Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸಿಂಗಲ್ಸ್‌ ಡೇ: ಚೀನಾದಲ್ಲಿ ಭರ್ಜರಿ ಆನ್‌ಲೈನ್‌ ವಹಿವಾಟು

$
0
0

ಬೀಜಿಂಗ್‌: ಸಿಂಗಲ್ಸ್‌ ಡೇ, ಬ್ಲ್ಯಾಕ್‌ಫ್ರೈಡೆ ಹಾಗೂ ಸೈಬರ್‌ ಮಂಡೇ ಸೇಲ್‌ನಲ್ಲಿ ಚೀನಾದ 30 ಕೋಟಿ ಗ್ರಾಹಕರು ಬರೋಬ್ಬರಿ 26 ಶತಕೋಟಿ ಡಾಲರ್‌ ಮೊತ್ತದ ಆನ್‌ಲೈನ್‌ ಶಾಪಿಂಗ್‌ ಮಾಡಿದ್ದಾರೆ.

ವ್ಯಾಲೆಂಟೈನ್ ಡೇಗೆ ಪ್ರತಿಯಾಗಿ ಆಚರಿಸುವ ಸಿಂಗಲ್ಸ್‌ ಡೇ ಪ್ರಯುಕ್ತ 39,487 ಬ್ರ್ಯಾಂಡ್‌ಗಳು ಆಲಿಬಾಬಾ, ಜೆಡಿ.ಕಾಮ್‌ ಹಾಗೂ ಸನ್ನಿಂಗ್‌ ಸೇರಿದಂತೆ ಸುಮಾರು 16 ಆನ್‌ಲೈನ್‌ ಶಾಪಿಂಗ್‌ ತಾಣಗಳಲ್ಲಿ ಭಾರಿ ವಿನಾಯಿತಿ ಘೋಷಿಸಿದ್ದವು.

ಬಟ್ಟೆ, ಶೂ, ಎಲೆಕ್ಟ್ರಾನಿಕ್‌ ಉತ್ಪನ್ನಗಳು ಹಾಗೂ ಗೃಹೋಪಯೋಗಿ ಉತ್ಪನ್ನಗಳ ಮೇಲೆ ಶೇ.30ರಿಂದ ಶೇ.80ರಷ್ಟು ವಿನಾಯಿತಿ ಘೋಷಿಸಲಾಗಿತ್ತು. ಚಿಲ್ಲರೆ ವಹಿವಾಟಿನಲ್ಲಿ ಇಷ್ಟು ದೊಡ್ಡ ಮಟ್ಟದ ರಿಯಾಯಿತಿ ನೀಡುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿಸಿದೆ.

ಬರೋಬ್ಬರಿ 4.7 ಕೋಟಿ ಗ್ರಾಹಕರು ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಖರೀದಿಸಿದ್ದಾರೆ ಎಂದು ಶಾಪಿಂಗ್‌ ಸಮೀಕ್ಷೆಯಿಂದ ತಿಳಿದುಬಂದಿದೆ.

*ಸಿಂಗಲ್ಸ್‌ ಡೇ ವಿಶೇಷವಾಗಿ 24 ತಾಸಿನಲ್ಲಿ ಚೀನಾದ 16 ಪ್ರಮುಖ ಆನ್‌ಲೈನ್‌ ಶಾಪಿಂಗ್‌ ತಾಣದಲ್ಲಿ 117 ಶತಕೋಟಿ ಯಾನ್‌ ವಹಿವಾಟು ನಡೆದಿದೆ.

*ಚೀನಾದ ಅತಿದೊಡ್ಡ ಇ ಕಾಮರ್ಸ್‌ ದಿಗ್ಗಜ ಆಲಿಬಾಬಾದಲ್ಲಿ ಮೊದಲ 6 ನಿಮಿಷ 58 ಸೆಕೆಂಡ್‌ನಲ್ಲಿ 10 ಶತಕೋಟಿ ಯಾನ್‌ ಮೊತ್ತದ ಆರ್ಡರ್‌ ಮಾಡಲಾಗಿತ್ತು.

*ಆಲಿಬಾಬಾ ಮಾರುಕಟ್ಟೆಯ ಶೇ.68.2 ಪಾಲು ಪಡೆದಿದೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>