Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಇಬ್ಬರ ಜತೆ ಅರು ಗೌಡ ಡುಯೆಟ್‌

$
0
0

ಸ್ಟಾರ್‌ ನಟರ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು ಈಗ ಹೊಸ ನಿರ್ದೇಶಕರಿಗೆ ಅವಕಾಶ ನೀಡುತ್ತಿದ್ದಾರೆ. ಇದು ಚಿತ್ರರಂಗದ ಒಳ್ಳೆಯ ಬೆಳವಣಿಗೆ ಎನ್ನಬಹುದು. ಇದೀಗ ರಥಾವರ ಚಿತ್ರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್‌ ತಮ್ಮ ವಸುದೇವ ಕುಟುಂಬಕಂ ಚಿತ್ರಕ್ಕೆ ಹೊಸ ನಿರ್ದೇಶಕ ಗಿರಿಧರ್‌ರನ್ನು ಕರೆತಂದಿದ್ದಾರೆ. ಚಿತ್ರದಲ್ಲಿ ಅರು ಗೌಡ, ಸಂಜನಾ ಪ್ರಕಾಶ್‌, ಲಾಸ್ಯ ನಾಗರಾಜ್‌ ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಧರ್ಮಶ್ರೀ ಮಂಜುನಾಥ್‌ ವಸುದೇವ ಕುಟುಂಬಕಂ ಚಿತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಹಿಂದೆಯೇ ಹೊರಬಿದ್ದಿತ್ತು. ಆದರೆ, ಯಾರು ಈ ಚಿತ್ರದ ನಿರ್ದೇಶಕ ಮತ್ತು ನಾಯಕ ಎಂಬ ಕುತೂಹಲ ಎಲ್ಲರಲ್ಲಿತ್ತು. ಯಾಕೆಂದರೆ, ಅವರು ನಿರ್ಮಿಸಿದ, ಶ್ರೀಮುರಳಿ ಅಭಿನಯದ ರಥಾವರ ಚಿತ್ರ ಯಶಸ್ವಿಯಾಗಿತ್ತು. ಈ ಬಾರಿ ಸ್ಟಾರ್‌ ನಟರ ಬದಲಿಗೆ ಅರು ಗೌಡರಿಗೆ ಅವಕಾಶ ನೀಡಿದ್ದಾರೆ. ಅರು ಮುದ್ದು ಮನಸ್ಸೇ ಚಿತ್ರದಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಇವರಿಗೆ ನಾಯಕಿಯರಾಗಿ ಸಂಜನಾ ಪ್ರಕಾಶ್‌ ಮತ್ತು ಲಾಸ್ಯ ಕಾಣಿಸಿಕೊಳ್ಳಲಿದ್ದಾರೆ.

ನಿರ್ದೇಶಕ ಗಿರಿಧರ್‌ ರಥಾವರ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದವರು. ವಸುದೇವ ಕುಟುಂಬಕಂ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಲಿದೆ. ಮೀರನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಇಡೀ ಜಗತ್ತೇ ಒಂದು ಕುಟುಂಬ ಎಂಬ ಅರ್ಥವಿರುವ ವಸುದೇವ ಕುಟುಂಬಕಂ ಚಿತ್ರದಲ್ಲೂ ಸಾಮಾಜಿಕ ಕಳಕಳಿಯ ಕತೆ ಇದೆ.

ನಿನ್ನಿಂದಲೇ ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಕೋಳಾಂಚಿ ರಾಕೇಶ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>