Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಮಾಜಿ ಅಧಿಕಾರಿಗೆ ಜೈಲು ಶಿಕ್ಷೆ

$
0
0

ಹೈದರಾಬಾದ್‌: ಕಿಂಗ್‌ಫಿಷರ್‌ ಏರ್‌ಲೈನ್ಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ. ರಘುನಾಥನ್‌ ಅವರಿಗೆ ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿ 18 ತಿಂಗಳಿನ ಜೈಲು ಶಿಕ್ಷೆಯನ್ನು ಹೈದರಾಬಾದ್‌ನ ಕೋರ್ಟ್‌ ವಿಧಿಸಿದೆ. ಜಿಎಂಆರ್‌ ಹೈದರಾಬಾದ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಉದ್ಯಮಿ ವಿಜಯ್‌ ಮಲ್ಯ ಹಾಗೂ ರಘುನಾಥನ್‌ ವಿರುದ್ಧ ಕೇಸ್‌ ದಾಖಲಿಸಿತ್ತು.

ಮೂರನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ. ಕೃಷ್ಣ ರಾವ್‌ ಅವರು 20,000 ರೂ. ದಂಡವನ್ನೂ ವಿಧಿಸಿದರು. ಕಳೆದ ಏಪ್ರಿಲ್‌ 20ರಂದು ಕೋರ್ಟ್‌ ಕಿಂಗ್‌ಫಿಷರ್‌ ಏರ್‌ಲೈನ್ಸ್‌, ಮಲ್ಯ ಮತ್ತು ರಘುನಾಥನ್‌ ಅವರು ತಪ್ಪಿತಸ್ಥರೆಂದು ತೀರ್ಪು ಪ್ರಕಟಿಸಿತ್ತು. ತಲಾ 50 ಲಕ್ಷ ರೂ.ಗಳ ಎರಡು ಚೆಕ್‌ ಬೌನ್ಸ್‌ ಪ್ರಕರಣ ಇದಾಗಿದೆ.

ವಿಮಾನ ನಿಲ್ದಾಣವನ್ನು ಬಳಸಿದ್ದಕ್ಕೆ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಶುಲ್ಕವನ್ನು ಜಿಎಂಆರ್‌ ಹೈದರಾಬಾದ್‌ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗೆ ನೀಡಬೇಕಾಗಿತ್ತು. ಆದರೆ ಈ ಕುಸಿತ ಚೆಕ್ಕುಗಳು ಬೌನ್ಸ್‌ ಆಗಿದ್ದವು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>