ್ಕೇರಿಮಠದ ಅಂಗ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳ ಸಮಾವೇಶ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಂಕೋಲಾದ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ಅವರ ಸನ್ಮಾನ ಜತೆಗೆ ಶ್ರೀರಾಮ್‌ ಕಾಸರ ಸಂಗೀತ ಕಾರ್ಯಕ್ರಮ ಜರುಗಲಿದೆ.

ಮಾ.3 ರಂದು ಬೃಹತ್‌ ರಕ್ತದಾನ ಶಿಬಿರ ನಡೆಯಲಿದೆ. ಸಂಜೆ 6.30 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಲಿಂ.ಶಿವಲಿಂಗ ಶ್ರೀಗಳ ಆಶಿರ್ವಚನಗಳ ಧ್ವನಿ ಸುರುಳಿ ಬಿಡುಗಡೆ ಯಾಗಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಸಚಿವ ಸಿ.ಎಂ. ಉದಾಸಿ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಸಚಿವ ವಿನಯ ಕುಲಕರ್ಣಿ ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ನೆಹರೂ ಓಲೇಕಾರ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಶಿವಯೋಗಿ ವಾಲಿಶೆಟ್ಟರ ಮಾತನಾಡಿ ಶ್ರೀಗಳ ಜನ್ಮ ಶತಮಾನೋತ್ಸವ ಸ್ಮರಣಿಕೆಯಾಗಿ ಕನಿಷ್ಟ 5 ರಿಂದ 10 ಅನಾಥ ಮತ್ತು ಬಡ ಪ್ರತಿಭಾವಂತ ಮಕ್ಕ ಳನ್ನು ಶ್ರೀಮಠದ ಪರವಾಗಿ ದತ್ತು ಪಡೆದು ಎಸ್‌ಎಸ್‌ಎಲ್‌ಸಿ ವರೆಗೂ ಉಚಿತ ಶಿಕ್ಷಣ ಕೊಡಿಸಲು ಯೋಜಿಸಲಾಗಿದೆ ಎಂದರು.

ಕಾರ್ಯಾಧ್ಯಕ್ಷ ಮಹೇಶ ಚಿನ್ನಿಕಟ್ಟಿ ಮಾ.12 ರಂದು ಜನ್ಮ ಶತಮಾನೋತ್ಸವ ಅಂಗವಾಗಿ ಬೃಹತ್‌ ಉದ್ಯೋಗ ಮೇಳ ಆಯೋಜಿಸಲು ನಿರ್ಣಯಿಸಲಾಗಿದೆ. ಇನ್‌ಫೋಸಿಸ್‌ ಸೇರಿದಂತೆ ಸುಮಾರು 32 ಕಂಪನಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಸಮನ್ವಯಾಧ್ಯಕ್ಷ ಪಿ.ಡಿ.ಶೀರೂರ ಮಾತನಾಡಿ ಬೇರೆ ಭಾಗಗಳಲ್ಲಿ ಉಚಿತ ಉದ್ಯೋಗ ಮೇಳ ನಡೆದ ವೇಳೆ ಗಲಾಟೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಮೇಳ ದಲ್ಲಿ ಪಾಲ್ಗೊಳ್ಳುವ ನಿರುದ್ಯೋಗಿಗಳಿಗೆ ಊಟೋಪಚಾರಕ್ಕೆ ಜತೆಗೆ ಅವರಿಗೆ ತರಬೇತಿಗಾಗಿ ಕನಿಷ್ಟ ಶುಲ್ಕ ನಿಗದಿಪಡಿಸಲು ಸಹ ಯೋಚಿಸಲಾಗಿದೆ ಎಂದರು. ಈ ವೇಳೆ ಗಂಭೀರ ಚರ್ಚೆ ನಡೆಯಿತು.

ಕೋಶಾಧ್ಯಕ್ಷ ಶಿವರಾಜ ವಳಸಂಗದ ಮಾತನಾಡಿ, ಶ್ರೀಗಳ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲ ಭಕ್ತರೂ ತನುಮನ ಧನದಿಂದ ಕೈಜೋಡಿಸುವಂತೆ ಮನವಿ ಮಾಡಿದರು.

ಶಿವಬಸಪ್ಪ ಮುದಗಲ್ಲ, ಶಿವಬಸಪ್ಪ ಹುರಳಿಕುಪ್ಪಿ, ಶಿವಬಸಯ್ಯನವರು ಹಾಲಯ್ಯನವರ ಮಠ, ಶಿವರಾಜ ಮರ್ತೂರ, ಜಗದೀಶ ತುಪ್ಪದ, ಜಿ.ಕೆ. ಹೂಗಾರ, ಆರ್‌.ಎಸ್‌. ಮಾಗ ನೂರ, ಹಲಗಣ್ಣನವರ, ಶಿವಕುಮಾರ ಮುದಗಲ್ಲ ಮುಂತಾದವರು ಉಪಸ್ಥಿತರಿದ್ದರು.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>