Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಕಾಲಿವುಡ್‌ನಲ್ಲಿ ಕನ್ನಡ ಹುಡುಗನ ಕಲರವ

$
0
0

- ಎಚ್. ಮಹೇಶ್

ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಯನ ತಾರಾಗೆ ಜೋಡಿಯಾಗಿ ಕನ್ನಡದ ಹುಡುಗ ಸುಲಿಲೆ ಕುಮಾರ್ ನಟಿಸುತ್ತಿದ್ದಾರೆ. ಇದನ್ನು ತಮಿಳಿನ ಖ್ಯಾತ ನಿರ್ದೇಶಕ ಸರ್ಗುಣಂ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ ಮೊದಲು ಧನುಶ್, ಅಥರ್ವ ನಾಯಕರಿಗೆ ಚಿತ್ರ ನಿರ್ದೇಶನ ಮಾಡಿದವರು.

ಈ ವಿಷಯವನ್ನು ಖಚಿತಪಡಿಸುತ್ತ ಸುಲಿಲೆ ಒಂದಿಷ್ಟು ವಿಷಯ ಹಂಚಿಕೊಂಡರು. 'ಇದೊಂದು ಸವಾಲಿನ ಪಾತ್ರ. ತಮಿಳು ಚಿತ್ರರಂಗದ ನಿರ್ದೇಶಕರು ನನ್ನನ್ನು ಗುರುತಿಸಿ ನಯನ ತಾರಾ ಜೊತೆ ನಟಿಸುವ ಅವಕಾಶ ಕೊಟ್ಟಿರುವುದಕ್ಕೆ ಥ್ರಿಲ್ ಆಗಿದ್ದೇನೆ. ಈ ಪಾತ್ರ ನನ್ನ ವೃತ್ತಿ ಜೀವನದಲ್ಲಿ ಹೊಸ ತಿರುವು ಕೊಡಲಿದೆ. ಮಾರ್ಚ್‌ನಲ್ಲಿ ಹೈದರಾಬಾದ್, ಚೆನ್ನೈನಲ್ಲಿ ಶೂಟಿಂಗ್ ಶುರುವಾಗಲಿದೆ ಎಂದರು.

ಸುಲಿಲೆ ಕುಮಾರ್ ಈ ಹಿಂದೆ ಥಗರಾರು ಹಾಗೂ ಆನ್ಮೈ ಥವರೇಲ್ ಚಿತ್ರದಲ್ಲಿ ನಟಿಸಿದ್ದು, ತರುಣ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದರು. ಆದರೆ ಮೂಲ ಹೆಸರಿನಲ್ಲಿ ಅದೃಷ್ಟ ಇರುವಾಗ ಸಿನಿಮಾ ಹೆಸರು ಯಾಕೆ ಬೇಕು ಎಂದು ಇನ್ನು ಮುಂದೆ ಸುಲಿಲೆ ಕುಮಾರ್ ಎಂದೇ ಗುರುತಿಸಿಕೊಳ್ಳುತ್ತಾರಂತೆ. ಮತ್ತೊಂದು ತಮಿಳು ಚಿತ್ರ ಕಲಾಥರ್ ಗ್ರಾಮಂ ಚಿತ್ರದಲ್ಲಿ ಸುಲಿಲೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ನಟನಿಗೆ ಕನ್ನಡ ಚಿತ್ರರಂಗದಲ್ಲಿ ನಟಿಸುವ ಆಸೆ ಇದೆಯಂತೆ. ಅದಕ್ಕಾಗಿ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಇದರಲ್ಲಿ ಸಂಯುಕ್ತ ಹೊರನಾಡು ನಟಿಸಿದ್ದಾರೆ. 'ಕನ್ನಡದವನಾಗಿ ಕನ್ನಡ ಚಿತ್ರದಲ್ಲಿ ನಟಿಸದೇ ಇದ್ದರೆ ಹೇಗೆ? ಆದರೆ ನನಗೆ ಇಂಪ್ರೆಸ್ ಆಗುವಂತಹ ರೋಲ್‌ಗಳು ಸಿಕ್ಕಿಲ್ಲ. ಒಂದಿಬ್ಬರು ನಿರ್ಮಾಪಕರು ಆಫರ್ ಮಾಡಿದ್ದಾರೆ. ಆ ಬಗ್ಗೆ ಖಚಿತವಾದ ಮೇಲೆ ಮಾತನಾಡುವೆ' ಎನ್ನುತ್ತಾರೆ ಈ ನಟ.

ನಯನ ತಾರಾ ಕನ್ನಡದಲ್ಲಿ ಉಪೇಂದ್ರ ಜೊತೆ ಸೂಪರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಮೂಲತಃ ಮಲಯಾಳಂ ಮೂಲದ ಅವರು ಮುರುಗದಾಸ್ ನಿರ್ದೇಶನದ ಗಜನಿ ಚಿತ್ರದ ಮೂಲಕ ಸ್ಟಾರ್ ಪಟ್ಟ ಪಡೆದುಕೊಂಡರು. ಸದ್ಯ ದಕ್ಷಿಣ ಭಾರತದ ಸ್ಟಾರ್ ನಟಿಯೂ ಹೌದು. ಹೀಗಾಗಿ ಇಂಥ ನಟಿಯೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ಈ ನಟನಿಗೆ ಸಹಜವಾಗಿಯೇ ಖುಷಿ ತಂದಿದೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮದುವೆಯಾಗಲು ನಿರ್ಧರಿಸಿದ್ದಾರೆ ಅಮ್ಮ- ಮಗ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>