* ವಿಜೇತ್ ಕುಮಾರ್ ಡಿ.ಎನ್ ಹೊಸದಿಲ್ಲಿ
ಸ್ಟಾರ್ ರೈಡರ್ ಅಜಯ್ ಠಾಕೂರ್ ಅವರ ಸೂಪರ್ ರೈಡ್‌ಗಳ ಬಲದಿಂದ ಮಿಂಚಿದ ಪುಣೇರಿ ಪಲ್ಟನ್ ತಂಡ, ಬೆಂಗಳೂರು ಬುಲ್ಸ್ ವಿರುದ್ಧ 44-27 ಅಂಕಗಳ ಜಯ ದಾಖಲಿಸಿ ನಾಕ್‌ಔಟ್ ಸ್ಥಾನವನ್ನು ಭದ್ರ ಪಡಿಸಿಕೊಂಡಿತು.
ಇಲ್ಲಿನ ತ್ಯಾಗರಾಜ್ ಕ್ರೀಡಾ ಸಂಕೀರ್ಣದಲ್ಲಿ ನಡೆದ 3ನೇ ಆವತ್ತಿಯ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಪಲ್ಟನ್ ಎದುರು ಪಲ್ಟಿ ಹೊಡೆದ ಬುಲ್ಸ್ ಸತತ 9ನೇ ಸೋಲಿನ ಮುಖಭಂಗ ಅನುಭವಿಸಿತು.
ಅಜಯ್ ಠಾಕೂರ್ (7) ಹಾಗೂ ನಾಯಕ್ ಮಂಜೀತ್ ಚಿಲಾರ್ (8) ಅವರ ಆಲ್‌ರೌಂಡ್ ಪ್ರದರ್ಶನದಿಂದ ಬುಲ್ಸ್ ಪಡೆಯನ್ನು 3 ಬಾರಿ ಆಲ್‌ಔಟ್ ಮಾಡಿದ ಪುಣೇರಿ ಪಲ್ಟನ್ 17 ಅಂಕಗಳ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿತು.
ಬುಲ್ಸ್ ಏಟಿಗೆ ಪಲ್ಟನ್ ತಿರುಗೇಟು
ಪಂದ್ಯದ ಆರಂಭದಲ್ಲಿ 3-1 ರಿಂದ ಹಿನ್ನಡೆ ಕಂಡಿದ್ದ ಬುಲ್ಸ್ ತಂಡ, 10ನೇ ನಿಮಿಷದಲ್ಲಿ ಪಲ್ಟನ್ ಪಡೆಯನ್ನು ಆಲ್‌ಔಟ್ ಮಾಡಿ 10-5ರ ಮುನ್ನಡೆಯೊಂದಿಗೆ ಸತತ ಸೋಲಿನ ಕೊಂಡಿ ಕಳಚುವ ಸೂಚನೆ ನೀಡಿತು. ಆದರೆ ಡಿಫೆನ್ಸ್‌ನಲ್ಲಿ ತೋರಿದ ಅಜಾಗರೂಕತೆಯಿಂದಾಗಿ ಒಂದರ ಹಿಂದೆ ಒಂದರಂತೆ ಅಂಕ ಬಿಟ್ಟುಕೊಟ್ಟ ಬುಲ್ಸ್ 16ನೇ ನಿಮಿಷದಲ್ಲಿ ಮೊದಲ ಆಲ್‌ಔಟ್ ಆಘಾತ ಅನುಭವಿಸಿತು. ಇದರೊಂದಿಗೆ ಪಂದ್ಯದಲ್ಲಿ ಮರುಜೀವ ಪಡೆದ ಪಲ್ಟನ್ 14-11 ರಿಂದ 3 ಅಂಕಗಳ ಮುನ್ನಡೆ ಪಡೆಯಿತು.
ಸತತ 9ನೇ ಸೋಲುಂಡ ಬೆಂಗಳೂರು ಬುಲ್ಸ್ ಮಿಂಚಿದ ಅಜಯ್ ಠಾಕೂರ್