Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಶಂಕರ್ ಕನಸಿನ ಕಲರವ

$
0
0

ಹಲವು ಕಾರಣಗಳಿಂದಾಗಿ ಶಂಕರ್ ನಿರ್ದೇಶನದ ನಾಗರಕಟ್ಟೆ ಚಿತ್ರವು ಕುತೂಹಲ ಮೂಡಿಸಿದೆ. 18ನೇ ಕ್ರಾಸ್ ಚಿತ್ರದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕರು, ಮತ್ತೊಂದು ಹೊಸ ಕತೆಯೊಂದಿಗೆ ಮುಖಾಮುಖಿ ಆಗಿದ್ದಾರೆ. ಹೀಗಾಗಿ ನಾಗರಕಟ್ಟೆಯು ನಿರೀಕ್ಷೆಯ ಚಿತ್ರಗಳ ಸಾಲಲ್ಲಿ ಕಾಣಿಸಿಕೊಂಡಿದೆ.

ಸಾಧನೆ ಮಾಡಲೆಂದು ಸಿನಿಮಾ ರಂಗಕ್ಕೆ ಬರುವ ಯುವಕನೊಬ್ಬನ ಸುತ್ತ ಹೆಣೆದ ಕತೆ ಇಲ್ಲಿದೆ. ಆ ಹುಡುಗ ಏನೆಲ್ಲ ಅವಮಾನಗಳನ್ನು ಅನುಭವಿಸುತ್ತಾನೆ. ಅವುಗಳನ್ನು ದಾಟಿಕೊಂಡು ಸಾಧಿಸುತ್ತಾನೆ ಎಂಬಲ್ಲಿಗೆ ಕತೆ ಕುತೂಹಲ ಪಡೆದುಕೊಳ್ಳುತ್ತದೆ. ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ಚಿತ್ರಕತೆಯ ಬಹುತೇಕ ಕಡೆ ನಿರ್ದೇಶಕರ ಸ್ವಂತ ಅನುಭವಗಳೇ ಇವೆ.

'ನಾನು ಯಾವಾಗಲೂ ಹೊಸ ರೀತಿಯಲ್ಲೇ ಯೋಚಿಸುತ್ತೇನೆ. ಈ ಸಿನಿಮಾ ಕೂಡ ಹಾಗೆಯೇ ಮೂಡಿ ಬಂದಿದೆ. ಮೇಲ್ನೋಟಕ್ಕೆ ಇದು ಲವ್‌ಸ್ಟೋರಿ ಅನಿಸಿದರೂ, ಅದಕ್ಕೊಂದು ಹೊಸ ರೂಪ ನೀಡಿದ್ದೇವೆ. ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಇದು ಸ್ಪೆಷಲ್ ಸಿನಿಮಾ ಎಂದು ಕರೆಯುತ್ತೇನೆ' ಅನ್ನುವುದು ನಿರ್ದೇಶಕರ ಮಾತು.

ಈಗಾಗಲೇ ಬಹುತೇಕ ಶೂಟಿಂಗ್ ಮುಗಿದಿದೆ. ಎರಡು ಹಾಡುಗಳ ಚಿತ್ರೀಕರಣ ಬಾಕಿ ಇದೆ. ಒಂದು ಹಾಡಿನಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ರಾಕ್ ಸ್ಟೈಲ್‌ನಲ್ಲಿ ಒಂದು ಹಾಡು ಇದ್ದು, ಅದಕ್ಕಾಗಿ ಅರ್ಜುನ್ ಹೆಜ್ಜೆ ಹಾಕಲಿದ್ದಾರೆ.

ಈ ಚಿತ್ರದಲ್ಲಿ ಶ್ರಾವ್ಯ ಮತ್ತು ನಿಹಾರಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭರತ್ ಸಾಗರ್ ಹಾಗೂ ಅನೀಶ್ ನಾಯಕರು. ಇದೇ ಮೊದಲ ಬಾರಿಗೆ ಅನೀಕ್ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ದ್ವಾರಕೀಶ, ಚಿಕ್ಕಣ್ಣ, ಗಿರಿ ದಿನೇಶ್, ಅವಿನಾಶ್ ಹೀಗೆ ಬಹುದೊಡ್ಡ ತಾರಾ ಬಳಗವೇ ಸಿನಿಮಾದಲ್ಲಿದೆ.

'ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಅನೇಕ ಸುಂದರ ಸ್ಥಳಗಳಲ್ಲಿ ಹಾಡುಗಳ ಚಿತ್ರೀಕರಣ ನಡೆದಿದೆ. ನಾವು ಏನು ಅಂದುಕೊಂಡಿದ್ದೇವೋ, ಅದೇ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಮೊನ್ನೆಯಷ್ಟೇ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದೆವು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಕೂಡ ಅದೇ ರೀತಿಯಲ್ಲಿ ಮೆಚ್ಚುಗೆ ಪಡೆಯುತ್ತದೆ ಅನ್ನುವ ನಂಬಿಕೆ ನನ್ನದು' ಎನ್ನುವುದು ನಿರ್ದೇಶಕ ಶಂಕರ್ ಮಾತು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>