Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಚಿಕ್ಕಮಗಳೂರಲ್ಲಿ ಸಂಬಾರ ಪಾರ್ಕ್ ಸ್ಥಾಪನೆ

$
0
0

ಜಾಗತಿಕ ಕಾಳುಮೆಣಸು ಸಮ್ಮೇಳನದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಭರವಸೆ

ಚಿಕ್ಕಮಗಳೂರು: ಜಾಗತಿಕ ಗುಣಮಟ್ಟದ ಕಾಳುಮೆಣಸು ಉತ್ಪಾದಿಸುವ ಚಿಕ್ಕಮಗಳೂರಿನಲ್ಲಿ ಶೀಘ್ರದಲ್ಲೇ ಸಂಬಾರ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಭರವಸೆ ನೀಡಿದರು.

ನಗರದ ಎಐಟಿ ಕಾಲೇಜಿನ ಬಯಲು ರಂಗಮಂದಿರದಲ್ಲಿ ಬ್ಲ್ಯಾಕ್ ಗೋಲ್ಡ್ ಲೀಗ್‌ನಿಂದ ಆಯೋಜಿಸಿರುವ 3 ದಿನಗಳ ಜಾಗತಿಕ ಕಾಳುಮೆಣಸು ಸಮ್ಮೇಳನದಲ್ಲಿ ಶನಿವಾರ ಮಾತನಾಡಿದರು.

ಸಂಬಾರ ಪಾರ್ಕ್‌ಗೆ ಕನಿಷ್ಠ 25 ರಿಂದ 50 ಎಕರೆ ಜಾಗ ಬೇಕು. ರಾಜ್ಯ ಸರಕಾರ ಜಮೀನು ಒದಗಿಸಿದರೆ ಮೂಲಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಸಂಬಾರ ಪಾರ್ಕ್ ನಿರ್ಮಿಸಲಾಗುವುದು. ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಸೀತಾರಾಮನ್ ಅವರೊಂದಿಗೆ ಈ ಬಗ್ಗೆ ಚರ್ಚಿಸಿರುವುದಾಗಿ ಹೇಳಿದರು.

ಕಿಸಾನ್ ಸುವಿಧಾ ಕೇಂದ್ರ

ಮಣ್ಣು ಪರೀಕ್ಷೆಗೆ ಸರಕಾರ ನೆರವಾಗಬೇಕು ಎಂಬುದು ರೈತರ ಒತ್ತಾಯ. ಮುಂದಿನ ಒಂದು ವರ್ಷದಲ್ಲಿ ದೇಶದೆಲ್ಲೆಡೆ 2 ಸಾವಿರ ಕಿಸಾನ್ ಸುವಿಧಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ನಿರ್ಧರಿಸಿದೆ. ರೈತರಿಗೆ ಅಗತ್ಯವಾದ ಮಣ್ಣು, ಬಿತ್ತನೆಬೀಜ ಪರೀಕ್ಷೆ, ರಸಗೊಬ್ಬರ, ಎಲೆ, ಕ್ರಿಮಿನಾಶಕ, ಕೀಟನಾಶಕ ಸೇರಿದಂತೆ ಎಲ್ಲ ಸೌಲಭ್ಯಗಳನ್ನೊಳಗೊಂಡ ಈ ಕೇಂದ್ರಗಳನ್ನು ಕರ್ನಾಟಕದಲ್ಲೂ ತೆರೆಯಲಾಗುವುದು ಎಂದರು.

ಡಂಪಿಂಗ್ ಯಾರ್ಡ್

ಬಯೋ ಕಾಂಪೋಸ್ಟ್‌ಗೆ ಈ ಹಿಂದೆ ಯಾವುದೇ ಸರಕಾರ ಸಬ್ಸಿಡಿ ಕೊಟ್ಟ ನಿದರ್ಶನವಿಲ್ಲ. ಆದರೆ, ಕಳೆದ ವರ್ಷದಿಂದ ಕೇಂದ್ರ ಸರಕಾರ 1500ರೂ. ಸಬ್ಸಿಡಿ ನೀಡುತ್ತಿದೆ. ಪ್ರತಿ ಕೆಜಿ ಗೊಬ್ಬರಕ್ಕೆ ಕೇಂದ್ರ ಸರಕಾರ ಒಂದೂವರೆ ರೂ. ಸಬ್ಸಿಡಿ ಕೊಡುತ್ತಿದೆ. ರಾಜ್ಯ ಸರಕಾರ ಕೂಡ ಒಂದೂವರೆ ರೂ. ಸಬ್ಸಿಡಿ ಕೊಟ್ಟರೆ ರೈತರಿಗೆ ಉಚಿತವಾಗಿ ಗೊಬ್ಬರ ಲಭಿಸುತ್ತದೆ. ಈ ಬಗ್ಗೆ ರಾಜ್ಯ ಸರಕಾರ ಗಮನಹರಿಸಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಸಂಸದ ಬಿ.ಎಸ್.ಯಡಿಯೂರಪ್ಪ , ಸಂಸದೆ ಶೋಭಾ ಕರಂದ್ಲಾಜೆ ,ಶಾಸಕ ಸಿ.ಟಿ.ರವಿ, ಬ್ಲ್ಯಾಕ್ ಗೋಲ್ಡ್ ಲೀಗ್ ಅಧ್ಯಕ್ಷ ಕೆಂಜಿಗೆ ಕೇಶವ, ಬಿಜಿಎಲ್ ನಿರ್ದೇಶಕ ಡಾ.ಎಂ.ಆನಂದರಾಜ್ ಮಾತನಾಡಿದರು.


Viewing all articles
Browse latest Browse all 7056

Latest Images

Trending Articles

<script src="https://jsc.adskeeper.com/r/s/rssing.com.1596347.js" async> </script>