Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ವಿಮಾನ ಪ್ರಯಾಣಿಕರ ಸಂಖ್ಯೆ ಶೇ.25ರಷ್ಟು ಹೆಚ್ಚಳ

$
0
0

ಬ್ರೆಜಿಲ್, ರಷ್ಯಾ ಮತ್ತು ಜಪಾನ್‌ನಲ್ಲಿ ಇಳಿಮುಖ, ಭಾರತದಲ್ಲಿ ಏರುಮುಖ

ಹೊಸದಿಲ್ಲಿ: ಭಾರತದ ದೇಶೀಯ ವಿಮಾನಗಳ ಪ್ರಯಾಣಿಕರ ಸಂಖ್ಯೆ ಕಳೆದ ವರ್ಷದ ನವೆಂಬರ್‌ನಲ್ಲಿ ಶೇ.25.1ರಷ್ಟು ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ವಿಮಾನಯಾನ ಸಂಘಟನೆ(ಐಎಟಿಎ) ಪ್ರಕಾರ - ಈ ಅವಧಿಯಲ್ಲಿ ಬ್ರೆಜಿಲ್, ರಷ್ಯಾ ಮತ್ತು ಜಪಾನ್‌ನಂಥ ದೇಶಗಳಲ್ಲಿ ನಕಾರಾತ್ಮಕ ಬೆಳವಣಿಗೆ ವರದಿಯಾಗಿದೆ. ಆದರೆ, ಭಾರತದಲ್ಲಿ ಪರಿಸ್ಥಿತಿ ಆಶಾದಾಯಕವಾಗಿದೆ. ದೀಪಾವಳಿ ರಜೆ ಮತ್ತಿತರ ಕಾರಣಗಳಿಂದ ಪ್ರಯಾಣಿಕರ ವಿಮಾನ ಪ್ರಯಾಣ ಹೆಚ್ಚಳವಾಗಿದೆ. ಭಾರತದ ನಂತರದ ಸ್ಥಾನದಲ್ಲಿ ಅಮೆರಿಕ ಇದ್ದು, ಶೇ.9.1ರಷ್ಟು ಬೆಳವಣಿಗೆ ಕಂಡು ಬಂದಿದೆ.

''ಇದೊಂದು ಒಳ್ಳೆಯ ಸುದ್ದಿಯಾದರೂ, 2016ರಲ್ಲಿ ಇದೇ ಟ್ರೆಂಡ್ ಮುಂದುವರಿಯುತ್ತದೆ ಎಂದು ಹೇಳಲಾಗದು. ಚೀನಾದಲ್ಲಿನ ನಿಧಾನ ಗತಿಯ ಆರ್ಥಿಕ ಬೆಳವಣಿಗೆಯು ವಿಶ್ವದ ಮೇಲೆ ಪರಿಣಾಮ ಬೀರುತ್ತದೆ,'' ಎನ್ನುತ್ತಾರೆ ಐಎಟಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟೋನಿ ಟೈಲರ್.

ಕಳೆದ ವರ್ಷದ ಮೊದಲ 10 ತಿಂಗಳಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಶೇ.5ರಷ್ಟು ಇಳಿಕೆ ಕಂಡಿತ್ತು. ಆದರೆ ನವೆಂಬರ್‌ನಲ್ಲಿ ಗಣನೀಯ ಹೆಚ್ಚಳವಾಗಿದೆ. ಇದೇ ಅವಧಿಯಲ್ಲಿ ಚೀನಾದಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಪ್ರಮಾಣ ಶೇ.8.4ರಷ್ಟು ವರದಿಯಾಗಿದೆ. ಇತ್ತ, ಜಪಾನ್‌ನಲ್ಲಿ ಶೇ.7.1ರಷ್ಟು ಇಳಿಕೆಯಾಗಿದೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>