Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಲೆ. ಶರತ್ ಚಂದ್‌ಗೆ ನೈರುತ್ಯ ವಲಯದ ಸಾರಥ್ಯ

$
0
0

ಜೈಪುರ: ಜೈಪುರದಲ್ಲಿ ಸೋಮವಾರ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಜನರಲ್ ಶರತ್ ಚಂದ್ ಅವರು ಭಾರತೀಯ ಸೇನೆಯ ನೈರುತ್ಯ ವಲಯದ ದಳಪತಿಯಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ಜೈಪುರ ಸೇನಾ ನೆಲೆಯ ಸಮೀಪವೇ ಇರುವ ಸ್ಮಾರಕ 'ಪ್ರೇರಣಾ ಸ್ಥಳ'ಕ್ಕೆ ಭೇಟಿ ನೀಡಿದ ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಅಲ್ಲಿ ಚಂದ್ ಅವರು ಯೋಧರಿಂದ ಗೌರವ ವಂದನೆ ಸ್ವೀಕರಿಸಿದರು.

1979ರಲ್ಲಿ ಗದ್ವಾಲ್ ರೈಫಲ್ಸ್‌ಗೆ ಸೇರಿದ ಚಂದ್ ಅವರು 37 ವರ್ಷಗಳ ಸೇವಾವಧಿಯಲ್ಲಿ ಅಪ್ರತಿಮ ಸಾಧನೆಗೈದಿದ್ದಾರೆ. ತಿರುವನಂತಪುರ ರಾಷ್ಟ್ರೀಯ ಸೇನಾ ಅಕಾಡೆಮಿಯಲ್ಲಿ ತರಬೇತಿ ಪಡೆದ ಅವರು, ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಪದವಿ ಪಡೆದಿದ್ದರು.

ಲಂಕಾಗೆ ತೆರಳಿದ್ದ ಶಾಂತಿ ಪಡೆಯಲ್ಲಿ ಚಂದ್ ಕೂಡ ಒಬ್ಬರಾಗಿದ್ದರು. ಕಾರ್ಗಿಲ್, ಲಡಾಖ್‌ನಲ್ಲಿ ನಡೆದಿದ್ದ ಸೇನಾ ಕಾರ‌್ಯಾಚರಣೆಯಲ್ಲಿ ಚಂದ್ ಅವರ ಪಾತ್ರವಿದೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>