Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಮಹದಾಯಿ ಹೋರಾಟಕ್ಕೆ ಸಿನಿ ತಾರೆಯುರು ತಯಾರು

$
0
0

ಮಹದಾಯಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬೀದಿಗಿಳಿದಿವೆ. ರೈತರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು (ಜು.30) ಚಿತ್ರೋದ್ಯಮ ಬಂದ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ಶರಣು ಹುಲ್ಲೂರು

ಮಹದಾಯಿ ನದಿ ನೀರಿನ ಹಂಚಿಕೆ ಕುರಿತು ಕೋರ್ಟ್‌ ತೀರ್ಪಿನ ವಿರುದ್ಧದ ಪ್ರತಿಭಟನೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ರೈತ ಮತ್ತು ಕನ್ನಡಪರ ಸಂಘಟನೆಗಳ ಹೋರಾಟ ಅಕ್ಷ ರಶಃ ದಂಗೆಯ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವಂತೆ ಆಗ್ರಹಿಸಿ, ಇಂದು (ಜು.30) ಚಿತ್ರೋದ್ಯಮ ಬಂದ್‌ ಆಚರಿಸುತ್ತಿದೆ. ಸಿನಿಮಾ ಸಂಬಂಧಿತ ಎಲ್ಲ ಚಟುವಟಿಕೆ ಸ್ಥಗಿತಗೊಳಿಸಿರುವ ನಟ-ನಟಿಯರು ಮತ್ತು ತಂತ್ರಜ್ಞರು ಬೀದಿಗಿಳಿಯಲಿದ್ದಾರೆ. ಈ ಕುರಿತು ಸ್ಯಾಂಡಲ್‌ವುಡ್‌ನ ಸಿಲೆಬ್ರಿಟಿಗಳು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.

'ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇದೆ. ಕಳಸಾ ಬಂಡೂರಿಯ ಹೋರಾಟಕ್ಕೆ ನ್ಯಾಯ ಸಿಗುತ್ತದೆ ಅನ್ನುವ ನಂಬಿಕೆ ಇತ್ತು. ಆದರೆ, ಹಾಗಾಗಲಿಲ್ಲ. ಕುಡಿಯುವ ನೀರಿಗೂ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದ್ದು ನೋವಿನ ಸಂಗತಿ. ಈ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕು. ರೈತರ ಪರವಾಗಿ ನಾವು ಯಾವತ್ತೂ ನಿಲ್ಲುತ್ತೇವೆ' ಅಂತಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌.

ಕಳಸಾ ಬಂಡೂರಿ ಯೋಜನೆಯ ಹೋರಾಟಕ್ಕೆ ಬೆಂಬಲವಾಗಿ ಇವರು, ಹಲವು ಕಾರ‍್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಶನಿವಾರ ಮತ್ತು ಭಾನುವಾರ ದರ್ಶನ್‌ ಹಾಸನ ಜಿಲ್ಲೆಯ ಅನೇಕ ಚಿತ್ರಮಂದಿರಗಳಿಗೆ ಭೇಟಿ ಕೊಡಬೇಕಿತ್ತು. ಅಲ್ಲಿ ನಡೆಯಬೇಕಿದ್ದ 'ಜಗ್ಗುದಾದಾ' ಸಿನಿಮಾದ 50ನೇ ದಿನದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಅದೆಲ್ಲವನ್ನೂ ಕೈಬಿಟ್ಟು ಬಂದ್‌ಗೆ ಕೈಜೋಡಿಸಿದ್ದಾರೆ.

ಗಣೇಶ್‌ ಕೂಡ ಶೂಟಿಂಗ್‌ ನಿಲ್ಲಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. 'ಜನರ ಕುಡಿಯುವ ನೀರಿಗೂ ಅನ್ಯಾಯವಾದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಸರಕಾರಗಳು ಮನಸು ಮಾಡಿದರೆ, ಸಮಸ್ಯೆ ಕೂಡಲೇ ಸರಿ ಹೋಗುತ್ತದೆ. ಆ ಇಚ್ಛಾ ಶಕ್ತಿಯ ಕೊರತೆ ಕಾಣುತ್ತಿದೆ. ಕೂಡಲೇ ಶಾಶ್ವತ ಪರಿಹಾರಕ್ಕೆ ಚಿಂತನೆ ನಡೆಸಬೇಕಿದೆ. ರಾಜಕಾರಣಿಗಳು ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ' ಅನ್ನುವುದು ಗಣೇಶ್‌ ಮಾತು.

ರಮೇಶ್‌ ಅರವಿಂದ್‌ ಕೂಡ ಹೋರಾಟನಿರತ ರೈತರಿಗೆ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದ್ದಾರೆ. 'ಕುಡಿಯುವ ನೀರಿಗಾಗಿ ಹೋರಾಟ ಅತ್ಯಂತ ನೋವು ತಂದಿದೆ. ಜಗತ್ತಿಗೆ ಅನ್ನ ನೀಡುವ ರೈತರಿಗೆ ಇಂತಹ ಮೋಸ ಆಗಬಾರದು. ಕೂಡಲೇ ಸಂಬಂಧಪಟ್ಟವರು ಮಧ್ಯಸ್ಥಿಕೆ ವಹಿಸಿ ಪರಿಹಾರ ನೀಡಬೇಕು' ಅಂತಾರೆ.

'ರೈತರ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಉತ್ತರ ಕರ್ನಾಟಕ ಭಾಗದ ರೈತರು ನಿರಂತರ ಹೋರಾಟ ಮಾಡುತ್ತಲೇ ಇದ್ದಾರೆ. ಆದರೂ, ಅವರಿಗೆ ಅನ್ಯಾಯವಾಗಿದೆ. ರೈತರ ಕಣ್ಣೀರು ಶಾಪವಾದರೆ, ಯಾರಿಗೂ ನೆಮ್ಮದಿ ಸಿಗದು. ಅದನ್ನು ಅರ್ಥ ಮಾಡಿಕೊಳ್ಳಬೇಕು' ಅನ್ನುವುದು ಶ್ರೀಮುರಳಿ ಮಾತು.

'ರೈತರ ಆಕ್ರೋಶ ಮುಗಿಲು ಮುಟ್ಟಿದೆ. ಇದು ಅವರ ನೋವನ್ನು ಸೂಚಿಸುತ್ತದೆ. ನಿರಂತರ ಪ್ರತಿಭಟನೆಗಳು ನಡೆದರೂ, ಅದಕ್ಕೊಂದು ಪರಿಹಾರ ಸೂಚಿಸಲು ಆಗುತ್ತಿಲ್ಲವೆಂದರೆ ಅಚ್ಚರಿ ಅನಿಸುತ್ತದೆ. ಯಾವುದೇ ಕಾರಣಕ್ಕೂ ರೈತರು ನೋವಿನಲ್ಲಿ ಇರಬಾರದು. ಅವರ ಜತೆ ಯಾವತ್ತಿಗೂ ನಾವು ಇರುತ್ತೇವೆ' ಅನ್ನುವ ಮೂಲಕ ಹೋರಾಟಕ್ಕೆ ಜತೆಯಾಗಿದ್ದಾರೆ ನಟಿ ಹರಿಪ್ರಿಯಾ.

'ಕಳಸಾ ಬಂಡೂರಿ ವಿಚಾರದಲ್ಲಿ ನಾವೊಂದು ಸಾಕ್ಷ್ಯಚಿತ್ರ ಮಾಡಿದೆವು. ಆಗಲೇ ಅಲ್ಲಿನ ರೈತರ ನೋವು ನನಗೆ ಅರ್ಥ ಆಗಿದ್ದು. ಕುಡಿಯುವ ನೀರಿಗಾಗಿ ಅವರು ಪಡುತ್ತಿರುವ ಕಷ್ಟ ಹೇಳತೀರದು. ನಾನಂತೂ ಅದನ್ನು ನೋಡಿ ಅತ್ತುಬಿಟ್ಟೆ. ಈ ಸಮಸ್ಯೆ ಕೂಡಲೇ ಸರಿಯಾಗಬೇಕು. ಇಲ್ಲದಿದ್ದರೆ ಮತ್ತೊಂದು ಕ್ರಾಂತಿ ಆಗುವುದು ಸತ್ಯ' ಅಂತಾರೆ ಪೂಜಾ ಗಾಂಧಿ.

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಗೋವಾ ಸರಕಾರದ ವಿರುದ್ಧ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. 'ಮಹದಾಯಿ ತೀರ್ಪು ಅತ್ಯಂತ ನೋವು ತಂದಿದೆ. ತೀರ್ಪು ಏನೇ ಬಂದಿದ್ದರೂ, ಯಾವುದೇ ಕಾರಣಕ್ಕೂ ರೈತರು ಧೈರ್ಯ ಕಳೆದುಕೊಳ್ಳಬಾರದು. ಉಗ್ರವಾಗಿ ಹೋರಾಟ ಮಾಡಿಯಾದರೂ, ನಮ್ಮ ಪಾಲಿನ ನ್ಯಾಯ ಕೇಳೋಣ. ರೈತರೊಂದಿಗೆ ಯಾವಾಗಲೂ ಸಿನಿಮಾರಂಗ ಇರುತ್ತದೆ. ನ್ಯಾಯ ಸಿಗೋವರೆಗೂ ಹೋರಾಟ ನಿಲ್ಲುವುದಿಲ್ಲ' ಅಂತಾರೆ.

ಪ್ರತಿಭಟನಾ ಮೆರವಣಿಗೆ

ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಟೌನ್‌ಹಾಲ್‌ ಮುಂದೆ ಸಿನಿಮಾರಂಗದ ಕಲಾವಿದರು ಮತ್ತು ತಂತ್ರಜ್ಞರು ಸೇರಲಿದ್ದು, ಅಲ್ಲಿಂದ ಮೌನ ಮೆರವಣಿಗೆ ಸಾಗಲಿದೆ. ಫ್ರೀಡಂ ಪಾರ್ಕ್‌ನಲ್ಲಿ ಕೊನೆಗೊಳ್ಳಲಿರುವ ಪ್ರತಿಭಟನೆಯಲ್ಲಿ ಸುದೀಪ್‌,ದರ್ಶನ್‌, ಯಶ್‌, ಗಣೇಶ್‌, ಶಿವರಾಜ್‌ಕುಮಾರ್‌, ಪುನೀತ್‌ ಸೇರಿದಂತೆ ಕಲಾವಿದರು, ತಂತ್ರಜ್ಞರು, ಕಾರ್ಮಿಕರ ಒಕ್ಕೂಟದ ಸದಸ್ಯರು, ವಿತರಕರು, ಪ್ರದರ್ಶಕರು ಮತ್ತು ನಿರ್ದೇಶಕರ ಸಂಘದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಇಂದು ಚಿತ್ರೀಕರಣ ಮತ್ತು ಥಿಯೇಟರ್‌ ಕೂಡ ಬಂದ್‌ ಆಗಲಿವೆ.



Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>