Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಕಿರಿಕ್‌ ಪಾರ್ಟಿ ಕಿರಿಕ್‌

$
0
0

ರಕ್ಷಿತ್‌ ಶೆಟ್ಟಿ ನಟನೆ ಮತ್ತು ನಿರ್ಮಾಣದ ಕಿರಿಕ್‌ ಪಾರ್ಟಿ ಚಿತ್ರದ ಹಾಡು ಮತ್ತು ದೃಶ್ಯಗಳನ್ನು ಸಾರ್ವಜನಿಕರು ಆನ್‌ಲೈನ್‌ನಲ್ಲಿ ಅನಧಿಕೃತವಾಗಿ ಅಪ್‌ಲೋಡ್‌ ಮಾಡುತ್ತಿರುವುದರಿಂದ ತಮಗೆ ನಷ್ಟವಾಗುತ್ತಿದೆ ಎಂದು ಚಿತ್ರದ ನಿರ್ಮಾಣ ಸಂಸ್ಥೆ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದೆ.

ಕಿರಿಕ್‌ ಪಾರ್ಟಿ ಚಿತ್ರ ರಿಲೀಸ್‌ಗೆ ಮೊದಲು ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ಪ್ರಚಾರ ಗಿಟ್ಟಿಸಿತ್ತು. ಈಗ ಅದೇ ಸಾಮಾಜಿಕ ಜಾಲತಾಣ ಅವರಿಗೆ ಮುಳುವಾಗಿದೆ. ಸ್ವತಃ ರಕ್ಷಿತ್‌ ಶೆಟ್ಟಿ ಪರಂವಾಹ್‌ ಸ್ಟುಡಿಯೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಅಂತರ್ಜಾಲ ತಾಣಗಳಲ್ಲಿ ಭಾರೀ ಪ್ರಚಾರ ಸಿಕ್ಕಿತ್ತು. ಇದು ಚಿತ್ರದ ಯಶಸ್ಸಿಗೆ ಮುನ್ನುಡಿಯಾಯಿತು. ಈಗ ಚಿತ್ರದ ಹಾಡುಗಳು, ದೃಶ್ಯದ ತುಣುಕುಗಳು, ಡೈಲಾಗ್‌ಗಳನ್ನು ಅಪರಿಚಿತ ವ್ಯಕ್ತಿಗಳು ಫೇಸ್‌ಬುಕ್‌, ಯುಟ್ಯೂಬ್‌ ಮತ್ತಿತರ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಇದು ಕಂಪನಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ ಮತ್ತು ಕಾಪಿ ರೈಟ್ಸ್‌ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಪರಂವಾಹ್‌ ಸ್ಟುಡಿಯೋ ದೂರಿದೆ. ಹೀಗೆ ಅಪ್‌ಲೋಡ್‌ ಮಾಡಿರುವವರ ಬಗ್ಗೆ ಮಾಹಿತಿ ನೀಡುವಂತೆ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ಗೆ ದೂರು ನೀಡಿದ್ದಾರೆ. ಅಲ್ಲದೆ, ಕಾಪಿ ರೈಟ್ಸ್‌ ಉಲ್ಲಂಘನೆ ಮಾಡಿ ಅನಧಿಕೃತವಾಗಿ ಅಪ್‌ಲೋಡ್‌ ಮಾಡಲಾಗಿರುವುದನ್ನು ತೆಗೆದುಹಾಕುವಂತೆಯೂ ಮನವಿ ಮಾಡಿದೆ.

ಹೀಗೆ ದೂರು ದಾಖಲಿಸಿ ಎರಡು ದಿನಗಳಾದರೂ ಕಾಪಿ ರೈಟ್‌ ಉಲ್ಲಂಘನೆ ಮಾಡಿದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದೂ ನಿರ್ಮಾಣ ಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ. ರಕ್ಷಿತ್‌ ಶೆಟ್ಟಿ ಅಮೆರಿಕ ಪ್ರವಾಸದಲ್ಲಿರುವುದರಿಂದ ಸಂಸ್ಥೆಯ ಪರವಾಗಿ ಕಿರಣ್‌ ಕುಮಾರ್‌ ಕೆ.ಎಸ್‌. ಲೇಔಟ್‌ ಪೊಲೀಸ್‌ ಸ್ಟೇಷನ್‌ನಲ್ಲಿ ದೂರು ದಾಖಲಿಸಿದ್ದಾರೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!