Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಕಾಪು ಹೋರಾಟ ಶಾಂತ

$
0
0

ಕಾಪು ಹೋರಾಟ ಶಾಂತ: ಆಮರಣಾಂತ ಹೋರಾಟದ ಎಚ್ಚರಿಕೆ

ಆಮರಣಾಂತ ಹೋರಾಟದ ಎಚ್ಚರಿಕೆ

*ಹೋರಾಟಕ್ಕೆ ಪವನ್ ಕಲ್ಯಾಣ ಬೆಂಬಲ

* ಸಮಿತಿ ರಚಿಸಲು ಆಂಧ್ರ ಸರಕಾರದ ಸಿದ್ಧತೆ

ಹೈದರಾಬಾದ್: ಹಿಂದುಳಿದ ವರ್ಗದಲ್ಲಿ ಮೀಸಲು ಸೌಲಭ್ಯಕ್ಕಾಗಿ ಭಾನುವಾರ ನಡೆದಿದ್ದ ಹೋರಾಟ ಸೋಮವಾರ ಶಾಂತವಾಗಿದೆ. ಭಾನುವಾರ ತಡ ರಾತ್ರಿ, ಕಾಪು ನಾಯಕ ಪದ್ಮನಾಭ್ ಪ್ರತಿಭಟನೆ ವಾಪಸ್ ಪಡೆದಿದ್ದರಿಂದ ಬಸ್, ರೈಲು ಸಂಚಾರ ಆರಂಭಗೊಂಡಿತ್ತು. ಸರಕಾರ ನಮ್ಮ ಹೋರಾಟಕ್ಕೆ ಮಣಿಯದಿದ್ದರೆ, 'ಆಮರಣಾಂತ ಹೋರಾಟ' ನಡೆಸುವ ಎಚ್ಚರಿಕೆಯನ್ನು ಪದ್ಮನಾಭ ನೀಡಿದ್ದಾರೆ.

ಹಿಂದುಳಿದ ವರ್ಗದಲ್ಲಿ ಮೀಸಲು ಕಲ್ಪಿಸುವಂತೆ ''ಕಾಪು ಘರ್ಜನೆ'' ಚಳವಳಿ ಭಾನುವಾರ ಏಕಾಏಕಿ ಹಿಂಸೆಗೆ ತಿರುಗಿತ್ತು. ಪೂರ್ವ ಗೋದಾವರಿ ಜಿಲ್ಲೆಯ ಟುನಿ ರೈಲ್ವೆ ನಿಲ್ದಾಣದಲ್ಲಿ ರತ್ನಾಂಚಲ ಎಕ್ಸ್‌ಪ್ರೆಸ್ ರೈಲಿನ ನಾಲ್ಕು ಬೋಗಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ವಿಜಯವಾಡ ಮತ್ತು ವಿಶಾಖಪಟ್ಟಣಂ ವಲಯದಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯಗಿತ್ತು.

ಏನಿದು ಕಾಪು ಹೋರಾಟ: ಕಾಪು ಆಂಧ್ರದ ಪ್ರಮುಖ ಸಮುದಾಯವಾಗಿದೆ. ಇದರಲ್ಲಿ ನಾಲ್ಕು ಉಪ ಜಾತಿಗಳಿದ್ದು, ಕಾಪುಸ್, ಒಂಟಾರಿಸ್, ತೆಲಗಾಸ್, ಮತ್ತು ಬಲಿಜಾಸ್ ಗಳ ಸಮ್ಮಿಶ್ರಣವಾಗಿದೆ.

ಇವರ ಬೇಡಿಕೆ ಏನು?: ನೌಕರಿ ಮತ್ತು ಶಿಕ್ಷಣ ಪಡೆಯಲು ಸಮುದಾಯದ ಜನರಿಗೆ ಮೀಸಲು ನಿಗದಿ ಮಾಡಬೇಕು ಎಂಬುದು ಸಮುದಾಯದ ಪ್ರಮುಖ ಬೇಡಿಕೆಯಾಗಿದೆ.

ಏಷ್ಟು ಪ್ರಾಮುಖ್ಯ?:

ಶೇ 27 ರಷ್ಟು ಜನಸಂಖ್ಯೆ ಹೊಂದಿರುವ ಈ ಸಮುದಾಯ ಇಲ್ಲಿನ ರಾಜಕೀಯದ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಸರಕಾರಗಳ ಆಯ್ಕೆಯಲ್ಲೂ ಪ್ರಮುಖ ಪಾತ್ರ ಈ ಸಮುದಾಯದ್ದಾಗಿದೆ.

ಈಗ್ಯಾಕೆ ಬುಗಿಲೆದ್ದಿದೆ?:

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಾಪು ಸಮುದಾಯಕ್ಕೆ ಮೀಸಲು ಮುಂದುವರೆಸುವ ಭರವಸೆ ನೀಡಿದ್ದರು. ಆದರೆ, ಇದಕ್ಕೆ ಇತರ ಹಿಂದುಳಿದ ವರ್ಗಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಇದರಿಂದಾಗಿ, ಸರಕಾರ ಭರವಸೆ ಈಡೇರಿಸುವಲ್ಲಿ ವಿಫಲವಾಗಿತ್ತು.

ಚಂದ್ರಬಾಬು ನಾಯ್ಡು ಏನು ಮಾಡಬಹುದು:?

ವಿವಾದ ಬಗೆಹರಿಸಲು ಸಿಎಂ ಚಂದ್ರಬಾಬು ನಾಯ್ಡು, ಮೀಸಲು ನೀಡುವ ಸಾಧಕ - ಬಾಧಕಗಳ ಕುರಿತು ಸಮಿತಿ ರಚನೆ ಮಾಡುವ ಸಾಧ್ಯತೆಗಳಿವೆ.

ರಾಜಕೀಯ ಲೆಕ್ಕಾಚಾರ ಏನು?:

* ಬಹುಪಾಲು ಜನಸಂಖ್ಯೆ ಹೊಂದಿರುವ ಕಾಪು ಸಮುದಾಯ ನಟ ಪವನ್ ಕಲ್ಯಾಣ ಚಂದ್ರಬಾಬು ನಾಯ್ಡು ಸರಕಾರದ ಮಿತ್ರರಾಗಿದ್ದಾರೆ. ಒಂದು ವೇಳೆ ಸರಕಾರ ಉತ್ತಮ ನಿರ್ಧಾರ ಕೈಗೊಳ್ಳಲು ವಿಫಲರಾದರೆ, ನಾಯ್ಡು ಅವರಿಂದ ದೂರವಾಗ ಬಹುದು.

* ಮೊದಲು ಕಾಂಗ್ರೆಸ್ ಬೆಂಬಲಿಗರಾಗಿದ್ದ ಕಾಪು ಸಮುದಾಯ ಬಿಜೆಪಿ ಇಲ್ಲವೇ ವೈಎಸ್‌ಆರ್ ಕಡೆಗೆ ಹೋಗಬಹುದು.

* ಒಂದು ವೇಳೆ, ಕಾಪು ಸಮುದಾಯವನ್ನು ಹಿಂದುಳಿದ ವಿಭಾಗಕ್ಕೆ ಸೇರಿಸಿದರೆ, ಹಿಂದುಳಿದ ವರ್ಗಗಳ ಮತಗಳು ವಿಭಜನೆಯಾಗುವ ಸಾಧ್ಯತೆ ಇದೆ.

* ಒಂದು ವೇಳೆ ಹಿಂದುಳಿದ ವರ್ಗಗಳ ಮತಬ್ಯಾಂಕ್ ನಲ್ಲಿ ವಿಭಜನೆಯಾದರೆ, ಆಂಧ್ರ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗುವ ಸಾಧ್ಯತೆಗಳಿವೆ.

ಚಳವಳಿ ರೂವಾರಿ : ಪದ್ಮನಾಭ

ಯಾರಿವರು ಮುದ್ರಗಡ ಪದ್ಮನಾಭ

ರಾಜ್ಯಾದ್ಯಂತ ಹೆಚ್ಚು ಓಡಾಡುವ ಕಾಪು ನಾಯಕ ಎಂಬ ಹಿರಿಮೆ ಹೊಂದಿದ್ದಾರೆ. ಎನ್.ಟಿ. ರಾಮರಾವ್ ಅವಧಿಯಲ್ಲಿ ಪದ್ಮನಾಭ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ರಾಜಕೀಯದಿಂದ ದೂರವಾಗಿರುವ ಇವರು ಈಗ ಕಾಪು ಸಮುದಾಯದ ಹೀರೋ ಆಗಿದ್ದಾರೆ.

---

ಹೋರಾಟಕ್ಕೆ ಪವನ್ ಕಲ್ಯಾಣ ಬೆಂಬಲ ನೀಡಿದ್ದಾರೆ. ವಿಶಾಖಪಟ್ಟಣಂನಲ್ಲಿ ಸುದ್ದಿಗೋಷ್ಠಿ ನಡೆಸಿ, ಹೋರಾಟ ಶಾಂತಿಯುತವಾಗಿ ನಡೆಯಲಿ, ಆದರೆ, ಹಿಂಸಾಚಾರ ನೋವು ತಂದಿದೆ ಎಂದಿದ್ದಾರೆ. ಕಾಪು ಹಿಂದುಳಿದ ವರ್ಗದ ಪಟ್ಟಿಯಲ್ಲಿದ್ದು, ರಾಯಲ್ ಸೀಮೆ ವ್ಯಾಪ್ತಿಯಲ್ಲಿ ಮಾತ್ರ ಮೀಸಲಿಲ್ಲ ಎಂದು ಮಾಹಿತಿ ನೀಡಿದರು.

ಸಚಿವರ ಭರವಸೆ:

ಸರಕಾರ ಮೀಸಲು ನೀಡಲು ಬದ್ಧ ಎಂದು ಸಚಿವ ಪಲ್ಲೆ ರಘುನಾಥ ರೆಡ್ಡಿ ಹೇಳಿದ್ದಾರೆ. ಸರಕಾರದ ಮೇಲಿನ ಆರೋಪ ನಿರಾಧಾರ, ಈ ಬಗ್ಗೆ ಸಮಿತಿಯೊಂದನ್ನು ರಚಿಸಲು ಸಿದ್ಧತೆ ನಡೆದಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>