Quantcast
Channel: ರಾಜ್ಯ - vijaykarnataka indiatimes
Viewing all 7056 articles
Browse latest View live

ಜಾಟ್‌ ಪ್ರತಿಭಟನೆ, ದಿಲ್ಲಿ ಮುತ್ತಿಗೆ ರದ್ದು: ಹರ್ಯಾಣ ಸಿಎಂ ಮಾತುಕತೆ ಫಲಪ್ರದ

$
0
0

ಹೊಸದಿಲ್ಲಿ: ಮೀಸಲಿಗೆ ಆಗ್ರಹಿಸಿ 50 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಡಲು ಜಾಟ್‌ ಸಮುದಾಯ ನಿರ್ಧರಿಸಿದೆ. ಬೇಡಿಕೆಗಳನ್ನು ಈಡೇರಿಸಲು ಹರ್ಯಾಣ ಸರಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ 'ದಿಲ್ಲಿ ಘೆರಾವೊ' ಪ್ರತಿಭಟನೆಯನ್ನು ಜಾಟ್‌ ಮುಖಂಡರು ಕೈಬಿಟ್ಟಿದ್ದಾರೆ.

ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಜಾಟ್‌ ಮುಖಂಡರ ಜತೆ ಮಾತಕತೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟವಾಗಿದೆ. ಬಿಕ್ಕಟ್ಟು ಬಗೆಹರಿಸಲು ತಮ್ಮ ಸರಕಾರ ಬದ್ಧವಾಗಿದೆ ಎಂದು ಖಟ್ಟರ್‌ ಭರವಸೆ ನೀಡಿದ್ದಾರೆ.

'ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಮುಖ್ಯಸ್ಥರು ಮತ್ತು ಸದಸ್ಯರ ನೇಮಕವಾದ ಕೂಡಲೇ ಕೇಂದ್ರ ಸರಕಾರ ಜಾಟ್ ಮೀಸಲು ಪ್ರಕ್ರಿಯೆ ಆರಂಭಿಸಲಿದೆ' ಎಂದು ಸಿಎಂ ಖಟ್ಟರ್ ಜಾಟ್‌ ಮುಖಂಡರ ಜತೆ ನಡಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಾಟ್‌ ಸಮುದಾಯ ಹರ್ಯಾಣದ ಹಲವೆಡೆ ಜನವರಿ 29ರಿಂದಲೇ ಧರಣಿಗಳನ್ನು ನಡೆಸುತ್ತಿತ್ತು. ಅಖಿಲ ಭಾರತ ರಾಜ್ ಆರಕ್ಷಣ್ ಸಂಘರ್‍ ಸಮಿತಿ (AIJASS) ಸಂಸತ್ತಿಗೆ ಮುತ್ತಿಗೆ ಹಾಕಲು ಹಾಗೂ ನಾಳೆಯಿಂದ ದಿಲ್ಲಿ ಗಡಿಯ ಹೆದ್ದಾರಿಗಳಿಗೆ ತಡೆಯೊಡ್ಡಲು ಕರೆ ನೀಡಿದ ಬಳಿಕ ಕೇಂದ್ರ ಸರಕಾರ ಈ ಬಗ್ಗೆ ಗಮನ ಹರಿಸಿದೆ.

50 ದಿನಗಳ ಪ್ರತಿಭಟನೆ ಶಾಂತಿಯುತವಾಗಿದ್ದು, ಮುಂದಿನ ಕ್ರಮವನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು AIJASS ಮುಖ್ಯಸ್ಥ ಯಶಪಾಲ್ ಮಲಿಕ್ ತಿಳಿಸಿದರು.

'ಹರ್ಯಾಣ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆಸಲಿರುವ ಪ್ರತಿಭಟನೆಯನ್ನು ಸದ್ಯಕ್ಕೆ ಕೈಬಿಟ್ಟಿದ್ದೇವೆ. ಮುಂದಿನ ಪ್ರತಿಭಟನೆಗಳ ಬಗ್ಗೆ ಮಾರ್ಚ್‌ 26ರಂದು ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಗುವುದು' ಎಂದು ಮಲಿಕ್ ತಿಳಿಸಿದರು.

ಕಳೆದ ವರ್ಷದ ಪ್ರತಿಭಟನೆ ವೇಳೆ ಬಂಧಿಸಲಾಗಿದ್ದ ಎಲ್ಲರನ್ನೂ ಬಿಡುಗಡೆ ಮಾಡುವುದಲ್ಲದೆ, ಎಲ್ಲ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಜಾಟ್‌ ಸಮುದಾಯ ಆಗ್ರಹಿಸಿದೆ. ಅಲ್ಲದೆ ಕಳೆದ ವರ್ಷದ ಪ್ರತಿಭಟನೆ ವೇಳೆ ಮೃತಪಟ್ಟವರ ಕುಟುಂಬದವರಿಗೆ ಸರಕಾರಿ ಉದ್ಯೋಗ ನೀಡಬೇಕೆಂದೂ ಆಗ್ರಹಿಸಿದೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಹರ್ಯಾಣದಲ್ಲಿ ಜಾಟ್‌ ಪ್ರತಿಭಟನೆ ವೇಳೆ ನಡೆದ ಭಾರಿ ಪ್ರಮಾಣದ ಹಿಂಸಾಚಾರದಲ್ಲಿ ಸುಮಾರು 30 ಮಂದಿ ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

'ದಿಲ್ಲಿ ಘೆರಾವ್' ಘೋಷಣೆ ಬಳಿಕ ಶಾಂತಿ ಕಾಪಾಡಲು 24,700 ಅರೆ ಮಿಲಿಟರ ಪಡೆ ಸಿಬ್ಬಂದಿಗಳನ್ನು ದಿಲ್ಲಿ ಹಾಗೂ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ದಿಲ್ಲಿ ಪೊಲೀಸರು ಗಡಿಭಾಗಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಿದ್ದರು. ಅಲ್ಲದೆ ದಿಲ್ಲಿ ಮೆಟ್ರೋ ಸಂಚಾರವನ್ನು ಭಾನುವಾರ ರಾತ್ರಿಯಿಂದಲೇ ರದ್ದುಪಡಿಸುವಂತೆ ಸೂಚಿಸಿದ್ದರು.

Jat leaders call off agitation in Delhi after talks with Haryana chief minister

NEW DELHI: Jat leaders today called off their 'Delhi Gherao' agitation after the Haryana government agreed to their demands in a bid to end the community's 50-day long quota stir.


ಎಲ್ಲರೊಂದಿಗೆ ಎಲ್ಲರ ಅಭಿವೃದ್ಧಿ: ಮೋದಿ ಮಂತ್ರ ಪುನರುಚ್ಚರಿಸಿದ ಯೋಗಿ

$
0
0

ಹೊಸದಿಲ್ಲಿ: ಬಡವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕೆಲಸ ಮಾಡುವುದರ ಜತೆಗೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ದುಡಿಯುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಉತ್ತರ ಪ್ರದೇಶದ ಜನತೆಗೆ ಆಭಾರಿಯಾಗಿದ್ದೇನೆ. ರಾಜ್ಯದ ಸಂಪೂರ್ಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಿದ್ದೇನೆ' ಎಂದರು.

ಶನಿವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿಯಾಗಿ ದಿಢೀರ್ ಘೋಷಿಸಲಾಗಿತ್ತು. ಐದು ಬಾರಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಆದಿತ್ಯನಾಥ್‌ ಮೂಲತಃ ಆರೆಸ್ಸೆಸ್‌ ಕಾರ್ಯಕರ್ತರು. ಹಲವು ಬಾರಿ ಕಡು ಹಿಂದುತ್ವದ ಅಗ್ರನಾಯಕರಾಗಿ ಕಾಣಿಸಿಕೊಂಡವರು.

ಧಾರ್ಮಿಕ ಅಲ್ಪಸಂಖ್ಯಾತರ ಕುರಿತು ಹಲವು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಅವರು, ತಮ್ಮ ಮೇಳಿರುವ ಮುಸ್ಲಿಂ ವಿರೋಧಿ ಆಪಾದನೆಗಳನ್ನು ಅಲ್ಲಗಳೆಯುವ ಪ್ರಯತ್ನ ಮಾಡಿದರು.

'ಸಮಾಜದ ಎಲ್ಲ ವರ್ಗಗಳ ಏಳಿಗೆಗೆ ತಮ್ಮ ಸರಕಾರ ಯಾವುದೇ ತಾರತಮ್ಯವಿಲ್ಲದೆ ಕೆಲಸ ಮಾಡುತ್ತದೆ. ಸರಕಾರ ಈ ನಿಟ್ಟಿನಲ್ಲಿ ಪ್ರತಿಯೊಂದಕ್ಕೂ ಉತ್ತರದಾಯಿಯಾಗಿರುತ್ತದೆ' ಎಂದು ಆದಿತ್ಯನಾಥ್ ನುಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿಯಲು ಹಿಂದಿನ ಸಮಾಜವಾದಿ ಪಕ್ಷದ ಸರಕಾರವೇ ಕಾರಣ ಎಂದು ವಾಗ್ದಾಳಿ ನಡೆಸಿದ ಅವರು, ಉತ್ತಮ ಆಡಳಿತದ ಭರವಸೆ ನೀಡಿದರು.

'ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರ, ಕಾನೂನು ಸುವ್ಯವಸ್ಥೆಯ ಕೊರತೆಯಿಂದ ರಾಜ್ಯದ ಜನತೆ ಬಹಳಷ್ಟು ತೊಂದರೆಗೀಡಾಗಿದ್ದಾರೆ. ನಮ್ಮ ಸರಕಾರ ಉತ್ತರ ಪ್ರದೇಶದ ಜನರ ಕಲ್ಯಾಣಕ್ಕೆ ಕೆಲಸ ಮಾಡಲಿದೆ' ಎಂದು ಹೇಳಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದು, ರೈತರು, ಯುವಕರು ಮತ್ತು ಆರ್ಥಿಕವಾಗಿ ದುರ್ಬಲರು ಇನ್ನು ಮುಂದೆ ಉತ್ತಮ ಬದುಕು ಕಾಣಲಿದ್ದಾರೆ ಎಂದರು.

'ರೈತರು ನಮ್ಮ ರಾಜ್ಯದ ಹೆಮ್ಮೆ. ನಾವು ಅವರಿಗಾಗಿ ಕೆಲಸ ಮಾಡುತ್ತೇವೆ. ಯುವಕರಿಗೆ ಉದ್ಯೋಗ ನೀಡುತ್ತೇವೆ. ಜನತೆಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನುಡಿದರು.

Will work for all sections of society without any discrimination: UP chief minister Yogi Adityanath

NEW DELHI: Uttar Pradesh chief minister Yogi Adityanath promised to work for the welfare of poor and backward classes and strive for the state's development at his first press briefing after being sworn in earlier today.

ಮೋದಿ ಕಿವಿಯಲ್ಲಿ ಪಿಸುಗುಟ್ಟಿದ ಮುಲಾಯಂ

$
0
0

ಲಖನೌ: ಉತ್ತರ ಪ್ರದೇಶ ಚುನಾವಣಾ ರಣಾಂಗಣದಲ್ಲಿ ವೈರಿಗಳಂತೆ ಕಾಣಿಸಿಕೊಂಡಿದ್ದ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್‌ ಯಾದವ್‌ ಮತ್ತು ಮಾಜಿ ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್‌ ಭಾನುವಾರ ನಡೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.

ಇಲ್ಲಿನ ಸ್ಮೃತಿ ಉಪವನ್‍ನಲ್ಲಿ ನಡೆದ ಆದಿತ್ಯನಾಥ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರನ್ನು ಭೇಟಿಯಾದ ಮುಲಾಯಂ ಸಿಂಗ್‌ ಹಾಗೂ ಅವರ ಮಗ ಅಖಿಲೇಶ್‌ ಇಬ್ಬರೂ ಮೋದಿ ಜತೆ ಮಾತನಾಡಿದ್ದಾರೆ.

ಸುಮಾರು 90 ನಿಮಿಷಗಳ ಭಾಷಣದ ಬಳಿಕ ಮೋದಿ ವೇದಿಕೆಯಿಂದ ಕೆಳಗಿಳಿಯಲು ಅಣಿಯಾಗುತ್ತಿದ್ದಂತೆ ಅವರ ಬಳಿ ತೆರಳಿದ ಮುಲಾಯಂ ಸಿಂಗ್ ಅಲ್ಲಿ ಹಸ್ತಲಾಘವ ಮಾಡಿದರು. ಆಮೇಲೆ ಇಬ್ಬರೂ ಆತ್ಮೀಯವಾಗಿ ಆಲಿಂಗನ ಮಾಡಿಕೊಂಡರು.

ಈ ವೇಳೆ ಮೋದಿ ಕಿವಿಯಲ್ಲಿ ಏನೋ ಪಿಸುಗುಟ್ಟಿದ ಮುಲಾಯಂ ಬಳಿಕ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಆನಂತರ ಅಖಿಲೇಶ್ ಬಳಿ ಹೋಗಿ ಮೋದಿ ಬೆನ್ನು ತಟ್ಟಿದ್ದಾರೆ. ಆದರೆ ಇದೀಗ ಮೋದಿ ಬಳಿ ಮುಲಾಯಂ ಏನು ಹೇಳಿದರು ಎಂಬುದೇ ಎಲ್ಲರ ಕುತೂಹಲ ಕೆರಳಿಸಿದೆ.

ಜಮಖಂಡಿಯಲ್ಲಿ ಅಂಬೇಡ್ಕರ ಸೇನೆ ಪ್ರತಿಭಟನೆ

$
0
0

ಜಮಖಂಡಿ: ಇಲ್ಲಿನ ಗೋಶಾಲೆಯಲ್ಲಿ ಅವ್ಯವಹಾರ, ಅನೈತಿಕ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಗೋಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ ಅಂಬೇಡ್ಕರ್‌ ಸೇನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಎ.ಜಿ.ದೇಸಾಯಿ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಮಾನವ ಸರಪಳಿ ನಿರ್ಮಿಸಿ ರಸ್ತೆ ಸಂಚಾರ ತಡೆದ ಪ್ರತಿಭಟನೆಕಾರರು ನಂತರ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದರು.

ಜಿಲ್ಲಾಧ್ಯಕ್ಷ ಯಮನಪ್ಪ ಗುಣದಾಳ ಮಾತನಾಡಿ, ನಗರದ ನ್ಯಾಯಾಲಯಕ್ಕೆ ಹೊಂದಿಕೊಂಡಿರುವ ಗೋಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಕೆಲವು ಕಾಣದ ಕೈಗಳು ಸ್ವಾರ್ಥಕ್ಕಾಗಿ ಗೋಶಾಲೆ ಸ್ಥಳಾಂತರಕ್ಕೆ ವಿರೋಧಿಸುತ್ತಿದ್ದಾರೆ. ಖೊಟ್ಟಿ ದಾಖಲೆ ಸೃಷ್ಟಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ನಗರದ ಜನತೆ ಹಿತದೃಷ್ಟಿಯಿಂದ ತಾಲೂಕಾಡಳಿತ ಗೋಶಾಲೆಯನ್ನು ಸ್ಥಳಾಂತರಿಸಿ ಪ್ರಸ್ತುತ ಗೋಶಾಲೆ ಜಾಗೆಯನ್ನು ಸಾರ್ವಜನಿಕ ಉಪಯೋಗಕ್ಕಾಗಿ ಬಳಸಲು ತೀರ್ಮಾನಿಸಿದೆ. ಈ ತೀರ್ಮಾನವನ್ನು ಅಂಬೇಡ್ಕರ್‌ ಸೇನೆ ಬೆಂಬಲಿಸುತ್ತದೆ. ಆದರೆ ಈ ಜಾಗವನ್ನು ಕೆಲವರು ಸ್ವಂತಕ್ಕೆ ಬಳಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ. ಮೊನ್ನೆ ದಿನ ಕಿಡಿಗೇಡಿಗಳು ತಹಸೀಲ್ದಾರ್‌ ಮತ್ತು ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಿ ಕೂಡಲೇ ಬಂಧಿಸಬೇಕು ಎಂದರು.

ಜಿಲ್ಲಾ ಉಪಾಧ್ಯಕ್ಷ ಶಿವಲಿಂಗ ಗೊಬ್ಬಿಗುಡ್ಡ ಮಾತನಾಡಿ, ಈ ಗೋಶಾಲೆ ನಡೆಸುವವರು ಇಲ್ಲಿವರೆಗೆ ಸಾರ್ವಜನಿಕರು ನೀಡಿದ ದೇಣಿಗೆ ಬಗ್ಗೆ ಸಾರ್ವಜನಿಕರಿಗೆ ಲೆಕ್ಕ ತಿಳಿಸಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಹಾದೇವ ಕಾಂಬಳೆ, ರಾಹುಲ ದೊಡ್ಡಮನಿ, ರವಿ, ಶ್ರೀಮಂತ ದೊಡ್ಡಮನಿ, ಪರಮಾನಂದ ತಳವಾರ, ಅನಿಲ ಕಾಂಬಳೆ ಮತ್ತಿತರರು ಇದ್ದರು.

ಸಂಚಾರ ತಡೆದು ಪ್ರತಿಭಟನೆ

$
0
0

ಬೀಳಗಿ: ರೈತರ ಸಾಲಮನ್ನಾ, ಮರಳು ಪೂರೈಕೆ ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಉದಯ ಕುಂಬಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಶಿವಾಜಿ ವೃತ್ತದಿಂದ ಮೆರವಣಿಗೆ ಆರಂಭಿಸಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಬಸ್‌ ನಿಲ್ದಾನದ ಎದುರು ಕೆಲ ಕಾಲ ರಸ್ತೆ ಸಂಚಾರ ತಡೆ ನಡೆಸಲಾಯಿತು.

ನಂತರ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಎಚ್‌.ಆರ್‌.ನಿರಾಣಿ ಮಾತನಾಡಿ, ಬೀಕರ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ರಾಜ್ಯ ಸರಕಾರ ಕೂಡಲೇ ರೈತರ ಸಾಲಮನ್ನಾ ಮಾಡಬೇಕು. ನಾಲ್ಕು ವರ್ಷದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಕಾಂಗ್ರೆಸ್‌ ಸರಕಾರ ನಿದ್ರಾವಸ್ಥೆಯಿಂದ ಎಚ್ಚೆತ್ತುಕೊಂಡಿಲ್ಲ ಎಂದು ಹರಿಹಾಯ್ದರು.

ಪಕ್ಕದ ಜಿಲ್ಲೆಗಳಲ್ಲಿ ಸಿಗುತ್ತಿರುವ ಮರಳು ನಮ್ಮ ಜಿಲ್ಲೆಯಲ್ಲಿ ಸಿಗದಂತಾಗಿದೆ. ಜಿಲ್ಲೆಯಲ್ಲಿ ಅಧಿಕಾರಿಗಳು ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಅನ್ನಭಾಗ್ಯ ಕನ್ನಭಾಗ್ಯವಾಗಿದೆ. ದೀಪ ಹಚ್ಚಲೂ ಸೀಮೆಎಣ್ಣೆ ಸಿಗುತ್ತಿಲ್ಲ. ಸರಕಾರದ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿಲ್ಲ. ಕೇಂದ್ರ ಸರಕಾರ ನೀಡಿದ ವಿಮೆ, ಬರಗಾಲ ಕಾಮಗಾರಿ ಹಣ ಸದ್ವಿನಿಯೋಗ ಆಗುತ್ತಿಲ್ಲ ಎಂದು ದೂರಿದರು. ಕಾಂಗ್ರೆಸ್‌ ಸರಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಸಂಗಪ್ಪ ಕಟಗೇರಿ, ಪ್ರಧಾನ ಕಾರ್ಯದರ್ಶಿ ಈರಣ್ಣ ಗಿಡ್ಡಪ್ಪಗೋಳ, ಜಿಪಂ ಸದಸ್ಯ ಹೂವಪ್ಪ ರಾಠೋಡ, ಸಂಗಪ್ಪ ಕಂದಗಲ್ಲ, ವಿಠ್ಠಲ ನಿಂಬಳಕಾರ, ಮಲ್ಲಪ್ಪ ಶಂಭೋಜಿ, ಕೆ.ವಿ.ಪಾಟೀಲ, ಮಹಾಂತೇಶ ಕೋಲಕಾರ, ದಾಕ್ಷಾಯಿಣಿ ಜಂಬಗಿ, ಮಂಜುಳಾ ಮೇರಾಕಾರ, ನಿಂಗಪ್ಪ ದಂಧರಗಿ, ಬಸವರಾಜ ಉಮಚಗಿಮಠ, ಆನಂದ ಇಂಗಳಗಾವಿ, ವಿ.ಜಿ.ರೇವಡಿಗಾರ, ಸಿದ್ದು ಪಾತ್ರೋಟ, ಜಗತ್‌ನಾಯಕ ಕಣವಿ, ಮಹಾದೇವಿ ಮೈಸೂರ, ರೇಣುಕಾ ಬುಡ್ಡರ, ಕಾವೇರಿ ರಾಠೋಡ, ರಾಜು ಅರಕೇರಿ, ಯಲ್ಲಪ್ಪ ಹೆಳವರ, ಶ್ರೀಶೈಲ ಯಂಕಂಚಿಮಠ ಮತ್ತಿತರ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಚಿನ್ಮಯ ಮೂರುತಿ ಪ್ರಸನ್ನ ಮಾರುತಿ

$
0
0

ರಾಜೀವ ದೇಶಪಾಂಡೆ ಬಾಗಲಕೋಟ: ಬುದ್ಧಿ, ಬಲ, ಯಶಸ್ಸು, ಧೈರ್ಯ, ವಾಕ್ಪಟುತ್ವ .....

ಈ ಗುಣಗಳು ಹನುಮಂತ ದೇವರನ್ನು ಕೇವಲ ಸ್ಮರಿಸುವುದರಿಂದ ಬರುತ್ತವೆ ಎಂದು ಶ್ಲೋಕವೊಂದು ಸಾರಿದೆ. ಹನುಮಂತನ ಮಹಿಮೆಯೇ ಅಂಥದ್ದು. ಅಂತೆಯೇ ಪ್ರತಿ ಊರಲ್ಲಿ, ಗಲ್ಲಿ ಗಲ್ಲಿಗಳಲ್ಲಿ ರಾಮದೂತನ ದೇವಸ್ಥಾನ, ಪ್ರತಿ ದೇವಸ್ಥಾನಕ್ಕೂ ಸಾವಿರಾರು ಭಕ್ತರು. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿನ ನವನಗರ ಸೆಕ್ಟರ್‌ ನಂ.3ರಲ್ಲಿರುವ ಪ್ರಸನ್ನ ಮಾರುತಿ.

ಹದಿನಾಲ್ಕು ವರ್ಷಗಳಿಂದ ಇಲ್ಲಿನ ದೇವಸ್ಥಾನದಲ್ಲಿ ನೆಲೆಸಿರುವ ಮಾರುತಿ ಮುಸ್ಲಿಂ ಬಾಂಧವರು ಸೇರಿದಂತೆ ಸುತ್ತಲಿನ ಹತ್ತು ಸೆಕ್ಟರ್‌ಗಳ ಎಲ್ಲ ಜಾತಿ, ವರ್ಗದ ಜನತೆ ಆರಾಧ್ಯ ದೈವ.

ಪುಟ್ಟ ಮಾರುತಿ

2003ರಲ್ಲಿ ನವನಗರದ ಸೆಕ್ಟರ್‌ ನಂ.3ರಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿದ್ದಾಗ ನೆಲದಲ್ಲಿ ಒಂದು ಶಿಲೆ ದೊರಕಿತು. ಅದನ್ನು ತೆಗೆದು ನೋಡಿದಾಗ ಪುಟ್ಟ ಮಾರುತಿ ಪ್ರಸನ್ನನಾಗಿದ್ದ. ಇದನ್ನು ಕಂಡು ಹರ್ಷಗೊಂಡ ಸುತ್ತಲಿನ ನಿವಾಸಿಗಳು ಇಲ್ಲೊಂದು ದೇವಸ್ಥಾನ ನಿರ್ಮಿಸಿಕೊಡುವಂತೆ ಬಿಟಿಡಿಎಗೆ ಪತ್ರ ಬರೆದು ವಿನಂತಿಸಿದರು. ದೇವಸ್ಥಾನ ನಿರ್ಮಿಸಲು ಬಿಟಿಡಿಎದಿಂದ ಅನುಮತಿಯೂ ದೊರಕಿತು. ನಂತರ ಪ್ರಸನ್ನ ಮಾರುತಿ ಸೇವಾ ಸಮಿತಿಯೂ ಜನ್ಮ ತಳೆಯಿತು. ಮುಂದೆ ವರ್ಷಪೂರ್ತಿ ನಾನಾ ಉತ್ಸವ, ಸಮಾರಂಭಗಳನ್ನು ನಡೆಸಲು ಸಮಿತಿ ನಿರ್ಧರಿಸಿತು. ಈ ಕಾರ್ಯ ಇಂದಿಗೂ ಮುಂದುವರಿದಿದೆ. ದೇವಸ್ಥಾನದಲ್ಲಿ ನಿತ್ಯ ಪೂಜೆ, ನೈವೇದ್ಯ ವಿಶೇಷ ಸಂದರ್ಭಗಳಲ್ಲಿ ಸಾಮೂಹಿಕ ಅನ್ನಸಂತರ್ಪಣೆ ನಡೆಯುತ್ತದೆ. ಪ್ರಸನ್ನವೆಂಕಟ ಹಾಗೂ ಪ್ರಗತಿ ಬಾಲ ಭಜನಾ ಮಂಡಳಿಯಂಥ ತಂಡಗಳು ಇದೇ ದೇವಸ್ಥಾನದಲ್ಲಿ ಜನ್ಮ ತಳೆದು ಮಕ್ಕಳು, ಮಹಿಳೆಯರಿಗೆ ಹಬ್ಬ ಹರಿದಿನಗಳಲ್ಲಿ ನಾನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಸನಾತನ ಸಂಸ್ಕೃತಿ, ಧಾರ್ಮಿಕ ಪ್ರಜ್ಞೆ ಮೂಡಿಸುತ್ತಿವೆ.

ಉತ್ಸವ ಉತ್ಸಾಹ

ಹನುಮ ಜಯಂತಿ, ಕನಕ ಜಯಂತಿ, ಪುರಂದರ ಜಯಂತಿ, ಕಾರ್ತಿಕೋತ್ಸವ ಸಂದರ್ಭಗಳಲ್ಲಿ ಇಲ್ಲಿ ಧಾರ್ಮಿಕ ಉಪನ್ಯಾಸ, ಸಂಗೀತ, ನೃತ್ಯ, ರಸಪ್ರಶ್ನೆಯಂಥ ಸ್ಪರ್ಧೆಗಳು ನಡೆಯುತ್ತವೆ. ಡಿಸೆಂಬರ್‌ ತಿಂಗಳಲ್ಲಿ ಬರುವ ಹನುಮದ್ವೃತ ದಿನದಂದು ದೇವಸ್ಥಾನದ ವಾರ್ಷಿಕೋತ್ಸವ ಅದ್ಧೂರಿಯಿಂದ ನಡೆಯುತ್ತದೆ. ನವರಾತ್ರಿ, ಯುಗಾದಿ, ದೀಪಾವಳಿ, ಶ್ರಾವಣ ಮಾಸ ಹೀಗೆ ನಾನಾ ಸಂದರ್ಭದಲ್ಲಿ ಇಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ನವರಾತ್ರಿ ಸಂದರ್ಭದಲ್ಲಿ ವೆಂಕಟೇಶ ಮಹಾತ್ಮೆ ಪ್ರವಚನದ ಕೊನೆಯ ದಿನ ಶ್ರೀನಿವಾಸ ದೇವರ ಕಲ್ಯಾಣೋತ್ಸವವನ್ನು ಕಣ್ಮನ ಸೆಳೆಯುವಂತೆ ನಡೆಸುವುದು ಇಲ್ಲಿನ ಮತ್ತೊಂದು ವಿಶೇಷ.

----

ವಾನರನಿಗೆ ಪೂಜೆ

ಮೂರು ವರ್ಷಗಳ ಹಿಂದೆ ಎಲ್ಲಿಂದಲೋ ಬಂದ ಮಂಗವೊಂದು ಈ ದೇವಸ್ಥಾನದ ಬಳಿ ವಾಸವಾಗಿತ್ತು. ಸುತ್ತಲಿನ ನಿವಾಸಿಗಳು ನೀಡುವ ಆಹಾರ ತಿಂದು ಮಕ್ಕಳೊಂದಿಗೆ ಆಟವಾಡುತ್ತಿತ್ತು. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಸೆಕ್ಟರ್‌ನ ಎಲ್ಲ ಮನೆಗಳ ದೇವರ ಕೋಣೆಗೂ ಹೋಗುತ್ತಿತ್ತು. ಜನ ಅದನ್ನು ಪೂಜ್ಯ ಭಾವದಿಂದ ಕಾಣುತ್ತಿದ್ದರು. ದೀಪಾವಳಿ ಸಂದರ್ಭದಲ್ಲಿ ಮಹಿಳೆಯರು ವಾನರನಿಗೂ ಆರತಿ ಬೆಳಗುತ್ತಿದ್ದರು. ಒಂದು ವರ್ಷದ ನಂತರ ಅದು ಕಣ್ಮರೆಯಾದಾಗ ಹಳಹಳಿಸಿದ ಜನ ಹನುಮಂತನೇ ಒಂದು ರೂಪದಲ್ಲಿ ನಮ್ಮ ಗಲ್ಲಿಗೆ ಬಂದಿದ್ದ ಎಂದು ಇಂದಿಗೂ ಭಾವುಕರಾಗಿ ಸ್ಮರಿಸುತ್ತಾರೆ.


ಇಷ್ಟಾರ್ಥ ಈಡೇರಿಸುವ ಮೂಲಕ ದೈವಿಶಕ್ತಿಯಲ್ಲಿ ನಂಬಿಕೆ ಹೆಚ್ಚಿಸುವ ಹನುಮಂತ ಭಕ್ತರ ನಡುವೆ ಸೌಹಾರ್ದ ಮೂಡಿಸುವ ದೇವನೂ ಆಗಿದ್ದಾನೆ. ಆತನ ಸೇವೆ ದೊರೆತದ್ದು ನಮ್ಮ ಭಾಗ್ಯ.

ಧ್ರುವಾಚಾರ್‌ ಕಾಖಂಡಕಿ, ಪ್ರಸನ್ನ ಮಾರುತಿ ಅರ್ಚಕರು


ಸಮಿತಿಯಿಂದ ವರ್ಷಪೂರ್ತಿ ನಾನಾ ಧಾರ್ಮಿಕ ಕಾರ್ಯ ನಡೆಸಲಾಗುತ್ತಿದೆ. ಸೆಕ್ಟರ್‌ನ ಎಲ್ಲ ವಯಸ್ಸಿನ ಸ್ವಯಂ ಸೇವಕರು ಉತ್ಸವವಗಳಲ್ಲಿ ಶ್ರದ್ಧೆಯಿಂದ ಭಾಗವಹಿಸಿ ಸೇವೆ ಸಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ಸಾಮಾಜಿಕ, ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಂಡು ಬಡ, ಪ್ರತಿಬಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಯೋಜನೆ ಇದೆ.

-ವಿಜಯ ದೇಶಪಾಂಡೆ, ಪ್ರಸನ್ನ ಮಾರುತಿ ಸೇವಾ ಸಮಿತಿ ಕಾರ್ಯದರ್ಶಿ

ಇದೊಂದು ಭಾವೈಕ್ಯದ ತಾಣ. ಇಲ್ಲಿನ ಯುವಕರು, ಸೆಕ್ಟರ್‌ ನಿವಾಸಿಗಳು ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ನಮ್ಮ ಸಮಿತಿಯ ಸಂಪೂರ್ಣ ಸಹಕಾರವಿದೆ.

-ಆರ್‌.ಆರ್‌.ಕುಲಕರ್ಣಿ ಪ್ರಸನ್ನ ಮಾರುತಿ ಸೇವಾ ಸಮಿತಿ ಅಧ್ಯಕ್ಷ

ಪ್ರಸನ್ನ ಮಾರುತಿ ಭಕ್ತರಲ್ಲಿ ಯಾವುದೇ ಭೇದವಿಲ್ಲ. ಕೆಲ ವರ್ಷಗಳ ಹಿಂದೆ ವಾನರ ಬಂದು ನೆಲೆಸಿದಾಗ ಮಾರುತಿಯೇ ಈ ರೂಪದಲ್ಲಿ ಬಂದಿದ್ದಾನೆ ಎಂದು ನಾವು ಧನ್ಯರಾಗಿದ್ದೆವು.

-ಪ್ರಕಾಶ ಖಾಡೆ, ಸಾಹಿತಿ, ಭಕ್ತರು


ಗ್ರಾಮಸ್ಥರನ್ನು ಗದರಿಸಿದ ಸದಸ್ಯ

$
0
0

ಜಮಖಂಡಿ: ''ಗ್ರಾಮ ಸಭೆಯಲ್ಲಿ ಫಲಾನುಭವಿಗಳ ಆಯ್ಕೆಗೆ ಅವಕಾಶ ನೀಡುವುದಿಲ್ಲ, ಸದಸ್ಯರು ಸೇರಿ ಸಾಮಾನ್ಯ ಸಭೆಯಲ್ಲೇ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ, ಏನ್‌ ಮಾಡ್ಕೋತಿ ಮಾಡ್ಕೊ...''

ಹೀಗೆ ಗ್ರಾಮಸ್ಥರನ್ನು ಗದರಿಸಿದವರು ಗ್ರಾಪಂ ಸದಸ್ಯ ಮಲ್ಲಪ್ಪ ಕಡಪಟ್ಟಿ. ಬಸವ ವಸತಿ ಯೋಜನೆಯಡಿ 40 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳನ್ನು ಆಯ್ಕೆಗೊಳಿಸಲು ತಾಲೂಕಿನ ಹುನ್ನೂರು ಗ್ರಾಪಂ ಆವರಣದಲ್ಲಿ ನಡೆಸಿದ ವಿಶೇಷ ಗ್ರಾಮ ಸಭೆಯಲ್ಲಿ ಚೀಟಿ ಎತ್ತಿ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಗ್ರಾಮಸ್ಥರು ಸಲಹೆ ನೀಡಿದಾಗ ಏರು ಧ್ವನಿಯಲ್ಲಿ ಮಾತನಾಡಿದ ಕಡಪಟ್ಟಿ ನಾವ್‌ ಹೀಗೆ ಮಾಡೋದು ಎಂದು ಗದರಿಸಿದರು.

ಅರ್ಹ ಫಲಾನುಭವಿಗಳ ಆಯ್ಕೆಗೆ ಪಿಡಿಒ ಬಿ.ಎ.ವಾಲಿ ವಿಶೇಷ ಗ್ರಾಮಸಭೆ ಕರೆದಿದ್ದರು. ಆದರೆ ಸಭೆಯ ಉದ್ದೇಶವನ್ನೇ ಅರ್ಥ ಮಾಡಿಕೊಳ್ಳದ ಕಡಪಟ್ಟಿ ಸರ್ವಾಧಿಕಾರಿಯಂತೆ ವರ್ತಿಸಿದಾಗ ಗ್ರಾಮಸ್ಥರು ಆಕ್ರೋಶಗೊಂಡರು. ಸದಸ್ಯನ ಮಾತಿಗೆ ವಿರೋಧ ವ್ಯಕ್ತಪಡಿಸಬೇಕಿದ್ದ ಗ್ರಾಪಂ ಅಧ್ಯಕ್ಷರು ಹಾಗೂ ಕೆಲ ಸದಸ್ಯರು, ತಾವಷ್ಟೆ ಸೇರಿ ಫಲಾನುಭವಿಗಳ ಆಯ್ಕೆ ಮಾಡುವುದಾಗಿ ಸಭೆಗೆ ವಿವರಿಸಿ ಸುಮ್ಮನಾದರು.

ಹುನ್ನೂರು ಗ್ರಾಮಕ್ಕೆ ವಸತಿ ಯೋಜನೆಯಡಿ ಒಟ್ಟು 40 ಮನೆಗಳು ಮಂಜೂರಾಗಿವೆ. ಪರಿಶಿಷ್ಟ ಜಾತಿಗೆ 20, ಅಲ್ಪಸಂಖ್ಯಾತ ವರ್ಗಕ್ಕೆ 10 ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 20 ಮನೆಗಳನ್ನು ವಿತರಿಸಬೇಕಿದೆ. ಅರ್ಹ ವ್ಯಕ್ತಿಗಳು ಹೆಸರು ಬರೆಸುವಂತೆ ಪಿಡಿಒ ತಿಳಿಸಿದಾಗ 100ಕ್ಕೂ ಅಧಿಕ ಜನರು ತಮ್ಮ ಹೆಸರು ನೋಂದಾಯಿಸಿದರು. ನಿರ್ದಿಷ್ಟ ಸಂಖ್ಯೆಗಿಂತ ಅಧಿಕ ಜನರು ಹೆಸರು ನೋಂದಾಯಿಸಿದ್ದು, ಅವರಲ್ಲಿ ಅರ್ಹರನ್ನು ಪಟ್ಟಿಯಲ್ಲಿ ಉಳಿಸಿಕೊಂಡು ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡುವಂತೆ ಗ್ರಾಮಸ್ಥರು ಸಲಹೆ ನೀಡಿದರು.

ಈ ಸಲಹೆಗೆ ಪಿಡಿಒ ಸಹಮತ ವ್ಯಕ್ತಪಡಿಸಿದರೂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಆಡಳಿತ ಮಂಡಳಿ ನಿರ್ಧಾರಕ್ಕೆ ತಲೆ ಬಾಗಿದ ಗ್ರಾಮಸ್ಥರು, ಕೂಡಲೇ ಅರ್ಹ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಿ ಸೂಚನೆ ಫಲಕಕ್ಕೆ ಹಚ್ಚಬೇಕು. ತಾವು ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಅನರ್ಹರಿದ್ದರೆ ಅದಕ್ಕೆ ತಕರಾರು ಅರ್ಜಿ ಸಲ್ಲಿಸಿ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದರು.


ಕೂಲಿ ನೀಡಲು ಆಗ್ರಹಿಸಿ ಧರಣಿ

$
0
0

ಹುನಗುಂದ: ಏಳು ತಿಂಗಳಿಂದ ನರೇಗಾ ಯೋಜನೆಯಡಿ ಕೂಲಿ ಮಾಡಿದ ಹಣವನ್ನು ನಮ್ಮ ಬ್ಯಾಂಕ್‌ ಖಾತೆಗೆ ಜಮಾ ಮಾಡಿಲ್ಲ ಎಂದು ಆರೋಪಿಸಿ ತಾಲೂಕಿನ ರಕ್ಕಸಗಿ ಗ್ರಾಮದಲ್ಲಿ ಕೂಲಿ ಕಾರ್ಮಿಕರು ಪಂಚಾಯಿತಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಹಲವು ತಿಂಗಳಿಂದ ಅಧಿಕಾರಿ ಪೊಳ್ಳು ಭರವಸೆ ನೀಡುತ್ತಿದ್ದಾರೆ. ನಾವು ದುಡಿದ ಹಣ 5 ಎನ್‌.ಎಂ.ಆರ್‌.ಬಾಕಿಯಿದೆ. 7 ತಿಂಗಳಿಂದ ಗ್ರಾಪಂ ಎಂಜಿನಿಯರ್‌, ಪಿಡಿಒ ಸುಳ್ಳು ನೆಪ ಹೇಳಿ ನಮ್ಮನ್ನು ಸತಾಯಿಸುತ್ತಿದ್ದಾರೆ. ಜಿಪಂ ಸಿಇಒ ಬರುವವರೆಗೂ ಪಂಚಾಯಿತಿ ಕಾರ್ಯಲಯದ ಮುಂದೆ ಧರಣಿ ನಡೆಸುತ್ತೇವೆ ಎಂದ ಮಹಿಳಾ ಕೂಲಿ ಕಾರ್ಮಿಕರು ನಮ್ಮ ಸಮಸ್ಯೆ ಬಗೆಹರಿಯುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಇಒ ಅಂಗಡಿ ಅವರನ್ನು ತರಾಟೆಗೆ ತೆಗೆದುಕೊಂಡ ಮಹಿಳಾ ಕಾರ್ಮಿಕರು, ''ನಾವು ದುಡಿದ ಹಣವನ್ನು ನೀಡುತ್ತಿಲ್ಲ. ಕೇವಲ ಭರವಸೆ ನೀಡಲಾಗುತ್ತಿದೆ. ಹೀಗಾದರೆ ಬದುಕು ನಡೆಸುವುದು ಹೇಗೆ'' ಎಂದು ಪ್ರಶ್ನಿಸಿದರು. ತಾಂತ್ರಿಕ ತೊಂದರೆಯಿಂದ ಹೀಗಾಗಿದೆ. ಮಂಗಳವಾರದವರೆಗೆ ಅವಕಾಶ ನೀಡಿ, ಖಂಡಿತ ಸಮಸ್ಯೆ ಬಗೆಹರಿಸುತ್ತೇವೆ. ಬೇಕಾದರೆ ಈ ಬಗ್ಗೆ ಲಿಖಿತವಾಗಿ ಬರೆದುಕೊಡುತ್ತೇವೆ, ಧರಣಿ ನಿಲ್ಲಿಸಬೇಕು ಎಂದು ಇಒ ವಿನಂತಿಸಿದರೂ ಪ್ರತಿಭಟನೆಕಾರರು ಕೇಳಲಿಲ್ಲ.

ನಂತರ ಸ್ಥಳಕ್ಕೆ ಆಗಮಿಸಿದ ಹುನಗುಂದ ತಹಸೀಲ್ದಾರ್‌ ಸುಭಾಸ್‌ ಸಂಪಗಾವಿ, ಈ ಹಿಂದಿನ ಅಧಿಕಾರಿಗಳಿಂದ ತಪ್ಪಾಗಿದ್ದರೆ ಅದನ್ನು ಪರಿಶೀಲಿಸಿ ಯೋಗ್ಯ ಕ್ರಮ ಕೈಗೊಳ್ಳಲಾಗುವುದು. ಉದ್ಯೋಗ ಖಾತ್ರಿ ಯೋಜನೆ ನಿಯಮದಂತೆ ಕಾರ್ಯ ನಿರ್ವಹಿಸಿದ್ದರೆ ನಿಮಗೆ ಹಣ ಕೊಡಿಸಲಾಗುತ್ತದೆ. ಅದಕ್ಕೆ ಕಾಲಾವಕಾಶ ನೀಡಿ ಎಂದು ವಿನಂತಿಸಿದರೂ ಜಿಪಂ ಸಿಇಒ ಬರಬೇಕು ಎಂದು ಮಹಿಳೆಯರು ಪಟ್ಟು ಹಿಡಿದರು. ಗ್ರಾಪಂ ಉಪಾಧ್ಯಕ್ಷ ಕಂದಗಲ್‌, ಮಾಜಿ ಅಧ್ಯಕ್ಷ ವೀರಪ್ಪ ಮಾಗಿ ಮತ್ತಿತರರು ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಅಮೀನಗಡ ಸಬ್‌ ಇನ್‌ಸ್ಪೆಕ್ಟರ್‌ ಶ್ರೀಶೈಲ ಬ್ಯಾಕೋಡ ಆಗಮಿಸಿ ತಿಳಿಹೇಳಿದಾಗ ಅಧಿಕಾರಿಗಳಿಂದ ಲಿಖಿತ ಹೇಳಿಕೆ ಪಡೆದು ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಶರಣವ್ವ ಸೊಬರದ, ಎಚ್‌.ಎಂ.ವಡ್ಡರ, ಎಂ.ಎಸ್‌.ಹಡಪದ, ಪಿ.ಎಸ್‌.ಹಿರೇಮಠ, ಎಸ್‌.ಎ.ಸಜ್ಜನ, ಎಸ್‌.ಎಂ.ಭದ್ರಶೆಟ್ಟಿ ಮತ್ತಿತರರು ಇದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಎಸೈ ಪಿ.ಎ.ಜಾಧವ, ಪೊಲೀಸ್‌ ಸಿಬ್ಬಂದಿ ಬಂದೋಬಸ್ತ್‌ ಕೈಗೊಂಡಿದ್ದರು.


ಗೋವಾದಲ್ಲಿ ಕನ್ನಡಿಗನಿಗೆ ಸಿಗಲಿಲ್ಲ ಗೆಲುವು

$
0
0

ಬಾಗಲಕೋಟ: ಗೋವಾದಲ್ಲಿ ನಿರ್ಣಯಕರಾಗಿರುವ ಕನ್ನಡಿಗ ಮತದಾರರು ಈ ಬಾರಿಯಾದರೂ ಕೈ ಚಳಕ ತೋರಬಹುದು ಎಂದುಕೊಂಡಿದ್ದರೂ ಅದು ಹುಸಿಯಾಗಿದೆ. ಚುನಾವಣೆಗೆ ಸ್ಪರ್ಧಿಸಿದ್ದ ವಿಜಯಪುರ ಮೂಲದ ಕನ್ನಡ ಅಭ್ಯರ್ಥಿ ಸೋಲು ಕಂಡಿದ್ದಾರೆ.

ಗೋವಾದ ಕೋರ್ಟಲಿಂ ಕ್ಷೇತ್ರದಲ್ಲಿ ಗೋವಾ ಸ್ವರಾಜ್‌ ಪಕ್ಷದಿಂದ ಸ್ಪರ್ಧಿಸಿದ್ದ ಕನ್ನಡಿಗ ಮುದ್ದೇಬಿಹಾಳ ತಾಲೂಕಿನ ಶರಣಬಸು ಮೇಟಿ ಅವರನ್ನು ಮತದಾರ ಕೈಹಿಡಿದಿಲ್ಲ. ಎಂಟನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಇಲ್ಲಿ ಬಿಜೆಪಿ ಅಭ್ಯರ್ಥಿ ಅಲೇನ್‌ ಸಲಾದಿನ್‌ ಗೆಲುವು ಸಾಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಅಥೋಣಿ ವಾಜ್‌ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್‌ನ ಮರೇನ್‌ ರೆಡೋರಿಸ್‌ ಮೂರನೇ ಸ್ಥಾನದಲ್ಲಿದ್ದಾರೆ. ಆದರೆ ಶರಣಬಸುಗೆ ಮತದಾರರು ಬೆಂಬಲಿಸಿಲ್ಲ. ಹೀಗಾಗಿ ಅವರು 8ನೇ ಸ್ಥಾನದಲ್ಲಿದ್ದಾರೆ. ಒಟ್ಟು 10 ಜನ ಸ್ಪರ್ಧೆಯಲ್ಲಿದ್ದರು.

ಶರಣಬಸು ಅವರ ಸಹೋದರ ವಿಜಯಪುರದ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಅವರ ಪತಿ ಸಿದ್ದಣ್ಣ ಮೇಟಿಗೆ ಈ ಬಾರಿ ತಮ್ಮನ ಪರ ಪ್ರಚಾರ ಕೈಗೊಳ್ಳಲು ರಾಜ್ಯದ ಕಾಂಗ್ರೆಸ್‌ ನಾಯಕರು ಅವಕಾಶ ನೀಡಿಲಿಲ್ಲ. ನಿಮಗೆ ರಾಜ್ಯದಲ್ಲಿ ಅಧಿಕಾರ ಕೊಟ್ಟಿದ್ದೇವೆ. ಅಲ್ಲಿ ಪಕ್ಷದ ವಿರುದ್ಧ ಪ್ರಚಾರ ಮಾಡಬೇಡಿ ಎಂದು ಖಡಕ್ಕಾಗಿಯೇ ಸೂಚನೆ ನೀಡಿದ್ದರಿಂದ ಸಿದ್ದಣ್ಣ ಪ್ರಚಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಇದರಿಂದ ಶರಣಬಸು ಸೋತಿದ್ಧಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆಗೆ ಶರಣಬಸು ಸಿಗಲಿಲ್ಲ.

ಉತ್ತರ ಕರ್ನಾಟಕದ ಬಾಗಲಕೋಟ, ವಿಜಯಪುರ, ಗದಗ, ಕೊಪ್ಪಳ, ಕಲಬುರಗಿ ಸೇರಿದಂತೆ ಈ ಭಾಗದ 13 ಸಾವಿರ ಮತದಾರರು ಈ ಕ್ಷೇತ್ರದಲ್ಲಿದ್ದರೂ ಮೇಟಿ ಅವರ ಕೈಹಿಡಿದಿಲ್ಲ. ಕನ್ನಡಿಗರ ಪರವಾಗಿ ಗೋವಾ ವಿಧಾನಸಭೆಯಲ್ಲಿ ಧ್ವನಿ ಎತ್ತಬೇಕು ಎಂದುಕೊಂಡಿದ್ದ ಶರಣಬಸು ಅವರಿಗೆ ಮತದಾರ ಅವಕಾಶ ನೀಡಿಲ್ಲ. 13 ಸಾವಿರ ಮತಗಳಲ್ಲಿ 8 ಸಾವಿರ ಮತಗಳು ಬಂದರೂ ಗೆಲುವು ಸುಲಭವಾಗಲಿದೆ ಎಂದು ಲೆಕ್ಕಾಚಾರ ತಲೆಕೆಳಗಾಗಿದೆ.

ಜಿಲ್ಲೆಯ 60 ಶಾಲೆಗಳಲ್ಲಿ ಗ್ರಾಹಕರ ಕ್ಲಬ್‌: ಮೇಘಣ್ಣವರ

$
0
0

ಬಾಗಲಕೋಟ: ಡಿಜಿಟಲ್‌ ತಂತ್ರಜ್ಞಾನ ಯುಗದಲ್ಲಿ ವಸ್ತುಗಳನ್ನು ಖರೀದಿಸುವಲ್ಲಿ ಯುವಕರು ಹೆಚ್ಚಿನ ಜಾಗೃತಿ ವಹಿಸುವ ಅವಶ್ಯಕತೆ ಇದೆ. ಜನ ಸಮುದಾಯದ ಹಂತದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ 60 ಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಹೇಳಿದರು.

ಜಿಪಂ ಸಭಾಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ವಾರ್ತಾ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ನಾನಾ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ವಸ್ತುಗಳನ್ನು ಖರೀದಿಸುವಾಗ, ನಾನಾ ಕ್ಷೇತ್ರಗಳಲ್ಲಿ ಸೇವೆ ಪಡೆಯುವಾಗ ಶೋಷಣೆ, ಅನ್ಯಾಯವಾದರೆ ಅದನ್ನು ಪ್ರಶ್ನಿಸುವ ಮನೋಭಾವವನ್ನು ಗ್ರಾಹಕರು ಬೆಳೆಸಿಕೊಳ್ಳಬೇಕು. ವರ್ತಕರು ಗ್ರಾಹಕರಿಗೆ ಮೋಸ ಮಾಡಿದ್ದು ರುಜುವಾತು ಪಟ್ಟರೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ. ಪರಿಹಾರ ವೇದಿಕೆಯಲ್ಲಿ ನೇರವಾಗಿ ಗ್ರಾಹಕರು ದೂರು ಸಲ್ಲಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಬ್ದುಲ್‌ ರಹೀಮ್‌ ಹುಸೇನ್‌ ಶೇಖ್‌ ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಗ್ರಾಹಕರ ಹಕ್ಕುಗಳ ಬಗ್ಗೆ ಎಲ್ಲಿಯವರೆಗೆ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಒಂದಲ್ಲ ಒಂದು ರೀತಿಯಲ್ಲಿ ಮೋಸ ಆಗುತ್ತಲೇ ಇರುತ್ತದೆ. ಗ್ರಾಹಕರ ಹಕ್ಕುಗಳ ಅರಿವು ಅಗತ್ಯವಾಗಿದ್ದು, ಅರಿವು ಇಲ್ಲದೇ ಏನನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಈ ಕುರಿತು ವಿದ್ಯಾರ್ಥಿಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಬಿವಿವಿ ಸಂಘದ ಎಸ್‌.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಡಾ.ಬಸವರಾಜ ಕುಬಕಡ್ಡಿ ಗಣಕೀಕರಣ ಯುಗದಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಮಾತನಾಡಿ, ಡಿಜಿಟಲ್‌ ಯುಗದಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸುವ ವ್ಯವಹಾರಗಳು ನಡೆಯುತ್ತಿವೆ. ಗ್ರಾಹಕರು ಇ-ಕಾಮರ್ಸ್‌ ಮತ್ತು ಇ-ಕಾಂಟ್ರ್ಯಾಕ್ಟರ್‌ ಬಗ್ಗೆ ಜಾಗೃತಿ ವಹಿಸಬೇಕು. ಆನ್‌ಲೈನ್‌ ವ್ಯವಹಾರದಲ್ಲಿ ಬಹಳಷ್ಟು ಮೋಸವಾಗುತ್ತಿದ್ದು, ಕಾಯ್ದೆಇಯಲ್ಲಿ ತಿದ್ದುಪಡೆ ಅಗತ್ಯವಿದ್ದು, ನಮ್ಮೆಲ್ಲರ ಹಕ್ಕುಗಳಿಗೆ ರಕ್ಷಣೆಯಾಗಬೇಕು ಎಂದರು.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಶಾರದಾ ಕೆ., ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿದರು. ಜಿಲ್ಲಾ ಗ್ರಾಹಕರ ಸದಸ್ಯ ಶ್ರವಣಕುಮಾರ ಕಡಿ, ಸುಮಂಗಲಾ ಹದ್ಲಿ ಸೇರಿದಂತೆ ಇತರರಿದ್ದರು.

ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ಸದಾಶಿವ ಮಳಗಿ ವಂದಿಸಿದರು. ಜಾಸ್ಮೀನ್‌ ಕಿಲ್ಲೇದಾರ ನಿರೂಪಿಸಿದರು. ನಾನಾ ಇಲಾಖೆ ಹಾಗೂ ಸಂಸ್ಥೆಗಳಿಂದ ಪ್ರಾತ್ಯಕ್ಷಿಕೆ ನಡೆಯಿತು.

ಡಿಸಿ-ಬಿಜಿಕೆ-16

ಬಾಗಲಕೋಟದ ಜಿಪಂ ಸಭಾಭವನದಲ್ಲಿ ನಡೆದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಮಾತನಾಡಿದರು.


ಮನೆಯಲ್ಲಿ ಮಹಿಳೆಯರನ್ನು ಗೌರವಿಸಿ: ಗುರಮ್ಮ ಸಂಕೀನಮಠ

$
0
0

ಬೇವೂರ: ಮಹಿಳೆಯರನ್ನು ಗೌರವಿಸುವ ಪರಂಪರೆ ಮನೆಯಿಂದಲೇ ಆರಂಭಗೊಳ್ಳಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗುರಮ್ಮ ಸಂಕೀನಮಠ ಹೇಳಿದರು.

ಇಲ್ಲಿಯ ಆದರ್ಶ ವಿಧ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮಹಿಳಾ ಸಬಲೀಕರಣ ಘಟಕ ಹಾಗೂ ಎನ್ನೆಸ್ಸೆಸ್‌ ಘಟಕದ ಸಹಯೋಗದಲ್ಲಿ ಬುಧವಾರ ಕಾಲೇಜ್‌ ಸಭಾಭವನದಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಮನೆಯಲ್ಲಿನ ನಮ್ಮ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಅವರಿಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಇಂದು ಪ್ರತಿ ಕ್ಷೇತ್ರದಲ್ಲೂ ಮಹಿಳೆಯರು ತಮ್ಮ ಸಾಮರ್ಥ್ಯ‌ ಸಾಬೀತುಪಡಿಸಿದ್ದಾರೆ. ಸರಿಯಾದ ಅವಕಾಶ ದೊರೆತರೆ ಅವರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಮಾನ ಅವಕಾಶ ದೊರಕಿಸುವ ಮೂಲಕ ಸಮಾಜದಲ್ಲೂ ಬದಲಾವಣೆ ತರಲು ಸಾಧ್ಯವಿದೆ ಎಂದರು, ಪ್ರಾಚಾರ್ಯ ಜ.ಗು.ಭೈರಮಟ್ಟಿ ಮಾತನಾಡಿ ದೇಶದಲ್ಲಿ ಮಹಿಳೆಯರ ರಕ್ಷ ಣೆಗಾಗಿ ಹಲವು ಕಾನೂನು ರೂಪಿಸಲಾಗಿದೆ, ಹಲವು ನ್ಯಾಯಾಲಯಗಳ ತೀರ್ಪುಗಳು ಮಹಿಳೆಯರ ಪರವಾಗಿ ರಕ್ಷ ಣೆ ಮಾಡಿವೆ. ಆದರೆ ಕಾನೂನು ತೀರ್ಪುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳದೆ ಇರುವುದರಿಂದ ಮಹಿಳೆಯರ ಸಮಸ್ಯೆಗಳೂ ಹಾಗೆ ಉಳಿದಿವೆ ಎಂದು ಕಳವಳ ವ್ಯಕ್ತಪಡಿಸಿದರು. ಪುರುಷ, ಮಹಿಳೆ ಎನ್ನುವ ಕಂದಕ ಮುಚ್ಚುವ ನಿಟ್ಟಿನಲ್ಲಿ ಒಬ್ಬರಿಗೊಬ್ಬರು ಪೂರಕವಾಗಿ ಅರ್ಥಮಾಡಿಕೊಂಡು ಬದುಕುವ ಅಗತ್ಯವಿದೆ ಎಂದರು. ಬಿ.ಜಿ.ತೆಗ್ಗಿನಮನಿ, ರೇವಣಸಿದ್ದಯ್ಯ ಹಿರೇಮಠ, ಎಸ್‌.ಬಿ ಹಂಚಿನಾಳ, ಅಮರಜ್ಯೋತಿ ಮಾಗನೂರ, ಜ್ಯೋತಿ ಬಿರಾದಾರ, ಜ್ಯೋತಿ ಮೇಟಿ, ವಿಶಾಲಾಕ್ಷಿ ಹಿರೇಮಠ, ಶಾವತ್ರಿ, ಗುಬಚ್ಚಿ, ಶ್ರೀದೇವಿ ಚಲವಾದಿ, ಸೌಮ್ಯಾ ಮಾಗನೂರ, ಸಂಗೀತಾ ಕಾಗಲ್ಲ, ಪಾಲ್ಗೊಂಡಿದ್ದರು.

ಬೇವೂರ 16-02 ಪೋಟೊ :

ಬೇವೂರ ಶ್ರೀಪರಪ್ಪ ಸಂಗಪ್ಪ ಸಜ್ಜನ ಕಾಲೇಜ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಗುರಮ್ಮ ಸಂಕೀನಮಠ ಮಾತನಾಡಿದರು.


ರಾಮನವಮಿ ರಥಯಾತ್ರೆ

$
0
0

ಮುಧೋಳ: ಶ್ರೀರಾಮನವಮಿ ರಥಯಾತ್ರೆ ಕೋಲೂರದಿಂದ ಬೆಂಗಳೂರು ಮಾರ್ಗವಾಗಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಗುರುಪಾದ ಕುಳಲಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾ.17ರಿಂದ ಮಾ.30ರವರೆಗೆ ರಥಯಾತ್ರೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತೆರಳಲಿದೆ.

ಹಾವೇರಿ ಮಾ.19, ಹುಬ್ಬಳ್ಳಿ ಮಾ.20, ಬೆಳಗಾವಿ ಮಾ.21, ಗೋಕಾಕ, ಬನಹಟ್ಟಿ, ಜಮಖಂಡಿ, ಮುಧೋಳ, ಲೋಕಾಪೂರ, ಬಾಗಲಕೋಟ ಮಾ.22, ವಿಜಯಪೂರ ಮಾರ್ಗವಾಗಿ ಕಲಬುರ್ಗಿ ಜಿಲ್ಲೆಗಳಲ್ಲಿ ರಥಯಾತ್ರೆ ಆಗಮಿಸಲಿದೆ. ರಥಯಾತ್ರೆಯಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.


ನರ್ವಸ್‌ ನ್ಯಾಕ್‌-ವಿಕ ರಿಯಾಲಿಟಿ ಚೆಕ್‌-ಸರಣಿಗಾಗಿ

$
0
0

ಕಲಾದಗಿ: ಅದು 2009 ರ ಮಾತು. ಪದವಿ ಕಲಿಯಲು ಬಾಗಲಕೋಟಕ್ಕೋ ಮತ್ತೆಲ್ಲಿಗೋ ಹೋಗಬೇಕಲ್ಲ ಎಂಬ ಕಾರಣದಿಂದ ಕಾಲೇಜು ಕಲಿಕೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಪಿಯುಸಿ ಹಂತಕ್ಕೇ ಮುಗಿಸುತ್ತಿದ್ದ ದಿನಗಳವು.

ಇಲ್ಲೊಂದು ಪದವಿ ಕಾಲೇಜು ಇದ್ದರೆ ಕಲಿಕೆ ಮುಂದುವರಿಸಬಹುದಲ್ಲ ಎಂಬ ಆಸೆಯಿಟ್ಟುಕೊಂಡಿದ್ದ ಗ್ರಾಮೀಣ ಭಾಗದವರಿಗೆ ವರವಾಗಿ ಅಂದಿನ ಶಾಸಕ ಸಚಿವ ಮುರುಗೇಶ ನಿರಾಣಿ ಅವರು ಇಲ್ಲಿಗೆ ಮಂಜೂರು ಮಾಡಿಸಿದ್ದೇ ಸರಕಾರಿ ಪದವಿ ಕಾಲೇಜು.

ಕನ್ನಡ ಶಾಲೆಯೇ ಆಶ್ರಯ:

2009ರಲ್ಲಿ ಇಲ್ಲಿನ ಶ್ರೀಗುರುಲಿಂಗೇಶ್ವರ ವಿದ್ಯಾಸಂಸ್ಥೆ ಕಟ್ಟಡದಲ್ಲಿ 25 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸರಕಾರಿ ಪದವಿ ಕಾಲೇಜಿಗೆ ಇಂದು ಆಶ್ರಯ ನೀಡಿರುವುದು ಸರಕಾರಿ ಬಾಲಕರ ಕನ್ನಡ ಶಾಲೆ. ಪುಟ್ಟ ಮಕ್ಕಳೊಂದಿಗೆ ಹೇಗೋ ಸಂಬಾಳಿಸಿಕೊಂಡು ಕಲಿಯುವ ಹಾಗೂ ಬೋಧಿಸುವ ಅನಿರ್ವಾತೆ ಇಲ್ಲಿನ ಪದವಿ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರದ್ದು ಹಾಗೂ ಉಪನ್ಯಾಸಕರದ್ದಾಗಿದೆ.

ಹೆಣ್ಣುಮಕ್ಕಳೇ ಹೆಚ್ಚು: ಇಲ್ಲಿರುವ ಏಕೈಕ ಬಿಎ ವ್ಯಾಸಂಗದಲ್ಲಿ ಸದ್ಯಕ್ಕೆ ವ್ಯಾಸಂಗಮಾಡುತ್ತಿರುವ ಒಟ್ಟು 150 ಜನರಲ್ಲಿ 67 ಜನ ಹೆಣ್ಣುಮಕ್ಕಳಿದ್ದಾರೆ. ಪ್ರತಿವರ್ಷವೂ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿರುವುದು ಗ್ರಾಮೀಣಭಾಗದವರಿಗಿದು ವರದಾನವಾಗಿದೆ.

ಖಾಯಂ ಉಪನ್ಯಾಸಕರ ಕೊರೆತೆ:

25 ಜನ ಖಾಯಂ ಉಪನ್ಯಾಸಕರು ಬೇಕಾಗಿರುವ ಕಾಲೇಜಿನಲ್ಲಿ ಇರುವವರು ಇಬ್ಬರೇ ಖಾಯಂ ಉಪನ್ಯಾಸಕರು ಮಾತ್ರ.ಇವರೊಂದಿಗೆ 12 ಜನ ಅತಿಥಿಉನ್ಯಾಸಕರ ತಂಡ ಬೋಧಕೇತರ ಸಿಬ್ಬಂದಿಯೊಂದಿಗೆ ಪ್ರಾಮಾಣಿಕವಾಗಿ ತನ್ನ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ನ್ಯಾಕ್‌ವ್ಯಾಪ್ತಿಗೆ ಇಲ್ಲ:

ಇರದ ಸ್ವಂತ ಕಟ್ಟಡ, ಕೊಟ್ಟ ಕನ್ನಡಶಾಲೆಯ ಕೊಠಡಿಗಳಲ್ಲಿಯೇ ಬೋಧನೆ, ಬಂದಿರುವ ಗ್ರಂಥಾಲಯ, ಕಂಪ್ಯೂಟರ್‌ ಸೇರಿದಂತೆ ಇನ್ನಿತರ ಕಲಿಕೆಗೆ ಬೇಕಾಗುವ ವ್ಯವಸ್ಥೆಗಳನ್ನು ಸರಿಯಾಗಿ ನೀಡಲು ಕೊಠಡಿಗಳ ಕೊರತೆ, ಮೂಲ ವ್ಯವಸ್ಥೆಗಳಿಗೂ ಪರದಾಟ. ಇವುಗಳಿಂದಾಗಿ ನ್ಯಾಕ್‌ ಮಾನ್ಯತೆ ಇಲ್ಲಿಂದಿನ್ನೂ ದೂರವೇ ಉಳಿದಿದೆ.

ಇಲ್ಲಗಳ ನಡುವೆಯೂ:

ಹಾಗಂತ ಇಲ್ಲಿ ಕಲಿಕೆ, ಕಲಿಕೇತರ ಗುಣಮಟ್ಟವೇನೂ ಕಡಿಮೆಯಾಗಿಲ್ಲ. ಅನೇಕ ಮೂಲ ಸೌಕರ್ಯಗಳ ನಡುವೆಯೂ ಇಲ್ಲಿ ಪ್ರತಿವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದಾರೆ. ಸೇರುವವರ ಪ್ರವೇಶವೂ ಹೆಚ್ಚಾಗುತ್ತಿರುವುದು ಇಲ್ಲಿರುವ ಉಪನ್ಯಾಸಕರ, ಸಿಡಿಸಿ ಕಮಿಟಿಯವರ ಪ್ರಾಮಾಣಿಕ ಸೇವೆಗೆ, ಶೈಕ್ಷ ಣಿಕ ಕಾಳಜಿ ಸಾಕ್ಷಿಯಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳ ಕಲಿಯಬೇಕೆಂಬ ಶ್ರದ್ಧೆಯೂ ಸಾಕಷ್ಟಿದೆ.

ಧಿಧಿಧಿ-

ಕಟ್ಟಡಕ್ಕಾಗಿ ನಡೆದಿದೆ ಪ್ರಯತ್ನ

ಗ್ರಾಮೀಣಭಾಗದವರ ಆಶಾಕಿರಣವಾಗಿ ಬಂದಿರುವ ಇಲ್ಲಿನ ಪದವಿ ಕಾಲೇಜಿಗೊಂದು ಸ್ವಂತ ಕಟ್ಟಡ ಒದಗಿಸಬೇಕೆಂಬ ಪ್ರಯತ್ನ ಅದು ಪ್ರಾರಂಭವಾದಾಗಿನಿಂದಲೂ ನಡೆದೇ ಇದೆ. ಕಲಾದಗಿ ಈಗಿರುವ 'ಮುಳುಗಡೆ'ಪಟ್ಟ, ಏರಿದ ಖಾಸಗಿ ಭೂಮಿಗಳ ಬೆಲೆಯಿಂದಾಗಿ ಅರಂಭದಲ್ಲದು ಸಾಧ್ಯವಾಗಲಿಲ್ಲ. ಜೆ.ಟಿ.ಪಾಟೀಲ ಶಾಸಕರಾದ ಮೇಲೆ ನಡೆದ ಪ್ರಯತ್ನದಿಂದ ಗ್ರಾಮವನ್ನು ಸ್ಥಳಾಂತರಿಸುವ 'ಪುನರ್ವಸತಿ ಕೇಂದ್ರ'ದಲ್ಲಿ ಪದವಿ ಕಾಲೇಜಿಗೆ 2.16 ಎಕರೆ ಪ್ರದೇಶವನ್ನು ಮಂಜೂರು ಮಾಡಿಸುವ ಕೆಲಸ ನಡೆದಿದೆ. ಈ ಪ್ರಕ್ರಿಯೆ ಸದ್ಯಕ್ಕೆ ಕೊನೆಹಂತದಲ್ಲಿದೆ.

ಸ್ವಂತ ಕಟ್ಟಡವಿರದಿದ್ದರೂ ಇರುವ ವ್ಯವಸ್ಥೆಯಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ನಿಭಾಯಿಸಿಕೊಂಡು ಹೋಗುತ್ತಿದ್ದೇವೆ. ಪ್ರತಿವರ್ಷವೂ ಶೈಕ್ಷ ಣಿಕ ಗುಣಮಟ್ಟ ಹಾಗೂ ಪ್ರವೇಶ ಹೆಚ್ಚಾಗುತ್ತಿರುವುದು ಇದಕ್ಕೆ ಸಾಕ್ಷಿ. ಗ್ರಾಮೀಣ ಭಾಗದ ಜಾಣ ಮಕ್ಕಳಿರುವ ಕಾಲೇಜಿಗಿನ್ನೂ ನ್ಯಾಕ್‌ ಮಾನ್ಯತೆ ಸಿಕ್ಕಿಲ್ಲದಿರುವುದು ನಮಗೂ ನೋವು ತಂದಿದೆ. ಮಾನ್ಯತೆಗೆ ಬೇಕಾದ ವ್ಯವಸ್ಥೆ ಮಾಡಲು ಸಿಡಿಸಿ ಕಮಿಟಿಯವರು, ಕಾಲೇಜು ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.

-ಪ್ರೊ.ಎ.ಸಿ.ಹುಲ್ಲಳ್ಳಿ, ಪ್ರಾಚಾರ್ಯರು, ಸರಕಾರಿ ಪದವಿ ಕಾಲೇಜು ಕಲಾದಗಿ

ಉತ್ತಮ ಉಪನ್ಯಾಸಕರಿರುವುದರಿಂದ ಹಾಗೂ ಅವರ ಪ್ರೋತ್ಸಹದಿಂದ ಅನೇಕ ಕೊರತೆಗಳ ನಡುವೆಯೂ ಉತ್ತಮಕಲಿಕೆ ಸಾಧ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ನಾವು ಯಾವುದೇ ಸುಸಜ್ಜಿತ ಕಾಲೇಜಿಗಿಂತ ಕಡಿಮೆಯೇನಿಲ್ಲಾ ಎಂದು ಅಭಿಮಾನದಿಂದ ಹೇಳುತ್ತೇನೆ.

-ರೇಣುಕಾ ಮಾದರ, ವಿದ್ಯಾರ್ಥಿನಿ

ಸ್ವಂತ ಕಟ್ಟಡದ ಅವಶ್ಯಕತೆ ಬಹಳವಿದೆ. ಪುಟ್ಟ ಮಕ್ಕಳೊಂದಿಗೆ ಕಾಲೇಜ್‌ ಕಲಿಯಬೇಕಾಗಿರುವುದರಿಂದ ಕಲಿಕೆಗೆ ಕಷ್ಟವಾಗುತ್ತಿದೆ.ಇಲ್ಲಿಯೇ ಇನ್ನಷ್ಟು ಕೊಠಡಿ, ವ್ಯವಸ್ಥೆಗಳನ್ನು ನಮಗೆ ಒದಗಿಸಿದರೆ ಅನುಕೂಲವಾಗುತ್ತದೆ. ಆದರೂ ಉತ್ತಮ ಬೋಧನೆ, ಸಿಡಿಸಿ ಕಮಿಟಿಯವರ ಪ್ರಯತ್ನ ಪ್ರೋತ್ಸಾಹದಿಂದ ಒಳ್ಳೆಯ ಅಭ್ಯಾಸಕ್ಕೆ ಸಿಗುತ್ತಿದೆ.

-ವಿರೇಶ ಕೋಲಾರ

ಸಿಡಿಸಿ ಕಮಿಟಿ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಅವರ ಮುಂದಾಳತ್ವದಲ್ಲಿ ಕಾಲೇಜಿಗೆ ಸ್ವಂತ ಕಟ್ಟಡ ಒದಗಿಸಲು ಕೆಲಸಗಳು ನಡೆದಿವೆ. ಇನ್ನೊಂದು ವರ್ಷದಲ್ಲಿ ಸ್ವಂತ ಕಟ್ಟಡ ಲಭ್ಯವಾಗುವ ಸಾಧ್ಯತೆಗಳಿವೆ.ಅಲ್ಲಿಯತನಕ ಕಲಿಕೆಗೆ ತೊಂದರೆಯಾದಿರಲೆಂದು ಬಾಗಶಃ ಹಾಳಾಗಿದ್ದ ಕನ್ನಡಶಾಲೆ ಕಟ್ಟಡವನ್ನು ಶಾಸಕರು ತಮ್ಮ 9 ಲಕ್ಷ ರೂ. ಅನುದಾನದಲ್ಲಿ ದುರಸ್ಥಿಮಾಡಿಸಿದ್ದಾರೆ. ಇರುವದರಲ್ಲಿಯೇ ಅಗತ್ಯ ಕಲಿಕಾ ಸೌಲಭ್ಯ ನೀಡಲು ಶೈಕ್ಷ ಣಿಕ ಗುಣಮಟ್ಟ ಹೆಚ್ಚಿಸಲು ಸಿಡಿಸಿ ಕಮೀಟಿ ಸದಾ ನಿರತವಾಗಿದೆ.

-ವಿ.ಜಿ.ದೇಶಪಾಂಡೆ.ಸದಸ್ಯರು.ಸಿಡಿಸಿ ಕಮೀಟಿ.

ಫ್ಲಿಪ್‌ಕಾರ್ಟ್‌ನಲ್ಲಿ ಇಬೇ, ಟೆನ್ಸೆಂಟ್‌ ಹೂಡಿಕೆ ಸಾಧ್ಯತೆ

$
0
0

ಸುಮಾರು 10,000 ಕೋಟಿ ರೂ.ಗಳ ಹೂಡಿಕೆ ನಿರೀಕ್ಷೆ

ಫ್ಲಿಪ್‌ಕಾರ್ಟ್‌ಗೆ ಹೂಡಿಕೆಯ ಬರ ನೀಗುವ ಸಂಭವ

ಅಮೆರಿಕ ಮೂಲದ ಇಬೇ, ಚೀನಾದ ಟೆನ್ಸೆಂಟ್‌ ಜತೆ ಮಾತುಕತೆ

ಬೆಂಗಳೂರು/ಹೊಸದಿಲ್ಲಿ: ಬೆಂಗಳೂರು ಮೂಲದ ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ನಲ್ಲಿ ಅಮೆರಿಕ ಮೂಲದ ಇ-ಕಾಮರ್ಸ್‌ ಕಂಪನಿ ಇ ಬೇ ಮತ್ತು ಚೀನಾದ ಇಂಟರ್‌ನೆಟ್‌ ಕಂಪನಿಯಾದ ಟೆನ್ಸೆಂಟ್‌ ಭಾರಿ ಮೊತ್ತದ ಹೂಡಿಕೆಯನ್ನು ಮಾಡುವ ಸಾಧ್ಯತೆ ಇದೆ.

ಒಟ್ಟು 105 ಕೋಟಿ ಡಾಲರ್‌ (ಅಂದಾಜು 10,000 ಕೋಟಿ ರೂ.) ಹೂಡಿಕೆಯನ್ನು ಗಳಿಸಲು ಸಂಭವನೀಯ ಹೂಡಿಕೆದಾರರೊಡನೆ ಮಾತುಕತೆ ನಡೆಸುತ್ತಿದೆ. ಅಮೆರಿಕ ಮೂಲದ ಇ ಬೇಯ ಭಾರತೀಯ ಘಟಕವು ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿಕೆ ಮಾಡುವ ಸಾಧ್ಯತೆ ಇದೆ.

ಈ ಕುರಿತು ಫ್ಲಿಪ್‌ ಕಾರ್ಟ್‌ ನಡೆಸಿರುವ ಮಾತುಕತೆಗಳು ಯಶಸ್ವಿಯಾಗಿದೆ. ಇಬೇ ಕಂಪನಿಯು ಅಮೆರಿಕದಅಮೆಜಾನ್‌ ಮತ್ತು ಆಲಿಬಾಬಾ ಕಂಪನಿಯ ಪೈಪೋಟಿಯನ್ನೂ ಎದುರಿಸುತ್ತಿವೆ. ಇದರೊಂದಿಗೆ ಫ್ಲಿಪ್‌ಕಾರ್ಟ್‌ಗೆ ಹೂಡಿಕೆಯ ಬರ ನೀಗುವ ಲಕ್ಷಣ ಕಾಣಿಸಿದೆ. ಈ ಹಿಂದೆ ಕೊನೆಯಬಾರಿಗೆ 2015ರಲ್ಲಿ ಕತಾರ್‌ ಇನ್ವೆಸ್ಟ್‌ಮೆಂಟ್‌ ಅಥಾರಿಟಿಯು ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿತ್ತು. ಇದೀಗ ಇ ಬೇ ಹಾಗೂ ಚೀನಾದ ಟೆನ್ಸೆಂಟ್‌ ಕಂಪನಿಯು ಹೂಡಿಕೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

2016ರಲ್ಲಿ ಆಮೆಜಾನ್‌ ಇಂಡಿಯಾ ಕಂಪನಿಯು ತನ್ನ ಮಾತೃ ಸಂಸ್ಥೆಯಿಂದ 7 ಸಾವಿರ ಕೋಟಿ ರೂ.ಗಳ ಹೂಡಿಕೆಯನ್ನು ಸ್ವೀಕರಿಸಿತ್ತು. ಆದ್ದರಿಂದ ಫ್ಲಿಪ್‌ಕಾರ್ಟ್‌ಗೆ ಈ ಹೂಡಿಕೆಗಳು ನಿರ್ಣಯಕವಾಗಲಿದೆ. ಇಬೇ ಮತ್ತು ಫ್ಲಿಪ್‌ ಕಾರ್ಟ್‌ ಹೂಡಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ. ಭಾರತದ ಆನ್‌ಲೈನ್‌ ರಿಟೇಲ್‌ ಮಾರುಕಟ್ಟೆ 1 ಲಕ್ಷ ಕೋಟಿ ರೂ.ಗೂ ಹೆಚ್ಚು ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ.

ಟೆನ್ಸೆಂಟ್‌ ಕಂಪನಿಯ ವಿ ಚಾಟ್‌ ಮೊಬೈಲ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ಜನಪ್ರಿಯವಾಗಿದೆ. ಟೆನ್ಸೆಂಟ್‌ ಭಾರತದ ಕೆಲವು ಸ್ಟಾರ್ಟಪ್‌ಗಳಲ್ಲಿಯೂ ಹೂಡಿಕೆ ಮಾಡಿದೆ. ಚೀನಾದ ಆಲಿಬಾಬಾ ಕಂಪನಿಯು ಪೇಟಿಎಂನಲ್ಲಿ ಇತ್ತೀಚೆಗೆ ತನ್ನ ಷೇರು ಪಾಲನ್ನು ಹೆಚ್ಚಿಸಿದೆ. ಆದ್ದರಿಂದ ನಾನಾ ಹೂಡಿಕೆದಾರರ ಜತೆಗೆ ಫ್ಲಿಪ್‌ಕಾರ್ಟ್‌ ಮಾತುಕತೆ ನಡೆಸಿತ್ತು.

ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿಕೆಯೊಂದಿಗೆ ಇಬೇ ಕಂಪನಿಗೆ ಭಾರತದಲ್ಲಿ ಹೊಸ ಇನ್ನಿಂಗ್ಸ್‌ ಶುರುವಾಗಲಿದೆ. 2004ರಲ್ಲಿ ಇಬೇ ಭಾರತದಲ್ಲಿ ಸ್ಥಳೀಯ ಸ್ಟಾರ್ಟಪ್‌ ಬಾಜ್‌ನಲ್ಲಿ ಹೂಡಿಕೆ ಮಾಡುವುದರೊಂದಿಗೆ ಪ್ರವೇಶಿಸಿತ್ತು. ಗುರ್‌ಗಾಂವ್‌ ಮೂಲದ ಸ್ನ್ಯಾಪ್‌ಡೀಲ್‌ನಲ್ಲೂ ಷೇರು ಖರೀದಿಸಿತ್ತು. 2015-16ರಲ್ಲಿ ಆಮೆಜಾನ್‌, ಫ್ಲಿಪ್‌ಕಾರ್ಟ್‌ಗೆ ದೊಡ್ಡಮಟ್ಟಿನ ಪೈಪೋಟಿ ಒಡ್ಡಿತ್ತು. ಆದರೂ ಜಬಾಂಗ್‌ನಂತಹ ಫ್ಯಾಷನ್‌ ಬ್ರಾಂಡ್‌ ಖರೀದಿಸಿ ಮರಳಿತ್ತು.


ವಿಮಾನ ಪ್ರಯಾಣ ಸುರಕ್ಷತೆಗೆ ಎರವಾಗುತ್ತಿದೆ ನೋಂದಣಿ ಸಂಖ್ಯೆ ಸಮಸ್ಯೆ

$
0
0

ಹೊಸದಿಲ್ಲಿ: ಭಾರತೀಯ ವಿಮಾನಯಾನದಲ್ಲಿ ವಿಚಿತ್ರ ಸಮಸ್ಯೆಯೊಂದು ಉದ್ಭವಿಸಿದ್ದು, ಹೆಚ್ಚುತ್ತಿರುವ ವಿಮಾನಗಳಿಗೆ ನೋಂದಣಿ ಸಂಖ್ಯೆ ಇಲ್ಲದೆ ವಿಮಾನ ಸಂಸ್ಥೆಗಳು ಪರದಾಡುತ್ತಿವೆ.

ದೇಶದಲ್ಲಿ ವಿಮಾನ ಪ್ರಯಾಣ ಮಾಡುವವರ ಸಂಖ್ಯೆ ಅಧಿಕವಾದಂತೆ ವಿಮಾನಗಳ ಸಂಖ್ಯೆಯೂ ಹೆಚ್ಚಳವಾಗಿದೆ. ವಿಮಾನಯಾನ ವಲಯದಲ್ಲಿಇತ್ತೀಚೆಗೆ ನಡೆದ ಬೇಸಿಗೆ ಋತುವಿನ ಸಭೆಯಲ್ಲಿ, ವಿಮಾನಗಳ ನೋಂದಣಿ ಸಂಖ್ಯೆ ಹಾಗೂ ಕಾಲ್ ಸೈನ್ ಕುರಿತಾಗಿ ಗೊಂದಲ ಅಧಿಕಾರಿಗಳು ನಡುವೆ ಗಂಭೀರ ಸಮಸ್ಯೆ ಉಂಟುಮಾಡಿತು.

ವಿಮಾನಗಳಿಗೆ ನೀಡುತ್ತಿರುವ ಮೂರು ಅಂಕಿಯ ಕೋಡ್‌ ಸಂಖ್ಯೆಯೇ ಗೊಂದಲಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ವಿಮಾನಗಳ ಕೋಡ್‌ ಸಂಖ್ಯೆಯಲ್ಲಿ ಸಾಮ್ಯತೆ ಕಂಡು ಬರುವುದರಿಂದ ದ್ವಂದ್ವ ಸೃಷ್ಟಿಯಾಗುತ್ತಿದೆ.

ಸಭೆಯಲ್ಲಿ ಮಾತನಾಡಿದ ವಿಮಾನ ನಿಲ್ದಾಣ ಪ್ರಾಧಿಕಾರದ ಜಂಟಿ ಜಿಎ (ಏರ್ ಟ್ರಾಫಿಕ್ ನಿರ್ವಹಣೆ) ಎಸ್ ಬಿ ಶರ್ಮಾ, ಕಳೆದ ಬೇಸಿಗೆ ಋತುವಿನಲ್ಲಿ 1,800 ವಿಮಾನಗಳ ನೋಂದಣಿ ಸಂಖ್ಯೆ ಹಾಗೂ ಕಾಲ್ ಸೈನ್ ಘರ್ಷಣೆಯನ್ನು ಪರಿಹರಿಸಲಾಗಿದೆ ಎಂದು ಹೇಳಿದರು.

'ಕಳೆದ ವರ್ಷ ವಿಮಾನಗಳ ನೋಂದಣಿ ಸಂಖ್ಯೆ ಹಾಗೂ ಕಾಲ್ ಸೈನ್ ಸಂಘರ್ಷಗಳ ಬಗೆಗಿನ ವಿವರವಾದ ಚರ್ಚೆಯ ನಂತರ, ವಿಮಾನಯಾನ ಸಂಸ್ಥೆಗಳು ಕೇವಲ 15 ನಿಮಿಷ ಅಂತರದಲ್ಲಿ ಒಂದೇ ಮಾರ್ಗದಲ್ಲಿ ಅದೇ ಕಾಲ್ ಸೈನ್‌ಗಳೊಂದಿಗೆ ಕೇವಲ 15 ನಿಮಿಷಗಳ ಅಂತರದಲ್ಲೇ ವಿಮಾನಗಳನ್ನು ಹಾರಗೊಡುತ್ತಿರುವುದು ಗೊಂದಲಕ್ಕೆ ಕಾರಣವಾಗುತ್ತಿದೆ' ಎಂದು ನಾಗರಿಕ ವಿಮಾನಯಾನದ ಜಂಟಿ ಡಿಜಿ ಮತ್ತು ಸುರಕ್ಷತೆ ನಿರ್ದೇಶನಾಲಯದ ಮುಖ್ಯಸ್ಥ ಲಲಿತ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ವಿಮಾನಯಾನದಲ್ಲಿ ಉಂಟಾಗಿರುವ ಗೊಂದಲ ಪರಿಹರಿಸಲು ಪ್ರಸ್ತುತ ವಿಮಾನಗಳಿಗೆ ನೀಡುತ್ತಿರುವ ಮೂರು ಅಂಕಿಯ ಕೋಡ್‌ ಸಂಖ್ಯೆಯನ್ನು ನಾಲ್ಕು ಅಂಕಿಗೆ ಏರಿಸುವ ಕುರಿತು ವಿಮಾನಯಾನ ಅಧಿಕಾರಿಗಳು ಚಿಂತಿಸುತ್ತಿದ್ದಾರೆ. ಆದರೆ, ವಿಮಾನ ಸಂಚಾರ ಬೆಳೆಯುತ್ತಿರುವ ಹೊರತಾಗಿಯೂ ಅಧಿಕಾರಿಗಳು ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

Airlines run out of flight numbers: The boom in aviation in India has given rise to a peculiar problem — airlines are running out of flight numbers. With a growing number of flights and too few flight numbers, call sign confusion emerged as a serious concern among authorities at the recently concluded meeting for deciding summer slots.


ಅಡಕೆ, ಗೇರು ಸಂಶೋಧನೆಗೆ ಪೇಟೆಂಟ್‌ ಪಡೆಯಲು ಸಿದ್ಧತೆ

$
0
0

ಸುಧಾಕರ ಸುವರ್ಣ ಪುತ್ತೂರು : ನಾಡಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಕೆ ಮತ್ತು ಗೇರು ಬೆಳೆಯಲ್ಲಿ ಯಾವುದೇ ಹೊಸ ತಳಿ ಸೃಷ್ಟಿದರೂ ಅದನ್ನು ಬಹುರಾಷ್ಟ್ರೀಯ ಕಂಪನಿಗಳು ಅಥವಾ ವಿದೇಶಿ ವಿಜ್ಞಾನಿಗಳು ನಕಲಿ ಮಾಡಿ ತಮ್ಮದೆಂದು ವಾದಿಸಿ ಬಿಡುತ್ತಾರೋ ಎಂಬ ಆತಂಕ ದೂರವಾಗುವ ಸಮಯ ಸನ್ನಿಹಿತವಾಗಿದೆ. ಅಡಕೆ, ಗೇರು ತಳಿ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅಡಕೆ, ಗೇರು ಬೆಳೆ ಸಂಶೋಧನೆಗೆ ಪೇಟೆಂಟ್‌ ಪಡೆಯುವ ಕೆಲಸ ಇದುವರೆಗೆ ಆಗಿರಲಿಲ್ಲ. ಈ ಕೆಲಸ ಈಗ ನಡೆಯುತ್ತಿದೆ.

ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯ ಮತ್ತು ಸಮೀಪದ ವಿಟ್ಲದ ರಾಷ್ಟ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ ಜಂಟಿಯಾಗಿ ಗೇರು ಮತ್ತು ಅಡಕೆಯ ತಳಿ ವೈವಿಧ್ಯ ನೋಂದಣಿ ಪ್ರಕ್ರಿಯೆಗೆ ಮಾರ್ಗದರ್ಶಿ ಸೂತ್ರ ತಯಾರಿಸಲು ಮುಂದಾಗಿದೆ. ಈ ರಾಷ್ಟ್ರೀಯ ಸಂಸ್ಥೆಗಳಿಗೆ ಕೇಂದ್ರ ಸರಕಾರ ಮಹತ್ವದ ಹೊಣೆ ಒಪ್ಪಿಸಿದ್ದು, ದೇಶದ ಮೂಲೆ ಮೂಲೆಗಳಿಂದ ಸುಮಾರು 20ರಷ್ಟು ವಿಜ್ಞಾನಿಗಳು ಪುತ್ತೂರಿಗೆ ಆಗಮಿಸಿ ಮಾರ್ಗದರ್ಶಿ ಸೂತ್ರ ತಯಾರಿಸಲಿದ್ದಾರೆ.

ಏನಿದು ನೋಂದಣಿ ಪ್ರಕ್ರಿಯೆ?: ಗ್ಯಾಟ್‌ ಒಪ್ಪಂದ ನಡೆದ ನಂತರ ಪ್ರತಿ ದೇಶಗಳೂ ತಮ್ಮಲ್ಲಿನ ಬೆಳೆ ತಳಿಗಳ ವೈವಿಧ್ಯತೆ ಮೇಲೆ ಅಧಿಕಾರ ಪಡೆಯುವ ಹಕ್ಕು ಪಡೆದಿವೆ. ಯಾವುದೇ ಬೆಳೆಯ ನಿರ್ದಿಷ್ಟ ತಳಿ ಯಾವುದೇ ರೈತ, ವಿಜ್ಞಾನಿ ಅಭಿವೃದ್ಧಿಪಡಿಸಿದರೆ ಅದನ್ನು ರಾಷ್ಟ್ರಮಟ್ಟದಲ್ಲಿ ನೋಂದಣಿ ಮಾಡಿ ಪ್ರಮಾಣಪತ್ರ ಪಡೆಯಬೇಕು. ಇದು ತಳಿಯ ನಕಲಿ ತಡೆಗೆ ದಿÊೌ್ಯಷಧ.

ಈ ಕಾರ್ಯಕ್ಕಾಗಿಯೇ ಭಾರತದಲ್ಲಿ ಸಸ್ಯ ತಳಿ ಸಂರಕ್ಷ ಣೆ ಮತ್ತು ರೈತ ಹಕ್ಕುಗಳ ಪ್ರಾಧಿಕಾರವಿದೆ. ಈ ಸಂಬಂಧ ಸಸ್ಯ ತಳಿ ಸಂರಕ್ಷ ಣೆ ಮತ್ತು ಕೃಷಿಕರ ಹಕ್ಕುಗಳ ಕಾಯಿದೆಯೂ ಜಾರಿಯಲ್ಲಿದೆ. ಈ ಕಾಯಿದೆಯಡಿಯಲ್ಲಿ ಹಲವು ಬೆಳೆಗಳಿಗೆ ಮಾರ್ಗದರ್ಶಿ ಸೂತ್ರ ತಯಾರಿಸಲಾಗಿದ್ದು, ಅದರಡಿಯಲ್ಲಿ ನಿರ್ದಿಷ್ಟ ತಳಿ ನೋಂದಾಯಿಸಿಕೊಂಡು ಪ್ರಮಾಣಪತ್ರ ಪಡೆದರೆ ಅದರ ಪೇಟೆಂಟ್‌ ಮುಂದಿನ 20 ವರ್ಷದವರೆಗೆ ಆ ವ್ಯಕ್ತಿ ಇಲ್ಲವೇ ಸಂಸ್ಥೆಗೆ ಸಿಗುತ್ತದೆ.

ಈಗಾಗಲೇ ಭತ್ತ, ಗೋಧಿ, ತೆಂಗು ಸೇರಿದಂತೆ ದೇಶದ ಪ್ರಮುಖ ಬೆಳೆಗಳಿಗೆ ಮಾರ್ಗದರ್ಶಿ ಸೂತ್ರ ರಚಿಸಲಾಗಿದ್ದು, ತಳಿ ವೈವಿಧ್ಯ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಇದೇ ಮೊದಲ ಬಾರಿ ಗೇರು ಮತ್ತು ರಬ್ಬರ್‌ಗೂ ಮಾರ್ಗದರ್ಶಿ ಸೂತ್ರ ರಚಿಸಲು ಮುಂದಡಿ ಇಡಲಾಗಿದೆ.

ಪುತ್ತೂರು ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಎಂ.ಗಂಗಾಧರ ನಾಯಕ್‌, ವಿಟ್ಲ ರಾಷ್ಟ್ರೀಯ ತೋಟಗಾರಿಕæ ಬೆಳೆಗಳ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಸ್‌. ಆನಂದ್‌ ನೇತೃತ್ವದಲ್ಲಿ ಮಾರ್ಗದರ್ಶಿ ಸೂತ್ರ ರಚನೆಯ ಮಹತ್ವದ ಸಭೆ ಮಾ.18ರಂದು ಸಂಜೆ ಪುತ್ತೂರು ಡಿಸಿಆರ್‌ನಲ್ಲಿ ನಡೆಯಲಿದೆ. ರೋಮ್‌ನಲ್ಲಿರುವ ವಿಶ್ವ ಮಟ್ಟದ ತಳಿ ವೈವಿಧ್ಯ ಸಂರಕ್ಷ ಣಾ ಕೇಂದ್ರದ ದಕ್ಷಿಣ ಏಷ್ಯಾ ನಿರ್ದೇಶಕ ಎನ್‌.ಕೆ. ಕೃಷ್ಣ ಕುಮಾರ್‌ ಸಹಹಿತ ಸುಮಾರು 20ರಷ್ಟು ಗೇರು ಮತ್ತು ಅಡಕೆ ವಿಜ್ಞಾನಿಗಳು ಭಾಗವಹಿಸಲಿದ್ದಾರೆ. ಸಮಗ್ರ ವರದಿ ತಯಾರಿಸಿ ಕೇಂದ್ರದ ಪ್ರಾಧಿಕಾರಕ್ಕೆ ಸಲ್ಲಿಸಲಾಗುತ್ತದೆ. ಅಲ್ಲಿ ಅದು ಅಂಗೀಕಾರಗೊಂಡ ಮೇಲೆ ದೇಶ ಮಟ್ಟದಲ್ಲಿ ಗೇರು, ಅಡಕೆಯ ತಳಿ ವೈವಿಧ್ಯ ನೋಂದಣಿಗೆ ಇದು ಮಾನದಂಡವಾಗಲಿದೆ ಎಂದು ಪುತ್ತೂರು ಡಿಸಿಆರ್‌ನ ಹಿರಿಯ ವಿಜ್ಞಾನಿ ಡಾ.ಮೋಹನ್‌ ಹೇಳುತ್ತಾರೆ.

ಡಿಸ್ಟಿಂಕ್ಟಿವ್‌ನೆಸ್‌, ಯೂನಿಫಾರ್ಮಿಟಿ ಮತ್ತು ಸ್ಟೆಬಿಲಿಟಿ (ಡಿಯುಎಸ್‌) ಎಂಬ ಅಂಶ ಮುಂದಿಟ್ಟುಕೊಂಡು ಮಾರ್ಗದರ್ಶಿ ಸೂತ್ರ ರಚಿಸಲಾಗುತ್ತದೆ. ಯಾವುದೇ ಸಂಶೋಧಕ ತನ್ನ ತಳಿಯ ವಿಶಿಷ್ಟತೆ ಸಾಬೀತು ಮಾಡಲು ಈ 3 ಮಾನದಂಡ ಈಡೇರಿಸಬೇಕು. ಅದಾದ ಬಳಿಕ ದೇಶದ ಪೂರ್ವ ಮತ್ತು ಪಶ್ಚಿಮದ 2 ಜಾಗದಲ್ಲಿ ತಳಿ ಪರೀಕ್ಷಿಸಲಾಗುತ್ತದೆ. 3 ವರ್ಷ ಪರೀಕ್ಷೆಗೆ ಒಡ್ಡಿದ ಬಳಿಕವೇ ಪ್ರಮಾಣಪತ್ರ ನೀಡಲಾಗುತ್ತದೆ. ಗೇರು ಮತ್ತು ಅಡಕೆಗೆ ಈ ಅವಕಾಶ ಸಿಗುತ್ತಿರುವುದು ಮತ್ತು ಅದರ ರಾಷ್ಟ್ರೀಯ ಮಾರ್ಗದರ್ಶಿ ಸೂತ್ರ ಪುತ್ತೂರಿನಲ್ಲಿ ತಯಾರಿಸುತ್ತಿರುವುದು ವಿಶೇಷ ಎಂದು ರಾಷ್ಟ್ರೀಯ ಗೇರು ಸಂಶೋಧನೆæ ನಿರ್ದೇಶನಾಲಯದ ಪ್ರಭಾರ ನಿರ್ದೇಶಕ ಡಾ.ಎಂ. ಗಂಗಾಧರ ನಾಯಕ್‌ ತಿಳಿಸಿದ್ದಾರೆ.

539 ಗೇರು ತಳಿಗಳಿವೆ!

ರಾಷ್ಟ್ರೀಯ ಗೇರು ಸಂಶೋಧನæ ನಿರ್ದೇಶನಾಲಯದ ಮಾರ್ಗದರ್ಶನದಂತೆ ಇಲ್ಲಿಯವರೆಗೆ 539 ಗೇರು ತಳಿ ಸೃಷ್ಟಿಸಲಾಗಿದೆ. ಅದರಲ್ಲಿ 42 ತಳಿ ಬೆಳೆಸಬಹುದು ಎಂದು ಬೆಳೆಗಾರರಿಗೆ ಶಿಫಾರಸು ಮಾಡಲಾಗಿದೆ.


2,000 ನೋಟು ಹಿಂತೆಗೆತ ಪ್ರಸ್ತಾಪ ಇಲ್ಲ: ಜೇಟ್ಲಿ

$
0
0

ಹೊಸದಿಲ್ಲಿ: ನೋಟು ಅಮಾನ್ಯತೆಯ ನಂತರ ಬಿಡುಗಡೆಗೊಳಿಸಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

2016ರ ಡಿಸೆಂಬರ್‌ 10ರ ವೇಳೆಗೆ ಆರ್‌ಬಿಐನ ಕರೆನ್ಸಿ ಚೆಸ್ಟ್‌ಗಳಿಗೆ ಹಳೆಯ 1,000 ರೂ. ಮತ್ತು 500 ರೂ.ಗಳ ನೋಟುಗಳ ಬೆಲೆ 12.44 ಲಕ್ಷ ಕೋಟಿ ರೂ.ಗಳಾಗಿವೆ ಎಂದು ಜೇಟ್ಲಿ ತಿಳಿಸಿದರು.

2017ರ ಮಾರ್ಚ್‌ 3ರ ವೇಳೆಗೆ ಚಲಾವಣೆಯಲ್ಲಿರುವ ಕರೆನ್ಸಿಗಳ ಮೌಲ್ಯ 12 ಲಕ್ಷ ಕೋಟಿ ರೂ.ಗಳಾಗಿವೆ ಎಂದು ಅರುಣ್‌ ಜೇಟ್ಲಿ ತಿಳಿಸಿದರು.

ಕಪ್ಪುಹಣ, ಭ್ರಷ್ಟಾಚಾರ, ನಕಲಿ ನೋಟು ಮತ್ತು ಭಯೋತ್ಪಾದನೆಗೆ ಹಣಕಾಸು ಪೂರೈಕೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜೇಟ್ಲಿ ತಿಳಿಸಿದರು.

ಈ ಕ್ರಮದಿಂದ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹ ಹೆಚ್ಚಳವಾಗಿದ್ದು, ಇದರಿಂದ ಬಡ್ಡಿ ದರಗಳು ತಗ್ಗಲಿವೆ ಎಂದು ಅವರು ಹೇಳಿದರು.


2.82 ಲಕ್ಷ ಕೋಟಿ ರೂ. ಸೆಸ್‌ ಸಂಗ್ರಹ ನಿರೀಕ್ಷೆ

$
0
0

ಹೊಸದಿಲ್ಲಿ: ಕೇಂದ್ರ ಸರಕಾರ 2017-18ರಲ್ಲಿ ಒಟ್ಟು 2,82,212 ಕೋಟಿ ರೂ.ಗಳಷ್ಟು ಕಂದಾಯವನ್ನು ಸೆಸ್‌ ಮತ್ತು ಸರ್‌ಚಾರ್ಜ್‌ಗಳ ಮೂಲಕ (ಮೇಲ್ತೆರಿಗೆ) ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.

2014-15ರಲ್ಲಿ ಸೆಸ್‌ ಮತ್ತು ಮೇಲ್ತೆರಿಗೆಯ ಮೂಲಕ 1,19,276.65 ಕೋಟಿ ರೂ. ಸಂಗ್ರಹವಾಗಿತ್ತು.2016-17ರಲ್ಲಿ ಇದು 2,65,661.61 ಕೋಟಿ ರೂ.ಗೆ ಏರಿತ್ತು. 2017-18ರಲ್ಲಿ 2,82,211.98 ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಅವರು ತಿಳಿಸಿದರು.

ಆದಾಯ ಘೋಷಣೆ ಯೋಜನೆ 2016ರ ಅಡಿಯಲ್ಲಿ ಕೃಷಿ ಕಲ್ಯಾಣ ಸೆಸ್‌ ಅನ್ನು ಶೇ.25ರ ದರದಲ್ಲಿ ವಿಧಿಸಲಾಗಿದೆ. ಅಘೋಷಿತ ಆದಾಯ ಘೋಷಣೆ ಅಡಿಯಲ್ಲಿ ಇದು ಶೇ.7.5ರಷ್ಟು ಇರುತ್ತದೆ ಎಂದರು.

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನಾ (2016) ಅಡಿಯಲ್ಲಿ ಸೆಸ್‌ ದರ ಶೇ.33ರಷ್ಟು ಇದೆ. ಈ ಎಲ್ಲದರ ಪರಿಣಾಮ ಸೆಸ್‌ ಮೊತ್ತ ಹೆಚ್ಚುವ ನಿರೀಕ್ಷೆ ಇದೆ.

ಆದಾಯ ತೆರಿಗೆಯಲ್ಲಿ ಶಿಕ್ಷಣ ಸೆಸ್‌ ಶೇ.2ರಷ್ಟಿದೆ. 2004ರ ಬಜೆಟ್‌ನಲ್ಲಿ ಶಿಕ್ಷಣ ಸೆಸ್‌ ಅನ್ನು ಪರಿಚಯಿಸಲಾಗಿತ್ತು.


ರವಿ ವರ್ಮನ ದಮಯಂತಿ ಕಲಾಕೃತಿಗೆ 11 ಕೋಟಿ ರೂ.

$
0
0

ನ್ಯೂಯಾರ್ಕ್‌: ಮಹಾನ್‌ ಕಲಾವಿದ ರಾಜಾ ರವಿ ವರ್ಮ ಅವರ ಶೀರ್ಷಿಕೆರಹಿತ 'ದಮಯಂತಿ' ಕಲಾಕೃತಿಯು ನ್ಯೂಯಾರ್ಕ್‌ನಲ್ಲಿ 11.09 ಕೋಟಿ ರೂ.ಗೆ ಹರಾಜಿನಲ್ಲಿ ಮಾರಾಟವಾಗಿದೆ. ಈ ಕಲಾಕೃತಿ 4.58 ಕೋಟಿ ರೂ.ಗೆ ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂದಾಜಿಗಿಂತಲೂ ದುಪ್ಪಟ್ಟು ದರಕ್ಕೆ ಮಾರಾಟಗೊಂಡಿದೆ.

ಇಲ್ಲಿನ ಮಾಡರ್ನ್‌ ಅ್ಯಂಡ್‌ ಕಂಟೆಪರರಿ ಸೌತ್‌ ಏಷಿಯನ್‌ ಆರ್ಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಹರಾಜಿನಲ್ಲಿ ರವಿ ವರ್ಮ ಕೃತಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಪ್ರದರ್ಶನದಲ್ಲಿ ರವಿವರ್ಮ ಅವರದಷ್ಟೆ ಅಲ್ಲದೇ ಎಂ.ಎಫ್‌. ಹುಸೇನ್‌, ಜಹಾಂಗೀರ್‌ ಸಬಾವಾಲಾ ಮತ್ತು ಫ್ರಾನ್ಸಿಸ್‌ ನ್ಯೂಟನ್‌ ಸೋಜಾ ಅವರ ಕಲಾಕೃತಿಗಳು ಕಲಾಸ್ತಕರ ಗಮನ ಸೆಳೆದಿದ್ದು, ಸುಮಾರು 43.25 ಕೋಟಿ ರೂ.ಗೆ ಮಾರಾಟವಾಗಿವೆ.

'ದಿ ಫೀಸ್ಟ್‌ ಆಫ್‌ ರೋಸಸ್‌, ಲಿನಾಮೊರಾಟಾ' ಹೆಸರಿನ ಯುರೋಪಿಯನ್‌ ಶೈಲಿಯ ಭಾವಚಿತ್ರದಿಂದ ಸ್ಫೂರ್ತಿಗೊಂಡ ರವಿವರ್ಮ, 'ನಳ-ದಮಯಂತಿ' ಸಂಸ್ಕೃತ ನಾಟಕದಲ್ಲಿ ಬರುವ ದೃಶ್ಯವನ್ನು ಚಿತ್ರಿಸಿದ ಕಲಾಕೃತಿ ಇದಾಗಿದೆ. ಇದಕ್ಕೆ ಶೀರ್ಷಿಕೆ ಇಲ್ಲದಿದ್ದರೂ 'ದಮಯಂತಿ' ಕಲಾಕೃತಿ ಎಂದೇ ಕಲಾಲೋಕದಲ್ಲಿ ಪ್ರಸಿದ್ಧಿಯಾಗಿದೆ.

ಭಾರತದ ಪೌರಾಣಿಕ ಕಥನದ ನಾಯಕಿ ದಮಯಂತಿಯನ್ನು ದೇಸಿ ಸೊಗಡಿನ ಜತೆಗೆ ಯುರೋಪಿಯನ್‌ ಶೈಲಿಯ ವಾಸ್ತವತೆಗೆ ಹತ್ತಿರವಾಗುವಂತೆ ಚಿತ್ರಿಸಿದ ಈ ಪೇಟಿಂಗ್‌ ಇಂದಿಗೂ ಶ್ರೇಷ್ಠ ಕಲಾಕೃತಿಯಾಗಿದೆ.


ಮಲ್ಯಗೆ ಸಾಲ ನೀಡಿದ್ದು ಯುಪಿಎ: ಕೇಂದ್ರ ಸರಕಾರ

$
0
0

ಹೊಸದಿಲ್ಲಿ: ಯುಪಿಎ ಸರಕಾರವು ತನ್ನ ಆಡಳಿತಾವಧಿಯಲ್ಲಿ ಉದ್ಯಮಿ ವಿಜಯ ಮಲ್ಯ ಅವರಿಗೆ 8,040 ಕೋಟಿ ರೂ. ಸಾಲ ನೀಡಿದೆ. ಆದರೆ, ಸಾಲ ನೀಡದೇ ಸುಸ್ತಿದಾರರಾದ ಅವರ ವಿರುದ್ಧ ಮೋದಿ ಸರಕಾರವು ಕ್ರಮ ಕೈಗೊಂಡಿದೆ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಸಂತೋಷ್‌ ಗಂಗ್ವಾರ್‌ ಅವರು ಲೋಕಸಭೆಗೆ ತಿಳಿಸಿದ್ದಾರೆ.

'ಸಾರ್ವಜನಿಕ ವಲಯದ ನಾನಾ ಬ್ಯಾಂಕ್‌ಗಳಿಂದ ಬೃಹತ್‌ ಸಾಲ ಪಡೆದು ಸುಸ್ತಿದಾರರಾದವರ ಸಂಖ್ಯೆ 2015ರ ಡಿಸೆಂಬರ್‌ಗೆ 9,130 ತಲುಪಿದೆ. ಸಾಲದ ಮೊತ್ತ 91,155 ಕೋಟಿ ರೂ.ನಷ್ಟಿದ್ದು, ಸುಸ್ತಿದಾರರಿಂದ ಸಾಲ ವಸೂಲಿಗೆ ಸರಕಾರ ಪ್ರಯತ್ನ ನಡೆಸಿದೆ,' ಎಂದು ಪ್ರಶ್ನೆಯೊಂದಕ್ಕೆ ಸಚಿವರು ವಿವರಿಸಿದರು.

'ನಮ್ಮ ಸರಕಾರವು ಮಲ್ಯ ವಿರುದ್ಧ ಕ್ರಮ ಕೈಗೊಂಡಿದೆ. ಸದ್ಯಕ್ಕೆ ಅವರು ಬ್ರಿಟನ್‌ನಲ್ಲಿದ್ದು, ನಾನಾ ತನಿಖಾ ಸಂಸ್ಥೆಗಳು ಸಮನ್ಸ್‌ ಜಾರಿ ಮಾಡಿವೆ. ನಮ್ಮ ಮನವಿಯನ್ವಯ ವಿದೇಶಾಂಗ ವ್ಯವಹಾರ ಸಚಿವಾಲಯವು ಮಲ್ಯ ಅವರ ಪಾಸ್‌ಪೋರ್ಟ್‌ ಅನ್ನು ರದ್ದುಗೊಳಿಸಿದೆ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಲಿದ್ದೇವೆ,' ಎಂದರು.

'9,150 ಸುಸ್ತಿದಾರರ ಪೈಕಿ 8,364 ಮಂದಿ ವಿರುದ್ಧ ದೂರುಗಳು ದಾಖಲಿಸಲಾಗಿದ್ದು, ಇಲ್ಲಿನ 85,258 ಕೋಟಿ ಸುಸ್ತಿ ಹಣ ವಸೂಲಿಗೆ ಪ್ರಯತ್ನಗಳು ಮುಂದುವರಿದಿವೆ. ಇದರಲ್ಲಿ 2,024 ಸುಸ್ತಿದಾರರ ವಿರುದ್ಧ ಎಫ್‌ಐಆರ್‌ ದಾಖಲಾಗಿವೆ,' ಎಂದು ಸಂತೋಷ್‌ ವಿವರ ನೀಡಿದರು.


Viewing all 7056 articles
Browse latest View live


<script src="https://jsc.adskeeper.com/r/s/rssing.com.1596347.js" async> </script>