Quantcast
Channel: ರಾಜ್ಯ - vijaykarnataka indiatimes
Viewing all 7056 articles
Browse latest View live

ಮನೆ ಬೆಳಗುವ ಗೃಹಿಣಿ

$
0
0

ಗೃಹಿಣೀ ಗೃಹಮುಚ್ಯತೇ

ವಧೂವರರ ಜಾತಕ ಕೂಡಿಸುವ ಮುನ್ನ ಕೇವಲ ಗುಣಗಳ ಹೊಂದಾಣಿಕೆಯತ್ತ ಗಮನ ಹರಿಸದೆ ಸ್ವಭಾವಗಳ ಹೊಂದಾಣಿಕೆಯತ್ತಲೂ ಗಮನ ಹರಿಸಬೇಕಾಗುತ್ತದೆ.

* ಡಾ. ಮಂಜುಳಾ ಬಿ. ಐಥಾಳ್‌

ಗೃಹಿಣೀ ಗೃಹಮುಚ್ಯತೇ ಇಲ್ಲಿ ಬಳಕೆಯಾಗಿರುವ ಪದಗಳು ಗೃಹ, ಗೃಹಿಣಿ, ಗೃಹದ ಉನ್ನತಿ. ಸದ್ಗೃಹಿಣಿಯ ಸಹಕಾರವಿಲ್ಲದೇ ಗೃಹವು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಿಲ್ಲ. ಒಂದು ಮನೆ ಸಾರ್ಥಕ ಗೃಹವೆನ್ನಿಸಿಕೊಳ್ಳಬೇಕಾದರೆ ಆ ಮನೆಗೆ ಪ್ರೀತಿ, ಸಾಮರಸ್ಯದ ತಳಪಾಯಬೇಕು. ಸೌಹಾರ್ದತೆ, ಔದಾರ್ಯ, ಸತ್ಯ ಅಹಿಂಸೆಗಳೇ ಆಧಾರವಾಗಿರಬೇಕು. ಒಂದು ಹೆಣ್ಣು ತವರು ಮನೆಯಲ್ಲಿ ಅಕ್ಕರೆಯ ಕೂಸಾಗಿ ಬೆಳೆದು ಮದುವೆಯ ತನ್ನದೇ ಆದ ಮನೆಗೆ ಗೃಹ ಪ್ರವೇಶ ಮಾಡುತ್ತಾಳೆ. ಆ ಮನೆಗೆ ಬೆಳಕಾಗುತ್ತಾಳೆ. ಹೀಗೆ ಮನೆಗೆ ಬೆಳಕಾಗಿ ಬರುವ ಘಟ್ಟದ ಮೇಲೆ ಜ್ಯೋತಿಷ್ಯಶಾಸ್ತ್ರವು ಬೆಳಕನ್ನು ಚೆಲ್ಲುತ್ತದೆ. ಸ್ತ್ರೀಯ ಜಾತಕ ವಿಮರ್ಶೆ ಮಾಡಿ ಅವಳ ಜಾತಕದಲ್ಲಿ ತತ್ವಗಳು, ಚಂದ್ರ ಇತರ ಗ್ರಹರ ಸ್ಥಿತಿ, ತ್ರಿಂಶಾಂಶ ಕುಂಡಲಿ ಮುಂತಾದ ವಿಚಾರಗಳ ಅವಲೋಕನದಿಂದ ಸ್ತ್ರೀಯ ಸ್ವಭಾವ, ಗುಣ ನಡತೆ ಅವಳ ಮನೋಭಾವ ಮತ್ತಿತರ ವಿಚಾರಗಳನ್ನು ತಿಳಿಸುತ್ತದೆ.

ಪರಸ್ಪರ ಸ್ವಭಾವಗಳ ಹೊಂದಾಣಿಕೆಯೇ ಸುಖ ಸಂಸಾರಕ್ಕೆ ಬುನಾದಿ. ಹಾಗಾಗಿ ವಧೂವರರ ಜಾತಕಗಳಲ್ಲಿ ಮೊದಲು ಸ್ವಭಾವಗಳ ಹೊಂದಾಣಿಕೆಯತ್ತ ಗಮನ ಹರಿಸಬೇಕಾಗುವುದು. ಜಾತಕದಲ್ಲಿ ಪಂಚಭೂತ ತತ್ವ, ಯಾವ ತತ್ವವು ಪ್ರಧಾನವಾಗಿದೆ ಎಂದು ಅರಿಯಬೇಕು. ಅಗ್ನಿ ತತ್ವವು ವ್ಯಕ್ತಿಯಲ್ಲಿರುವ ಮುಂದಾಳತ್ವ, ಕೋಪ, ಉತ್ತಮ ಆರೋಗ್ಯ ಮುಂತಾದ ಅನೇಕ ವಿಚಾರಗಳನ್ನು ತಿಳಿಸಿದರೆ ಪೃಥ್ವಿ ತತ್ವವು ವ್ಯಕ್ತಿಯಲ್ಲಿರುವದ ಸಹನೆ ಕಷ್ಠ ಸಹಿಷ್ಣತೆಯ ಗುಣ ಆರ್ಥಿಕ ಬಯಕೆ, ಕಷ್ಟಪಟ್ಟು ದುಡಿಯುವ ವಿಚಾರ ಮುಂತಾದ ವಿಚಾರಗಳನ್ನು ತಿಳಿಸುವುದು. ಹಾಗೆಯೇ ವಾಯು ತತ್ವವು ಬುದ್ಧಿವಂತಿಕೆ, ಆಳವಾದ ಅಧ್ಯಯನ, ಯೋಜನಾ ಸಾಮರ್ಥ್ಯ‌, ಕಲ್ಪನಾ ಶಕ್ತಿ ಅತಿಯಾದ ಆಸೆ ಆಕಾಂಕ್ಷೆ ಮುಂತಾದ ವಿಚಾರಗಳನ್ನು ಅರುಹಿದರೆ ಜಲ ತತ್ವವು ವ್ಯಕ್ತಿಗಿರುವ ಭಾವನೆಗಳು, ಉದ್ವೇಗದ ಸ್ವಭಾವ ಸೇವಾ ಮನೋಭಾವ ಕಡಿಮೆ ರೋಗ ನಿರೋಧಕ ಶಕ್ತಿ ಮುಂತಾದ ವಿಚಾರಗಳನ್ನು ತಿಳಿಸುವುದು. ಹೀಗೆ ಜಾತಕ ಅವಲೋಕಿಸಿದಾಗ ನನ್ನ ಮಗಳ/ಮಗನ ಗುಣ ಸ್ವಭಾವದ ಪರಿಚಯ ನಮಗಾಗುವುದು. ಆಗ ಅವರ ಸ್ವಭಾವಕ್ಕೆ ಹೊಂದಿಕೆಯಾಗುವಂತಹ ತತ್ವ ಪ್ರಾಧಾನ್ಯತೆಯಿರುವ ವರ/ವಧುವಿನ ಜೊತೆಯಲ್ಲಿಅವರ ವಿವಾಹ ಮಾಡಿದರೆ ಸುಖ ಸಂಸಾರಕ್ಕೆ ನಾಂದಿಯಾಗುತ್ತದೆ.

ಚಂದ್ರ:

ಚಂದ್ರನನ್ನು ವಿಶ್ಲೇಷಿಸುವುದರ ಮೂಲಕ ಜಾತಕರ ಮನಸ್ಥಿತಿಯನ್ನು ಅರಿತುಕೊಳ್ಳಬಹುದು. ಚಂದ್ರನ ಸ್ಥಿತಿ ಬಲಯುತವಾಗಿದ್ದರೆ ಚಂದ್ರನಿಗೆ ಪಕ್ಷ ಬಲವಿದ್ದರೆ, ಚಂದ್ರನಿಗೆ ಯಾವುದೇ ಅಶುಭ ಗ್ರಹರ ಸಂಬಂಧವಿರದಿದ್ದರೆ ಜಾತಕರ ಮನಸ್ಥಿತಿಯೂ ಉತ್ತಮವಾಗಿರುವುದು. ಅದೇ ಚಂದ್ರನು ದುರ್ಬಲನಾಗಿದ್ದರೆ ವ್ಯಕ್ತಿಯ ಮನಸ್ಸು ದುರ್ಬಲವಾಗಿರುವುದು.

ಸಪ್ತಗ್ರಹರು:

ಜಾತಕಾವಲೋಕನವು ವ್ಯಕ್ತಿಯ ಸಮಗ್ರ ಚಿತ್ರಣವನ್ನು ತೆರೆದಿಡುವುದು. ಉದಾಹರಣೆಗೆ ನಾವಾಡುವ ಮಾತು ಬಿರುಸಾಗಿರುವುದೇ ಅಥವಾ ಮೃದುವಾಗಿರುವುದೇ ಹೀಗೆ ಮಾತಿನ ವೈಖರಿ, ಸಂವಹನಾ ಕಲೆ, ಅಂತರಂಗದ ಶುದ್ಧತೆ, ಕಾರ್ಯಕ್ಷೇತ್ರದ ವಿಚಾರ ಹೀಗೆ ಎಲ್ಲಾ ವಿಚಾರವನ್ನು ತಿಳಿಸುವುದು. ಆದ ಕಾರಣ ಹುಡುಗ ಹುಡುಗಿಯ ಜಾತಕ ಪರಿಶೀಲಿಸುವಾಗ ಜಾತಕದಲ್ಲಿ ಸಪ್ತಗ್ರಹರು 12 ಭಾವಗಳು ಪ್ರಾಧಾನ್ಯತೆ ಪಡೆಯುವುದರಿಂದ ಪ್ರತಿಯೊಂದು ಗ್ರಹಕ್ಕೂ ಗುಣಗಳನ್ನು ಅವಲೋಕಿಸಿ ಜಾತಕ ವಿಮರ್ಷಿಸಿದಾಗ ಜೀವನದ ಯಾವ ಕ್ಷೇತ್ರಗಳಲ್ಲಿ ಹೊಂದಾಣಿಕೆಯಾಗುವುದು, ಯಾವ ಕ್ಷೇತ್ರಗಳಲ್ಲಿ ಹೊಂದಾಣಿಕೆ ಆಗುವುದಿಲ್ಲ ಎಂದು ತಿಳಿದುಕೊಳ್ಳಬಹುದು.

ಉದಾಹರಣೆಗೆ ಒಂದು ವ್ಯಕ್ತಿಯಲ್ಲಿ ಧರ್ಮಾಚರಣೆಯಲ್ಲಿ ಆಸಕ್ತಿ ಇರಬಹುದು ಮತ್ತೊಂದು ವ್ಯಕ್ತಿಯಲ್ಲಿ ಕಾಮ್ಯಾಸಕ್ತಿ ಅಧಿಕವಾಗಿರಬಹುದು. ಹಾಗಾಗಿ ಮದುವೆ ನಿರ್ಣಯಿಸುವ ಮುನ್ನ ಗುಣಗಳಿಗೆ ಪ್ರಾಧಾನ್ಯತೆ ಕೊಡದೆ ಗುಣಗಳಿಗಿಂತಲೂ ಪ್ರಧಾನವಾಗಿರುವ ತತ್ವಗಳ ಮೂಲಕ ಹುಡುಗ ಹುಡುಗಿಯ ಜಾತಕ ವಿಮರ್ಶೆ ಮಾಡಬೇಕಾಗುವುದು. ಇಬ್ಬರ ಜಾತಕಗಳಲ್ಲಿ ಚಂದ್ರನ ಬಲಾಬಲ ತಿಳಿದುಕೊಳ್ಳುವುದು, ಗುಣಗಳನ್ನು ಪ್ರತಿಯೊಂದು ಗ್ರಹಕ್ಕೂ ಅಳವಡಿಸಿ ಜಾತಕ ವಿಮರ್ಷಿಸುವುದು, ತ್ರಿಂಶಾಂಶ ಕುಂಡಲಿಯನ್ನು ಅವಲೋಕಿಸುವುದು. ಹೀಗೆ ಎಲ್ಲಾ ವಿಧಾನಗಳನ್ನು ಅನುಸರಿಸಿ ಹುಡುಗ ಹುಡುಗಿಯ ಜಾತಕ ಹೊಂದಾಣಿಕೆ ಮಾಡಿದರೆ ಸುಖ ಸಂಸಾರಕ್ಕೆ ಬುನಾದಿಯಾಗಿ ಅನೇಕ ಮಹಾ ವ್ಯಕ್ತಿಗಳು ಉದಿಸುವರು. ಆದ ಕಾರಣ ಕೇವಲ ಚಂದ್ರನನ್ನು ಆಧಾರವಾಗಿಟ್ಟು ಕೊಂಡು ಗುಣಗಳನ್ನು ಅವಲೋಕಿಸಿ ಜಾತಕ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿ ಆಗಲಿರುವ ಮದುವೆಗಳನ್ನು ತಪ್ಪಿಸುವ ತಪ್ಪು ಕೆಲಸವೂ ಜ್ಯೋತಿಷಿಗಳಿಂದ ಆಗಬಾರದು. ಕೇವಲ ಗುಣಗಳು ಹೊಂದಿಕೆಯಾಗುವುದಿಲ್ಲ ಅಥವಾ ಕುಜ ದೋಷವಿದೆ ಎಂಬ ಕಾರಣಗಳಿಂದ ನಿಂತು ಹೋಗುವ ಅನೇಕ ವಿವಾಹಗಳಿಗೆ ಅವಕಾಶವಿರುವುದಿಲ್ಲ.


ವಾರಭವಿಷ್ಯ: ಮಾರ್ಚ್ 12ರಿಂದ ಮಾರ್ಚ್ 18ರ ವರೆಗೆ

$
0
0

ಮೇಷ:- ಸಂಘರ್ಷದಿಂದ ದೂರ ಇರುವುದು ಒಳ್ಳೆಯದು. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಉತ್ತಮ ಧನಲಾಭವಾಗಲಿದೆ. ಉದ್ಯೋಗದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರುವುದು. ಮಹಿಳೆಯರು ತಮ್ಮ ಮನಸ್ಸು ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ಹೊಂದಾಣಿಕೆ ಸ್ವಭಾವದಿಂದಾಗಿ ಎಲ್ಲರ ಬೆಂಬಲ ಪಡೆಯುವಿರಿ. ದೈನಂದಿನ ಜೀವನ ಯಥಾಸ್ಥಿತಿ ಆಗಿರುತ್ತದೆ. ನಿಮ್ಮ ನೇರ ಸ್ವಭಾವ ಇತರರಿಗೆ ಇಷ್ಟವಾಗದಿರಬಹುದು. ಸೋಮವಾರ, ಶುಕ್ರವಾರ ದಿನಗಳು ಉತ್ತಮವಾಗಿರುವುದು.

ವೃಷಭ:- ಸತ್ಯಕ್ಕೆ ಯಾವಾಗಲೂ ಜಯ ಎನ್ನುವಂತೆ ಈ ವಾರ ಉತ್ತಮ ಮನಸ್ಸಿನಿಂದ ಮಾಡಿದ ಕಾರ್ಯಗಳಲ್ಲಿ ಜಯ ದೊರೆಯುವುದು. ಮುಖ್ಯ ವಿಚಾರಗಳ ಬಗ್ಗೆ ನಿರ್ಧಾರ ತಳೆಯುವಿರಿ. ಬಂಧುಗಳ ಮನೆಯ ಶುಭ ಕಾರ್ಯದಲ್ಲಿ ಈ ವಾರ ಭಾಗವಹಿಸುವಿರಿ. ಮಗನ ಪ್ರಗತಿ ಉತ್ತಮವಾಗಿದ್ದು ಆತನಿಗೆ ಸಂಬಂಧವನ್ನು ಹೆಣೆಯಲು ಕನ್ಯಾ ಪಿತೃಗಳು ನಿಮ್ಮ ಮನೆಗೆ ಬರುವ ಸಾಧ್ಯತೆಯಿದೆ. ಸ್ನೇಹಿತರು ನಿಮಗೆ ಉತ್ತಮ ಸಲಹೆ ನೀಡುವರು. ಭಾನುವಾರ, ಬುಧವಾರ ಉತ್ತಮ ದಿನಗಳು.

ಮಿಥುನ:- ಕೆಲವು ಕಾರ್ಯಗಳನ್ನು ನೀವೇ ಮಾಡಲಾಗುವುದಿಲ್ಲ. ಆದರೆ ಅವನ್ನು ಇತರೆಯವರಿಗೆ ಹೇಳಿ ಮಾಡಿಸುವಿರಿ. ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಬಳಲಿಕೆಯಾಗುವುದು. ನಿಮ್ಮ ಶ್ರಮಕ್ಕೆ ಮೇಲಧಿಕಾರಿಗಳಿಂದ ಪ್ರೋತ್ಸಾಹ ಸಿಗಲಿದೆ. ಆದಾಯದ ಮೂಲಕ ಹಣವು ಹರಿದು ಬರುವುದು. ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆ ಬೇಡ. ರೈತಾಪಿ ಜನರಿಗೆ ಒತ್ತಡದ ವಾತಾವರಣ ಮೂಡಲಿದೆ. ಬುಧವಾರ ಮತ್ತು ಗುರುವಾರ ಶುಭ ದಿನಗಳು.

ಕಟಕ:- ನಿರುದ್ಯೋಗಿಗಳಿಗೆ ತಾತ್ಕಾಲಿಕವಾಗಿ ನಿರಾಸೆ ಕಾಡಬಹುದು. ಆದರೂ ಚಿಂತಿಸುವ ಕಾರಣವಿಲ್ಲ. ಹಳೆಯ ಗೆಳೆಯರ ಭೇಟಿಯಿಂದ ಮನಸ್ಸಿಗೆ ಸಂತಸ ಸಿಗುವುದು. ಮಡದಿಯ ಸಲಹೆ ಸೂಚನೆಗಳನ್ನು ಸ್ವೀಕರಿಸಿದರೆ ಒಳಿತಾಗುವುದು. ನಿರಂತರ ಕೆಲಸ ಕಾರ್ಯಗಳಿಂದಾಗಿ ದೇಹಾಲಸ್ಯ ಕಂಡುಬರಲಿದೆ. ಆರೋಗ್ಯ ನಿಮಿತ್ತ ಆಸ್ಪತ್ರೆ ಖರ್ಚು ಬರುವ ಸಂಭವವಿದೆ. ಮಂಗಳವಾರ, ಶುಕ್ರವಾರ ದಿನಗಳು ಉತ್ತಮ.

ಸಿಂಹ:- ನಿಮ್ಮ ಮನಸ್ಸನ್ನು ಅರಿಯಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಅನಿರೀಕ್ಷಿತ ನಡಾವಳಿ ಕೆಲವರಿಗೆ ಬೇಸರವನ್ನುಂಟು ಮಾಡುವುದು. ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳುವ ನಿಮಗೆ ಅಚ್ಚರಿಯ ಸುದ್ದಿಯೊಂದು ಕಾದಿರುತ್ತದೆ. ಸ್ವಪ್ರಯತ್ನ ಹಾಗೂ ಶ್ರಮ ನಿಮ್ಮ ಯಶಸ್ಸಿನ ಮೆಟ್ಟಿಲು. ಮಕ್ಕಳಿಂದ ಮಾನಸಿಕ ನೆಮ್ಮದಿ ಪಡೆಯುವಿರಿ. ಮಿತ್ರರ ಹಾಗೂ ಪಾಲುದಾರರ ಸಹಕಾರ, ಮನೆಯಲ್ಲಿ ಮಂಗಳ ಕಾರ್ಯ ನಿಶ್ಚಯವಾಗಲಿದೆ. ಬುಧವಾರ, ಗುರುವಾರ ಉತ್ತಮ ದಿನಗಳು.

ಕನ್ಯಾ:- ಮಾಡುವ ಪ್ರಯಾಣಕ್ಕೊಂದು ಇತಿಮಿತಿ ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಈ ವಾರ ನಿಮ್ಮ ಆತ್ಮಬಲ ಹೆಚ್ಚಿದ್ದು ಯಾವುದೇ ಪ್ರಮುಖ ನಿರ್ಧಾರಗಳನ್ನು ಧೈರ್ಯದಿಂದ ತೆಗೆದುಕೊಳ್ಳಬಹುದು. ಸಾಂಸಾರಿಕ ಜೀವನ ತೃಪ್ತಿಕರವಾಗಲಿದೆ. ಮಕ್ಕಳ ಸಹಕಾರದಿಂದ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಲಿದೆ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಬುಧವಾರ ಮತ್ತು ಶನಿವಾರ ದಿನಗಳು ಉತ್ತಮವಾಗಿದೆ.

ತುಲಾ:- ಬಂಧುಗಳೊಡನೆ ಉತ್ತಮ ಬಾಂಧವ್ಯವನ್ನು ಇರಿಸಿಕೊಳ್ಳಿರಿ. ಭೋಜನಕೂಟಗಳಲ್ಲಿ ಹೊಸ ಮಿತ್ರರ ಪರಿಚಯವಾಗಲಿದೆ. ಹೆಂಡತಿಯ ತವರು ಮನೆ ಕಡೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆಸ್ತಿ ಸಂಬಂಧಿ ವಿಷಯಗಳು ವಿವಾದಕ್ಕೆ ತಿರುಗದಂತೆ ನೋಡಿಕೊಳ್ಳಿರಿ. ಗಣ್ಯಾತಿಗಣ್ಯರ ಸಂಪರ್ಕದಿಂದ ನಿಮ್ಮ ಕೆಲಸಗಳು ಸುಗಮವಾಗಲಿವೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುವಿರಿ. ಸೋಮವಾರ, ಶುಕ್ರವಾರ ದಿನಗಳು ಉತ್ತಮವಾಗಲಿದೆ.

ವೃಶ್ಚಿಕ:- ಹಣಕಾಸು ಸಂಸ್ಥೆಗಳಿಂದ ನಿರೀಕ್ಷೆಗೆ ಮೀರಿ ಆದಾಯ ಬರಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭಾಂಶ ನಿರೀಕ್ಷಿಸಬಹುದು. ದುಡುಕುತನಕ್ಕೆ ಅವಕಾಶ ಕೊಡದೆ ತಾಳ್ಮೆಯಿಂದ ವರ್ತಿಸಿ. ಮಹಿಳೆಯರು ಆಡುವ ಮಾತಿನ ಮೇಲೆ ಹಿಡಿತವಿರಲಿ. ಕೃಷಿಕ ಮಿತ್ರರು ಹೊಲ-ಗದ್ದೆಗಳಲ್ಲಿ ಉತ್ತಮ ಫಸಲನ್ನು ಕಾಣುವರು. ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗಾಡುವಿರಿ. ವಿದ್ಯುತ್‌ ಉಪಕರಣಗಳ ಉಪಯೋಗದಲ್ಲಿ ಎಚ್ಚರ ಅಗತ್ಯ. ಮಂಗಳವಾರ, ಗುರುವಾರ ಶುಭ ದಿನಗಳು.

ಧನಸ್ಸು:- ಕುಟುಂಬದ ಸದಸ್ಯರೊಂದಿಗೆ ಧಾರ್ಮಿಕ ಪುಣ್ಯಕ್ಷೇತ್ರಗಳಿಗೆ ದರ್ಶನ ನೀಡುವಿರಿ. ನಿಂತೇ ಹೋಗಿದ್ದ ಕಾರ್ಯಗಳು ನೀವೇ ಅಚ್ಚರಿ ಪಡುವಂತೆ ಸುಲಲಿತವಾಗಿ ಸಾಗಲಿವೆ. ಸಾಮಾಜಿಕವಾಗಿ ಸ್ಥಾನಮಾನ ಹೆಚ್ಚಾಗಲಿದೆ. ಹೊಸ ಆಸ್ತಿ, ನಿವೇಶನ ಖರೀದಿಸುವ ಯೋಚನೆ ಮಾಡುವಿರಿ. ಹಿರಿಯರ ಮಾರ್ಗದರ್ಶನದಂತೆ ನಡೆಯುವುದು ಉತ್ತಮ. ಆಹಾರ-ವಿಹಾರದಲ್ಲಿ ಎಚ್ಚರಿಕೆ ಅಗತ್ಯ. ಕುಲದೇವತಾ ಆರಾಧನೆಯಿಂದ ಒಳಿತಾಗುವುದು. ಗುರುವಾರ, ಶನಿವಾರ ಶುಭ ದಿನಗಳು.

ಮಕರ:- ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗುವುದು. ಬಂಧುಗಳ ಸಹಕಾರ ಸಂಪೂರ್ಣ ದೊರೆಯಲಿದೆ. ಗುಪ್ತ ವಿಷಯಗಳನ್ನು ಎಲ್ಲರೊಂದಿಗೆ ಚರ್ಚೆ ಮಾಡದೆ ಇರುವುದು ಒಳ್ಳೆಯದು. ಸಾಲಗಳು ಕ್ರಮೇಣ ತೀರಲಿವೆ. ಸಂಘರ್ಷದಿಂದ ದೂರ ಉಳಿಯುವುದು ಉತ್ತಮ. ಹೊಂದಾಣಿಕೆ ಸ್ವಭಾವದಿಂದ ಸಮಸ್ಯೆಗಳು ಬಗೆಹರಿಯುವುದು. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ. ಮಂಗಳವಾರ, ಶನಿವಾರ ಉತ್ತಮ ದಿನಗಳು.

ಕುಂಭ:- ಜಗತ್ತು ಪ್ರೇಮಮಯವಾಗಿದೆ. ಪ್ರೀತಿ-ಪ್ರೇಮದಿಂದ ಜಗತ್ತನ್ನು ಗೆಲ್ಲುವಿರಿ. ಆತ್ಮೀಯ ವಾತಾವರಣ ಮನೆಯಲ್ಲಿ ಕಂಡುಬರುವುದು. ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ರಾಜಕೀಯ ಮತ್ತು ನೀವು ಕೆಲಸ ಮಾಡುವ ಸ್ಥಳದಲ್ಲಿ ವಿಶಿಷ್ಟವಾದ ಛಾಪನ್ನು ಮೂಡಿಸುವಿರಿ. ಮನೆ ಕಟ್ಟುವ ಅಥವಾ ಖರೀದಿಸುವ ಯೋಜನೆಗಳಿಗೆ ಚಾಲನೆ ದೊರೆಯುವುದು. ಬುಧವಾರ ಮತ್ತು ಶನಿವಾರ ದಿನಗಳು ಉತ್ತಮವಾಗಿರುತ್ತವೆ.

ಮೀನ:- ಈ ಹಿಂದೆ ಪಟ್ಟ ಶ್ರಮಕ್ಕೆ ಇನ್ನು ಮುಂದೆ ಪ್ರತಿಫಲಗಳು ಗೋಚರಿಸುತ್ತಾ ಹೋಗುವುದು. ಸಾಮರ್ಥ್ಯ‌ಕ್ಕೆ ಅನುಗುಣವಾಗಿ ಕೆಲಸ ಮಾಡುವುದು ಒಳ್ಳೆಯದು. ಕಚೇರಿಯ ಕೆಲಸಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿರಿ. ಸಮಾಜ ಸೇವೆಯಲ್ಲಿ ಸಂತೃಪ್ತಿ ಕಾಣುವಿರಿ. ನೂತನ ದಂಪತಿಗಳಿಗೆ ಉತ್ತಮ ದಿನವಿದೆ. ಉಲ್ಲಾಸದಾಯಕ ವಾರವಾಗಲಿದೆ. ಗುರುವಾರ ಮತ್ತು ಶುಕ್ರವಾರ ದಿನಗಳು ಉತ್ತಮವಾಗಿವೆ.

ದಿನಭವಿಷ್ಯ 16 ಮಾರ್ಚ್ 2017

$
0
0

ಮೇಷ:- ವಿಚಿತ್ರವಾದ ಗೊಂದಲಗಳ ನಡುವೆ ಸಿಕ್ಕಿ ಬೀಳುವ ಸಂದಿಗ್ಧತೆ ಎದುರಾಗಲಿದೆ. ಅದರಿಂದಾಗುವ ಮುಜುಗರವನ್ನು ತಪ್ಪಿಸಿಕೊಳ್ಳಲು ಹೆಣಗಾಡುವಿರಿ. ಆದರೆ ಗುರುವಿನ ಆಶೀರ್ವಾದ ಪಡೆಯಿರಿ. ಮತ್ತು ಗುರುಸ್ತೋತ್ರ ಪಠಿಸಿರಿ, ಒಳಿತಾಗುವುದು.

ವೃಷಭ:- ನಿಮಗೆ ಜನ್ಮದತ್ತವಾಗಿ ಬಂದ ಕೆಲವು ಸಂಗತಿಗಳನ್ನು ಮರೆಮಾಚದಿರಿ. ಅವುಗಳಿಂದ ನಿಮ್ಮ ಕೀರ್ತಿ ಶಿಖರಕ್ಕೆ ಅನುಕೂಲವಾಗುವುದು. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಹಾಗಾಗಿ ನೀವು ನಿಮ್ಮ ಕೀಳರಿಮೆಯಿಂದ ಹೊರಬನ್ನಿರಿ.

ಮಿಥುನ:- ನಿಮ್ಮಲ್ಲಿ ಅನೇಕರು ಬಂಡಾಯದ ಕಹಳೆಯನ್ನು ಊದುವ ತವಕದಲ್ಲಿದ್ದೀರಿ. ಆದರೆ ನಿಮ್ಮವರಿಂದಲೇ ನಿಮಗೆ ಹಿನ್ನಡೆ ಉಂಟಾಗುವುದು. ಹಾಗಾಗಿ ನಿಮಗೆ ಈ ದಿನ ಒಂಟಿತನ ಕಾಣುವುದು.

ಕಟಕ: ಹಿತಶತ್ರುಗಳು ನಿಮ್ಮ ಬಗ್ಗೆ ಅಲ್ಲಸಲ್ಲದ ಅಪವಾದಗಳನ್ನು ಹೇರುವ ಸಾಧ್ಯತೆ ಇದೆ. ಆದರೆ ಅದು ಸುಳ್ಳೆಂದು ಗೊತ್ತಾದಾಗ ಅವರು ನಿಮ್ಮ ಬಳಿ ಕ್ಷ ಮೆಯಾಚಿಸುವ ಪ್ರಸಂಗ ಎದುರಾಗುವುದು.

ಸಿಂಹ:- ಅವಸರದ ನಿರ್ಣಯಗೈದು ತಪ್ಪು ಹಾದಿ ತುಳಿಯದಿರಿ. ಈ ಬಗ್ಗೆ ಹಿರಿಯರ ಮತ್ತು ಅನುಭವಿಕರ ಅನುಭವಗಳನ್ನು ಆಲಿಸಿರಿ. ಆದಾಗ್ಯೂ ಈ ದಿನ ನಿಮಗೆ ಗುರುಕೃಪೆಯಿಂದ ಒಳಿತಾಗುವುದು.

ಕನ್ಯಾ:- ಉತ್ತಮವಾದ ಪುರಸ್ಕಾರವೊಂದು ಒದಗಿ ಬರಲು ಈ ದಿನವು ಪ್ರಶಸ್ತವಾಗಿದೆ. ಇದಕ್ಕೆ ಬಾಳಸಂಗಾತಿಯ ಬೆಂಬಲವೂ ದೊರೆಯಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ಆದರೆ ಇದೆಲ್ಲವನ್ನು ಸ್ವೀಕರಿಸುವ ಸಮಯ ನಿಮಗೆ ಸಿಗದೆ ಹೋಗಬಹುದು.

ತುಲಾ:- ಅನೇಕ ಕೊರತೆಗಳ ಸರಮಾಲೆ ದಿಢೀರನೆ ಎದುರಾಗಬಹುದು. ಆರ್ಥಿಕ ಮುಗ್ಗಟ್ಟಿನ ತೊಂದರೆ ಬೃಹದಾಕಾರವಾಗಿ ಎದುರು ನಿಲ್ಲುವುದು. ಸ್ನೇಹಿತರು ಬಂಧುಗಳು ನಿಮಗೆ ಹಣ ಸಹಾಯ ಮಾಡಬಹುದು. ಆದರೆ ನೀವು ಅವರ ವಿಶ್ವಾಸವನ್ನು ಗಳಿಸಬೇಕಾಗುವುದು.

ವೃಶ್ಚಿಕ:- ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಸಂಕಷ್ಟದ ದಿನ. ನೀವು ಮಾಡದೆ ಇರುವ ತಪ್ಪಿಗೆ ಹೊಣೆಗಾರರಾಗಬೇಕಿದೆ. ಇದರಿಂದ ಹೊರ ಬಂದು ಆಂಜನೇಯ ಸ್ತೋತ್ರ ಪಠಿಸುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಧನಸ್ಸು:- ಕೆಲಸದ ಒತ್ತಡದಿಂದ ಕರ್ತವ್ಯ ನಿರ್ವಹಣೆ ದುಸ್ತರವಾಗುವುದು. ಇದಕ್ಕಾಗಿ ಗುರುವಿನ ಸ್ತೋತ್ರ ಪಠಿಸಿರಿ. ಸಾಧ್ಯವಾದರೆ ಇಂದು ಕಡಲೆಕಾಳನ್ನು ದಾನ ಮಾಡಿರಿ. ಇಲ್ಲವೆ ಹಸುವಿಗೆ ನೀಡಿರಿ. ದೀನದಲಿತರಿಗೆ ಆಹಾರವನ್ನು ನೀಡಿರಿ.

ಮಕರ:- ವ್ಯಾಪಾರ, ವ್ಯವಹಾರದಲ್ಲಿ ನಿರೀಕ್ಷಿತ ಆದಾಯ ಬರುವುದು. ಗುರುಜನ ಮಾನ್ಯರ ಕರೆದು ಆದರ ಆತಿಥ್ಯವನ್ನು ಮಾಡುವಿರಿ. ಗುರುಗಳ ಅನುಗ್ರಹದಿಂದ ಈ ದಿನ ನಿಮಗೆ ಒಳಿತೇ ಆಗುವುದು. ಸಾಂಸಾರಿಕ ಜೀವನ ಉತ್ತಮ ಮಟ್ಟದ್ದಾಗಿರುತ್ತದೆ.

ಕುಂಭ:- ಕೆಲಸದ ಒತ್ತಡದ ಮಧ್ಯೆ ನಿಮ್ಮ ಕೆಲವು ಪ್ರತಿಭಾಯುಕ್ತ ಹವ್ಯಾಸಗಳನ್ನು ಅಲಕ್ಷ ್ಯ ಮಾಡದಿರಿ. ಇಂತಹ ಕೆಲಸಗಳಿಂದ ನೆಮ್ಮದಿ ದೊರೆಯುವುದು. ವಿಷ್ಣು ಸಹಸ್ರನಾಮ ತಪ್ಪದೇ ಪಠಿಸಿರಿ.

ಮೀನ:- ಕಚೇರಿಯ ಕೆಲಸದಲ್ಲಿ ಸಮಯಾವಧಾನದಿಂದ ಉತ್ಕೃಷ್ಟ ಫಲವನ್ನು ಹೊಂದುವಿರಿ. ಇದರಿಂದ ಮೇಲಧಿಕಾರಿಗಳ ಪ್ರಶಂಸೆಗೆ ಕಾರಣೀಭೂತರಾಗುವರು. ಸಹೋದ್ಯೋಗಿಗಳು ಕೂಡಾ ನಿಮ್ಮ ಬಗ್ಗೆ ಮೆಚ್ಚುಗೆಯ ನೋಟವನ್ನು ಹರಿಸುವರು.

ನೀರಜ್‌ಗೆ ಸೇನೆಯಲ್ಲಿ ಕಿರಿಯ ಅಧಿಕಾರಿ ಹುದ್ದೆ

$
0
0

ಹೊಸದಿಲ್ಲಿ: ವಿಶ್ವ ದಾಖಲೆ ಹೊಂದಿರುವ ಭಾರತದ ಏಕೈಕ ಅಥ್ಲೀಟ್‌ ಎಂಬ ಖ್ಯಾತಿ ಗಳಿಸಿರುವ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಸೇನೆಗೆ ಸೇರ್ಪಡೆಯಾಗಿದ್ದು, ರೈತರಾಗಿರುವ ತಮ್ಮ ತಂದೆಗೆ ಆರ್ಥಿಕ ನೆರವು ನೀಡಲು ಬಯಕೆ ವ್ಯಕ್ತಪಡಿಸಿದ್ದಾರೆ.

ಜಾವೆಲೆನ್‌ ಥ್ರೋ ವಿಭಾಗದಲ್ಲಿ ಜೂನಿಯರ್‌ ವಿಶ್ವ ದಾಖಲೆ ಹೊಂದಿರುವ ಚೋಪ್ರಾಅವರನ್ನು ಭಾರತೀಯ ಸೇನೆ ಜೂನಿಯರ್‌ ಅಧಿಕಾರಿಯಾಗಿ ನೇಮಕ ಮಾಡಿಕೊಂಡಿದೆ. ಆದರೆ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌)ಕೇಂದ್ರದಲ್ಲಿನ ರಾಷ್ಟ್ರೀಯ ಶಿಬಿರದಲ್ಲಿನ ತರಬೇತಿಗಾಗಿ ಸದ್ಯ ರಜೆಯಲ್ಲಿದ್ದಾರೆ.

ಮಿಲಿಟರಿ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿರುವ ನೀರಜ್‌ ಚೋಪ್ರಾ, ''ಚಂಢೀಗಡದಲ್ಲಿರುವ ಡಿಎವಿ ಕಾಲೇಜಿನ ನಿತ್ಯದ ತರಗತಿಯಿಂದ ಹೊರಗಿರಬೇಕಾಯಿತು. ಆದರೆ ಪ್ರಸ್ತುತ ದೂರ ಶಿಕ್ಷ ಣದ ಮೂಲಕ ಪದವಿ ಪೂರೈಸಿದ್ದೇನೆ. ಅಲ್ಲದೆ ಕಿರಿಯ ಅಧಿಕಾರಿಯಾಗಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದೇನೆ. ಈ ಕುರಿತು ಎಲ್ಲಾ ಪ್ರಕ್ರಿಯೆಗಳನ್ನು ಕಳೆದ ಡಿಸೆಂಬರ್‌ನಲ್ಲೇ ಪೂರ್ಣಗೊಳಿಸಿದ್ದು, ಹೊಸದಿಲ್ಲಿಯ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದೇನೆ. ಇದೀಗ ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ಜಾವೆಲಿನ್‌ ತರಬೇತಿ ಪಡೆಯುತ್ತಿದ್ದೇನೆ,'' ಎಂದು ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

'ನನ್ನ ತಂದೆ ಓರ್ವ ರೈತ, ತಾಯಿ ಗೃಹಿಣಿ, ನಮ್ಮದು ಅವಿಭಕ್ತ ಕುಟುಂಬ. ಕುಟುಂಬದ ಯಾರೊಬ್ಬರು ಸರಕಾರಿ ಕೆಲಸ ಪಡೆದಿಲ್ಲ. ಆದ್ದರಿಂದ ನನಗೆ ಕೆಲಸ ಸಿಕ್ಕಿರುವುದು ಕುಟುಂಬದ ಪ್ರತಿಯೊಬ್ಬರಲ್ಲೂ ಸಂತಸ ಮೂಡಿಸಿದೆ. ನನಗೂ ಸಹ ಸಂತಸ ತಂದಿದೆ. ತರಬೇತಿಯೊಂದಿಗೆ ನನ್ನ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಈಗ ಎಲ್ಲಾ ರೀತಿಯ ಸಾಮರ್ಥ್ಯ‌ ಹೊಂದಿದ್ದೇನೆ,' ಎಂದು ಹರಿಯಾಣದ ಪಾಣಿಪತ್‌ನ ಖಾಂದ್ರಾ ಗ್ರಾಮದ 19ರ ಹರೆಯದ ನೀರಜ್‌ ಹೇಳಿದ್ದಾರೆ.

2016ರ ಐಎಎಎಫ್‌ ವಿಶ್ವ 20 ವರ್ಷದೊಳಗಿನ ಚಾಂಪಿಯನ್‌ಷಿಪ್‌ನಲ್ಲಿ 86.48ಮೀ. ದೂರ ಜಾವೆಲಿನ್‌ ಎಸೆದ ಚೋಪ್ರಾ, ಹೊಸ ಜೂನಿಯರ್‌ ವಿಶ್ವ ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

ಭಾರತ ತಂಡದಲ್ಲಿ ವಿಕಾಸ್‌, ಶಿವಗೆ ಸ್ಥಾನ

$
0
0

ಹೊಸದಿಲ್ಲಿ: ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ವಿಕಾಸ್‌ ಕೃಷ್ಣನ್‌ (75ಕೆಜಿ) ಮತ್ತು ಶಿವ ಥಾಪ (60ಕೆಜಿ) ಅವರನ್ನೊಳಗೊಂಡಂತೆ ಏಳು ಸದಸ್ಯರ ಭಾರತ ತಂಡ ಏಪ್ರಿಲ್‌ 1ರಿಂದ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಥಾಯ್ಲೆಂಡ್‌ ಅಂತಾರಾಷ್ಟ್ರೀಯ ಬಾಕ್ಸಿಂಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದೆ.

2011ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ವಿಕಾಸ್‌, ಕಳೆದ ವರ್ಷ ನಡೆದ ರಿಯೊ ಒಲಿಂಪಿಕ್ಸ್‌ನ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ ನಂತರ ಮೊದಲ ಬಾರಿ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ.

24 ವರ್ಷದ ಕೃಷ್ಣನ್‌ ಕಳೆದ ವರ್ಷ ಗಾಲಾದಲ್ಲಿ ನಡೆದ ಐಬಾ(ಎಐಬಿಎ) ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಬಾಕ್ಸರ್‌ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಯುಎಸ್‌ಎಯಿಂದ ತವರಿಗೆ ಮರಳಿದ ಬಳಿಕ ಇತ್ತೀಚೆಗೆ ರಾಷ್ಟ್ರೀಯ ಶಿಬಿರಕ್ಕೆ ಸೇರ್ಪೆಡೆಯಾಗಿರುವ ವಿಕಾಸ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ವಿಕಾಸ್‌ ಕಳೆದ ಮೂರು ತಿಂಗಳಿಂದ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.ಅಲ್ಲದೆ ವರ್ಷಾಂತ್ಯದಲ್ಲಿ ವೃತ್ತಿಪರ ಬಾಕ್ಸಿಂಗ್‌ ಮರಳುವ ಇಂಗಿತವನ್ನು ಅವರು ಕೈಬಿಟ್ಟಿದ್ದಾರೆ.

ಮಾಜಿ ಏಷ್ಯನ್‌ ಚಾಂಪಿಯನ್‌ ಚಾಂಪಿಯನ್‌ ಶಿವ ಥಾಪ ಭಾರತದ ಮತ್ತೊಂದು ಭರವಸೆಯಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ಯಾಂಟಮ್‌ವೇಟ್‌ (56ಕೆಜಿ) ವಿಭಾಗ ಕೈಬಿಟ್ಟು ಹೊಸ ವೇಟ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅಸ್ಸಾಂನ ಶಿವ ಥಾಪ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಗೆದ್ದಿದ್ದಾರೆ. ಆದರೆ ಕಳೆದ ತಿಂಗಳು ಬಲ್ಗೇರಿಯಾದಲ್ಲಿ ಜರುಗಿದ 68ನೇ ಸ್ರಾಂದ್ಜಾ ಸ್ಮಾರಕ ಬಾಕ್ಸಿಂಗ್‌ ಟೂರ್ನಿಯ ಮೊದಲ ಸುತ್ತಿನಲ್ಲೇ ಸೋತಿದ್ದು, ಅವರ ಆತ್ಮಸ್ಥೈರ್ಯ ಕುಗ್ಗಿಸಿದೆ ಎನ್ನಲಾಗಿದೆ.

ಇವರಲ್ಲದೆ ಕಾಮನ್‌ವೆಲ್ತ್‌ ಗೇಮ್ಸ್‌ನ ಬೆಳ್ಳಿ ಪದಕ ವಿಜೇತರಾದ ಎಲ್‌. ದೇವೇಂದ್ರೊ ಸಿಂಗ್‌ (52ಕೆಜಿ) ಚೊಚ್ಚಲ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು ನೂತನ ವೇಟ್‌ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಕಿಂಗ್‌ ಕಪ್‌ ಎಂದೇ ಕರೆಯಲ್ಪಡುವ 2015ರ ಟೂರ್ನಿಯಲ್ಲಿ ಚಿನ್ನದ ಸಾಧನೆ ತೋರಿದ ಕೆ. ಶ್ಯಾಮ್‌ ಕುಮಾರ್‌ (49ಕೆಜಿ), ರೋಹಿತ್‌ ಟೋಕಸ್‌ (64ಕೆಜಿ, ) ಮೊಹಮ್ಮದ್‌ ಹುಸಾಮುದ್ದೀನ್‌, ಅನುಭವಿ ಮನೋಜ್‌ ಕುಮಾರ್‌(69ಕೆಜಿ ವೇಲ್ಟರ್‌ವೇಟ್‌) ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಏಪ್ರಿಲ್‌ 1ರಿಂದ 10ರವರೆಗೆ ನಡೆಯಲಿರುವ ಈ ಟೂರ್ನಿಯಲ್ಲಿ 10 ಸಾಂಪ್ರದಾಯಿಕ ವಿಭಾಗಗಳ ಪೈಕಿ ಏಳು ವಿಭಾಗಗಳನ್ನು ಮಾತ್ರ ಪರಿಚಯಿಸಲಾಗಿದೆ.

ಭಾರತ ತಂಡ: ಕೆ. ಶ್ಯಾಮ್‌ ಕುಮಾರ್‌(49ಕೆಜಿ), ಎಲ್‌. ದೇವೇಂದ್ರೊ ಸಿಂಗ್‌ (52ಕೆಜಿ), ಮೊಹಮ್ಮದ್‌ ಹುಸಾಮುದ್ದೀನ್‌ (56ಕೆಜಿ), ಶಿವಥಾಪ (60ಕೆಜಿ), ರೋಹಿತ್‌ ಟೊಕಾಸ್‌(64ಕೆಜಿ), ಮನೋಜ್‌ ಕುಮಾರ್‌ (69ಕೆಜಿ), ವಿಕಾಸ್‌ ಕೃಷ್ಣನ್‌ (75ಕೆಜಿ).

ಚೌರಾಸಿಯಾಗಿ ಇಂಡಿಯನ್‌ ಕಿರೀಟ

$
0
0

ಗುರ್ಗಾಂವ್‌: ಎಸ್‌ಎಸ್‌ಪಿ ಚೌರಾಸಿಯಾ ಹೀರೋ ಇಂಡಿಯನ್‌ ಓಪನ್‌ ಗಾಲ್ಫ್‌ ಚಾಂಪಿಯನ್‌ಷಿಪ್‌ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ದೇಶದ ಎರಡನೇ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೊಸದಾಗಿ ವಿನ್ಯಾಸಗೊಂಡ ಡಿಎಲ್‌ಫ್‌ ಗಾಲ್ಫ್‌ ಕೋರ್ಸ್‌ನಲ್ಲಿ ಮಿಂಚಿದ ಚೌರಾಸಿಯಾ ಏಳು-ಸ್ಟ್ರೋಕ್‌ಗಳ ಜಯದೊಂದಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಮೂರನೇ ದಿನ ಮುಗಿಯುತ್ತಿದ್ತಂತೆ ಸ್ಪೇನ್‌ನ ಕಾರ್ಲೊಸ್‌ ಪಿಜೆಮ್‌ ಹಾಗೂ ಇಂಗ್ಲೆಂಡ್‌ನ ಎಡ್ಡಿ ಪೆಪ್ಪರೆಲ್‌ ಅವರೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದರು. ಆದರೆ ದಿನದಂತ್ಯಕ್ಕೆ 42 ಗಾಲ್ಫರ್‌ಗಳಲ್ಲೇ ಅಗ್ರ ಸ್ಥಾನಿಯಾಗಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು.

'ಪ್ರಶಸ್ತಿ ಗೆದ್ದಿರುವುದು ಖುಷಿ ಕೊಟ್ಟಿದೆ. ಏಕೆಂದರೆ ಇದು ಅತ್ಯಂತ ಕಷ್ಟಕರ ಟರ್ಫ್‌ ಆಗಿದೆ. ಇಲ್ಲಿ ಗೆದ್ದಿರುವುದು ಅದೃಷ್ಟದಿಂದ,' ಎಂದು ಜಯದ ನಂತರ ಚೌರಾಸಿಯಾ ಹೇಳಿದ್ದಾರೆ. ಹೀರೋ ಟ್ರೋಫಿಯೊಂದಿಗೆ ಚೌರಾಸಿಯಾ 1.93 ಕೋಟಿ ರೂ. ನಗದು ಬಹುಮಾನ ಗೆದ್ದುಕೊಂಡರು.

ಜೀವ್‌ ಮಿಲ್ಖಾ ಸಿಂಗ್‌ ಸತತ ನಾಲ್ಕನೇ ಬಾರಿಗೆ ಏಷ್ಯನ್‌ ಟೂರ್‌ ಗೆದ್ದು ಸಾಧನೆ ಮಾಡಿದ್ದರು, ಆ ನಂತರ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಎರಡನೇ ಗಾಲ್ಫರ್‌ ಎಂಬ ಹೆಗ್ಗಳಿಕೆಗೆ ಕೋಲ್ಕೊತಾದ ಚೌರಾಸಿಯಾ ಪಾತ್ರರಾಗಿದ್ದಾರೆ. ಚೌರಾಸಿಯಾ ಪಾಲಿಗೆ ಇದು ಏಷ್ಯನ್‌ ಟೂರ್‌ನಲ್ಲಿ ಆರನೇ ಪ್ರಶಸ್ತಿ, ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆರನೇ ಚಾಂಪಿಯನ್‌ ಪಟ್ಟ ಇದಾಗಿದೆ.

ವೀಸಾ ಸಿಗದ ಭಾರತ ತಂಡ ಟೂರ್ನಿಗೆ ಅಲಭ್ಯ

$
0
0

ಹೊಸದಿಲ್ಲಿ: ನಿಗದಿತ ಸಮಯಕ್ಕೆ ವೀಸಾ ಸಿಗದ ಕಾರಣ ಜರ್ಮನಿಯಲ್ಲಿ ನಡೆಯಲಿರುವ ಕೆಮಿಸ್ಟ್ರಿ ಕಪ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಭಾರತೀಯ ಬಾಕ್ಸರ್‌ಗಳು ಕಳೆದುಕೊಂಡಿದ್ದಾರೆ. ಆದರೆ ಶೀಘ್ರದಲ್ಲೇ ಇದೇ ರೀತಿಯ ಮತ್ತೊಂದು ಟೂರ್ನಿಯಲ್ಲಿ ಭಾಗವಹಿಸಲು ಭಾರತೀಯ ಬಾಕ್ಸರ್‌ಗಳನ್ನು ಕಳುಹಿಸಲಾಗುವುದು ಎಂದು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ಭಾನುವಾರ ಭರವಸೆ ನೀಡಿದೆ.

ಇಬ್ಬರು ಏಷ್ಯನ್‌ ಯೂತ್‌ನ ಪದಕ ವಿಜೇತರು ಸೇರಿದಂತೆ 10 ಸದಸ್ಯರ ಹೊಸ ಭರವಸೆಯ ತಂಡ 44ನೇ ಆವೃತ್ತಿಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾನುವಾರ ರಾತ್ರಿ ಜರ್ಮನಿಯ ಹಾಲೆಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ನಿಗದಿತ ಸಮಯಕ್ಕೆ ವೀಸಾ ದೊರೆಯದ ಕಾರಣ ಪ್ರಯಾಣದ ಕನಸು ಭಗ್ನಗೊಂಡಿದೆ.

'ಈವರೆಗೆ ವೀಸಾ ದೊರೆತಿಲ್ಲ. ಏಕೆಂದರೆ ಷೇಂಗಾನ್‌ಗೆ ವೀಸಾ ಪಡೆಯಲು ವಿಳಂಬವಾಗಿ ಅರ್ಜಿ ಸಲ್ಲಿಸಲಾಗಿತ್ತು. ಹೊಸದಿಲ್ಲಿಯಿಂದಲೇ ಕೇಂದ್ರೀಕೃತ ವೀಸಾ ಪ್ರಕ್ರಿಯೆಯನ್ನು ನಡೆಸಲಾಗಿತ್ತು,ಆದರೆ ವೀಸಾ ದೊರೆತ್ತಿಲ್ಲ' ಎಂದು ಭಾರತೀಯ ಬಾಕ್ಸಿಂಗ್‌ ಸಂಸ್ಥೆಯ ಅಧ್ಯಕ್ಷ ಅಜಯ್‌ ಸಿಂಗ್‌ ತಿಳಿಸಿದ್ದಾರೆ.

ಇದೇ ವೇಳೆ ''ರಾಷ್ಟ್ರೀಯ ರಾಜಧಾನಿಯಿಂದ ಭಾನುವಾರ ಎಲ್ಲಾ ಬಾಕ್ಸರ್‌ಗಳು ತವರಿಗೆ ಹಿಂದಿರುಗಿದ್ದಾರೆ. ಶೀಘ್ರದಲ್ಲಿ ಮತ್ತೊಂದು ಟೂರ್ನಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗುವುದು,'' ಎಂದು ಅವರು ಹೇಳಿದ್ದಾರೆ. ಏಷ್ಯನ್‌ ಯೂತ್‌ ಬೆಳ್ಳಿ ಪದಕ ವಿಜೇತ ಅಂಕುಶ್‌ ದಹಿಯಾ (60ಕೆಜಿ) ಮತ್ತು ರೆಯಲ್‌ ಪುರಿ (81ಕೆಜಿ) ಸೇರಿದಂತೆ 10 ಸದಸ್ಯರನ್ನು ಭಾರತ ತಂಡ ಒಳಗೊಂಡಿತ್ತು. ಕೆಮಿಸ್ಟ್ರಿ ಕಪ್‌ ಇದೇ 13ರಿಂದ 18ರವರೆಗೆ ಜರುಗಲಿದೆ.


ತಾಯ್‌ ತ್ಸು ಯಿಂಗ್‌ ಚಾಂಪಿಯನ್‌

$
0
0

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ | ಲೀ ಚಾಂಗ್‌ ವೈಗೆ ಪುರುಷರ ಸಿಂಗಲ್ಸ್‌ ಗರಿ

ಬರ್ಮಿಂಗ್‌ಹ್ಯಾಮ್‌: ಚೈನೀಸ್‌ ತೈಪೆಯ ಆಟಗಾರ್ತಿ ತಾಯ್‌ ತ್ಸು ಯಿಂಗ್‌ ಇಲ್ಲಿ ಮುಕ್ತಾಯಗೊಂಡ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ವಿಶ್ವದ ನಂ.1 ಆಟಗಾರ್ತಿ 22 ವರ್ಷದ ತಾಯ್‌ ತ್ಸು ಯಿಂಗ್‌, ಭಾನುವಾರ ನಡೆದ ಮಹಿಳಾ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಐದನೇ ಶ್ರೇಯಾಂಕಿತೆ ಥಾಯ್ಲೆಂಡ್‌ನ ಅನುಭವಿ ತಾರೆ ರತ್ಚೊನೊಕ್‌ ಇಂತಾನನ್‌ ಅವರನ್ನು 21-16, 22-20 ಅಂತರದ ನೇರ ಗೇಮ್‌ಗಳಿಂದ ಮಣಿಸಿ ಚೊಚ್ಚಲ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಗೆದ್ದುಕೊಂಡರು. ಈ ಮೂಲಕ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ ಗೆದ್ದ ಚೈನೀಸ್‌ ತೈಪೆಯ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

''ಪ್ರಬಲ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಗೆಲುವು ಸಾಧ್ಯವಾದದ್ದು ಸಂತಸ ನೀಡಿದೆ. ಪಂದ್ಯದಲ್ಲಿ ನಾನು ಹೆಚ್ಚಿನ ತಪ್ಪುಗಳಿಗೆ ಅವಕಾಶ ನೀಡಲಿಲ್ಲ. 2ನೇ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದಾಗಲೆಲ್ಲಾ ಹೋರಾಟ ಬಿಡಬಾರದು ಎಂದು ಆತ್ಮವಿಶ್ವಾಸ ಕಾಯ್ದುಕೊಂಡೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಯಿಂಗ್‌ ತಮ್ಮ ಸಂಭ್ರಮ ಹಂಚಿಕೊಂಡರು.

ಲೀ ಚಾಂಗ್‌ ವೈಗೆ 4ನೇ ಪ್ರಶಸ್ತಿ

ಈಗಾಗಲೆ 2017ರಲ್ಲಿ ನಿವೃತ್ತಿ ಹೊಂದುವುದಾಗಿ ಹೇಳಿಕೊಂಡಿರುವ ವಿಶ್ವದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಮಲೇಷ್ಯಾದ ಲೀ ಜಾಂಗ್‌ ವೈ, ಭಾನುವಾರ ಮುಕ್ತಾಯಗೊಂಡ ಆಲ್‌ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದಾರೆ. ಆದರೆ, ಪ್ರಶಸ್ತಿ ಗೆಲುವಿನ ಬಳಿಕ ಆಲ್‌ ಇಂಗ್ಲೆಂಡ್‌ ಟೂರ್ನಿಗೆ ಮುಂದಿನ ವರ್ಷವೂ ಮರಳುವುದಾಗಿ ಹೇಳಿ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದಿದ್ದಾರೆ.

ಫೈನಲ್‌ ಪಂದ್ಯದಲ್ಲಿ ಮಿಂಚಿದ ಅಗ್ರ ಶ್ರೇಯಾಂಕಿತ ಆಟಗಾರ ಲೀ, 21-12, 21-10 ಅಂತರದ ನೇರ ಗೇಮ್‌ಗಳಿಂದ ಇದೇ ಮೊದಲ ಬಾರಿ ಆಲ್‌ ಇಂಗ್ಲೆಂಡ್‌ನಲ್ಲಿ ಫೈನಲ್‌ ತಲುಪಿದ್ದ ಚೀನಾದ ಆಟಗಾರ ಶಿ ಯೂಕಿ ಅವರನ್ನು ಸುಲಭವಾಗಿ ಮಣಿಸಿ ವೃತ್ತಿ ಜೀವನದ ನಾಲ್ಕನೇ ಆಲ್‌ ಇಂಗ್ಲೆಂಡ್‌ ಟ್ರೋಫಿ ಎತ್ತಿ ಹಿಡಿದರು.

''ಪ್ರತಿ ವರ್ಷ ಇಲ್ಲಿ ಆಡುವಾಗ ನನ್ನ ಮನೆಯಂಗಣದ ಅನುಭವವಾಗುತ್ತದೆ. ಖಂಡಿತವಾಗಿಯೂ ಮುಂದಿನ ವರ್ಷ ಇಲ್ಲಿ ಆಡಲಿದ್ದೇನೆ. ಪ್ರಶಸ್ತಿ ಗೆಲುವು ನನಗೆ ಆಶ್ಚರ್ಯವನ್ನು ತಂದಿದೆ,'' ಎಂದು ಪಂದ್ಯದ ಬಳಿಕ ಮಾತನಾಡಿದ ಲೀ ತಮ್ಮ ಸಂಭ್ರಮ ಹಂಚಿಕೊಂಡರು. ಅಂದಹಾಗೆ ಟೂರ್ನಿಗೂ ಮುನ್ನ ಮಂಡಿ ನೋವಿನ ಗಾಯದ ಸಮಸ್ಯೆಗೆ ತುತ್ತಾಗಿದ್ದ ಲೀ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದೇ ಅನುಮಾನವಾಗಿತ್ತು.

ಇಂಡೋನೇಷ್ಯಾಗೆ ಡಬಲ್ಸ್‌ ಗರಿ

ಪುರುಷರ ಡಬಲ್ಸ್‌ ವಿಭಾಗದಲ್ಲಿ ಇಂಡೋನೇಷ್ಯಾದ ಜೋಡಿ ಪ್ರಶಸ್ತಿ ಗೆದ್ದುಕೊಂಡಿದೆ. ಮಾರ್ಕಸ್‌ ಫೆರ್ನಾಲ್ಡಿ ಹಾಗೂ ಕೆವಿನ್‌ ಸಂಜಯ ಸುಕಮುಲ್ಜಿಯೊ ಜೋಡಿ 21-19, 21-14 ಅಂತರದ ನೇರ ಗೇಮ್‌ಗಳಿಂದ ಚೀನಾದ ಲಿ ಜುನ್ಹುಯ್‌ ಮತ್ತು ಲಿಯು ಯುನ್ಚೆನ್‌ಗೆ ಸೋಲುಣಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿತು. ಮತ್ತೊಂದೆಡೆ ಮಹಿಳಾ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾದ ಚಾಂಗ್‌ ಯೆ ನಾ ಮತ್ತು ಲೀ ಸೋ ಹೀ ಜೋಡಿ 21-18, 21-13 ಅಂತರದ ಗೇಮ್‌ಗಳಿಂದ ಡೆನ್ಮಾರ್ಕ್‌ನ ಕ್ಯಾಮಿಲಾ ರೈಟರ್‌ ಜುಹ್ಲ್‌ ಮತ್ತು ಕ್ರಿಸ್ಟಿನಾ ಪೆಡೆರ್ಸನ್‌ಗೆ ಸೋಲುಣಿಸಿ ಪ್ರಶಸ್ತಿ ಗೆದ್ದಿದೆ.


ನೊವಾಕ್‌, ಫೆಡರರ್‌, ನಡಾಲ್‌ ಮುನ್ನಡೆ

$
0
0

ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿ | ಆ್ಯಂಡಿ ಮರ್ರೆಗೆ ಆಘಾತ

ಇಂಡಿಯನ್‌ ವೆಲ್ಸ್‌: ಆರನೇ ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಚಾಂಪಿಯನ್‌ಷಿಪ್‌ ಗೆಲುವಿನತ್ತ ಕಣ್ಣಿಟ್ಟಿರುವ ವಿಶ್ವದ 2ನೇ ರಾರ‍ಯಂಕ್‌ನ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಕ್‌, ಸಿಂಗಲ್ಸ್‌ ವಿಭಾಗದಲ್ಲಿ 3ನೇ ಸುತ್ತಿಗೆ ದಾಪುಗಾಲಿರಿಸಿದ್ದಾರೆ.

ಟೂರ್ನಿಯಲ್ಲಿ ಎರಡನೇ ಶ್ರೇಯಾಂಕ ಪಡೆದಿದ್ದ ನೊವಾಕ್‌, ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದರು. ಅಂತೆಯೇ ಭಾನುವಾರ ತಡರಾತ್ರಿ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ 6-4, 7-6(7/5) ಅಂತರದ ನೇರ ಸೆಟ್‌ಗಳಿಂದ ಬ್ರಿಟನ್‌ನ ಯುವ ಆಟಗಾರ ಕೈಲ್‌ ಎಡ್ಮಂಡ್‌ ಅವರನ್ನು ಬಗ್ಗುಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಆದರೆ, ಮುಂದಿನ ಪಂದ್ಯದಲ್ಲಿ ನೊವಾಕ್‌ ಕಠಿಣ ಪೈಪೋಟಿ ಎದುರಿಸಲಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ನೊವಾಕ್‌ಗೆ ಆಘಾತ ನೀಡಿದ್ದ ಅರ್ಜೆಂಟೀನಾದ ಆಟಗಾರ ಹಾಗೂ ಮಾಜಿ ಅಮೆರಿಕ ಓಪನ್‌ ಚಾಂಪಿಯನ್‌ ಜುವಾನ್‌ ಮಾರ್ಟಿನ್‌ ಡೆಲ್‌ ಪೋಟ್ರೊ ಮತ್ತೊಮ್ಮೆ ಸರ್ಬಿಯಾದ ಆಟಗಾರನ ಸವಾಲೆದುರಿಸಲಿದ್ದಾರೆ. ಡೆಲ್‌ ಪೋಟ್ರೊ, 2ನೇ ಸುತ್ತಿನಲ್ಲಿ ಸ್ವದೇಶಿ ಮಿತ್ರ ಆಟಗಾರ ಫೆಡೆರಿಕೊ ಡೆಲ್‌ ಬೊನಿಸ್‌ ಅವರನ್ನು 7-6(7/5), 6-3ರಲ್ಲಿ ಮಣಿಸಿದ್ದಾರೆ.

3ನೇ ಸುತ್ತಿಗೆ ಫೆಡರರ್‌, ನಡಾಲ್‌

ಅನುಭವಿ ಆಟಗಾರರಾದ ಸ್ವಿಸ್‌ ಮಾಸ್ಟರ್‌ ರೋಜರ್‌ ಫೆಡರರ್‌ ಮತ್ತು ಸ್ಪೇನ್‌ನ ತಾರೆ ರಾಫೆಲ್‌ ನಡಾಲ್‌ ಸಿಂಗಲ್ಸ್‌ ವಿಭಾಗದಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಆಸ್ಪ್ರೇಲಿಯಾ ಓಪನ್‌ ಚಾಂಪಿಯನ್‌ ಫೆಡರರ್‌, 2ನೇ ಸುತ್ತಿನಲ್ಲಿ 6-2, 6-1 ಅಂತರದ ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಸ್ಟೀಫನ್‌ ರಾಬರ್ಟ್‌ ಅವರನ್ನು ಮಣಿಸಿದರು. ಮತ್ತೊಂದೆಡೆ ಆಸ್ಪ್ರೇಲಿಯಾ ಓಪನ್‌ ರನ್ನರ್‌ಅಪ್‌ ನಡಾಲ್‌, 6-3, 6-2 ಅಂತರದ ನೇರ ಸೆಟ್‌ಗಳಿಂದ ಅರ್ಜೆಂಟೀನಾದ ಗೈಡೊ ಪೆಲ್ಲಾ ಅವರನ್ನು ಬಗ್ಗುಬಡಿದರು.

ಕ್ವಾಲಿಫೈಯರ್‌ಗೆ ಶರಣಾದ ಮರ್ರೆ

ವಿಶ್ವದ ನಂ.1 ಆಟಗಾರ ಬ್ರಿಟನ್‌ನ ಆ್ಯಂಡಿ ಮರ್ರೆ, ಅರ್ಹತಾ ಸುತ್ತಿನ ವಿಜೇತ ಆಟಗಾರ ಕೆನಡಾದ ವಸೆಕ್‌ ಪಾಸ್ಪಿಸಿಲ್‌ ಎದುರು ಮುಗ್ಗರಿಸಿದ್ದರೆ. ಮೊದಲ ಸುತ್ತಿನ ಬೈ ಬಳಿಕ 2ನೇ ಸುತ್ತಿನಲ್ಲಿ ಕಣಕ್ಕಿಳಿದ ಆ್ಯಂಡಿ ಮರ್ರೆ, 4-6, 6-7(7/5) ಅಂತರದ ನೇರ ಸೆಟ್‌ಗಳಿಂದ ವಿಶ್ವದ 129ನೇ ರಾರ‍ಯಂಕ್‌ನ ಆಟಗಾರನಿಗೆ ಶರಣಾದರು. ಆಸ್ಪ್ರೇಲಿಯಾ ಓಪನ್‌ನ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿಯೂ ಮರ್ರೆ, ಇದೇ ರೀತಿಯ ಆಘಾತ ಅನುಭವಿಸಿದ್ದರು.


ಜಯದ ನಿರೀಕ್ಷೆಯಲ್ಲಿ ಬೆಂಗಳೂರು ಎಫ್‌ಸಿ

$
0
0

ಎಎಫ್‌ಸಿ ಕಪ್‌ ಫುಟ್ಬಾಲ್‌ : ಕಂಠೀರವದಲ್ಲಿಂದು ಬಿಎಫ್‌ಸಿ-ಮೋಹನ್‌ ಬಾಗನ್‌ ಪೈಪೋಟಿ

ಬೆಂಗಳೂರು : ಪ್ರಸಕ್ತ ಐ-ಲೀಗ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲಗೊಂಡಿರುವ ಹಾಲಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಎಎಫ್‌ಸಿ ಕಪ್‌ ಫುಟ್ಬಾಲ್‌ ಪಂದ್ಯದಲ್ಲಿ ಐ-ಲೀಗ್‌ ಪ್ರತಿಸ್ಪರ್ಧಿ ಮೋಹನ್‌ ಬಾಗನ್‌ ವಿರುದ್ಧ ಕಣಕ್ಕಿಳಿಯುತ್ತಿದ್ದು, ಗೆಲುವಿನ ಇರಾದೆಯಲ್ಲಿದೆ.

ಇಲ್ಲಿನ ಶ್ರೀಕಂಠೀರವ ಹೋರಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ಅಪ್‌ ಬಿಎಫ್‌ಸಿ ಶುಭಾರಂಭ ಮಾಡುವ ತವಕದಲ್ಲಿದೆ. ಇತ್ತೀಚೆಗಷ್ಟೇ ಐ-ಲೀಗ್‌ನಲ್ಲಿ ಪ್ರಬಲ ಮೋಹನ್‌ ಬಾಗನ್‌ ತಂಡದ ಸವಾಲು ಎದುರಿಸಿದ್ದ ಸುನಿಲ್‌ ಛೆಟ್ರಿ ಬಳಗ ಡ್ರಾ ಮಾಡಿಕೊಳ್ಳಲಷ್ಟೇಶಕ್ತಗೊಂಡಿತ್ತು. ಕಳೆದ ನವೆಂಬರ್‌ನಲ್ಲಿ ದೋಹಾದಲ್ಲಿ ನಡೆದ ಎಎಫ್‌ಸಿ ಕಪ್‌ ಫೈಲ್‌ಗೆ ಲಗ್ಗೆ ಹಾಕುವ ಮೂಲಕ ಇತಿಹಾಸ ನಿರ್ಮಿಸಿದ್ದ ಸುನಿಲ್‌ ಛೆಟ್ರಿ ಬಳಗ ಇರಾಕ್‌ನ ಏರ್‌ ಫೋರ್ಸ್‌ ಕ್ಲಬ್‌ ತಂಡದ ವಿರುದ್ಧ 0-1ರಲ್ಲಿ ಪರಾಭವಗೊಂಡು ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.

ತಂಡದ ಸಾಮರ್ಥ್ಯ‌ ಕುರಿತು ಪ್ರತಿಕ್ರಿಯಿಸಿರುವ ಬಿಎಫ್‌ಸಿ ಕೋಚ್‌ ಅಲ್ಬೆರ್ಟ್‌ ರೋಕಾ, '' ಈ ಟೂರ್ನಿಯಲ್ಲಿ ಕಳೆದ ಬಾರಿ ನಮ್ಮ ತಂಡ ಏನು ಸಾಧನೆ ಮಾಡಿದಿಯೋ ಅದು ವಿಶೇಷ. ಆದರೆ ಇಂದು ನಾವು ಹಿಂದಿನ ಸಾಧನೆಯನ್ನು ನೋಡದೆ ಪಂದ್ಯ ಗೆಲ್ಲುವತ್ತ ಗಮನ ಕೇಂದ್ರಿಕರಿಸಿದ್ದೇವೆ. ಅದರಲ್ಲೂ ಕಳೆದ ಬಾರಿ ಫೈನಲ್‌ ತಲುಪಿರುವುದು ತಂಡದ ಆತ್ಮಬಲವನ್ನು ಹೆಚ್ಚಿಸಿದೆ,'' ಎಂದು ಹೇಳಿದ್ದಾರೆ. ಟೂರ್ನಿಯಲ್ಲೇ ಭಾರತದ ಎರಡು ಪ್ರಮುಖ ಕ್ಲಬ್‌ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಬೆಂಗಳೂರು ಮತ್ತು ಬಾಗನ್‌ ಎದುರಾಗುವ ಮೂಲಕ ಹೊಸದೊಂದು ಇತಿಹಾಸ ನಿರ್ಮಿಸುತ್ತಿವೆ.

ಶನಿವಾರ ಐ-ಲೀಗ್‌ ಪಂದ್ಯದಲ್ಲಿ ಎದುರಾಗಿದ್ದ ಇತ್ತಂಡಗಳು ಗೋಲ್‌ ರಹಿತ ಡ್ರಾ ಮಾಡಿಕೊಂಡಿದ್ದವು. ಇದೀಗ ಮತ್ತೆ ಉಭಯ ತಂಡಗಳು ಗೆಲುವಿನ ಹುಮ್ಮಿಸ್ಸಿನಲ್ಲಿವೆ. ''ಕಳೆದ ಒಂಬುತ್ತು ದಿನಗಳಲ್ಲಿ ನಾವು ಆಡುತ್ತಿರುವ ನಾಲ್ಕನೇ ಪಂದ್ಯ ಇದಾಗಿದೆ. ಇದು ತಂಡಕ್ಕೆ ಸ್ವಲ್ಪ ಕಷ್ಟವಾದರೂ ಇರುವ ಪರಿಸ್ಥಿತಿಯಲ್ಲೇ ಉತ್ತಮ ಪ್ರದರ್ಶನ ನೀಡಬೇಕಿದೆ. ಭಾನುವಾರ ನಮಗೆ ಚೇತರಿಸಿಕೊಳ್ಳುವ ಸಮಯ. ಮಹತ್ವದ ಪಂದ್ಯದಲ್ಲಿ ನಮ್ಮ ಹುಡುಗರು ಹೇಗೆ ಆಡಬೇಕೆಂಬುದರ ಬಗ್ಗೆ ಅರಿವಿದೆ,'' ಎಂದು ರೋಕಾ ಭರವಸೆ ವ್ಯಕ್ತಪಡಿಸಿದ್ದಾರೆ.

ಫಾರ್ಮ್‌ ಇಲ್ಲದ ಬಿಎಫ್‌ಸಿ

ಬೆಂಗಳೂರು ಎಫ್‌ಸಿ ಬಲಿಷ್ಠ ಆಟಗಾರರನ್ನೊಳಗೊಂಡಿದ್ದರು ಕೂಡ ಐ-ಲೀಗ್‌ನಲ್ಲಿ ನೀರಸ ಪ್ರದರ್ಶನ ಮುಂದುವರಿಸಿದೆ. ತಂಡದಲ್ಲಿ ಧನಾತ್ಮಕ ಅಂಶಗಳು ಮೂಡಬೇಕಾದರೆ ಮಂಗಳವಾರದ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಜಾನ್‌ ಜಾನ್ಸನ್‌ ತಂಡಕ್ಕೆ ಮರಳಿರುವುದು ತಂಡದ ಸ್ಥಿರತೆಯನ್ನು ಹೆಚ್ಚಿಸಿದೆಯಾದರೂ ಅದು ಎಷ್ಟರ ಮಟ್ಟಿಗೆ ಫಲಪ್ರದವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಯುವ ಆಟಗಾರ ನಿಶು ಕುಮಾರ್‌ ತಂಡದ ಆಶಾ ಕಿರಣವಾಗಿದ್ದಾರೆ. ಈ ನಡುವೆ ತಂಡದ ಸ್ಟಾರ್‌ ಆಟಗಾರ ಯುಗೆನ್ಸಾನ್‌ ಲಿಂಗ್ಡೋ ಲಯ ಕಂಡುಕೊಳ್ಳುವುದು ತಂಡದ ಅಗತ್ಯ ಸಹ ಆಗಿದೆ.

ಅತ್ತ ಮೋಹನ್‌ ಬಾಗನ್‌ ಸಹ ಆತಿಥೇಯರಿಗೆ ಆಘಾತ ನೀಡಲು ರಣತಂತ್ರ ರೂಪಿಸಿದ್ದಾರೆ. ತಂಡದ ಆಕ್ರಮಣಕಾರಿ ಆಟಗಾರರಾದ ಜೆಜೆ ಲಾಲ್‌ಪೆಖ್ಲುವಾ ಮತ್ತು ಬಲ್ವಂತ್‌ ಸಿಂಗ್‌ ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವ ಗುರಿಯಲ್ಲಿದೆ. ಐ-ಲೀಗ್‌ನಲ್ಲಿ ಬಿಎಫ್‌ಸಿ ವಿರುದ್ಧ ಆಡಿದ ಐದು ಪಂದ್ಯಗಳ ಮುಖಾಮುಖಿ ದಾಖಲೆಯಲ್ಲಿ 3ರಲ್ಲಿ ಗೆಲುವು ದಾಖಲಿಸಿರುವ ಮೋಹನ್‌ ಬಾಗನ್‌, ಎರಡರಲ್ಲಿ ಡ್ರಾ ಮಾಡಿಕೊಂಡಿದೆ.

ಸ್ಥಳ: ಕಂಠೀರವ ಕ್ರೀಡಾಂಗಣ (ಬೆಂಗಳೂರು)

ಪಂದ್ಯಆರಂಭ: ರಾತ್ರಿ 7ಕ್ಕೆ

ಫುಟ್ಬಾಲ್‌ ರಾಣಿ, ಥ್ರೋಬಾಲ್‌ ಕ್ವೀನ್‌

$
0
0

ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಸಬಿಯಾ

ಸೋಮಶೇಖರ್‌ ಪಡುಕರೆ

ಬೆಂಗಳೂರು: ಒಂದು ಕ್ರೀಡೆಯಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುವುದು ಕಷ್ಟ, ಅದರಲ್ಲೂ ಎರಡೂ ಕ್ರೀಡೆಗಳಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಪ್ರತಿಭೆ ಬೆಂಗಳೂರಿನ ಸಬಿಯಾ ಇತರ ಕ್ರೀಡಾ ಸಾಧಕರಿಗೆ ಮಾದರಿ ಎನಿಸಿದ್ದಾರೆ.

ಅಂತಾರಾಷ್ಟ್ರೀಯ ಥ್ರೋಬಾಲ್‌ ತಾರೆ ಸಬಿಯಾ ಭಾರತ ಥ್ರೋ ಬಾಲ್‌ ತಂಡದ ಆಟಗಾರ್ತಿ, ಅದೇ ರೀತಿ ಫುಟ್ಬಾಲ್‌ನಲ್ಲೂ ರಾಜ್ಯಮಟ್ಟದ ಪಂದ್ಯಗಳಲ್ಲಿ ಮಿಂಚಿ ಈಗ ರಾಷ್ಟ್ರ ತಂಡದಲ್ಲಿ ಸ್ಥಾನ ಪಡೆಯುವ ತವಕದಲ್ಲಿದ್ದಾರೆ.

ಬೆಂಗಳೂರಿನ ಎಚ್‌ಎಎಲ್‌ ನಿವಾಸಿ ಸಿಕಂದರ್‌ ಅವರ ಪುತ್ರಿಯಾಗಿರುವ ಸಬಿಯಾ ಜೂನಿಯರ್‌ ಹಂತದಲ್ಲೇ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದವರು. ಶಾಟ್‌ಪುಟ್‌, ಲಾಂಗ್‌ಜಂಪ್‌, ಬ್ಯಾಡ್ಮಿಂಟನ್‌, ಹೈಜಂಪ್‌ ಹೀಗೆ ಪ್ರತಿಯೊಂದು ಕ್ರೀಡೆಯಲ್ಲೂ ಕನಿಷ್ಠ ಬೆಳ್ಳಿ ಪದಕ ಗೆದ್ದಿರುವ ಈ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗದಿರುವುದು ಖೇದಕರ. 15ನೇ ವಯಸ್ಸಿನಲ್ಲೇ ರಾಜ್ಯ ಥ್ರೋಬಾಲ್‌ ತಂಡವನ್ನು ಸೇರಿಕೊಂಡ ಸಬಿಯಾ ಈಗ ಭಾರತ ತಂಡದಲ್ಲಿ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2014ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಬೆಳ್ಳಿ ಗೆಲ್ಲುವಲ್ಲಿ ಸಬಿಯಾ ಅವರ ಪಾತ್ರ ಪ್ರಮುಖವಾಗಿತ್ತು.

ಇಂಡೋ-ಶ್ರೀಲಂಕಾ ಅಂತಾರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಚಾಂಪಿಯನ್‌ಪಟ್ಟ ಗೆದ್ದುಕೊಂಡಿತ್ತು. ಸಬಿಯಾ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ 6 ಪದಕಗಳನ್ನು ಗೆದ್ದಿರುವ ಸಬಿಯಾ, ರಾಷ್ಟ್ರಮಟ್ಟದಲ್ಲಿ ಕರ್ನಾಟಕ ತಂಡ ಎರಡು ಬೆಳ್ಳಿ ಗೆದ್ದಾಗ ಆ ತಂಡದಲ್ಲಿ ಸದಸ್ಯರಾಗಿದ್ದಾರೆ. ವಿಜಯ ಕರ್ನಾಟಕದೊಂದಿಗೆ ಮಾತನಾಡಿದ ಸಬಿಯಾ, 'ಕ್ರೀಡೆ ನನ್ನ ಬದುಕಿಗೆ ಸಾಕಷ್ಟು ನೆರವಾಗಿದೆ. ನಾರಾಯಣ್‌ ಸರ್‌, ನಾಗರಾಜ್‌ ಥ್ರೋಬಾಲ್‌ನಲ್ಲಿ ನೆರವು ನೀಡಿದ್ದಾರೆ. ಮೇರಿ ಮೇಡಂ, ಅರುಣ್‌, ಲಾರೆನ್ಸ್‌ ಹಾಗೂ ಜಾಕೊಬ್‌ ಫುಟ್ಬಾಲ್‌ನಲ್ಲಿ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ಫುಟ್ಬಾಲ್‌ ಹಾಗೂ ಥ್ರೋಬಾಲ್‌ ಎರಡರಲ್ಲೂ ಸಾಧನೆ ಮಾಡಲು ಸಾಧ್ಯವಾಯಿತು. ಸೇಂಟ್‌ ಜೋಸೆಫ್‌ ಕಾಲೇಜು ಆಡಳಿತ ಮಂಡಳಿ ಉತ್ತಮ ಪ್ರೋತ್ಸಾಹ ನೀಡಿದೆ, ಇದರಿಂದ ಶೇ. 70ರಷ್ಟು ಅಂಕ ಗಳಿಸಿ ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು,' ಎಂದರು.

ಮಾಲ್ದೀವ್ಸ್‌, ಥಾಯ್ಲೆಂಡ್‌, ಮಲೇಷ್ಯಾ ಹಾಗೂ ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ಗಳಲ್ಲಿ ಸ್ಪರ್ಧಿಸಿರುವ ಸಬಿಯಾ ಭಾರತ ತಂಡದ ಉತ್ತಮ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೌಲಾಲಂಪುರದಲ್ಲಿ ನಡೆದ ಏಷ್ಯನ್‌ ಜೂನಿಯರ್‌ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ ಸಬಿಯಾ ಅವರ ಆಟವನ್ನು ನೋಡಿ 'ಭಾರತದ ಉದಯೋನ್ಮುಖ ತಾರೆ,' ಎಂಬ ಮೆಚ್ಚುಗೆಗೆ ಪಾತ್ರರಾದರು. ಶ್ರೀಲಂಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಥ್ರೋಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಜಯ ಗಳಿಸಿತ್ತು, ಅದರೊಂದಿಗೆ ಸಬಿಯಾ ಉತ್ತಮ ಥ್ರೋಬಾಲ್‌ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಎರಡರಲ್ಲೂ ಆಡುವೆ: ಸಬಿಯಾ

ಸಬಿಯಾ ಅವರ ಮುಂದೆ ಎರಡು ಕ್ರೀಡೆಗಳಿದ್ದರೂ ಆಯ್ಕೆ ಒಂದೇ ಆಗಿದೆ. ಆದರೆ ಈ ಚಾಂಪಿಯನ್‌ ಎರಡೂ ಕ್ರೀಡೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಆಶಯ ವ್ಯಕ್ತಪಡಿಸಿದ್ದಾರೆ. 'ಥ್ರೋಬಾಲ್‌ನಲ್ಲಿ ಈಗಾಗಲೇ ಭಾರತ ತಂಡದಲ್ಲಿದ್ದೇನೆ. ಫುಟ್ಬಾಲ್‌ನಲ್ಲಿ ಪಳಗಲು ನಿತ್ಯವೂ ಅಭ್ಯಾಸ ನಡೆಸುತ್ತಿದ್ದೇನೆ. ರಾಜ್ಯ ತಂಡದಲ್ಲಿ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ. ಎರಡೂ ಕ್ರೀಡೆಗಳಲ್ಲೂ ತೊಡಗಿಸಿಕೊಂಡು ಸಾಧನೆ ಮಾಡಬೇಕೆಂಬ ಹಂಬಲ,' ಎಂದು ಹೇಳಿದ್ದಾರೆ.

ಆಕೆಯೇ ನಮ್ಮ ಮನೆ ಆಸ್ತಿ

ಸಬಿಯಾ ಅವರ ತಂದೆ ಸಿಖಂದರ್‌ ಟ್ಯೂಷನ್‌ ಕ್ಲಾಸ್‌ಗಳಲ್ಲಿ ಪಾಠ ಮಾಡುತ್ತಾರೆ. ಬಂದ ಹಣದಲ್ಲೇ ಸಂಸಾರವನ್ನು ಸಾಗಿಸುತ್ತಿದ್ದಾರೆ. ಮಗಳನ್ನು ದೇಶದ ಉತ್ತಮ ಕ್ರೀಡಾಪಟುವನ್ನಾಗಿ ಮಾಡಬೇಕೆಂಬುದೇ ಅವರ ಗುರಿ. ''ಟ್ಯೂಷನ್‌ ಮೂಲಕ ಬದುಕು ಸಾಗಿದೆ. ಸಬಿಯಾ ಚಿಕ್ಕಂದಿನಿಂದಲೂ ಸ್ಪರ್ಧಿಸಿದ ಪ್ರತಿಯೊಂದು ಕ್ರೀಡೆಯಲ್ಲೂ ಬಹುಮಾನ ತಂದಿದ್ದಾಳೆ. ಇಂದು ಏಷ್ಯಾದ ಉತ್ತಮ ಥ್ರೋಬಾಲ್‌ ಆಟಗಾರರಲ್ಲಿ ಒಬ್ಬಳು. ಅವಳೇ ನಮ್ಮ ಮನೆಯ ಆಸ್ತಿ. ಕ್ರೀಡೆಯಲ್ಲಿ ಮತ್ತಷ್ಟು ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂಬುದೇ ಹಾರೈಕೆ,'' ಎನ್ನುತ್ತಾರೆ ಸಿಖಂದರ್‌.

ಅಂತಿಮ 8ರ ಘಟ್ಟದಲ್ಲಿ ಎಡವಿ ಬಿದ್ದ ಸಾನಿಯಾ ಜೋಡಿ

$
0
0

ಇಂಡಿಯನ್ ವೇಲ್ಸ್: ಡಬಲ್ಸ್‌ ವಿಭಾಗದಲ್ಲಿನ ಅನುಭವಿ ಆಟಗಾರ್ತಿ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್‌ ಗಣರಾಜ್ಯದ ಜತೆಗಾರ್ತಿ ಬಾರ್ಬೊರಾ ಸ್ಪ್ರೇಕೊವಾ, ಇಲ್ಲಿ ನಡೆಯುತ್ತಿರುವ ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿಯ ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಕ್ವಾರ್ಟರ್‌ ಫೈನಲ್‌ ಹಂತದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದಲೇ ಹೊರನಡೆದಿದ್ದಾರೆ.

ಮಂಗಳವಾರ ನಡೆದ ಅಂತಿಮ ಎಂಟರ ಘಟ್ಟದ ಹೋರಾಟದಲ್ಲಿ ಸಾನಿಯ ಜೋಡಿ ಸ್ವಿಜರ್ಲೆಂಡ್‌ನ ಮಾರ್ಟಿನಾ ಹಿಂಗಿಸ್ ಹಾಗೂ ತೈವಾನ್‌ನ ಯಂಗ್-ಜಾನ್ ಚಾನ್ ವಿರುದ್ಧ 4-6, 4-6ರ ನೇರ ಅಂತರದ ಸೋಲಿಗೆ ಒಳಗಾದರು.

ಇದಕ್ಕೂ ಮೊದಲು ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಸಾನಿಯಾ-ಸ್ಪ್ರೇಕೊವಾ ಜೋಡಿ, 6-2, 6-3 ಅಂತರದ ನೇರ ಸೆಟ್‌ಗಳಿಂದ ಇಟಲಿಯ ಸಾರಾ ಎರಾನಿ ಮತ್ತು ಪೋಲೆಂಡ್‌ನ ಅಲಿಜಾ ರೊಸೊಲ್ಸ್‌ಕಾ ಜೋಡಿಯನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಮುನ್ನುಗ್ಗಿತ್ತು.

ಇದೀಗ ತಮ್ಮ ಮಾಜಿ ಜೊತಗಾರ್ತಿ ಹಿರಿಯ ಅನುಭವಿ ಆಟಗಾರ್ತಿ ಮಾರ್ಟಿನಾ ಹಿಂಗೀಸ್ ಕೈಯಲ್ಲೇ ಸೋಲಿನ ಕಹಿ ಅನುಭವಿಸಿದ್ದಾರೆ.

ಧೋನಿ ತವರಲ್ಲಿ ಮುನ್ನಡೆಗೆ ಹೋರಾಟ

$
0
0

ಇಂದಿನಿಂದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ 3ನೇ ಪಂದ್ಯ | ರಾಂಚಿಗೆ ಚೊಚ್ಚಲ ಟೆಸ್ಟ್‌ ಆತಿಥ್ಯದ ಸಂಭ್ರಮ

ರಾಂಚಿ: ಡಿಆರ್‌ಎಸ್‌ ವಿವಾದಗಳಿಂದ ಸುದ್ದಿಯಾಗಿ ದೊಡ್ಡ ಸದ್ದು ಮಾಡಿದ್ದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯಲ್ಲಿ ಈಗ ಮತ್ತೆ ಮೈದಾನಕ್ಕೆ ಮರಳುವ ಸಮಯ. ಸರಣಿ ಮುನ್ನಡೆಯ ಗುರಿಯೊಂದಿಗೆ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಪ್ರೇಲಿಯಾ ತಂಡಗಳು ಗುರುವಾರ ಧೋನಿ ತವರೂರಿನಲ್ಲಿ ಆರಂಭವಾಗಲಿರುವ 3ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿವೆ.

ಇದೇ ಮೊದಲ ಬಾರಿ ಟೆಸ್ಟ್‌ ಕ್ರಿಕೆಟ್‌ಗೆ ಆತಿಥ್ಯ ವಹಿಸುತ್ತಿರುವ ಸಂಭ್ರಮದಲ್ಲಿರುವ ಜಾರ್ಖಂಡ್‌ ರಾಜ್ಯ ಕ್ರಿಕೆಟ್‌ ಸಂಸ್ಥೆ(ಜೆಎಸ್‌ಸಿಎ) ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸರಣಿಯ 3ನೇ ಪಂದ್ಯ ನಡೆಯಲಿದೆ. ಆರಂಭದ ಎರಡು ಪಂದ್ಯಗಳಲ್ಲಿ ಜಿದ್ದಾಜಿದ್ದಿನ ಹೋರಾಟ ಕಂಡು ಬಂದ ಪರಿಣಾಮ ಸರಣಿ 1-1ರಲ್ಲಿ ಸಮಬಲಗೊಂಡಿದ್ದು, ರಾಂಚಿಯಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ಹೋರಾಡಲಿವೆ.

ಪುಣೆಯಲ್ಲಿ ಆಘಾತ ನೀಡಿದ ಕಾಂಗರೂಗಳಿಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿ ಆತ್ಮವಿಶ್ವಾಸವನ್ನು ಮರಳಿ ಪಡೆದಿರುವ ವಿರಾಟ್‌ ಕೊಹ್ಲಿ ಬಳಗ ರಾಂಚಿಯಲ್ಲಿ ಗೆಲ್ಲುವ ನೆಚ್ಚಿನ ತಂಡ. ಆದರೆ ಅನನುಭವಿಯಾದರೂ ತನ್ನನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವಂತಿಲ್ಲ ಎಂಬುದನ್ನು ಪ್ರವಾಸಿ ಪಡೆ ಸರಣಿಯ ಆರಂಭದಲ್ಲೇ ತೋರಿಸಿಕೊಟ್ಟಿದೆ.

ವಿಜಯ್‌ ಫಿಟ್‌, ಭಾರತಕ್ಕೆ ಆನೆಬಲ

ಭುಜದ ಗಾಯದಿಂದಾಗಿ ಬೆಂಗಳೂರು ಟೆಸ್ಟ್‌ನಿಂದ ಹೊರಗುಳಿದಿದ್ದ ಅನುಭವಿ ಆರಂಭಕಾರ ಮುರಳಿ ವಿಜಯ್‌ ಫಿಟ್‌ ಆಗಿದ್ದು, ರಾಂಚಿಯಲ್ಲಿ ಕೆ.ಎಲ್‌ ರಾಹುಲ್‌ ಜತೆ ಇನಿಂಗ್ಸ್‌ ಆರಂಭಿಸಿದ್ದಾರೆ. ಸರಣಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ 3 ಅರ್ಧಶತಕಗಳೊಂದಿಗೆ ಗರಿಷ್ಠ 215 ರನ್‌ ಕಲೆ ಹಾಕಿರುವ ರಾಹುಲ್‌ ಉತ್ತಮ ಲಯದಲ್ಲಿದ್ದು, 3ನೇ ಟೆಸ್ಟ್‌ನಲ್ಲೂ ಮಿಂಚುವ ವಿಶ್ವಾಸದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ್‌ ಪೂಜಾರ ತಂಡದ ಆಧಾರಸ್ಥಂಭವಾದರೆ, ಅಜಿಂಕ್ಯ ರಹಾನೆ ಫಾರ್ಮ್‌ ಕಂಡುಕೊಂಡಿರುವುದು ತಂಡದ ಪಾಲಿಗೆ ಶುಭ ಸುದ್ದಿ.

ವಿರಾಟ್‌ಗೆ ವೈಫಲ್ಯ ಕೊನೆಗಾಣಿಸುವ ವಿಶ್ವಾಸ

ಸತತ ನಾಲ್ಕು ಟೆಸ್ಟ್‌ ಸರಣಿಗಳಲ್ಲಿ 4 ದ್ವಿಶತಕಗಳೊಂದಿಗೆ ಅಬ್ಬರಿಸಿ ಆಸೀಸ್‌ ವಿರುದ್ಧ ಮುಗ್ಗರಿಸಿರುವ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಧೋನಿ ಮನೆಯಂಗಳದಲ್ಲಿ ಫಾರ್ಮ್‌ ಕಂಡುಕೊಳ್ಳುವ ತವಕದಲ್ಲಿದ್ದಾರೆ. ಆಸೀಸ್‌ ವಿರುದ್ಧ ನಾಲ್ಕು ಇನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ 40 (0, 13, 12, 15) ರನ್‌ ಗಳಿಸಿದ್ದು, ಐಸಿಸಿ ರಾರ‍ಯಂಕಿಂಗ್‌ನಲ್ಲೂ 4ನೇ ಸ್ಥಾನಕ್ಕೆ ಜಾರಿದ್ದಾರೆ. ಬೆಂಗಳೂರು ಟೆಸ್ಟ್‌ನಲ್ಲಿ ಅಮೋಘ ನಾಯಕತ್ವದ ಮೂಲಕ ತಂಡಕ್ಕೆ ಜಯ ತಂದು ಕೊಟ್ಟಿದ್ದ ವಿರಾಟ್‌, ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಬೇಕಿದೆ. ಉಳಿದಂತೆ 2ನೇ ಟೆಸ್ಟ್‌ ಪಂದ್ಯ ಗೆದ್ದ ತಂಡವೇ ರಾಂಚಿಯನ್ನೂ ಕಣಕ್ಕಿಳಿಯುವ ಸಾಧ್ಯತೆಗಳು ಹೆಚ್ಚಿವೆ.

ಸ್ಟಾರ್ಕ್‌ ಇಲ್ಲದೆ ಬಲಗುಂದಿದೆ ಆಸೀಸ್‌

ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಕಾಲಿನ ಗಾಯಕ್ಕೊಳಗಾಗಿ ಸರಣಿಯ ಮಧ್ಯದಲ್ಲೇ ತವರಿಗೆ ವಾಪಸಾಗಿರುವುದು ಆಸ್ಪ್ರೇಲಿಯಾ ತಂಡದ ಶಕ್ತಿ ಕುಂದುವಂತೆ ಮಾಡಿದೆ. ಮೊದಲೆರಡೂ ಟೆಸ್ಟ್‌ಗಳಲ್ಲಿ ಸ್ಟಾರ್ಕ್‌ ತಮ್ಮ ಪ್ರಚಂಡ ದಾಳಿಯಿಂದ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುವಲ್ಲಿ ಯಶಸ್ವಿಯಾಗಿದ್ದರು. ಸ್ಟಾರ್ಕ್‌ ಬದಲು ಬಲಗೈ ಪ್ಯಾಟ್‌ ಕಮಿನ್ಸ್‌ ಕಣಕ್ಕಿಳಿಯಲಿದ್ದಾರೆ. ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಕೂಡ ಗಾಯದ ಕಾರಣ ಹೊರ ಬಿದ್ದಿರುವುದರಿಂದ ಅವರ ಸ್ಥಾನದಲ್ಲಿ ಮತ್ತೊಬ್ಬ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಆಡುವ ಸಾಧ್ಯತೆಗಳಿವೆ.

ಧೋನಿ ಇಲ್ಲದೆ ರಾಂಚಿಯಲ್ಲಿ ಟೆಸ್ಟ್‌

ಕ್ರೀಡೆಯ ವಿಚಾರಕ್ಕೆ ಬಂದಾಗ ಜಾಗತಿಕ ಮಟ್ಟದಲ್ಲಿ ಜಾರ್ಖಂಡ್‌ಗೆ ದೊಡ್ಡ ಹೆಸರು ತಂದು ಕೊಟ್ಟಿರುವುದು ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ. ಕ್ರಿಕೆಟ್‌ ಜಗತ್ತಿನಲ್ಲಿ ಜಾರ್ಖಂಡ್‌ ಹೆಸರನ್ನು ಬಾನೆತ್ತರದಲ್ಲಿ ಬೆಳಗಿದ ಧೋನಿ ಅವರಿಗೆ ತಮ್ಮ ಮನೆಯಂಗಳದಲ್ಲಿ ನಡೆಯುತ್ತಿರುವ ಮೊಟ್ಟ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವ ಭಾಗ್ಯ ಇಲ್ಲ. 2014ರಲ್ಲೇ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಮಾಹಿಗೆ ತವರಿನ ಮೊದಲ ಟೆಸ್ಟ್‌ ಸಂಭ್ರಮದಲ್ಲಿ ಭಾಗಿಯಾಗುವ ಅವಕಾಶವೂ ಇಲ್ಲ. ಏಕೆಂದರೆ ಧೋನಿ ಸಾರಥ್ಯದ ಜಾರ್ಖಂಡ್‌ ತಂಡ ದಿಲ್ಲಿಯಲ್ಲಿ ನಡೆಯುತ್ತಿರುವ ವಿಜಯ್‌ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ ತಲುಪಿದ್ದು, ಈ ಪಂದ್ಯ ಮಾ.17ರಂದು ನಡೆಯಲಿದೆ.

ಪಿಚ್‌ ರಿಪೋರ್ಟ್‌

ಪುಣೆ ಹಾಗೂ ಬೆಂಗಳೂರಿನ ಪಿಚ್‌ಗಳಂತೆ ಜೆಎಸ್‌ಸಿಎ ಮೈದಾನದ ಪಿಚ್‌ನಲ್ಲೂ ಸ್ಪಿನ್ನರ್‌ಗಳ ಮೆರೆದಾಟ ಕಂಡು ಬರುವುದು ಖಚಿತ. ಫ್ಲ್ಯಾಟ್‌ ಪಿಚ್‌ನಲ್ಲಿ ಹಸಿರು ಹುಲ್ಲು ಹಾಸಿನ ಲವಲೇಷವೂ ಕಂಡು ಬರದಿರುವ ಹಿನ್ನೆಲೆಯಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವ ಸಾಧ್ಯತೆಗಳನ್ನು ತೆರೆದಿಟ್ಟಿದೆ.



ತಂಡಗಳ ವಿವರ

ಭಾರತ: ವಿರಾಟ್‌ ಕೊಹ್ಲಿ (ನಾಯಕ), ಮುರಳಿ ವಿಜಯ್‌, ಕೆ.ಎಲ್‌ ರಾಹುಲ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಕರುಣ್‌ ನಾಯರ್‌, ವೃದ್ಧಿಮಾನ್‌ ಸಹಾ (ವಿಕೆಟ್‌ ಕೀಪರ್‌), ರವಿಚಂದ್ರನ್‌ ಅಶ್ವಿನ್‌, ರವೀಂದ್ರ ಜಡೇಜಾ, ಉಮೇಶ್‌ ಯಾದವ್‌, ಇಶಾಂತ್‌ ಶರ್ಮಾ, ಭುವನೇಶ್ವರ್‌ ಕುಮಾರ್‌, ಅಭಿನವ್‌ ಮುಕುಂದ್‌, ಜಯಂತ್‌ ಯಾದವ್‌, ಕುಲ್‌ದೀಪ್‌ ಯಾದವ್‌.

ಆಸ್ಪ್ರೇಲಿಯಾ: ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಮ್ಯಾಟ್‌ ರೆನ್‌ಶಾ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮ್ಯಾಥ್ಯೂ ವೇಡ್‌ (ವಿಕೆಟ್‌ ಕೀಪರ್‌), ಸ್ಟೀವ್‌ ಓ'ಕೀಫ್‌, ನೇಥನ್‌ ಲಯಾನ್‌, ಜೋಶ್‌ ಹೇಜಲ್‌ವುಡ್‌, ಪ್ಯಾಟ್‌ ಕಮಿನ್ಸ್‌, ಉಸ್ಮಾನ್‌ ಖವಾಜ, ಮಾರ್ಕಸ್‌ ಸ್ಟೋಯ್ನಿಸ್‌, ಆ್ಯಶ್ಟನ್‌ ಅಗರ್‌, ಜಾಕ್ಸನ್‌ ಬರ್ಡ್‌, ಮಿಚೆಲ್‌ ಸ್ವೆಪ್ಸನ್‌.


ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ಸ್ಥಳ: ಜೆಎಸ್‌ಸಿಎ ಅಂತಾರಾಷ್ಟ್ರೀಯ ಕ್ರೀಡಾಂಗಣ, ರಾಂಚಿ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌



26

ರಾಂಚಿಯ ಜೆಎಸ್‌ಸಿಎ ಮೈದಾನ ಟೆಸ್ಟ್‌ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿರುವ ಭಾರತದ 26ನೇ ಕ್ರೀಡಾಂಗಣವಾಗಿದೆ.



215

ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ ಬಾರ್ಡರ್‌-ಗವಾಸ್ಕರ್‌ ಸರಣಿಯಲ್ಲಿ ಗರಿಷ್ಠ 215 ರನ್‌ ಗಳಿಸಿದ್ದಾರೆ.



800

ರಾಂಚಿಯಲ್ಲಿ ಕಣಕ್ಕಿಳಿಯುವ ಮೂಲಕ ಆಸ್ಪ್ರೇಲಿಯಾ ತಂಡ ತನ್ನ 800ನೇ ಟೆಸ್ಟ್‌ ಪಂದ್ಯವಾಡಲಿದೆ.



ಕೋಟ್‌

ಬೆಂಗಳೂರು ಟೆಸ್ಟ್‌ನ ಡಿಆರ್‌ಎಸ್‌ ಘಟನೆಯಿಂದ ಎರಡೂ ತಂಡಗಳೂ ಮರೆತಿವೆ. ಆಟಕ್ಕೆನಮ್ಮ ಮೊದಲ ಆದ್ಯತೆ. ಉತ್ತಮ ಆಟವನ್ನು ಮುಂದುವರಿಸುವ ಮೂಲಕ ಸರಣಿಯಲ್ಲಿ ಮುನ್ನಡೆ ಗಳಿಸುವ ಗುರಿ ನಮ್ಮದು.

- ವಿರಾಟ್‌ ಕೊಹ್ಲಿ, ಭಾರತ ತಂಡದ ನಾಯಕ

285 ಕೋಟಿಯ ಆಟ ಆರಂಭ

$
0
0

ಅಂತಾರಾಷ್ಟ್ರೀಯ ಪದಕ ಗೆದ್ದವರಿಗೆ ಉದ್ಯೋಗ | ಮರೆತೇ ಹೋದರು ತರಬೇತುದಾರರು

ಬೆಂಗಳೂರು: 2017-18ನೇ ಬಜೆಟ್‌ನಲ್ಲಿ ರಾಜ್ಯ ಸರಕಾರ ಯುವಜನ ಸೇವೆ ಮತ್ತು ಕ್ರೀಡೆಗಾಗಿ 285 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನದಲ್ಲಿ ಏರಿಕೆ, ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಉದ್ಯೋಗ, ಮಾಜಿ ಕ್ರೀಡಾಪಟುಗಳಿಗೆ ಹೆಚ್ಚಿದ ಮಾಸಾಶನ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರಲು ಪೂರ್ವಾರ್ಹತೆ ಪಡೆದ 1000 ಕ್ರೀಡಾಪಟುಗಳಿಗೆ ಆರ್ಥಿಕ ನೆರವು ನೀಡಿರುವುದು ಈ ಬಾರಿಯ ಕ್ರೀಡಾ ಬಜೆಟ್‌ನ ಹೈಲೈಟ್ಸ್‌.

ಸಾಮಾನ್ಯ ಕ್ರೀಡಾಪಟುಗಳಂತೆ ರಾಜ್ಯ ಸರಕಾರ ವಿಕಲಚೇತನ ಕ್ರೀಡಾಪಟುಗಳಿಗೂ ಉತ್ತಮ ರೀತಿಯಲ್ಲಿ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಅದೇ ರೀತಿ ಈ ಬಾರಿಯೂ ಪ್ಯಾರಾ ಅಥ್ಲೀಟ್‌ಗಳಿಗೆ ಉತ್ತಮ ಕ್ರೀಡಾ ಸೌಕರ್ಯವನ್ನು ಒದಗಿಸುವುದಕ್ಕಾಗಿ 2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ನಾಲ್ಕು ಕ್ರೀಡಾ ಅಕಾಡೆಮಿ

ತಲಾ 1 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ವಿದ್ಯಾನಗರಿಯಲ್ಲಿ ಬಾಸ್ಕೆಟ್‌ಬಾಲ್‌ ಅಂಗಣ, ಉಡುಪಿಯಲ್ಲಿ ಈಜುಕೊಳ, ಮೈಸೂರಿನಲ್ಲಿ ಟೆನಿಸ್‌ ಕೋರ್ಟ್‌, ಚಿತ್ರದುರ್ಗದಲ್ಲಿ ಸ್ಪೋರ್ಟ್‌ ಕ್ಲೈಂಬಿಂಗ್‌ ಅಕಾಡೆಮಿಗಳನ್ನು ಸ್ಥಾಪಿಸಲಾಗುವುದು. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಬ್ಯಾಡ್ಮಿಂಟನ್‌ ಮತ್ತು ಗಾಲ್ಫ್‌ ಅಕಾಡೆಮಿ ಸ್ಥಾಪಿಸಲೂ ತೀರ್ಮಾನಿಸಲಾಗಿದೆ. ಮೈಸೂರಿನ ವರುಣಾ ಕೆರೆಯಲ್ಲಿ ಜಲಕ್ರೀಡಾ ಕೇಂದ್ರವನ್ನು ಅಭಿವೃದ್ಧಿಪಡಿಸಲು 5 ಕೋಟಿ ರೂ.ಗಳ ಅನುದಾವನ್ನು ನೀಡಲಾಗುತ್ತದೆ.

ಕ್ರೀಡಾ ವಿಜ್ಞಾನ ಕೇಂದ್ರ

ಕ್ರೀಡಾ ಸಾಧನೆ ಉತ್ತಮಗೊಳ್ಳಬೇಕಾದರೆ ಸ್ಪೋರ್ಟ್ಸ್ ಸೈನ್ಸ್‌ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ 2 ಕೋಟಿ ರೂ. ವೆಚ್ಚದಲ್ಲಿ ಎರಡು ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಿದೆ.

ಕ್ರೀಡಾ ಪ್ರವರ್ತಕರಿಗೆ ಪ್ರಶಸ್ತಿ

ರಾಜ್ಯದಲ್ಲಿ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸಿ, ಕ್ರೀಡಾಪಟುಗಳನ್ನು ಹುಟ್ಟುಹಾಕುತ್ತಿರುವ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ಪ್ರೋತ್ಸಾಹಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದ 10 ಮಂದಿ ಕ್ರೀಡಾ ಪ್ರವರ್ತಕರನ್ನು ಗುರುತಿಸಿ ತಲಾ 5 ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುವ 'ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ'ಯನ್ನು ಪ್ರತಿಷ್ಠಾಪಿಸಲಾಗವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ.

ಬಜೆಟ್‌ನ ಪ್ರಮುಖ ಅಂಶಗಳು

* ಪ್ರತಿಭಾನ್ವಿತ 1000 ಕ್ರೀಡಾಪಟುಗಳಿಗೆ ನೆರವು ನೀಡಲು 10 ಕೋಟಿ ರೂ. ಮೀಸಲು. ಪ್ರತಿ ಕ್ರೀಡಾಪಟುವಿಗೆ ತಲಾ 1 ಲಕ್ಷ ರೂ.

* ನಾಲ್ಕು ವಿದ್ಯಾರ್ಥಿ ನಿಲಯಗಳಲ್ಲಿ 8 ಕೋಟಿ ರೂ. ವೆಚ್ಚದಲ್ಲಿ 4 ವ್ಯಾಯಾಮ ಶಾಲೆ.

* ಮಹಿಳೆಯರಿಗಾಗಿ 1 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಕ್ರೀಡಾ ವಿದ್ಯಾರ್ಥಿ ನಿಲಯಗಳ ಸೌಲಭ್ಯ

* ಬೆಳಗಾವಿ ಮತ್ತು ಮೈಸೂರಿನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಜಿಮ್ನಾಸ್ಟಿಕ್‌ ಸೌಲಭ್ಯ

* ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದವರಿಗೆ ಸರಕಾರದ ಇಲಾಖೆಯಲ್ಲಿ 'ಎ' ಗ್ರೂಪ್‌ ಹುದ್ದೆ

* ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದವರಿಗೆ 'ಬಿ' ಗ್ರೂಪ್‌ ಹುದ್ದೆ

* ತಾಲೂಕು ಕ್ರೀಡಾಂಗಣಗಳ ಕಾಮಗಾರಿ ಪೂರ್ಣಗೊಳಿಸಲು 20 ಕೋಟಿ ರೂ. ಮೀಸಲು

* ಗ್ರಾಮೀಣ ಪ್ರದೇಶದಲ್ಲಿ 'ಯುವ ಚೈತನ್ಯ' ಯೋಜನೆ, ಪ್ರತಿಯೊಂದು ಗ್ರಾಮ ಪಂಚಾಯತ್‌ನಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾ ಸಾಮಗ್ರಿ ಹಾಗೂ ಫಿಟ್ನೆಸ್‌ ಸಲಕರಣೆ. ಅದಕ್ಕಾಗಿ 20 ಕೋಟಿ ರೂ. ಹಂಚಿಕೆ.

* ಯುವ ಸಂಘಟನೆಗಳಿಗೆ ಅನುದಾನ ಹಂಚಿಕೆ ಮಾಡಲು 5 ಕೋಟಿ ರೂ. ಮೀಸಲು

* ಕ್ರೀಡಾಪಟುಗಳ ಸ್ವವಿವರ ಸಂಗ್ರಹಿಸಲು 1 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಐಟಿ ಕೋಶ್‌ ಸ್ಥಾಪನೆ

* ಮಾಜಿ ಕುಸ್ತಿಪಟುಗಳ ಮಾಸಾಶನ 1500 ರಿಂದ 2500 ರೂ.ಗಳಿಗೆ ಏರಿಕೆ. 2000ದಿಂದ 3000 ಹಾಗೂ 3000ದಿಂದ 4000ಕ್ಕೆ ಏರಿಕೆ.



ಕೋಟ್ಸ್‌

ಒಲಿಂಪಿಕ್ಸ್‌, ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಉದ್ಯೋಗದ ಭರವಸೆ ನೀಡಿರುವುದು ಸ್ವಾಗತಾರ್ಹ. ಬಜೆಟ್‌ನಲ್ಲಿ ಮೀಸಲಿಟ್ಟಿರುವ ಹಣ ಅದರ ಉದ್ದೇಶಕ್ಕೆ ವಿನಿಯೋಗವಾದರೆ ಉತ್ತಮ. ತರಬೇತುದಾರರಿಗೆ ಯಾವುದೇ ರೀತಿಯ ನೆರವು ಘೋಷಿಸದಿರುವುದು ಖೇದಕರ.

- ಡಾ. ಎಂ.ಪಿ ಗಣೇಶ್‌

ಭಾರತ ಹಾಕಿ ತಂಡದ ಮಾಜಿ ನಾಯಕ



ಕ್ರೀಡಾ ಬಜೆಟ್‌ ಕ್ರೀಡಾಭಿವೃದ್ಧಿಗೆ ಪೂರಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಚಟುವಟಿಕೆಗಾಗಿ ಗ್ರಾಮ ಪಂಚಾಯತ್‌ಗಳಿಗೆ ತಲಾ 1 ಲಕ್ಷ ರೂ.ಗಳನ್ನು ನೀಡಿರುವುದು ಸ್ವಾಗತಾರ್ಹ. ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಪದಕ ಗೆದ್ದವರಿಗೆ ಉದ್ಯೋಗ ನೀಡುತ್ತಿರುವುದು ಉತ್ತಮ ಬೆಳವಣಿಗೆ.

- ಬಿ.ಸಿ. ರಮೇಶ್‌

ಭಾರತ ಕಬಡ್ಡಿ ತಂಡದ ಮಾಜಿ ನಾಯಕ



ಕ್ರೀಡಾ ಅಕಾಡೆಮಿಗಳನ್ನು ಸ್ಥಾಪಿಸಲು ಸರಕಾರ ತೀರ್ಮಾನಿಸಿರುವುದು, ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾಭಿವೃದ್ಧಿಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ.

- ಕೆ.ಸತ್ಯನಾರಾಯಣ

ರಾಷ್ಟ್ರೀಯ ಪ್ಯಾರಾಲಿಂಪಿಕ್‌ ತರಬೇತುದಾರರು



ಇದುವರೆಗೂ ಪ್ಯಾರಾ ಅಥ್ಲೀಟ್‌ಗಳಿಗೆ ಬಜೆಟ್‌ನಲ್ಲಿ ಯಾವುದೇ ರೀತಿಯ ಅನುದಾನ ಪ್ರಕಟವಾಗುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿ ವಿಕಲಚೇತನರ ಕ್ರೀಡೆಗೆ 4 ಕೋಟಿ ರೂ. ಮೀಸಲಿಡಲಾಗಿದೆ. ಸರಕಾರದ ಈ ಹೆಜ್ಜೆ ಸ್ವಾಗತಾರ್ಹ.

- ಎಂ. ಮಹಾದೇವ್‌

ಕರ್ನಾಟಕ ರಾಜ್ಯ ಅಂಗವಿಕಲ ಕ್ರೀಡಾ ಸಂಸ್ಥೆಯ ಅಧ್ಯಕ್ಷ

ಇಂಡಿಯನ್ಸ್ ವೇಲ್ಸ್: ನಡಾಲ್ ಮಣಿಸಿದ ಫೆಡರರ್ 8ರ ಹಂತಕ್ಕೆ

$
0
0

ಇಂಡಿಯನ್ಸ್ ವೇಲ್ಸ್: ಇಲ್ಲಿ ಸಾಗುತ್ತಿರುವ ಎಟಿಪಿ ಇಂಡಿಯನ್ ವೇಲ್ಸ್ ಮಾಸ್ಟರ್ಸ್ಟ್ ಟೆನಿಸ್ ಟೂರ್ನಮೆಂಟ್‌ನ ಪುರುಷ ಸಿಂಗಲ್ಸ್ ವಿಭಾಗದಲ್ಲಿ ಸ್ಪೇನ್‌ನ ರಾಫೆಲ್ ನಡಾಲ್ ಅವರನ್ನು ಮಣಿಸಿರುವ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪ್ರಿ ಕ್ವಾರ್ಟರ್ ಹಣಾಹಣಿಯಲ್ಲಿ ನಡಾಲ್ ಅವರನ್ನು 6-2, 6-3 ನೇರ ಅಂತರದಲ್ಲಿ ಮಣಿಸುವ ಮೂಲಕ ಅಂತಿಮ ಎಂಟರ ಘಟ್ಟಕ್ಕೆ ಫೆಡರರ್ ಮುನ್ನಡೆದರು.

ಫೆಡರರ್ ಹಾಗೂ ನಡಾಲ್ ನಡುವಣ ಹಣಾಹಣಿಯನ್ನು ಇಡೀ ಟೆನಿಸ್ ಲೋಕ ಬಹಳ ಉತ್ಸುಕತೆಯಿಂದ ಎದುರು ನೋಡುತ್ತಿತ್ತು. ಇದೀಗ 36ನೇ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ಇವರಿಬ್ಬರು ಪರಸ್ಪರ ಮುಖಾಮುಖಿಯಾಗಿದ್ದಾರೆ. ಇದರಂತೆ ಆಸ್ಟ್ರೇಲಿಯಾ ಓಪನ್ ಫೈನಲ್ ಫಲಿತಾಂಶವನ್ನು ಮರುಕಳಿಸುವಲ್ಲಿ ಫೆಡರರ್ ಯಶಸ್ವಿಯಾಗಿದ್ದಾರೆ.

ಟೆನಿಸ್ ಕೋರ್ಟ್‌ನಲ್ಲಿ ತನ್ನ ನೆಚ್ಚಿನ ವೈರಿ ನಡಾಲ್ ಅವರನ್ನು ಕೇವಲ 68 ನಿಮಿಷಗಳ ಹೋರಾಟದಲ್ಲಿ ಹಿರಿಯ ಅನುಭವಿ ಆಟಗಾರ ಫೆಡರರ್ ಗೆಲುವು ದಾಖಲಿಸಿದರು. ಮುಂದಿನ ಸೆಮಿಗಾಗಿನ ಹೋರಾಟದಲ್ಲಿ ನಿಕ್ ಕೈರ್‌ಗೈಯೊಸ್ ಸವಾಲನ್ನು ಫೆಡರರ್ ಎದುರಿಸಲಿದ್ದಾರೆ. ಮಗದೊಂದು ಹೋರಾಟದಲ್ಲಿ ಐದು ಬಾರಿಯ ಇಂಡಿಯನ್ ವೇಲ್ಸ್ ಚಾಂಪಿಯನ್ ನೊವಾಕ್ ಜೊಕೊವಿಚ್ ಅವರನ್ನು 6-4, 7-6 (7/3)ರ ಕಠಿಣ ಅಂತರದಲ್ಲಿ ನಿಕ್ ಮಣಿಸಿದ್ದರು.

2004ನೇ ಇಸವಿಯಲ್ಲಿ ಚೊಚ್ಚಲ ಬಾರಿಗೆ ಎದುರಾದ ಬಳಿಕ ಇದೇ ಮೊದಲ ಬಾರಿಗೆ ಕ್ವಾರ್ಟರ್ ಹಂತಕ್ಕಿಂತಲೂ ಮೊದಲು ಫೆಡರರ್ ಹಾಗೂ ನಡಾಲ್ ಪರಸ್ಪರ ಮುಖಾಮುಖಿಯಾಗಿದ್ದಾರೆ.


ನೊವಾಕ್‌ಗೆ ಮತ್ತೆ ಕಿರಿಯೋಸ್‌ ಶಾಕ್‌

$
0
0

ಇಂಡಿಯನ್ಸ್‌ ವೆಲ್ಸ್‌ ಮಾಸ್ಟರ್ಸ್‌ ಟೆನಿಸ್‌ | ಫೆಡರರ್‌ಗೆ ಶರಣಾದ ನಡಾಲ್‌

ಇಂಡಿಯನ್‌ ವೆಲ್ಸ್‌: ಹಾಲಿ ಚಾಂಪಿಯನ್‌ ಹಾಗೂ ವಿಶ್ವದ 2ನೇ ರಾರ‍ಯಂಕ್‌ನ ಆಟಗಾರ ನೊವಾಕ್‌ ಜೊಕೊವಿಕ್‌, ಇಲ್ಲಿ ನಡೆಯುತ್ತಿರುವ ಇಂಡಿಯನ್‌ ವೆಲ್ಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.

ಇಲ್ಲಿನ ಇಂಡಿಯನ್‌ ವೆಲ್ಸ್‌ ಟೆನಿಸ್‌ ಗಾರ್ಡನ್‌ನಲ್ಲಿ ಗುರುವಾರ ನಡೆದ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ತಮ್ಮ ಲಯ ಕಂಡುಕೊಳ್ಳಲು ಪರದಾಡಿದ ನೊವಾಕ್‌, 4-6, 6-7(3/7) ಅಂತರದ ನೇರ ಸೆಟ್‌ಗಳ ಅಂತರದಲ್ಲಿ ಆಸ್ಪ್ರೇಲಿಯಾದ 21 ವರ್ಷದ ಆಟಗಾರ ನಿಕ್‌ ಕಿರಿಯೋಸ್‌ ಅಬ್ಬರಕ್ಕೆ ತಲೆ ಬಾಗಿದರು. ಇದರೊಂದಿಗೆ ಮಾಸ್ಟರ್ಸ್‌ ಟೂರ್ನಿಗಳಲ್ಲಿ ನೊವಾಕ್‌ ಅವರ ಸತತ 19 ಪಂದ್ಯಗಳ ಗೆಲುವಿನ ಓಟ ಅಂತ್ಯಗೊಂಡಿದೆ. 2017ರ ಸಾಲಿನ ಮೊದಲ ಮಾಸ್ಟರ್ಸ್‌ ಟೂರ್ನಿ ಇದಾಗಿದೆ.

ಇತ್ತೀಚೆಗಷ್ಟೇ ಅಂತ್ಯಗೊಂಡಿದ್ದ ಮೆಕ್ಸಿಕನ್‌ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಐದು ಬಾರಿಯ ಇಂಡಿಯನ್‌ ವೆಲ್ಸ್‌ ಚಾಂಪಿಯನ್‌ ನೊವಾಕ್‌, ನೇರ ಸೆಟ್‌ಗಳ ಅಂತರದಲ್ಲಿ ಕಿರಿಯೋಸ್‌ ಎದುರು ಮುಗ್ಗರಿಸಿದ್ದರು. ಇದೀಗ ಮತ್ತೊಮ್ಮೆ ಆಸೀಸ್‌ ಆಟಗಾರನ ಸವಾಲು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಮೆಕ್ಸಿಕೊ ಓಪನ್‌ನಲ್ಲಿ 25 ಏಸ್‌ಗಳನ್ನು ಸಿಡಿಸಿ ನೊವಾಕ್‌ಗೆ ಶಾಕ್‌ ನೀಡಿದ್ದ ಕಿರಿಯೋಸ್‌, ಇಂಡಿಯನ್‌ ವೆಲ್ಸ್‌ ಅಂಗಣದಲ್ಲಿ 14 ಏಸ್‌ಗಳೊಂದಿಗೆ ಸತತ ಎರಡನೇ ಸೋಲುಣಿಸಿದ್ದಾರೆ.

ವಿಶ್ವದ ದಿಗ್ಗಜ ಆಟಗಾರರಾದ ಫೆಡರರ್‌, ನಡಾಲ್‌, ನೊವಾಕ್‌, ಆ್ಯಂಡಿ ಮರ್ರೆ ಹಾಗೂ ಸ್ಟ್ಯಾನಿಸ್ಲಾಸ್‌ ವಾವ್ರಿಂಕಾ ಎಲ್ಲರ ವಿರುದ್ಧವೂ ಜಯ ದಾಖಲಿಸಿದ ಅತ್ಯಂತ ಕಿರಿಯ ಆಟಗಾರನೆನಿಸಿರುವ ಕಿರಿಯೋಸ್‌, ಫೈನಲ್‌ ಅರ್ಹತೆಗಾಗಿ 18 ಗ್ರ್ಯಾನ್‌ ಸ್ಪ್ಯಾಮ್‌ಗಳ ಚಾಂಪಿಯನ್‌ ರೋಜರ್‌ ಫೆಡರರ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

ರೋಜರ್‌ ಫೆಡರರ್‌ ಅಬ್ಬರ

ಆಸ್ಪ್ರೇಲಿಯಾ ಓಪನ್‌ ಫೈನಲ್‌ನಲ್ಲಿ ರಾಫೆಲ್‌ ನಡಾಲ್‌ರನ್ನು ಮಣಿಸಿ 18ನೇ ಗ್ರ್ಯಾನ್‌ ಸ್ಪ್ಯಾಮ್‌ ಪ್ರಶಸ್ತಿ ಗೆದ್ದ ರೋಜರ್‌ ಫೆಡರರ್‌, ಮತ್ತೊಮ್ಮೆ ಅಂಥದ್ದೇ ಪ್ರದರ್ಶನ ಹೊರ ತಂದಿದ್ದಾರೆ. ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಕದನದಲ್ಲಿ ಅಕ್ಷರಶಃ ಅಬ್ಬರಿಸಿದ ಸ್ವಿಸ್‌ ಮಾಸ್ಟರ್‌ ಕೇವಲ 68 ನಿಮಿಷಗಳಲ್ಲಿ 6-2, 6-3 ಅಂತರದ ನೇರ ಸೆಟ್‌ಗಳಿಂದ ಮೂರು ಬಾರಿಯ ಇಂಡಿಯನ್‌ ವೆಲ್ಸ್‌ ಚಾಂಪಿಯನ್‌ ನಡಾಲ್‌ ಅವರನ್ನು ಬಗ್ಗು ಬಡಿದರು.

ಫುಟ್ಬಾಲ್‌: ಆಟಗಾರರ ನಡುವೆ ಹೊಡೆದಾಟ

$
0
0

ಬೆಂಗಳೂರು: ರಾಜ್ಯ ಸೂಪರ್‌ ಡಿವಿಜನ್‌ ಫುಟ್ಬಾಲ್‌ ಪಂದ್ಯದ ವೇಳೆ ಎಂಇಜಿ ಹಾಗೂ ಎಎಸ್‌ಸಿ ಮತ್ತು ಸೆಂಟರ್‌ ತಂಡಗಳ ನಡುವಿನ ಆಟಗಾರರು ಪರಸ್ಪರ ಹೊಡೆದಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಇಲ್ಲಿನ ಅಶೋಕನಗರ ಫುಟ್ಬಾಲ್‌ ಮೈದಾನದಲ್ಲಿ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಎಂಇಜಿ ತಂಡ 3-1 ಗೋಲುಗಳ ಅಂತರದಲ್ಲಿ ಎಎಸ್‌ಸಿ ಮತ್ತು ಸೆಂಟರ್‌ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಸನಿಹವಾಯಿತು. ಸೋಲಿನ ನಿರಾಸೆಯಿಂದ ಘರ್ಷಣೆಗಿಳಿದ ಎಎಸ್‌ಸಿ ತಂಡದ ಆಟಗಾರರು ಎದುರಾಳಿ ಆಟಗಾರರ ವಿರುದ್ಧ ಪರಸ್ಪರ ಕೈ ಕೈ ಮೀಲಾಯಿಸಿದರು. ಕೂಡಲೇ ಮಧ್ಯಪ್ರವೇಶಿಸಿದ ಪಂದ್ಯದ ರೆಫರಿ ಉಭಯ ತಂಡಗಳ ಆಟಗಾರರನ್ನು ಸಮಾಧಾನಪಡಿಸಿದರು. ಎಂಇಜಿ ಪರ ಲಿಟಾನ್‌ ಶಿಲ್‌(36ನೇ ನಿ.), ದಿಪಾನ್‌ ಥಾಪ(67ನೇ ನಿ.) ಮತ್ತು ಕ್ರಿಸ್ಟೋಫರ್‌ (76ನೇ ನಿ. ಫೆನಾಲ್ಟಿ) ತಲಾ ಒಂದು ಗೋಲ್‌ ಬಾರಿಸಿದರು. ಎಎಸ್‌ಸಿ ಪರ ದೀಪಕ್‌ ಸಿಂಗ್‌ (21ನೇ ನಿ.) ಒಂದು ಗೋಲ್‌ ಬಾರಿಸಿಲಷ್ಟೇ ಶಕ್ತರಾದರು.

ಮತ್ತೊಂದೆಡೆ ‘ಎ’ ಡಿವಿಜನ್‌ ಲೀಗ್‌ ಫುಟ್ಬಾಲ್‌ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್ಸ್‌ ತಂಡ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ತಂಡದ ವಿರುದ್ಧ 4-1 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಇಂಡಿಪೆಂಡೆಂಟ್ಸ್‌ ಪರ ಉದಿತ್‌(12, 77ನೇ ನಿಮಿಷ) ಎರಡು ಗೋಲ್‌ ಬಾರಿಸಿ ಜಯದಲ್ಲಿ ನಿರ್ಣಾಯಕ ಪಾತ್ರವಹಿಸಿದರು.

ಟ್ರಕ್‌ ರೇಸಿಂಗ್‌ಗೆ ಕನ್ನಡಿಗ ಲೋಕೇಶ್‌ ಪದಾರ್ಪಣೆ

$
0
0

ಬೆಂಗಳೂರು: ಕರ್ನಾಟಕದ ಲೋಕೇಶ್‌ ರೆಡ್ಡಿ ಉತ್ತರ ಪ್ರದೇಶದ ಗ್ರೇಟರ್‌ ನೋಯಿಡಾದ ಬುದ್ಧ ಅಂತಾರಾಷ್ಟ್ರೀಯ ಸರ್ಕಿಟ್‌ನಲ್ಲಿ ಇದೇ 18 ಮತ್ತು 19ರಂದು ನಡೆಯಲಿರುವ ಟಾಟಾ ಮೋಟಾರ್ಸ್‌ನ ಟಿ1 ಪ್ರೈಮಾ ಟ್ರಕ್‌ ರೇಸಿಂಗ್‌ಗೆ ಪದಾರ್ಪಣೆ ಮಾಡಲಿದ್ದಾರೆ.

ರಾಜ್ಯದ ಏಕೈಕ ಸ್ಪರ್ಧಿಯಾಗಿರುವ ಲೋಕೇಶ್‌ ರೆಡ್ಡಿ ಸೇರಿದಂತೆ ಭಾರತದ ಒಟ್ಟು 33 ರೇಸರ್‌ಗಳು ಸೆಮಿಫೈನಲ್‌ಗೆ ಅರ್ಹತೆ ಗಳಿಸಿದ್ದು, ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ. ಮೂರು ವಿಭಾಗಗಳಲ್ಲಿ ಟಿ1 ಪ್ರೈಮಾ ಟ್ರಕ್‌ ರೇಸಿಂಗ್‌ ನಡೆಯಲಿದೆ.

ಮೊದಲನೇ ಸೂಪರ್‌ ಕ್ಲಾಸ್‌ ವಿಭಾಗದಲ್ಲಿ ಟಿಆರ್‌ಪಿ 2.0ರ ಅಗ್ರ ಹತ್ತು ಚಾಲಕರು, ಚಾಂಪಿಯನ್‌ ಕ್ಲಾಸ್‌ನ ಟಿಆರ್‌ಪಿ 1.0ರ ಹತ್ತು ರನ್ನರ್ಸ್‌ ಅಪ್‌ಗಳು ಮತ್ತು ಪ್ರೊ ಕ್ಲಾಸ್‌ ವಿಭಾಗದಲ್ಲಿ ಜರ್ಮನಿ, ಸ್ಪೇನ್‌, ಹಂಗರಿ ಮತ್ತು ಫ್ರಾನ್ಸ್‌ ಸೇರಿದಂತೆ 12 ಅಂತಾರಾಷ್ಟ್ರೀಯ ಮಟ್ಟದ ಚಾಲಕರು ಪ್ರಶಸ್ತಿಗಾಗಿ ತೀವ್ರ ಸೆಣಸಾಟ ನಡೆಸಲಿದ್ದಾರೆ.

2014ರಲ್ಲಿ ಆರಂಭವಾದ ಟಿ1 ಪ್ರೈಮಾ ಟ್ರಕ್‌ ರೇಸ್‌ನ ಸತತ ಮೂರು ಆವೃತ್ತಿಗಳು ಯಶಸ್ವಿಯಾಗಿದ್ದು, ಇದೀಗ ನಾಲ್ಕನೇ ಆವೃತ್ತಿಗೆ ಕ್ಷ ಣಗಣನೆ ಆರಂಭವಾಗಿದೆ.

ಸೆರಗಿನ ಕೆಂಡವಾಗಿರುವ ಫುಕುಶಿಮಾ ದುರಂತ

$
0
0

ಅಭಿವೃದ್ಧಿ ಮತ್ತು ಅಪಾಯದ ಡಿಕ್ಕಿ ನಿರಂತರ ಮುಂದುವರೆದಿದೆ. ಭೂಕಂಪ ಹಾಗೂ ಸುನಾಮಿಯಿಂದ ತತ್ತರಿಸಿದ್ದ ಜಪಾನ್‌ನ ಫುಕುಶಿಮಾ ಅಣು ವಿದ್ಯುತ್‌ ಘಟಕ ಇನ್ನೂ ತಹಬದಿಗೆ ಬಂದಿಲ್ಲ. ಮತ್ತೆ ವಿಕಿರಣ ಸೋರಿಕೆಯ ವರದಿಗಳು ಬಂದಿದ್ದು, ಕಳವಳ ಮುಂದುವರೆದಿದೆ.

ಹ.ಚ.ನಟೇಶ ಬಾಬು

ಜಪಾನ್‌ನ ಫುಕುಶಿಮಾ ದುರಂತ ಸಂಭವಿಸಿ 6 ವರ್ಷಗಳಾದರೂ, ಆತಂಕ ಇನ್ನೂ ಮುಗಿದಿಲ್ಲ. ಕ್ಯಾನ್ಸರ್‌ ಹುಣ್ಣಿನಂತೆ ಅದು ಕಾಡುತ್ತಲೇ ಇದೆ. ಅಲ್ಲಿನ ಅಣು ವಿದ್ಯುತ್‌ ಸ್ಥಾವರದಿಂದ ವಿಕಿರಣಗಳ ಸೋರಿಕೆಯಾಗುತ್ತಿವೆ ಎನ್ನುವ ಇತ್ತೀಚಿನ ವರದಿಗಳು ಆತಂಕವನ್ನು ಜೀವಂತವಾಗಿಟ್ಟಿವೆ. ಈ ಹಿನ್ನೆಲೆಯಲ್ಲಿಯೇ ದಕ್ಷಿಣ ಕೊರಿಯಾದ ಜೀಜು ಏರ್‌ ವಿಮಾನಯಾನ ಸಂಸ್ಥೆಯು, ಜಪಾನ್‌ನ ಫುಕುಶಿಮಾ ವಿಮಾನ ನಿಲ್ದಾಣದಿಂದ ದಕ್ಷಿಣ ಕೊರಿಯಾಗೆ ಇದ್ದ ಎಲ್ಲ ವಿಮಾನಗಳ ಸಂಚಾರವನ್ನು ಮಾ.1ರಿಂದ ರದ್ದುಗೊಳಿಸಿದೆ ಎಂದು 'ಜಪಾನ್‌ ಟೈಮ್ಸ್‌' ವರದಿ ಮಾಡಿದೆ. ಫುಕುಶಿಮಾದಿಂದ ದಕ್ಷಿಣ ಕೊರಿಯಾಗೆ, ಮತ್ತೆ ಅಲ್ಲಿಂದ ಫುಕುಶಿಮಾಗಿದ್ದ ವಿಮಾನ ಸೇವೆಯನ್ನು ರದ್ದುಗೊಳಿಸುವಂತೆ ಸಿಬ್ಬಂದಿ ಒತ್ತಾಯಿಸಿದ್ದರು. ಫುಕುಶಿಮಾಗೆ ಹೋಗುವುದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವುದೂ ಎರಡೂ ಒಂದೇ ಎಂದು ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಸೇವೆ ಸದ್ಯಕ್ಕೆ ರದ್ದಾಗಿದೆ.

ಫುಕುಶಿಮಾ ವಿಮಾನ ನಿಲ್ದಾಣವು ಅಣು ಸ್ಥಾವರದ ಸಮೀಪವಿರುವ ಟೋಕಿಯೊ ಎಲೆಕ್ಟ್ರಿಕ್‌ ಪವರ್‌ ಕಂಪನಿಯಿಂದ(ಟೆಪ್ಕೊ) 40 ಮೈಲಿ ದೂರದಲ್ಲಿದೆ. 2011ರ ಮಾರ್ಚ್‌ನಲ್ಲಿ ಭೂಕಂಪ ಮತ್ತು ಸುನಾಮಿಯಾದಾಗ, ಅಣುಸ್ಥಾವರದಿಂದ ಅಪಾಯಕಾರಿ ವಿಕಿರಣಗಳು ದೊಡ್ಡ ಪ್ರಮಾಣದಲ್ಲಿ ಹೊರಬಂದಿದ್ದವು. ಹೆಚ್ಚಿನ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ 1.60 ಲಕ್ಷ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ ಎಂದು ಸರಕಾರ ಹೇಳಿದರೂ, ಪರಿಸ್ಥಿತಿ ಭಿನ್ನವಾಗಿಯೇ ಇದೆ.

ಜಪಾನ್‌ ರಾಷ್ಟ್ರೀಯ ಪ್ರವಾಸೋದ್ಯಮ ಸಂಘಟನೆ ಫೆ.20ರಂದು ಹೇಳುವ ಪ್ರಕಾರ; ಫುಕುಶಿಮಾ ಏರ್‌ಪೋರ್ಟ್‌ ಸುರಕ್ಷಿತವಾಗಿದೆ. ಆದರೆ, ಈ ವಿಮಾನ ನಿಲ್ದಾಣದ ಮೇಲೆ ಮೊದಲಿನಿಂದಲೂ ಗುಮಾನಿ ಇದ್ದೇ ಇದೆ. ದಕ್ಷಿಣ ಕೊರಿಯಾದ ಅನೇಕ ಗ್ರಾಹಕರು ಮತ್ತು ಕಾರ್ಮಿಕರು ಫುಕುಶಿಮಾ ವ್ಯಾಪ್ತಿಯ ವಸ್ತುಗಳನ್ನೇ ಬಹಿಷ್ಕರಿಸಿದ್ದಾರೆ.

ವಿಕಿರಣ ಪ್ರಭಾವವಿರುವ 310 ಚ.ಮೈಲಿ ವಲಯದಲ್ಲಿ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದ್ದು, ಬಿಲಿಯನ್‌ ಡಾಲರ್‌ಗಟ್ಟಲೇ ಹಣವನ್ನು ವ್ಯಯಿಸಲಾಗುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ಸರಕಾರ ಹೇಳಿದ ಪ್ರಕಾರ; ಫುಕುಶಿಮಾ ಘಟಕವನ್ನು ಸುರಕ್ಷಿತವಾಗಿ ಮುಚ್ಚಲು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ವಿಷ ವಾತಾವರಣ ತಿಳಿಗೊಳಿಸಲು, ಸಂತ್ರಸ್ತರಿಗೆ ಪರಿಹಾರ ಮತ್ತು ವಿಕಿರಣ ತ್ಯಾಜ್ಯವನ್ನು ತೊಂದರೆಯಾಗದಂತೆ ವಿಲೇವಾರಿ ಮಾಡಲು 2013ರಲ್ಲಿ ಮಾಡಿದ್ದಕ್ಕಿಂತಲೂ ದುಪ್ಪಟ್ಟು ಖರ್ಚಾಗಲಿದೆ. ಅದು 150 ಬಿಲಿಯನ್‌ ಪೌಂಡ್‌ಗಳನ್ನು ದಾಟಬಹುದು ಎನ್ನಲಾಗುತ್ತಿದೆ.

ರೋಬಾಟ್‌ ಸತ್ತು ಹೋಯಿತು!

ಅಣು ರಿಯಾಕ್ಟರ್‌ಗಳ ವ್ಯಾಪ್ತಿಯಲ್ಲಿ ತಣ್ಣನೆ ನೀರನ್ನು ಹರಿಸಲಾಗುತ್ತಿದೆ. ತ್ಯಾಜ್ಯ ಮತ್ತು ಅವಶೇಷಗಳ ತೆರವು ಕಾರ್ಯಾಚರಣೆ ನಡೆದಿದೆ. ಇಷ್ಟಾದರೂ ಈ ಘಟಕದಲ್ಲಿ ವಿಕಿರಣದ ಮಟ್ಟ ಹೆಚ್ಚಿನದಾಗಿದ್ದು, ರಿಮೋಟ್‌ ನಿಯಂತ್ರಣದ ರೋಬಾಟ್‌ಗಳನ್ನು ಪರಿಹಾರ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ. ವಿಕಿರಣಗಳ ಪ್ರಭಾವ ಹೇಗಿದೆಯೆಂದರೆ ರೋಬಾಟ್‌ಗಳೇ ಕಳೆದ ತಿಂಗಳು ಹಾಳಾಗಿವೆ. ರೋಬಾಟ್‌ ಹಾಳಾಗುತ್ತಿರುವುದು ಇದೇ ಮೊದಲೇನಲ್ಲ. ಸಮೀಕ್ಷಾ ಕಾರ್ಯ ಮುಗಿಸಿ ಹಿಂದೊಮ್ಮೆ ಹೊರಬರುವ ಅರ್ಧ ಮಾರ್ಗದಲ್ಲಿ ಎರಡು ಕ್ಯಾಮೆರಾಗಳು ಹಾಳಾಗಿದ್ದವು.

ಇತ್ತೀಚೆಗೆ ಅಣು ಸ್ಥಾವರ ಘಟಕ 2ಕ್ಕೆ ರವಾನಿಸಲಾಗಿದ್ದ ರೋಬಾಟ್‌ ಅಸಮರ್ಪಕವಾಗಿ ಕೆಲಸ ಮಾಡಿ ಎರಡೇ ಗಂಟೆಯಲ್ಲಿ ಹಾಳಾಯಿತು. ಆದಾಗ್ಯೂ, ವಿಕಿರಣವು ಸ್ಥಾವರದ ಹೊರಗೆ ಸೋರಿಕೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಸಮೀಕ್ಷೆ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರಗಳಲ್ಲಿ ಯುರೇನಿಯಂ ಇಂಧನದ ರಾಡ್‌ಗಳು ಕರಗಿರುವುದು ಸ್ಪಷ್ಟವಾಗಿದೆ. ಇಲ್ಲಿನ ವಿಕಿರಣಗಳ ಶಕ್ತಿ ಹೇಗಿದೆ ಎಂದರೆ ಎರಡೇ ನಿಮಿಷದಲ್ಲಿ ಒಬ್ಬ ಮನುಷ್ಯನನ್ನು ಕೊಲ್ಲ ಬಲ್ಲವು! ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ರೋಬಾಟ್‌ ಸಂಗ್ರಹಿಸಿರುವ ಮಾಹಿತಿಯಿಂದ ಈ ಅಂಶ ಸ್ಪಷ್ಟವಾಗಿದೆ

ಸೋರಿಕೆ ನಿಂತಿಲ್ಲ

'ಫುಕುಶಿಮಾದ ಡೈಚಿ ಅಣು ಸ್ಥಾವರ ಕೇಂದ್ರದಲ್ಲಿ ಸೋರಿಕೆ ನಿಂತಿಲ್ಲ. ವಾತಾವರಣದಲ್ಲಿ ವಿಕಿರಣ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿದೆ. 2012ರಲ್ಲಿ ಸೆನ್ಸರ್‌ಗಳು ಪತ್ತೆ ಹಚ್ಚಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲೀಗ ವಿಕಿರಣ ಇದೆ,'' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲವೂ ಸರಿಯಾಗಿದೆ ಎನ್ನುವ ಸರಕಾರದ ವಾದವನ್ನು ಎನ್‌ಜಿಒಗಳು ತಳ್ಳಿಹಾಕಿದ್ದು, ಅಪಾಯದ ವರದಿಗಳನ್ನು ನೀಡುತ್ತಲೇ ಬಂದಿವೆ. ಆದರೆ, ಟೆಪ್ಕೊ ನಿರಾಕರಿಸುತ್ತದೆ. ಅಣು ಘಟಕದ ಆಳಕ್ಕೆ ಕ್ಯಾಮೆರಾಗಳನ್ನು ಬಿಟ್ಟಿದ್ದು, ಪ್ರತಿಯೊಂದನ್ನೂ ಗಮನಿಸಲಾಗುತಿದೆ. ಕ್ಯಾಮೆರಾಗಳ ಅಂದಾಜಿನ ಪ್ರಕಾರ ವಿಕಿರಣದ ಮಟ್ಟ ಬಹಳ ಕಡಿಮೆ ಇದೆ. ಕ್ಯಾಮೆರಾಗಳು ಸೆರೆ ಹಿಡಿದಿಡುವ ಚಿತ್ರಗಳು ಉಪಯುಕ್ತ ಮಾಹಿತಿಯಾಗಿದ್ದರೂ, ಇನ್ನಷ್ಟು ಪರೀಕ್ಷೆ ಅಗತ್ಯವಿದೆ. ನಿಜಕ್ಕೂ ಒಳಗಿನ ಪರಿಸ್ಥಿತಿ ಹೇಗಿದೆ ಎಂದು ಊಹಿಸುವುದು ಕಷ್ಟದ ಸಂಗತಿ ಎಂದು ಟೆಪ್ಕೊ ಹೇಳಿದೆ.

ವಾಪಸ್‌ ಬರಲು ಜನರಿಗೆ ಭಯ
ದುರಂತ ಸಂಭವಿಸಿ 6 ವರ್ಷಗಳ ನಂತರ ಫುಕುಶಿಮಾದ ನಾಲ್ಕು ಜಿಲ್ಲೆಗಳು ಸುರಕ್ಷಿತವಾಗಿವೆ. ಜನರು ತಮ್ಮ ನೆಲೆಗೆ ಮರಳಬಹುದು ಎಂದು ಸರಕಾರ ಹೇಳಿದೆ. ಈ ನಾಲ್ಕು ಜಿಲ್ಲೆಗಳಿಂದ ಸುಮಾರು 32 ಸಾವಿರ ನಿವಾಸಿಗಳು ಸ್ಥಳಾಂತರಗೊಂಡಿದ್ದರು. ಸರಕಾರ ಅಭಯ ನೀಡಿದ್ದರೂ ವಾಪಸ್‌ ಬಂದರೆ ಸುರಕ್ಷಿತವಾಗಿರುವ ಬಗ್ಗೆ ಅನೇಕರಿಗೆ ವಿಶ್ವಾಸವಿಲ್ಲ. ಭಯ ಯಾವ ಮಟ್ಟದಲ್ಲಿದೆ ಎಂದರೆ; ಶೇ.10 ಮಂದಿಗೂ ಮನಸ್ಸಿಲ್ಲ. ವಿಕಿರಣಗಳ ಆತಂಕ ಎಲ್ಲರನ್ನೂ ಕಾಡುತ್ತಿವೆ. ತಮ್ಮವರಿಗಾದ ಅಪಾಯಗಳು ಕಣ್ಮುಂದೆ ಕಟ್ಟಿದಂತಿವೆ.

ಕಳೆದ ವರ್ಷದ ಫೆಬ್ರವರಿಯಲ್ಲೂ ವಿಕಿರಣ ಸೋರಿಕೆ ಪತ್ತೆಯಾಗಿತ್ತು. ಅಣು ಸ್ಥಾವರದ ಜಲ ತ್ಯಾಜ್ಯ ಸೋರಿಕೆಯಾಗಿ ಪೆಸಿಫಿಕ್‌ ಸಮುದ್ರ ಸೇರುತ್ತಿತ್ತು. ಸ್ಥಾವರದಿಂದ ಮಾಮೂಲಿಗಿಂತಲೂ ಶೇ.70 ಪಟ್ಟು ಹೆಚ್ಚು ವಿಕಿರಣ ಸೋರಿಕೆಯಾಗುತ್ತಿದೆ ಎಂದು ವರದಿಯಾಗಿತ್ತು.

ಭಾರತದಲ್ಲಿ ಅಣು ಶಕ್ತಿ

ಫುಕುಶಿಮಾ ದುರಂತದ ತರುವಾಯ ಕೆಲವು ದೇಶಗಳು ಎಚ್ಚೆತ್ತಿವೆ. ಜರ್ಮನಿ, ಸ್ವಿಜರ್‌ಲೆಂಡ್‌, ಸ್ಪೇನ್‌, ತೈವಾನ್‌, ಬೆಲ್ಜಿಯಂ, ಮೆಕ್ಸಿಕೊ ದೇಶಗಳು ತಮ್ಮ ಅಣುಶಕ್ತಿ ಯೋಜನೆಗಳನ್ನು ಕೈಬಿಡಲು ಇಲ್ಲವೇ ಹಂತಹಂತವಾಗಿ ಕಡಿಮೆ ಮಾಡಲು ಮುಂದಾಗಿವೆ. ಆದರೆ, ಭಾರತದ್ದು ಬೇರೆಯದೇ ಕತೆ. ಹೆಚ್ಚುತ್ತಿರುವ ವಿದ್ಯುತ್‌ ಬೇಡಿಕೆ ಪೂರೈಸಲು ಅಣು ವಿದ್ಯುತ್‌ ಅನಿವಾರ್ಯ ಎಂದು ಸರಕಾರ ಹೇಳಿದರೆ, ಫುಕುಶಿಮಾದಿಂದ ಪಾಠ ಕಲಿತಿಲ್ಲವಾ ಎಂದು ಪರಿಸರವಾದಿಗಳು ಕೇಳುತ್ತಿದ್ದಾರೆ. ಅಣು ವಿದ್ಯುತ್‌ ತಯಾರಿಸಿ, ಚೆರ್ನೋಬಿಲ್‌ ದುರಂತವನ್ನೂ ಅನುಭವಿಸಿದ ರಷ್ಯಾ ಭಾರತಕ್ಕೆ ಪರಮಾಣು ತಂತ್ರಜ್ಞಾನ ನೀಡುತ್ತಿದೆ. ಅಮೆರಿಕಾದೊಂದಿಗೆ ಅಣುಬಂಧವೂ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಕೈಗಾ ಪರಮಾಣು ವಿದ್ಯುತ್‌ ಸ್ಥಾವರದಲ್ಲಿ ವಿಕಿರಣ ಸೋರಿಕೆಯಾದ ಬಗ್ಗೆಯೂ ಒಂದೆರಡು ವರ್ಷಗಳ ಹಿಂದೆ ವರದಿಯಾಗಿತ್ತು. ಉತ್ಪಾದನೆ ವೆಚ್ಚವನ್ನು ಪರಿಗಣಿಸುವುದಾದರೆ ಅಣು ವಿದ್ಯುತ್‌ ಯೋಜನೆಗಳು ಸೂಕ್ತ. ಆದರೆ, ಅಪಾಯ ಸೆರಗಿನ ಕೆಂಡ!

ಅಂದು ಆಗಿದ್ದೇನು?

1986ರ ಚೆರ್ನೋಬಿಲ್‌ ನಂತರದಲ್ಲಿ ಫುಕುಶಿಮಾ ಅಣು ಸ್ಥಾವರ ದುರಂತವು ಭೀಕರವಾದುದು. ತಾಂತ್ರಿಕವಾಗಿ ಮುಂದುವರೆದಿರುವ ಜಪಾನ್‌ಗೆ ದುರದೃಷ್ಟವಶಾತ್‌ ಭೂಕಂಪಗಳು ಹೊಡೆತ ನೀಡುತ್ತಲೇ ಬಂದಿವೆ. 2011ರ ಮಾ.11ರ ಶನಿವಾರ ಸುನಾಮಿ ಮತ್ತು ಭೂಕಂಪದಿಂದಾಗಿ ಫುಕುಶಿಮಾದ ಡೈಚಿ ಅಣು ಸ್ಥಾವರ ತತ್ತರಿಸಿತು. ಸುನಾಮಿಯ ಹೊಡೆತವು ಇಂಧನ ಸರಬರಾಜು ಮತ್ತು ಕೂಲಿಂಗ್‌ ಸಿಸ್ಟಮ್‌ಗೆ ಅಪ್ಪಳಿಸಿತು. ಹೀಗಾಗಿ ಒಂದೂವರೆ ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಯಿತು. 10 ಸಾವಿರ ಟನ್‌ ವಿಷಯುಕ್ತ ನೀರನ್ನು ಸಮುದ್ರಕ್ಕೆ ಬಿಡಲಾಯಿತು. ಈ ಆರು ವರ್ಷ ಮುಗಿದರೂ,

ಅಣು ಸ್ಥಾವರದ ಮೂಲ ಸ್ಥಳದಲ್ಲಿ (ಗ್ರೌಂಡ್‌ ಜೀರೋ) ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಅಣು ವಿಕಿರಣ ತೀವ್ರತೆಗೆ ಐದು ರೋಬಾಟ್‌ಗಳು ಹಾಳಾಗಿವೆ. ಮೆಟ್ರಿಕ್‌ ಟನ್‌ಗಟ್ಟಲೇ ವಿಕಿರಣಕಾರಿ ಅವಶೇಷಗಳ ರಾಶಿ. ಅದನ್ನು ಎಲ್ಲಿಗೆ ವಿಲೇವಾರಿ ಮಾಡಬೇಕು ಎನ್ನುವ ತಲೆನೋವು ಇನ್ನೂ ಮುಗಿದಿಲ್ಲ. ಇಂಧನ ರಾಡ್‌ಗಳನ್ನು ತೆಗೆಯುವ ಕೆಲಸ ಮಾಡಬೇಕಿದೆ. ಇಲ್ಲಿ ವಿಪರೀತ ಶಾಖ, ವಿಕಿರಣ ತೀವ್ರತೆ ಹೆಚ್ಚು. ಒಂದು ಅಂದಾಜಿನ ಪ್ರಕಾರ ವಿಲೇವಾರಿ ಕೆಲಸಕ್ಕೆ 30-40 ವರ್ಷಗಳೇ ಬೇಕಾಗಬಹುದು!

ನೆಲ, ಜಲ, ಗಾಳಿ ಸಕಲವೂ ವಿಷಮಯ

ವಿಕಿರಣಗಳು ಮನುಷ್ಯನಿಗಷ್ಟೇ ಅಲ್ಲ, ಅಲ್ಲಿನ ನೆಲ, ಜಲ, ಗಾಳಿ ಎಲ್ಲವನ್ನೂ ಹಾಳುಗೆಡುವುದ್ದವೆ. ಎಲ್ಲ ಜೀವಜಂತುಗಳಿಗೂ ಕಂಟಕ. ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ, ಫುಕುಶಿಮಾ ಅಪಾಯಕ್ಕೆ ತುತ್ತಾದ ಪ್ರದೇಶಗಳಲ್ಲಿನ ಬಹುತೇಕ ಜನರಿಗೆ ಕ್ಯಾನ್ಸರ್‌, ಸಂತಾನಹೀನತೆಯಂಥ ಅಪಾಯವಿದೆ. ಹೆಣ್ಣು ಮಕ್ಕಳಿಗೆ ಶೇ.70ರಷ್ಟು ಥೈರಾಯ್ಡ್‌ ಕ್ಯಾನ್ಸರ್‌ ಸಾಧ್ಯತೆ ಹೆಚ್ಚು. ನವಜಾತ ಶಿಶುಗಳಿಗೇ ಕ್ಯಾನ್ಸರ್‌ ಕಾಡಬಹುದು. ಮಹಿಳೆಯರಿಗೆ ಸ್ತನ ಕ್ಯಾನ್ಸರ್‌ನ ಅಪಾಯಗಳು ಶೇ.6ರಷ್ಟು ಅಧಿಕ.

ಚರ್ನೋಬಿಲ್‌ ಸ್ಥಾವರ ಸ್ಫೋಟ

ಮೂರು ದಶಕಗಳ ಹಿಂದಿನ ಚೆರ್ನೋಬಿಲ್‌ ದುರಂತ ಬೆಚ್ಚಿ ಬೀಳಿಸುವಂಥದ್ದು. ಸ್ಥಾವರದ 2000 ಟನ್‌ ಭಾರದ ಕವಚವೇ ಸಿಡಿದಿತ್ತು. ಹಿರೋಶಿಮಾ ಬಾಂಬ್‌ಗಿಂತಲೂ 90 ಪಟ್ಟು ಹೆಚ್ಚಿನ ವಿಕಿರಣ ಆವರಿಸಿತ್ತು ಎನ್ನಲಾಗಿದೆ. ಸಾವಿರಾರ ಜನ ಸತ್ತರೂ, ರಷ್ಯಾ ಎಲ್ಲವನ್ನೂ ಮುಚ್ಚಿಟ್ಟಿತು. ಆದರೂ ನೋವಿನ ಧ್ವನಿಗಳನ್ನು ಮುಚ್ಚಿಡಲಾಗಲಿಲ್ಲ.

‘ವಿರಾಟ್‌’ ವೈಭವಕ್ಕೆ ತೆರೆ

$
0
0

ಭಾರತೀಯ ನೌಕಾಪಡೆಯಲ್ಲಿ 27 ವರ್ಷ ಸೇರಿ ಒಟ್ಟು 55 ವರ್ಷ ಸೇವೆ ಸಲ್ಲಿಸಿದ 'ಐಎನ್‌ಎಸ್‌ ವಿರಾಟ್‌' ಯುದ್ಧನೌಕೆ ಮಾರ್ಚ್‌ 6ರಂದು ಬಂದರಿನಲ್ಲಿ ಲಂಗುರ ಹಾಕಲಿದೆ. ಆಪರೇಷನ್‌ ಪವನ್‌ ಮತ್ತು ಪರಾಕ್ರಮ್‌ ಸೇರಿದಂತೆ ಭಾರತೀಯ ನೌಕಾಪಡೆಯ ಅನೇಕ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದ ಈ ಯುದ್ಧನೌಕೆ ದೇಶದ ಹೆಮ್ಮೆಯಾಗಿದೆ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ಬಳಿಕ ನಿವೃತ್ತವಾಗಲಿರುವ ವಿರಾಟ್‌ ಬಗ್ಗೆ ಇಲ್ಲಿದೆ ಮಾಹಿತಿ.

- ಸುಧಿ ರಂಜನ್‌ ಸೇನ್‌

ಜಗತ್ತಿನಲ್ಲೇ ಅತ್ಯಂತ ಹಳೆಯ, ಕಾರ್ಯನಿರತ ಯುದ್ಧನೌಕೆ ಎಂಬ ಖ್ಯಾತಿಯ ಐಎನ್‌ಎಸ್‌ ವಿರಾಟ್‌(ಬ್ರಿಟಿಷ್‌ ರಾಯಲ್‌ ನೌಕಾದಳದಲ್ಲಿ ಎಚ್‌ಎಂಎಸ್‌ ಹರ್ಮೆಸ್‌ ಎಂಬ ಹೆಸರಿತ್ತು) ಮುಂದಿನ ವಾರ ಸಂಪೂರ್ಣವಾಗಿ ಸೇವೆಯಿಂದ ನಿವೃತ್ತವಾಗಲಿದೆ. ಅಲ್ಲಿಗೆ ಭಾರತದ ನೌಕಾ ದಳದ ಇತಿಹಾಸದಲ್ಲಿ ವಿರಾಟ್‌ ಯುದ್ಧನೌಕೆಯ ವೈಭವಯುತ ಸೇವೆಗೆ ಅಂತಿಮ ತೆರೆ ಬೀಳಲಿದೆ.

ವಿರಾಟ್‌ ಯುದ್ಧನೌಕೆಯ ಡಿಕಮಿಷನಿಂಗ್‌ ಸಮಾರಂಭದಲ್ಲಿ ಭಾರತೀಯ ನೌಕಾದಳದ ಮುಖ್ಯಸ್ಥ ಅಡ್ಮಿರಲ್‌ ಸುನಿಲ್‌ ಲನ್ಬಾ, ರಾಯಲ್‌ ಬ್ರಿಟಿಷ್‌ ನಾವಲ್‌ ಸ್ಟಾಫ್‌ನ ಮುಖ್ಯಸ್ಥ ಅಡ್ಮಿರಲ್‌ ಸರ್‌ ಫಿಲಿಪ್‌ ಜೋನ್ಸ್‌ ಮತ್ತು ವಿರಾಟ್‌ನಲ್ಲಿ ಸೇವೆ ಸಲ್ಲಿಸಿರುವ ನೌಕಾದಳದ ಬಹುತೇಕ ಹಿರಿಯ ಅಧಿಕಾರಿಗಳು ಹಾಜರಾಗುವ ಸಾಧ್ಯತೆಗಳಿವೆ. ಈ ಯುದ್ಧ ನೌಕೆ ಭಾರತಕ್ಕೆ ಬರುವ ಮುಂಚೆ ಬ್ರಿಟಿಷ್‌ ನೌಕಾದಳಲ್ಲಿತ್ತು ಆಗ ಅದನ್ನು ಎಚ್‌ಎಂಎಸ್‌ ಹರ್ಮೆಸ್‌ ಎಂದು ಕರೆಯಲಾಗುತ್ತಿತ್ತು. ಅಡ್ಮಿರಲ್‌ ಸರ್‌ ಫಿಲಿಪ್‌ ಜೋನ್ಸ್‌ ಅವರು ಈ ಯುದ್ಧನೌಕೆಯಲ್ಲಿ ಕೆಲಸ ಮಾಡಿದ್ದಾರೆ.

1944ರಲ್ಲಿ ಎಚ್‌ಎಂಎಸ್‌ ಹರ್ಮೆಸ್‌ ಯುದ್ಧನೌಕೆ ನಿರ್ಮಾಣ ಆರಂಭವಾಯಿತು. ಆಗ ಎರಡನೇ ಜಾಗತಿಕ ಮಹಾಯುದ್ಧ ಅಂತಿಮ ಘಟ್ಟಕ್ಕೆ ಬಂದು ನಿಂತಿತ್ತು. ಜರ್ಮನಿಯ ನಾಜಿಗಳು 1945ರಲ್ಲಿ ಶರಣಾಗುತ್ತಿದ್ದಂತೆ ಯುದ್ಧ ನೌಕೆಯ ನಿರ್ಮಾಣವನ್ನು ಪೂರ್ತಿಗೊಳಿಸಲಾಯಿತು.

ಭಾರತೀಯ ನೌಕಾಪಡೆಯಲ್ಲಿ ಅಖಂಡ 27 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ವಿರಾಟ್‌ ಯುದ್ಧನೌಕೆ ಅನೇಕ ಪ್ರಥಮಗಳನ್ನು ಕಂಡಿದೆ. 1959ರಲ್ಲಿ ರಾಯಲ್‌ ಬ್ರಿಟಿಷ್‌ ನೌಕಾದಳಕ್ಕೆ ಅಧಿಕೃತವಾಗಿ ಸೇರ್ಪಡೆಯಾಯಿತು. ನೌಕೆಯ ಪ್ರತಿ ಸದಸ್ಯರಿಗೆ ಜೋಲುಮಂಚ(haಞಞಟ್ಚk)ಗಳ ಬದಲಾಗಿ ಬಂಕ್‌(ಒರಗು ಹಲಗೆ)ಗಳನ್ನು ಒದಗಿಸಲಾಗಿತ್ತು. ಒಳಾಂಗಣ ಪೂರ್ತಿ ಹವಾನಿಯಂತ್ರಿತ ವ್ಯವಸ್ಥೆಗೊಳಪಟ್ಟಿತ್ತು ಎನ್ನುತ್ತಾರೆ ವಿರಾಟ್‌ ಯುದ್ಧನೌಕೆಯಲ್ಲಿ ಸೇವೆ ಸಲ್ಲಿಸಿರುವ ಅಡ್ಮಿರಲ್‌ ಅನಿಲ್‌ ಚೋಪ್ರಾ ಅವರು.

ಮತ್ತೊಂದು ರೀತಿಯಲ್ಲಿ ವಿರಾಟ್‌ ವಿಶಿಷ್ಟತೆಯನ್ನು ಸಾಧಿಸಿದೆ. ತನ್ನ ಸೇವಾವಧಿಯಲ್ಲಿ ನಾಲ್ಕಾರು ಬಾರಿ ಪಾತ್ರಗಳನ್ನು ಬದಲಾಯಿಸಿದ ಕೆಲವೇ ಕೆಲವು ಯುದ್ಧನೌಕೆಗಳ ಪೈಕಿ ಇದು ಒಂದು. 1970ವರೆಗೂ ಎಚ್‌ಎಂಎಸ್‌ ಹರ್ಮೆಸ್‌ 'ಸ್ಟ್ರೈಕ್‌ ಕ್ಯಾರಿಯರ್‌' ಆಗಿತ್ತು. ಬಳಿಕ 1976ರಲ್ಲಿ ಈ ನೌಕೆಯನ್ನು ಕಮಾಂಡೋ ಕ್ಯಾರಿಯರ್‌ ಆಗಿ ಬದಲಾಯಿಸಲಾಯಿತು. ಜಲಾಂತರ್ಗಾಮಿ ತಡೆ ಯುದ್ಧ ವಾಹಕವಾಗಿಯೂ ಕಾರ್ಯನಿರ್ವಹಿಸಿದೆ.

ಅಂತಿಮವಾಗಿ 1980ರಲ್ಲಿ ಇದನ್ನು 12 ಡಿಗ್ರಿ 'ಸ್ಕೀ ಜಂಪ್‌'ಗೆ ಅನುಕೂಲವಾಗುಂತೆ ಪರಿವರ್ತಿಸಲಾಯಿತು. ಇದನ್ನು ಸಿಬ್ಬಂದಿ 'ನೋಸ್‌ ಜಾಬ್‌' ಎಂದು ಕರೆಯುತ್ತಿದ್ದರು. ಯುದ್ಧವಿಮಾನಗಳ ಟೇಕ್‌ ಆಫ್‌ಗೆ ಈ ಮೊದಲ ಉಗಿ ಯಾಂತ್ರಿಕ ಕವಣೆ(ಸ್ಟೀಮ್‌ ಕ್ಯಾಟಪಲ್ಟ್‌) ಬಳಸಲಾಗುತ್ತಿತ್ತು ಈ ಯುದ್ಧನೌಕೆಯಲ್ಲಿ. 1982ರಲ್ಲಿ ಫಾಕ್ಲ್ಯಾಂಡ್‌ ಯುದ್ಧ ಆರಂಭವಾಯಿತು. ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಈ ಯುದ್ಧನೌಕೆಯನ್ನು ರಾಯಲ್‌ ಬ್ರಿಟಿಷ್‌ ನೌಕಾದಳ ಬದಲಿಸಿತ್ತು.

ಫಾಕ್ಲ್ಯಾಂಡ್‌ ಯುದ್ಧ ಮುಗಿಯುತ್ತಿದ್ದಂತೆ ಹಡಗನ್ನು ಮೀಸಲು ಕಾರ್ಯಾಚರಣೆಗೆ ಒಳಪಡಿಸಲಾಯಿತು. ಅಲ್ಲದೆ, ಸೇವೆಯಿಂದ ನಿವೃತ್ತಗೊಳಿಸುವ ಬಗ್ಗೆ ಚಿಂತಿಸಲಾಯಿತು.

ಅದೃಷ್ಟವಶಾತ್‌, ಇದೇ ಸಮಯದಲ್ಲಿ ಭಾರತ ಕೂಡ ಸಮರ್ಥ ಯುದ್ಧನೌಕೆಯ ಹುಡಕಾಟದಲ್ಲಿತ್ತು. ಯಾಕೆಂದರೆ, ಆಗ ಭಾರತದ ಬಳಿ ಇದ್ದ ಐಎನ್‌ಎಸ್‌ ವಿಕ್ರಾಂತ್‌ ಅನ್ನು ಸೇನೆಯಿಂದ ನಿವೃತ್ತಿಗೊಳಿಸುವ ಬಗ್ಗೆ ಚಿಂತನೆ ನಡೆದಿತ್ತು. ಕೊನೆಗೆ ಎಚ್‌ಎಂಎಸ್‌ ಹರ್ಮೆಸ್‌ ರಿಪೇರಿಯೊಂದಿಗೆ 'ಐಎನ್‌ಎಸ್‌ ವಿರಾಟ್‌' ಎಂದು ಮರುನಾಮಕರಣಗೊಂಡು ಭಾರತೀಯ ನೌಕಾಪಡೆಯನ್ನು 1987ರಲ್ಲಿ ಸೇರಿಕೊಂಡಿತು. ಆಗ ನೌಕೆಯು 26 ಯುದ್ಧವಿಮಾನಗಳನ್ನ ಸಾಗಿಸುತ್ತಿತ್ತು. ಈ ಪೈಕಿ, ಬ್ರಿಟಿಷ್‌ ನಿರ್ಮಿತ ಜಂಪ್‌ ಜೆಟ್‌ ಎರಡು ವಿಮಾನದ ತುಕುಡಿಗಳಿದ್ದವು. ಅದರಲ್ಲಿ ಸೀ ಹ್ಯಾರಿಯರ್ಸ್‌ ಮತ್ತು ಹೆಲಿಕಾಪ್ಟರ್‌ಗಳಿದ್ದವು. ಇದು 1940ರಲ್ಲಿ ನಿರ್ಮಾಣವಾಗಿದ್ದರೂ ಕೂಡ ಕಾಲಕ್ಕೆ ತಕ್ಕಂತೆ ಬದಲಾದ ಯುದ್ಧ ಯಂತ್ರಗಳ ಅಳವಡಿಕೆಗೆ ಅನುಕೂಲವಾಗುಂತೆ ವಿನ್ಯಾಸಗೊಳಿಸಲಾಗಿತ್ತು.

''ಇದೊಂದು ಬಹುಪಯೋಗಿ ವಿನ್ಯಾಸ ಹೊಂದಿದ ಹಡಗು. ಅಗತ್ಯಕ್ಕೆ ಅನುಗುಣವಾಗಿ ಅದರ ಪಾತ್ರ ನಿರ್ವಹಣೆಯಲ್ಲಿ ಬದಲಾವಣೆಗೆ ಅನುಕೂಲಕರೀತಿಯಲ್ಲಿ ನಿರ್ಮಾಣವಾಗಿದೆ,'' ಎನ್ನುತ್ತಾರೆ ಅಡ್ಮಿರಲ್‌ ಅನಿಲ್‌ ಚೋಪ್ರಾ ಅವರು. ''ಐಎನ್‌ಎಸ್‌ ಪ್ರಿ ಡಿಜಿಟಲ್‌ಗೆ ಸಂಬಂಧಿಸಿದ್ದು, ಗೀಯರ್‌ ಮತ್ತು ವೀಲ್‌ಗಳನ್ನು ಬಳಸಿಕೊಂಡು ನಿರ್ವಹಣೆ ಮಾಡಲಾಗುತ್ತಿತ್ತು. ಹೀಗಿದ್ದಾಗ್ಯೂ, ಇದರ ಚಾಲನೆ ಅತ್ಯಂತ ಸರಳವಾಗಿದೆ. ಒಂದೊಮ್ಮೆ ನೌಕೆಗೆ ಹಾನಿಯುಂಟಾದರೂ ತನ್ನ ಕಾರ್ಯವನ್ನು ಮಾಡುವ ಕ್ಷ ಮತೆಯನ್ನು ಇದು ಹೊಂದಿದೆ. ಇಂದಿನ ಯುದ್ಧನೌಕೆಗಳ ಪೈಕಿ ಕೆಲವೇ ಕೆಲವು ಮಾತ್ರ ಐಎನ್‌ಎಸ್‌ ವಿರಾಟ್‌ಗೆ ಸರಿಸಾಟಿಯಾಗಬಲ್ಲವು'' ಎನ್ನುತ್ತಾರೆ ಅವರು.

ಸಮುದ್ರದ ಕಷ್ಟಕರ ಹವಾಮಾನ ಸ್ಥಿತಿಯಲ್ಲಿ ಇತರೆ ಯುದ್ಧನೌಕೆಗಳು ಕಾರ್ಯಾಚರಣೆಯಿಂದ ಹಿಂದೆ ಸರಿಯುತ್ತಿದ್ದರೆ, ಇದು ಮಾತ್ರ ಕಾರ್ಯಾಚರಣೆಯನ್ನು ಮುಂದುವರಿಸಬಹುದಾದ ವಿನ್ಯಾಸವನ್ನು ಹೊಂದಿದೆ. ಕಷ್ಟಕರ ಪರಿಸ್ಥಿತಿಯಲ್ಲ ಯುದ್ಧವಿಮಾನಗಳ ಉಡಾವಣೆ ಮತ್ತು ಅವುಗಳನ್ನು ಸ್ವೀಕರಿಸುವ ಕ್ಷ ಮತೆಯನ್ನು ಹೊಂದಿದೆ. ''ನಿಜಕ್ಕೂ ನಿಷ್ಠೆ ಮತ್ತು ಭಾವನೆಗಳನ್ನು ಈ ಯುದ್ಧನೌಕೆ ಬಡಿದೆಬ್ಬಿಸುತ್ತದೆ,'' ಎನ್ನುತ್ತಾರೆ ಚೋಪ್ರಾ ಅವರು.

ಆಪರೇಷನ್‌ ಪವನ್‌ ಮತ್ತು ಪರಾಕ್ರಮ್‌ ಸೇರಿದಂತೆ ಭಾರತೀಯ ನೌಕಾಪಡೆಯ ಅನೇಕ ಕಾರ್ಯಾಚರಣೆಗಳಲ್ಲಿ ವಿರಾಟ್‌ ಭಾಗಿಯಾಗಿತ್ತು. ಯುದ್ಧವಿಮಾನಗಳನ್ನು ಹೊತ್ತೊಯ್ಯುವ ನೌಕೆಯಲ್ಲಿ ಬದಕುವುದು ಅಷ್ಟೇನೂ ಸರಳವಲ್ಲ. ಬಾಯ್ಲರ್‌ ರೂಂನಲ್ಲಿ ತಾಪಮಾನ ಮೇಲಿಂದ ಮೇಲೆ 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತಿರುತ್ತದೆ.

ಮುಂದೇನು?

ಯುದ್ಧವಿಮಾನಗಳನ್ನು ಹೊತ್ತೊಯ್ಯುವ ದೇಶದ ಮೊದಲ ಯುದ್ಧನೌಕೆಯಾಗಿದ್ದ ಐಎನ್‌ಎಸ್‌ ವಿಕ್ರಾಂತ್‌ ಸೇವೆಯಿಂದ ನಿವೃತ್ತಗೊಳ್ಳುತ್ತಿದ್ದಂತೆ ಅದನ್ನು ಸ್ಕ್ರ್ಯಾಪ್‌ ಮಾಡಲಾಯಿತು. ಇದೀಗ ಐಎನ್‌ಎಸ್‌ ವಿರಾಟ್‌ ಯುದ್ಧನೌಕೆ ಬಗ್ಗೆ ಇನ್ನೂ ಯಾವುದೇ ನಿರ್ಧಾರವನ್ನು ನೌಕಾಪಡೆ ಕೈಗೊಂಡಿಲ್ಲ. ಆಂಧ್ರಪ್ರದೇಶ ಸರಕಾರ, ವಿರಾಟ್‌ ಅನ್ನು ವಸ್ತುಸಂಗ್ರಹಾಲಯ ಮಾಡುವ ಬಗ್ಗೆ ಯೋಚಿಸುತ್ತಿದೆ. ಆದರೆ, ಈ ಬಗ್ಗೆ ಇನ್ನೂ ರಕ್ಷ ಣಾ ಇಲಾಖೆಯಾ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ''ವಿರಾಟ್‌ ಯುದ್ಧನೌಕೆಯನ್ನು ಮ್ಯೂಸಿಯಂ ಆಗಿ ಬದಲಿಸಲು ಕನಿಷ್ಠ 1000 ಕೋಟಿ ರೂ. ಬೇಕಾಗಬಹುದು. ನಿರ್ವಹಣೆ ದಿನ ಖರ್ಚು ಬಿಟ್ಟು ಇಷ್ಟೊಂದು ಹಣ ಬೇಕಾಗುತ್ತದೆ. ಅಲ್ಲದೆ, ಹಡಗನ್ನು ಸಂರಕ್ಷಿಸಿಟ್ಟರೆ ಮಾತ್ರ ಮ್ಯೂಸಿಯಂ ಅನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯ,'' ಎನ್ನುತ್ತಾರೆ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು.

ಭಾರತೀಯ ನೌಕಾಪಡೆಯ ಬಲಭೀಮನಂತಿದ್ದ 'ಐಎನ್‌ಎಸ್‌ ವಿರಾಟ್‌' ಯುದ್ಧ ನೌಕೆಗೆ ಕೊನೆಗೆ ವಿದಾಯ ಹೇಳಲಾಗುತ್ತಿದೆ. ಸುಮಾರು 3 ದಶಕಗಳ ಸುದೀರ್ಘ ಸೇವೆಯ ಬಳಿಕ ಅದು ಇತಿಹಾಸದ ಪುಟ ಸೇರುತ್ತಿದೆ.

2,250 ದಿನಗಳು: ವಿರಾಟ್‌ ಸಮುದ್ರದಲ್ಲಿ ಕಳೆದ ಅವಧಿ

10,94,215 ಕಿಲೋ ಮೀಟರ್‌: ವಿರಾಟ್‌ ನೌಕೆ ಕ್ರಮಿಸಿದ ದೂರ

28,000 ಟನ್‌: ನೌಕೆಯ ಒಟ್ಟು ಸಾಮರ್ಥ್ಯ‌

1,500: ವಿರಾಟ್‌ ನೌಕೆಯ ಒಟ್ಟು ಸಿಬ್ಬಂದಿ

55 ವರ್ಷ: ಒಟ್ಟು ಸೇವಾವಧಿ (ಬ್ರಿಟಿಷ್‌ ಮತ್ತು ಭಾರತೀಯ ನೌಕಾಪಡೆ)

1959: ಬ್ರಿಟಿಷ್‌ ರಾಯಲ್‌ ನೇವಿಯ ಸೇವೆಗೆ ಸೇರ್ಪಡೆ

1984: ಬ್ರಿಟಿಷ್‌ ನೌಕಾಪಡೆಯಿಂದ ಡಿಕಮಿಷನ್‌

1986: ಭಾರತೀಯ ನೌಕಾಪಡೆ ಯಿಂದ ಖರೀದಿ, ದುರಸ್ತಿ

1987 ಮೇ 12: ಭಾರತೀಯ ನೌಕಾಪಡೆಗೆ ಸೇರ್ಪಡೆ

2016ರ ಜುಲೈನಲ್ಲೇ ಕೊಚ್ಚಿ ಬಂದರಿಗೆ ಬಂದು ಲಂಗರು ಹಾಕಿದ್ದ 'ಐಎನ್‌ಎಸ್‌ ವಿರಾಟ್‌' ನೌಕೆಯ ನಾಲ್ಕು ಬಾಯ್ಲರ್‌ಗಳು, ಎರಡು ಎಂಜಿನ್‌ಗಳು ಹಾಗೂ ಪ್ರೊಪೆಲ್ಲರ್‌ಗಳನ್ನು ಬೇರ್ಪಡಿಸಲಾಗಿತ್ತು. ಬಳಿಕ ಮೂರು ಜಗ್ಗುದೋಣಿಗಳ ಸಹಾಯದಿಂದ ವಿರಾಟ್‌ ನೌಕೆಯನ್ನು ಮುಂಬಯಿಗೆ ತರಲಾಯಿತು. ಇದೀಗ ಶಸ್ತ್ರಾಸ್ತ್ರ ವ್ಯವಸ್ಥೆ ಹಾಗೂ ಇತರೆ ಎಲ್ಲ ಉಪಕರಣಗಳನ್ನು ನೌಕೆಯಿಂದ ಬೇರ್ಪಡಿಸಿ, ಅಂತಿಮ ವಿದಾಯವನ್ನು ಮಾರ್ಚ್‌ 6ರಂದು ಹೇಳಲಾಗುತ್ತಿದೆ.

'ಸೀ ಹ್ಯಾರಿಯರ್ಸ್‌', ಸೀ ಕಿಂಗ್‌, ಚೇತಕ್‌ ಸೇರಿದಂತೆ ಹಲವು ಬಗೆಯ 24 ವಿಮಾನ/ಕಾಪ್ಟರ್‌ಗಳನ್ನು ಸಾಗಿಸುವ ಸಾಮರ್ಥ್ಯ‌ ವಿರಾಟ್‌ ಯುದ್ಧನೌಕೆ ಹೊಂದಿತ್ತು.

Viewing all 7056 articles
Browse latest View live