Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸ್ಪೆಷಲ್ ಹಾಡುಗಳ ಮೇಲೆ ನಟಿಯರ ಸ್ಪೆಷಲ್ ಇಂಟರೆಸ್ಟ್

$
0
0

ಸ್ಟಾರ್‌ ನಟರು ಬೇರೆಯವರ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗುತ್ತಿದೆ. ಅದೇ ರೀತಿ ಟಾಪ್‌ ಲಿಸ್ಟ್‌ನಲ್ಲಿರುವ ನಟಿಯರು ಕೂಡ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕೋಕೆ ಹಿಂಜರಿಯುತ್ತಿಲ್ಲ. ಬಿಝಿ ನಟಿಯರಾದ ರಾಗಿಣಿ, ಶ್ರುತಿ ಹರಿಹರನ್‌, ರಮಣೀತು ಚೌಧರಿ, ಅನುಶ್ರೀ, ಐಶ್ವರ್ಯಾ ಸಿಂಧೋಗಿ, ಮತ್ತಿತರರು ಸ್ಪೆಷಲ್‌ ಸಾಂಗ್‌ಗೆ ಓಕೆ ಎಂದವರು. ಇವರಲ್ಲದೆ, ಈಗ ಪ್ರೇಮಲೋಕದ ಸುಂದರಿ ಜೂಹಿ ಚಾವ್ಲಾ ಕೂಡಾ ಟಿಪಿಕಲ್‌ ಭಾರತೀಯ ಮಹಿಳೆಯ ವೇಷದಲ್ಲಿ ಸ್ಪೆಷಲ್‌ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ.

-----

* ಪದ್ಮಾ ಶಿವಮೊಗ್ಗ

ಪರಭಾಷೆಗಳ ನಟಿಯರು ಇಲ್ಲಿಗೆ ಬಂದು ಹಾಡೊಂದರಲ್ಲಿ ಕುಣಿದು ಹೋಗುವುದು ಮಾಮೂಲಿಯಾಗಿತ್ತು. ಚಿತ್ರಕ್ಕೆ ಇನ್ನಷ್ಟು ಗ್ಲಾಮರ್‌ ತರಲು ನಿರ್ದೇಶಕರು ಬಾಲಿವುಡ್‌ನಿಂದ ನಟಿಯರನ್ನು ಸಿಕ್ಕಾಪಟ್ಟೆ ಹಣ ಕೊಟ್ಟು ಕರೆತರುತ್ತಿದ್ದರು. ಜನಪ್ರಿಯ ನಟಿ ಸನ್ನಿ ಲಿಯೋನ್‌ ಈಗಾಗಲೇ ಕನ್ನಡದಲ್ಲಿ ಎರಡು ಚಿತ್ರಗಳಿಗೆ ಸ್ಟೆಪ್‌ ಹಾಕಿದ್ದಾರೆ. ಲವ್‌ ಯೂ ಆಲಿಯಾ ಚಿತ್ರದಲ್ಲಿ ಹಾಗೂ ಡಿಕೆನಲ್ಲಿ ಸೇಸಮ್ಮನಾಗಿ ಬಂದು ಹೋದರು. ಪೂನಂ ಪಾಂಡೆಯೂ ಸ್ಪೆಷಲ್‌ ಸಾಂಗ್‌ನಲ್ಲಿ ಡ್ಯಾನ್ಸ್‌ ಮಾಡಿ ಹೋಗಿದ್ದಾರೆ. ಈಗ ಜೂಹಿ ಚಾವ್ಲಾ ಸರದಿ. ಕನ್ನಡಿಗರಲ್ಲಿ ನಿಖಿತಾ ತುಕ್ರಾಲ್‌, ಪಾರುಲ್‌ ಯಾದವ್‌, ನೀತೂ, ಪೂಜಾ ಗಾಂಧಿ ಕೂಡ ಕಾಣಿಸಿಕೊಂಡಿದ್ದಾರೆ.

ಜ್ಯೂಹಿ ಚಾವ್ಲಾ

ರಮೇಶ್‌ ಅರವಿಂದ್‌ ನಿರ್ದೇಶನದ ಹೊಸ ಚಿತ್ರಕ್ಕೆ ಜ್ಯೂಹಿ ಚಾವ್ಲಾ ಮತ್ತೆ ಬಂದಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಚಿತ್ರದ ಸ್ಪೆಷಲ್‌ ಸಾಂಗ್‌ನಲ್ಲಿ ಕಚ್ಚೆ ಸೀರೆ ಉಟ್ಟು, ಕೂಲಿಂಗ್‌ ಗ್ಲಾಸ್‌ ಹಾಕಿಕೊಂಡು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿಗೆ ಆಫರ್‌ ಬಂದಾಗ ಅವರಿಗೆ ಆಶ್ಚರ್ಯವಾಯ್ತಂತೆ. ಐಟಂ ಸಾಂಗ್‌ನಲ್ಲಿ ನಾನು ಕಾಣಿಸಿಕೊಳ್ಳೋದಾ ಎಂಬ ಪ್ರಶ್ನೆ ಇಟ್ಟುಕೊಂಡೇ ಕ್ಯಾಮೆರಾ ಮುಂದೆ ಬಂದ ಅವರಿಗೆ ಹಾಡಿನ ಮೇಕಿಂಗ್‌ ಸಿಕ್ಕಾಪಟ್ಟೆ ಖುಷಿ ಕೊಟ್ಟಿತಂತೆ. ಪೀರಿಯಾಡಿಕಲ್‌ ಚಿತ್ರ ಇದು. 80ರ ದಶಕದಲ್ಲಿ ಜೈಲಿನಲ್ಲಿ ನಡೆಯುವ ವಾರ್ಷಿಕೋತ್ಸವದಂದು ಹಿಂದಿ ಚಿತ್ರದ ನಟಿ ಬಂದು ಮಾಡುವ ಡಾನ್ಸ್‌ನಲ್ಲಿ ಜ್ಯೂಹಿ ಚಾವ್ಲಾ ಕಾಣಿಸಿಕೊಂಡಿದ್ದಾರೆ.

ಶ್ರುತಿ ಹರಿಹರನ್‌

ಗಡ್ಡ ವಿಜಿ ನಿರ್ದೇಶನದ 'ಪ್ಲಸ್‌' ಚಿತ್ರದಲ್ಲಿ ಶ್ರುತಿ ಹರಿಹರನ್‌ ಸ್ಪೆಪ್‌ ಹಾಕಿದ್ದರು. ಹೃದಯಾನೆ ಹಾಡಿಗೆ ಮೊದಲ ಬಾರಿಗೆ ಬೋಲ್ಡ್‌ ಆಗಿ ಡ್ಯಾನ್ಸ್‌ ಮಾಡಿದ್ದ ಶ್ರುತಿ ಹರಿಹರನ್‌ ರಿಯಾಲಿಟಿ ಶೋ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು.

ರಾಗಿಣಿ

ರಘು ಜಯ ನಿರ್ದೇಶನದ ಚಿತ್ರದಲ್ಲಿ ರಾಗಿಣಿ ಸ್ಪೆಷಲ್‌ ಸಾಂಗ್‌ಗೆ ಡ್ಯಾನ್ಸ್‌ ಮಾಡಿದ್ದಾರೆ. ಸ್ಲಂ ಹುಡುಗರ ಬದುಕನ್ನು ತೋರಿಸುವ ಚಿತ್ರದಲ್ಲಿ ಹಾಡೊಂದರಲ್ಲಿ ಮಾತ್ರ ಅವರು ಕಾಣಿಸಿಕೊಳ್ಳಲು ಕಾರಣ ಚಿತ್ರದಲ್ಲಿರುವ ಮೆಸೇಜ್‌ ಅಂತೆ. ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಜಂಗುಳಿ ಮಧ್ಯೆ ರಾಗಿಣಿ ಸ್ಟೆಪ್‌ ಹಾಕಿದ್ರೆ ಹೇಗಿರುತ್ತೆ ಕಲ್ಪಿಸಿಕೊಳ್ಳಿ. ಜನದಟ್ಟಣೆ ಮಧ್ಯೆ ಬಹಳ ಕಷ್ಟಪಟ್ಟು ಶೂಟ್‌ ಮಾಡಿದ್ವಿ ಎನ್ನುತ್ತಾರೆ ನಿರ್ದೇಶಕ ರಘು ಜಯ. ಡಿಫರೆಂಟ್‌ ಅನುಭವ ಅನ್ನೋದು ರಾಗಿಣಿ ಮಾತು.

'ಸ್ಟಾರ್‌ ನಟರು ಸಣ್ಣಪುಟ್ಟ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಒಂದು ಚಿತ್ರಕ್ಕೆ ಪ್ಲಸ್‌ ಪಾಯಿಂಟ್‌ ಆಗುತ್ತೆ ಅಂದ್ರೆ ಯಾಕೆ ಮಾಡಬಾರದು. ಚಿತ್ರದಲ್ಲಿ ಒಳ್ಳೆಯ ಮೆಸೇಜ್‌ ಇದೆ ಅನ್ನಿಸ್ತು. ಹಾಗಾಗಿ ಈ ಆಫರ್‌ ಒಪ್ಪಿಕೊಂಡೆ' ಎನ್ನುತ್ತಾರೆ ರಾಗಿಣಿ. ಇದಕ್ಕೂ ಮೊದಲು ಶರಣ್‌ ಅಭಿನಯದ ವಿಕ್ಟರಿ ಚಿತ್ರದ 'ಅಕ್ಕ ನಿನ್ನ ಮಗಳು ನಂಗೆ ಚಿಕ್ಕೋಳಾಗUಲ್ವಾ..' ಹಾಡಿಗೆ ಸ್ಟೆಪ್‌ ಹಾಕಿದ್ದರು.

ಐಶ್ವರ್ಯಾ ಸಿಂಧೋಗಿ

ಇತ್ತೀಚೆಗೆ ತೆರೆಕಂಡ ಪ್ರಜ್ವಲ್‌ ಅಭಿನಯದ 'ಭುಜಂಗ' ಚಿತ್ರದಲ್ಲಿ ಐಶ್ವರ್ಯ ಸಿಂಧೋಗಿ ತಮ್ಮ ಸೊಂಟ ಬಳುಕಿಸಿದ್ದರು. ಆಲಿಬಾಬಾ ಫಾದರ್ರೂ.. ಅನ್ನೋ ಹಾಡು ಅದು. ಪ್ರಜ್ವಲ್‌ ಜತೆ ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು.

ಐಂದ್ರಿತಾ ರೇ

ದಿಗಂತ್‌ ಅಭಿನಯದ 'ಶಾರ್ಪ್‌ ಶೂಟರ್‌' ಚಿತ್ರದಲ್ಲಿ ಐಂದ್ರಿತಾ ರೇ ಸ್ಪೆಷಲ್‌ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರು ಈ ಹಾಡಿಗೆ ಐಂದ್ರಿತಾ ಅವರೇ ಇರಬೇಕು ಅಂತ ಬಯಸಿದಾಗ ದಿಗಂತ್‌ ಜತೆ ಡ್ಯಾನ್ಸ್‌ ಮಾಡಿದ್ದರು. ಇದಲ್ಲದೆ ಶಿವರಾಜ್‌ ಕುಮಾರ್‌ ಅಭಿನಯದ 'ಕಡ್ಡಿಪುಡಿ' ಚಿತ್ರದಲ್ಲಿ 'ಸೌಂದರ‍್ಯ ಸಮರಾ' ಹಾಡಿನಲ್ಲಿಯೂ ಐಂದ್ರಿತಾ ವಿಶೇಷವಾಗಿ ಕಾಣಿಸಿಕೊಂಡಿದ್ದರು.

ರಮಣಿತು ಚೌಧರಿ

ಸುಮಂತ್‌ ಶೈಲೇಂದ್ರ ಅಭಿನಯದ 'ಬೆತ್ತನಗೆರೆ'ಯಲ್ಲಿ ಸ್ಪೆಷಲ್‌ ಸಾಂಗ್‌ಗೆ ಮುಂಬೈನಿಂದ ರಮಣಿತು ಚೌಧರಿ ಬಂದು ಹೋಗಿದ್ದಾರೆ. ವಿ. ನಾಗೇಂದ್ರ ಪ್ರಸಾದ್‌ ಬರೆದಿರುವ 'ಬನ್ನಿ ಬನ್ನಿ..' ಅನ್ನೋ ಹಾಡಿಗೆ ಹದಿಹರೆಯದವರ ಎದೆಬಡಿತ ಹೆಚ್ಚುವಂತೆ ಕುಣಿದಿದ್ದರು ರಮಣಿತು ಚೌಧರಿ.

ಅನುಶ್ರೀ

ಇನ್ನೂ ತೆರೆ ಕಾಣದ ಚಿತ್ರ 'ಮಾದ ಮತ್ತು ಮಾನಸಿ' ಚಿತ್ರದಲ್ಲಿ ಅನುಶ್ರೀ ಮೊದಲ ಬಾರಿಗೆ ಸ್ಪೆಷಲ್‌ ಸಾಂಗ್‌ನಲ್ಲಿ ನಟಿಸಿದ್ದಾರೆ. ಸತೀಶ್‌ ಪ್ರಧಾನ್‌ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್‌ ಮತ್ತು ಶ್ರುತಿಹರಿಹರನ್‌ ಮುಖ್ಯಪಾತ್ರದಲ್ಲಿ ನಟಿಸಿದ್ದು, ಅನುಶ್ರೀ ಒಂದು ಹಾಡಿಗೆ ಬಂದುಹೋಗುತ್ತಾರೆ. ಇಮ್ರಾನ್‌ ಸರ್ದಾರಿಯಾ ನೃತ್ಯ ನಿರ್ದೇಶನದ 'ಮಾದ ಮಾನಸಿ ಪ್ಯಾರ್‌ ಬಂತು ಕಣ್ಣಾಗೆ.. ' ಅನ್ನೋ ಹಾಡಿನಲ್ಲಿ ಅನುಶ್ರೀಯನ್ನು ಡಿಫರೆಂಟ್‌ ಗೆಟಪ್‌ನಲ್ಲಿ ನೋಡಬಹುದು. ಈ ಹಾಡನ್ನು ಒಪ್ಪಿಕೊಳ್ಳಲು ಇಮ್ರಾನ್‌ ಕಾರಣ ಎಂದಿದ್ದರು ಅವರು. 'ಅವರು ಸ್ಪೆಷಲ್‌ ಸಾಂಗ್‌ನಲ್ಲಿ ಕೆಟ್ಟದಾಗಿ ತೋರಿಸೋಲ್ಲ ಎನ್ನುವ ವಿಶ್ವಾಸ ನನಗಿತ್ತು. ಹಾಗಾಗಿ ಒಪ್ಪಿಕೊಂಡೆ' ಎನ್ನುತ್ತಾರೆ ಅವರು.


Viewing all articles
Browse latest Browse all 7056

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಅತ್ತಿಗೆ–ಮೈದುನ ಅಕ್ರಮ ಸಂಬಂಧ, ಆಮೇಲೇನಾಯ್ತು ಗೊತ್ತಾ…?



<script src="https://jsc.adskeeper.com/r/s/rssing.com.1596347.js" async> </script>