Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ನೂರೊಂದು ನೆನಪಲ್ಲಿ ಚೇತನ್‌

$
0
0

ಕುಮಾರೇಶ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಚೇತನ್‌ ಮೇಘನಾರಾಜ್‌ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಸ್ಟೈಲ್‌ನಲ್ಲಿರುವ ಚಿತ್ರದಲ್ಲಿ ಸುಂದರವಾದ ಕತೆ ಇದೆ ಎಂದಿದ್ದಾರೆ ಚೇತನ್‌. ಇದರ ಜತೆ ಇನ್ನೂ ಎರಡು ಚಿತ್ರಗಳಿಗೆ ಸಹಿ ಮಾಡಿದ್ದಾರೆ.

'ಮರಾಠಿ ಕಾದಂಬರಿಯನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಕುಮಾರೇಶ್‌. ಸ್ಕ್ರಿಪ್ಟ್‌ ಇಷ್ಟವಾಗಿದ್ದರಿಂದ ಒಪ್ಪಿಕೊಂಡೆ' ಎಂದಿದ್ದಾರೆ ಚೇತನ್‌. ಜೀವನದಲ್ಲಿ ಮೊದಲ ಆದ್ಯತೆ ಸಾಮಾಜಿಕ ಕೆಲಸಗಳಿಗೆ ಕೊಡುತ್ತಾ ಬಂದಿದ್ದಾರೆ ಚೇತನ್‌. ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಸಾಮಾಜಿಕ ಹೋರಾಟದಲ್ಲಿ ಅವರು ಭಾಗಿಯಾಗಿದ್ದರು. 'ಸಾಮಾಜಿಕ ಕೆಲಸಗಳೆಂದರೆ ನನಗೆ ಮೊದಲಿನಿಂದ ಇಷ್ಟ. ಕೆಲ ವರ್ಷ ಹೋರಾಟಗಾರನಾಗಿ ರಾಜ್ಯಾದ್ಯಂತ ತಿರುಗಾಡುತ್ತಿದ್ದೆ. ಸಮಯ ಸಿಕ್ಕಾಗ ನಟನೆಯತ್ತ ಗಮನ ಹರಿಸುತ್ತೇನೆ. ಸಿನಿಮಾಗೆ ಎರಡನೇ ಆದ್ಯತೆ ನೀಡುತ್ತೇನೆ. ಆಫರ್‌ಗಳು ಬರುತ್ತಲೇ ಇವೆ. ಒಳ್ಳೆಯ ಕತೆ ಇದ್ದು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಕತೆಗೆ ಪ್ರಾಮುಖ್ಯೆತೆ ನೀಡುತ್ತೇನೆ' ಎನ್ನುತ್ತಾರೆ ಚೇತನ್‌. ಸಾಮಾಜಿಕ ಕಾರ್ಯಗಳಿಗಾಗಿ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಅವರು ಹೇಳುತ್ತಾರೆ. ಬೇರೆಯವರ ಹಣದಲ್ಲಿ ಸೊಷಿಯಲ್‌ ಸರ್ವಿಸ್‌ ಮಾಡೋದಲ್ಲ. ಅವನು ಸಂಪಾದಿಸಿ ಹಣದಿಂದಲೇ ಅವನಂದುಕೊಂಡ ಕೆಲಸ ಮಾಡಬೇಕು ಅನ್ನೋದು ಅವರ ಸಿದ್ಧಾಂತ.

ಮೈನಾ ಇವರ ಇಷ್ಟದ ಚಿತ್ರವಂತೆ. ಕಾಲು ಇಲ್ಲದ ಯುವತಿಗೆ ಬಾಳು ನೀಡುವ ನಾಯಕನ ಪಾತ್ರ ತುಂಬಾ ಇಷ್ಟವಾಯಿತು ಎನ್ನುತ್ತಾರೆ. ಚೇತನ್‌ ಮಹೇಶ್‌ ಬಾಬು ನಿರ್ದೇಶನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರದ ಕತೆಯೂ ಚೆನ್ನಾಗಿದೆ ಎಂದಿದ್ದಾರೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!