Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ದಾರಿ ದೀಪ: ವಿವೇಚನೆ, ಸತ್ಕರ್ಮದಿಂದ ಶಾಂತಿ ಸಿಗುವುದು

$
0
0

* ಹರೀಶ್ ಕಾಶ್ಯಪ್

1. ಮಗನು ಪಿಯುಸಿ ಕಾಮರ್ಸ್‌ ಓದುತ್ತಿದ್ದು, ಏನೂ ತಲೆಗೆ ಹತ್ತದು ಎನ್ನುವನು. ಸರಿಯಾಗುವನೇ? ವಿದ್ಯೆಯಲ್ಲಿ ಮುಂದೆ ಬರುವನೇ?

-ರೋಹಿಣಿ, ಕೋರಮಂಗಲ

ಓದು ತಲೆಗೆ ಹತ್ತದೆ ಇದ್ದರೆ ಮಕ್ಕಳು 'ಸರಿ ಇಲ್ಲ' ಎಂಬ ಪೂರ್ವಗ್ರಹದಿಂದ ಸಮಾಜ ಹೊರಬೇಕಿದೆ. ಅವರಿಗೇನು ತಲೆಗೆ ಹತ್ತುವುದೋ ಕೊನೆಗದನ್ನೇ ಮಾಡುವರು ಅಥವಾ ಹಾಗೆ ಮಾಡಲಾಗಲಿಲ್ಲ ಎಂದು ಭವಿಷ್ಯದಲ್ಲಿ ಕೊರಗುವರು! ಆತನಿಗೆ ಸದ್ಯ ಬಾಧಾಬುಧ ದಶೆಯಿದ್ದು ಹೀಗಾಗಿದೆ, ಚಿಂತೆ ಬಿಡಿ. ಸಾಧಾರಣ ಏನು ಮಾಡಬಲ್ಲನೋ ಅಷ್ಟನ್ನೇ ಪ್ರೋತ್ಸಾಹಿಸಿ. ನಿಮ್ಮನ್ನು ಇತರ ಕುಟುಂಬಗಳೊಡನೆ ಸದಾ ಹೋಲಿಸಿಕೊಳ್ಳುವುದನ್ನು ತೊರೆಯಿರಿ. ಆ ಒತ್ತಡ ಮಕ್ಕಳ ಮೇಲೆ ಹೇರದಿರಿ. ಮಿಕ್ಕಂತೆ ಜಾತಕ ಫಲ ಒಳ್ಳೆಯದಿದೆ.

2 ಮಗಳು ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾಳೆ. ಕ್ಲಾಸಿನಲ್ಲಿ ಹುಡುಗರ ತೀಟೆ, ಗಲಾಟೆಗಳಿಂದ ನೊಂದಿರುವಳು. ಬೇರೆ ಏನು ಮಾಡಬಹುದು ಎಂಬ ಚಿಂತೆ.

-ಮಲ್ಲಯ್ಯ, ಧಾರವಾಡ

ಪಾಠ ಪ್ರವಚನ ಮಾಡುವವರಿಗೆ ಬರಿದೇ ಬುದ್ಧಿಯ ಡಿಗ್ರಿಗಳು ಇದ್ದರೆ ಸಾಲದು. ಕಂಠವು ಗಟ್ಟಿಯೂ, ಇಂದಿನ ಕಾಲದಲ್ಲಿ ಬಾಹುಬಲವೂ ಇರಬೇಕು! ಹಾಗಿದೆ ಪರಿಸರ. ಅಲೆಗಳಬ್ಬರಕೆ ಹೆದರಿ ದಡದಲ್ಲೇ ಇರಬೇಕು ಅಥವಾ ಗಟ್ಟಿ ಹಾಯಿದೋಣಿಯಿಂದ ಯಾನ ಸಾಗಿಸಬೇಕು. ಆಯ್ಕೆ, ಅರಿವು ನಿಮ್ಮ ಮಗಳಲ್ಲೇ ಇದೆ.

3. ಮಗನು ಬಿ.ಇ.ಮುಗಿಸಿಯೂ ಕೆಲಸವಿಲ್ಲ. ದಯವಿಟ್ಟು ಪರಿಹಾರ ಹೇಳಿ.

- ವೆಂಕಟರಾಮಯ್ಯ- ಮಯೂರ್‌, ಬೆಂಗಳೂರು

ನಿಮ್ಮ ಮಗನಿಗೆ ಕೆಲಸ ಸಿಗದು ಅಂತಿಲ್ಲ. ಆದರೆ, ಆತನಿಗೆ ರಂಜನೀಯ ಜೀವನ ಇಷ್ಟ. ಅದರಲ್ಲಿ ತಲ್ಲೀನ! ಹಾಗಾಗಿ ಗಂಭೀರವಾಗಿ ಓದನ್ನಾಗಲೀ, ವೃತ್ತಿಯನ್ನಾಗಲೀ ಇನ್ನೂ ಕಂಡಿಲ್ಲ. ಲಗ್ನಭಾವ, ಶುಕ್ರದಶಾ ಸ್ಥಿತಿ ಮತ್ತು ಕುಜರಾಹುಗಳ ಬಾಧಸ್ಥಾನ ಹೀಗೆಂದು ತೋರುತ್ತಿದೆ -ವಿಚಾರ ವಿಮರ್ಶೆ ಆಪ್ತ ಸಲಹೆಗಳ ಪಡೆಯಿರಿ.

4. ಪತಿಗೆ ಅನೇಕ ಆರೋಗ್ಯ ಸಮಸ್ಯೆ ಬಾಧಿಸುತ್ತಿದೆ. ಎಲ್ಲಾ ಪೂಜೆಗಳ ಮಾಡಿಯೂ ಸರಿಯಾಗಿಲ್ಲ. ದಾರಿ ತೋರಿ.

-ಪ್ರತಿಭಾ, ಉಡುಪಿ

ಅವರಿಗೆ ಮುಖ್ಯ ಬೊಜ್ಜು ಇರುವುದರಿಂದ, ಗಂಟು, ಕೀಲು ಬಾಧೆಗಳು ಹೆಚ್ಚಾಗಿವೆ. ಬಾಧಾ ಶುಕ್ರನು ಬಾಧಾರಾಹು ದೃಷ್ಟ ಜಲರಾಶಿಯಲ್ಲಿಹರು. ಇದನ್ನು ಸ್ತ್ರೀದೋಷದ ಕರ್ಮದಸೆ ಎಂದೇ ಶಾಸ್ತ್ರಸಿದ್ಧ. ಮೊದಲು ಪಥ್ಯದಿಂದ, ವ್ಯಾಯಾಮ ಮತ್ತು ಆಯುರ್ವೇದ ಚಿಕಿತ್ಸೆಯಿಂದ ಇದನ್ನು ಕರಗಿಸಿ. ಬರಿದೇ ಪೂಜೆ, ಹರಕೆಗಳಿಂದ ಜೀವನ ಹಸನಾಗದು. ಅದನ್ನು ಶಾಸ್ತ್ರದಲ್ಲೂ ಎಲ್ಲೂ ಹೇಳಿಲ್ಲ.

5. ಮನೆಯಲ್ಲಿ ಅನೇಕ ದೇವರ ಮೂರ್ತಿಗಳಿವೆ. ಪೂಜೆ ಮಾಡಲಾಗದು. ಏನು ಮಾಡಲಿ ಗುರುಗಳೇ?

-ಶ್ರೀನಿವಾಸ್‌, ಗಿರಿನಗರ

ಅನೇಕ ಜನರ ಸಮಸ್ಯೆ ಇದು. ಹೋದಲ್ಲಿ, ಕಂಡಲ್ಲಿ ಸಿಕ್ಕಾಗ ತಂದು, ಹಿರಿಕಿರಿಯರೆಲ್ಲ ಕೂಡಿ ಹಾಕಿರುವ ಮೂರ್ತಿಗಳು, ಸಂಗ್ರಹಾಲಯದಂತೆ ದೇವರ ಕೋಣೆಯಲ್ಲಿ ಶೇಖರವಾಗಿರುತ್ತವೆ. ಹೀಗಾದರೆ ದೇವರ ಬಗ್ಗೆ ಭಕ್ತಿ ಹೋಗಿ, ಗಿಲ್ಟ್‌ ಕಾಡುತ್ತದೆ. ನಿಮಗಿಷ್ಟವಿರೋ ಕೆಲವನ್ನು ಮಾತ್ರ ಇಟ್ಟುಕೊಂಡು, ಮಿಕ್ಕ ಎಲ್ಲಾ ಮೂರ್ತಿಗಳನ್ನು ಅಂಥ ಅಂಗಡಿಗೆ ಬದಲೀ ಪಾತ್ರೆಗೆ/ವಸ್ತುಗಳಗೆ ಎಕ್ಸ್‌ಚೇಂಜ್‌ ಮಾಡಿ (ನದಿಗಳಿಗೆ ಬಿಸಾಡಬೇಡಿ!) ಮಿಕ್ಕ ಚಿತ್ರಪಟಗಳನ್ನು ಕಟ್ಟಿ ಬಿಸಾಕಿ, ಏನೂ ದೋಷವಿಲ್ಲ. ಮತ್ತೆ ಈ ಬಗ್ಗೆ ಎಚ್ಚರವಹಿಸಿ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>