Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಚಿಕ್ಕಣ್ಣ ಈಗ ಕನ್ನಡ ಹೋರಾಟಗಾರ

$
0
0

ಕನ್ನಡದ ಮೋಸ್ಟ್‌ ಬಿಝಿ ನಟ ಚಿಕ್ಕಣ್ಣ ಚಿತ್ರದಿಂದ ಚಿತ್ರಕ್ಕೆ ವೈವಿಧ್ಯಮಯ ಪಾತ್ರದಿಂದ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರತಿ ಚಿತ್ರದಲ್ಲೂ ನಾಯಕನ ಗೆಳೆಯನಾಗಿಯೋ ಅಥವಾ ಪ್ರಮುಖ ಪೋಷಕ ನಟನ ಪಾತ್ರದಲ್ಲೋ ಮಿಂಚುತ್ತಿದ್ದ ಚಿಕ್ಕಣ್ಣ ನಿರ್ದೇಶಕ ಕುಶಾಲ್‌ ನಿರ್ದೇಶನ ಮಾಡುತ್ತಿರುವ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ವಿಶಿಷ್ಟ ಶೀರ್ಷಿಕೆಯನ್ನು ಹೊಂದಿರುವ ಸಿನಿಮಾದಲ್ಲಿ ಕನ್ನಡ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಾವೇರಿ ಚಳವಳಿ ಕಾವೇರುತ್ತಿರುವ ಸಂದರ್ಭದಲ್ಲಿ ಕನ್ನಡ ಹೋರಾಟಗಾರರ ಪಾತ್ರ ಬಹಳ ಪ್ರಮುಖವಾಗಿದೆ. ಈ ಸಮಯದಲ್ಲಿ ಚಿಕ್ಕಣ್ಣ ಕನ್ನಡ ಹೋರಾಟಗಾರರ ಪಾತ್ರವೊಂದನ್ನು ನಿರ್ವಹಿಸುತ್ತಿರುವುದು ವಿಶೇಷವಾಗಿದೆ. ಚಿಕ್ಕಣ್ಣ ಅವರಿಗಾಗಿಯೇ ನಿರ್ದೇಶಕರು ಸುಮಾರು ಒಂದೂವರೆ ತಿಂಗಳುಗಳ ಕಾಲ ಸಿನಿಮಾ ಚಿತ್ರೀಕರಣವನ್ನೇ ಮುಂದೂಡಿದ್ದರು. ಇದೇ ತಿಂಗಳಲ್ಲಿ ಶೂಟಿಂಗ್‌ ಆರಂಭವಾಗಲಿರುವ ಈ ಸಿನಿಮಾದಲ್ಲಿ ರಂಗಭೂಮಿ ಕಲಾವಿದ ಅವಿನಾಶ್‌, ನಟಿ ಕೃಷಿ ತಾಪಂದ ನಟಿಸಿಲಿದ್ದಾರೆ. ಈ ಸಿನಿಮಾಗೆ ಸಂಗೀತ ಮನೋಮೂರ್ತಿಯವರದ್ದು.

'ಸುಮಾರು 85ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಚಿಕ್ಕಣ್ಣ ಈ ಚಿತ್ರದಲ್ಲಿ ನಾಯಕನಿಗೆ ಸರಿಸಮನಾದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪಾತ್ರವೂ ಸಹ ವಿಭಿನ್ನವಾಗಿದೆ. ತಾವು ಇದುವರೆಗೂ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಪಾತ್ರಕ್ಕೆ ಅವರೇ ಬೇಕು ಎಂದು ಎರಡು ತಿಂಗಳಿಗೂ ಹೆಚ್ಚು ಕಾಲ ಕಾದಿದ್ದೆವು. ಈ ಕಥೆ ಕೇಳಿದ ನಂತರ ಚಿಕ್ಕಣ್ಣ ಸಹ ಸಾಕಷ್ಟು ಖುಷಿಯಾಗಿ ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ನಾನು ಸಹ ಅವರನ್ನು ಬಿಟ್ಟು ಬೇರೆ ಯಾರಿಂದಲೂ ಈ ಪಾತ್ರ ಮಾಡಿಸಬಾರದು ಎಂದು ತೀರ್ಮಾನಿಸಿದ್ದೆ' ಎನ್ನುತ್ತಾರೆ ನಿರ್ದೇಶಕ ಕುಶಾಲ್‌.

-----

ಮೊದಲ ಬಾರಿಗೆ ಕನ್ನಡ ಹೋರಾಟಗಾರನ ಪಾತ್ರ ನಿರ್ವಹಿಸುತ್ತಿದ್ದೇನೆ. ಈ ಪಾತ್ರ ಬೇರೆ ಸಿನಿಮಾಗಳಿಗಿಂತ ವಿಭಿನ್ನವಾಗಿದೆ. ನನ್ನ ಪಾತ್ರ ಇಡೀ ಸಿನಿಮಾದಲ್ಲಿ ಕ್ಯಾರಿ ಆಗುತ್ತದೆ. ನಿರ್ದೇಶಕರು ಹೊಸಬರಾದರೂ ಉತ್ತಮವಾಗಿ ಕಥೆ ಮಾಡಿಕೊಂಡಿದ್ದಾರೆ. ಉಳಿದ ಸಿನಿಮಾ ಕಥೆಗಳಿಗಿಂತ ಬೇರೆ ಸ್ಟೈಲ್‌ನಲ್ಲಿ ಚಿತ್ರಕಥೆ ಮಾಡಿಕೊಂಡಿದ್ದಾರೆ. ಅದು ಶೀರ್ಷಿಕೆಯಲ್ಲೂ ಎದ್ದು ಕಾಣುತ್ತದೆ.

-ಚಿಕ್ಕಣ್ಣ, ನಟ


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>