Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಮನಿಷಾ ಜತೆ ಅರ್ಜುನ್ ಕೆಮಿಸ್ಟ್ರಿ

$
0
0

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ರಮೇಶ್ ಮತ್ತೊಮ್ಮೆ ಅಂತಹದ್ದೇ ಕಥೆಯ ಜತೆ ಮರಳಿದ್ದಾರೆ. ಸಿನಿಮಾದಲ್ಲಿ ಗಂಡ ಹೆಂಡತಿ ಇರುವ ಮನೆಯಲ್ಲಿ ಹೆಂಡತಿಯ ಕೊಲೆ ಆಗುತ್ತದೆ. ಮೊದ ಮೊದಲು ಗಂಡನ ಮೇಲೆ ಅನುಮಾನ ಬಂದರೂ ನಂತರ ಕಥೆ ಬೇರೆಯದ್ದೇ ತಿರುವು ಪಡೆಯುತ್ತದೆ. ನಿಜವಾದ ಕೊಲೆಗಾರ ಯಾರು ಎಂಬುದು ಕಥೆಯ ಕ್ಲೈಮಾಕ್ಸ್. ಕೊಲೆಯ ಜಾಡು ಹಿಡಿದು ಹೊರಡುವ ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ಸರ್ಜಾ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಎ.ಎಮ್.ಆರ್. ರಮೇಶ್ ಮತ್ತೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ಬಿಝಿ ಆಗಿದ್ದಾರೆ. ಅರ್ಜುನ್ ಅರ್ಜಾ ಮುಖ್ಯಭೂಮಿಕೆಯ 'ಗೇಮ್' ಅವರ ಅಪ್‌ಕಮಿಂಗ್ ಚಿತ್ರ. ಈ ಹಿಂದೆ ನಿರ್ದೇಶನ ಮಾಡಿದ್ದ ಸನೈಡ್, ಅಟ್ಟಹಾಸಗಳ, ಪೊಲೀಸ್ ಕ್ವಾಟ್ರಸ್ ಹಾಗೆ ಗೇಮ್ ಕೂಡ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಂತೆ. ಮರ್ಡರ್ ಮಿಸ್ಟರಿ ಚಿತ್ರದ ಮುಖ್ಯ ವಸ್ತುವಾಗಿದ್ದು ಅದರ ಸುತ್ತ ಕಥೆ ಹೆಣೆಯಲಾಗಿದೆ.

ದ್ವಿಭಾಷಾ ಚಿತ್ರ 'ಗೇಮ್' ಏಕಕಾಲಕ್ಕೆ ಕನ್ನಡ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಅರ್ಜುನ್ ಸರ್ಜಾ ಅವರು ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜತೆಯಾಗಿರುವುದು ಮನಿಷಾ ಕೊಯಿರಾಲಾ. ಈ ಹಿಂದೆ ಮುದಲ್ವನ್ ಎಂಬ ಬ್ಲಾಕ್ ಬಸ್ಟರ್ ತಮಿಳು ಚಿತ್ರ ನೀಡಿದ ಜೋಡಿ ಇದು. ಇದೀಗ ಕನ್ನಡದಲ್ಲಿ ಗೇಮ್ ಆಡೋಕೆ ತಯಾರಾಗಿದ್ದಾರೆ. ಇದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಇಬ್ಬರು ನಾಯಕ ನಟಿಯರಿದ್ದು ಕಾಶ್ಮೀರಿ ಬೆಡಗಿ ಆಕ್ಸಾ ಭಟ್ ಕೂಡ ನಟಿಸಿದ್ದಾರೆ.

'ಮನಿಷಾ ಕೊಯಿರಾಲ ಅಥವಾ ರವೀನಾ ತಂಡನ್ ಇಬ್ಬರಲ್ಲಿ ಒಬ್ಬರನ್ನು ನನ್ನ ಚಿತ್ರದ ಲೀಡಿಂಗ್ ಕ್ಯಾರೆಕ್ಟರ್ ಮಾಡಬೇಕೆಂಬ ಯೋಚನೆ ಇತ್ತು. ಆದರೆ ಅರ್ಜುನ್ ಸರ್ಜಾ ಅವರ ಸಲಹೆಯ ಮೇರೆಗೆ ನಾನು ಮನಿಷಾ ಅವರ ಜತೆ ಮಾತನಾಡಿದೆ. ಆಗ ಅವರು ಅನಾರೋಗ್ಯ ನಿಮಿತ್ತ ಒಂದಷ್ಟು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ನನ್ನ ಸಿನಿಮಾದ ಕಥೆ ಕೇಳಿ ಒಪ್ಪಿಕೊಂಡರು. ಅಲ್ಲದೆ ಆ ಹೊತ್ತಿಗೆ ಮನಿಷಾ ಬಾಲಿವುಡ್ ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಅವರ ಚಿತ್ರವೊಂದಕ್ಕೆ ಸಹಿ ಮಾಡಿದ್ದರು. ಆದರೆ 'ಗೇಮ್'ನ ಚಿತ್ರೀಕರಣವನ್ನು ಸಂಪೂರ್ಣವಾಗಿ ಮುಗಿಸಿ ಹಿಂದಿ ಚಿತ್ರದ ಶೂಟಿಂಗ್‌ಗೆ ತೆರಳಿದರು. ಹಿಂದಿ ಸಿನಿಮಾವನ್ನು ಗೇಮ್‌ಗಾಗಿ ಪೋಸ್ಟ್‌ಪೋನ್ ಕೂಡ ಮಾಡಿದ್ದರು' ಎನ್ನುತ್ತಾರೆ ನಿರ್ದೇಶಕ ರಮೇಶ್.

ವಿವಾದಕ್ಕೆ ಅವಕಾಶ ಕೊಡಲ್ಲ

'ಗೇಮ್' ಚಿತ್ರದ ಕಥಾ ವಸ್ತು ಹೈ ಪ್ರೊಫೈಲ್ ಮರ್ಡರ್. ಹಾಗಾದರೆ ಇದು ನೈಜ ಘಟನೆಯನ್ನು ಆಧರಿಸಿ ಬರೆದ ಕಥೆಯಾ ಎಂದು ಕೇಳಿದರೆ ರಮೇಶ್ ಹೀಗೆ ಹೇಳುತ್ತಾರೆ 'ಕಥೆಯ ಒನ್ ಲೈನ್ ಅಷ್ಟೇ ಹೇಳಬಲ್ಲೆ ನಾನು. ನೈಜ ಘಟನೆ ಹೌದೋ ಅಲ್ಲವೋ ಎಂಬುದನ್ನು ಈಗಲೇ ರಿವೀಲ್ ಮಾಡುವುದಿಲ್ಲ. ಜನರು ಥಿಯೇಟರ್‌ನಲ್ಲೇ ಅದನ್ನು ಕಂಡುಕೊಳ್ಳಲಿ. ಅಲ್ಲದೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲು ನಾನು ತಯಾರಿಲ್ಲ. ಆದಷ್ಟು ಶಾಂತವಾಗಿ ಚಿತ್ರದ ಕೆಲಸಗಳು ಮುಗಿದರೆ ಸಾಕು ಎಂಬುದು ನನ್ನ ಅಭಿಲಾಷೆ' ಎನ್ನುತ್ತಾರೆ.

ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು ಜನವರಿ ಕೊನೆಯ ವಾರದಲ್ಲಿ ಬಿಡುಗಡೆಗೆ ಸಿದ್ಧಾಗಿದೆ. ತಮಿಳು ನಟ ಶ್ಯಾಮ್ ಇಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂದ ಮಾತ್ರಕ್ಕೆ ಅವರೇ ಮರ್ಡನ್ ಹಿಂದಿನ ಮಿಸ್ಟ್ರಿ ಎಂದು ಅಂದಾಜು ಮಾಡುವುದು ಸಾಧ್ಯವಿಲ್ಲ. ಇಲ್ಲಿ ಎಲ್ಲ ಪಾತ್ರಗಳೂ ಕುತೂಹಲ ಹುಟ್ಟಿಸುತ್ತವೆ, ಅನುಮಾನ ಬರಿಸುತ್ತವೆ. ಕ್ಲೈಮ್ಯಾಕ್ಸ್‌ವರೆಗೂ ಯಾವುದೇ ರೀತಿಯಲ್ಲಿ ಇವರೇ ಕೊಲೆ ಮಾಡಿರಬಹುದು ಎಂದು ನಿರ್ಧರಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ನಿರ್ದೇಶಕರು. ಈ ಹಿಂದೆ ರಮ್ಯಾ ಹಾಗೂ ರಕ್ಷಿತಾ ನಟಿಸಿದ್ದ 'ತನನಂ ತನನಂ' ಕನ್ನಡ ಚಿತ್ರದಲ್ಲಿ ಶ್ಯಾಮ್ ಕಾಣಿಸಿಕೊಂಡಿದ್ದರು.

ಚಿತ್ರಕ್ಕೆ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಬರೆದಿದ್ದಾರೆ. ಇಳಯ ರಾಜ ಸಂಗೀತ ನಿರ್ದೇಶನ ಮಾಡಿದ್ದು ಕಾರ್ತಿಕ್ ಧನಿ ನೀಡಿದ್ದಾರೆ. ಬೆಂಗಳೂರು ಸುತ್ತಮುತ್ತ ಹಾಗೂ ಬ್ಯಾಂಕ್‌ಕಾಂಗ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸುಮಾರು 9 ಕೋಟಿ ವೆಚ್ಚದ ಚಿತ್ರ ಇದಾಗಿದೆ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ರಮೇಶ್ ಅವರದ್ದೇ. ಇದರ ಜತೆಗೆ ಒಂದು ಪಾತ್ರದಲ್ಲಿ ಇವರು ಕಾಣಿಸಿಕೊಂಡಿದ್ದಾರೆ.

-----

ಗೇಮ್ ಒಂದು ಹೈ ಪ್ರೊಫೈಲ್ ಮರ್ಡರ್ ಚಿತ್ರ ಎಂದಷ್ಟೇ ಹೇಳಬಲ್ಲೆ. ಅದು ನೈಜ ಘಟನೆಯನ್ನು ಆಧರಿಸಿದೆಯೋ ಇಲ್ಲವೋ ಎಂಬುದನ್ನು ಜನರೇ ನಿರ್ಧರಿಸಲಿ. ವಿವಾದಗಳನ್ನು ಹುಟ್ಟಿಸಿ ಚಿತ್ರದ ಪ್ರಚಾರ ಅಥವಾ ಅಪ ಪ್ರಚಾರ ಪಡೆಯಲು ಇಷ್ಟ ಇಲ್ಲ'.

- ಎ.ಎಮ್.ಆರ್. ರಮೇಶ್, ಗೇಮ್ ಚಿತ್ರದ ನಿರ್ದೇಶಕ.


Viewing all articles
Browse latest Browse all 7056

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಕಾರಿನಲ್ಲೇ 19 ದೇಶ ಸುತ್ತಿದ್ದಾರೆ ಈ ದಂಪತಿ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>