Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಶ್ರೀನಿವಾಸನ್ ಆಪ್ತರಿಗೆ ಬಿಸಿಸಿಐ ಸಮನ್ಸ್

$
0
0

ಪದಾಧಿಕಾರಿಗಳ ಮೇಲೆ ಬೇಹುಗಾರಿಕೆಗೆ ವಿದೇಶಿ ಸಂಸ್ಥೆಗೆ ಹಣ ಪಾವತಿ ಹಿನ್ನೆಲೆ
ಮುಂಬಯಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ವಿರುದ್ಧ ಸಮರ ಸಾರಿರುವ ಬಿಸಿಸಿಐ, ಇದೀಗ ಶ್ರೀನಿ ಆಪ್ತ, ಮಂಡಳಿಯ ಮಾಜಿ ಕಾರ್ಯದರ್ಶಿ ಸಂಜಯ್ ಪಟೇಲ್‌ಗೆ ಸಮನ್ಸ್ ಜಾರಿ ಮಾಡಿದೆ.

ಬಿಸಿಸಿಐನ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಇತರ ಪದಾಧಿಕಾರಿಗಳ ವಿರುದ್ಧ ಬೇಹುಗಾರಿಕೆ ನಡೆಸಲು ವಿದೇಶಿ ಭದ್ರತಾ ಸಂಸ್ಥೆಯೊಂದನ್ನು ನೇಮಿಸಿ, ಅದಕ್ಕೆ ಮಂಡಳಿಯ ಹಣವನ್ನು ನೀಡಿದ ಆರೋಪ ಶ್ರೀನಿವಾಸನ್ ಮೇಲಿದೆ. ಈ ಪ್ರಕರಣದಲ್ಲಿ ಸಂಜಯ್ ಪಟೇಲ್ ಜತೆ ಹಾಲಿ ಖಜಾಂಚಿ ಅನಿರುದ್ಧ್ ಚೌಧರಿ ಅವರಿಗೂ ಸಮನ್ಸ್ ನೀಡಲಾಗಿದೆ.

ಬೇಹುಗಾರಿಕೆಗಾಗಿ 2013-14ನೇ ಸಾಲಿನಲ್ಲಿ ಬಿಸಿಸಿಐನಿಂದ ತನಗೆ ಸುಮಾರು 6 ಕೋಟಿ ರೂ. ಸಂದಾಯವಾಗಿತ್ತು ಎಂಬುದನ್ನು ಇಂಗ್ಲೆಂಡ್ ಮೂಲದ ಭದ್ರತಾ ಮತ್ತು ತನಿಖಾ ಸಂಸ್ಥೆಯಾದ ಪೇಜ್ ಪ್ರೊಟೆಕ್ಟಿವ್ ಸರ್ವಿಸಸ್ (ಪಿಪಿಎಸ್) ಸ್ಪಷ್ಟಪಡಿಸಿದೆ. ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ಲಂಡನ್‌ನಿಂದ ಈ ಬಗ್ಗೆ ಸ್ಪಷ್ಟನೆ ನೀಡಿರುವ, ಪಿಪಿಎಸ್‌ನ ಮುಖ್ಯಸ್ಥ ಸ್ಟುವರ್ಟ್ ಪೇಜ್, ''ಹೌದು. ಬೇಹುಗಾರಿಕೆ ನಡೆಸಲು ಬಿಸಿಸಿಐನಿಂದ ನಮಗೆ ಸೂಚನೆ ಬಂದಿತ್ತು. ಆದರೆ ಗ್ರಾಹಕರ ಗೌಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ,'' ಎಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ, ಶ್ರೀನಿವಾಸನ್ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದ ಪದಾಧಿಕಾರಿಗಳ ದೈನಂದಿನ ಚಟುವಟಿಕೆಗಳ ಬಗ್ಗೆ ಬೇಹುಗಾರಿಕೆ ನಡೆಸಲು ಪಿಪಿಎಸ್‌ಗೆ ಸೂಚಿಸಲಾಗಿತ್ತು. ಬೇಹುಗಾರಿಕೆ ನಡೆಸಿದ್ದ ಕಂಪನಿಗೆ ಅಂದಿನ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಅವರ ಶಿಫಾರಸಿನಂತೆ ಖಜಾಂಚಿ ಅನಿರುದ್ಧ್ ಚೌಧರಿ, ಹಣ ಪಾವತಿ ಮಾಡಿದ್ದರು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>