Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

'ಸಿಗರೇಟ್' ಸೇವನೆ ಹಾನಿಕಾರಕ

$
0
0

ಕನ್ನಡ ಚಿತ್ರ

* ಶರಣು ಹುಲ್ಲೂರು
ನೀವು ಯಾವುದೇ ಥಿಯೇಟರ್‌ಗೆ ಹೋಗಿ, ಸಿನಿಮಾ ಶುರುವಾಗುವುದಕ್ಕಿಂತ ಮುಂಚೆ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂಬ ಜಾಹೀರಾತು ಇದ್ದೇ ಇರುತ್ತದೆ. ಅದರಲ್ಲೂ ಪ್ರತಿ ಪ್ರೇಕ್ಷಕನಿಗೂ ಸಿಗರೇಟ್‌ನಿಂದಾಗಿ ಮುಖೇಶ್ ಏನಾದ ಅನ್ನುವ ಸಂಗತಿ ತಿಳಿದಿರುತ್ತದೆ. ಅಂಥದ್ದೇ ವಿಷಯವನ್ನು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಲಕ್ಕಿ ಶಂಕರ್. ಐದತ್ತು ನಿಮಿಷದಲ್ಲಿ ಹೇಳಬೇಕಾಗಿದ್ದನ್ನು ಎರಡೂವರೆ ಗಂಟೆ ಎಳೆದಿದ್ದಾರೆ. ಹೀಗಾಗಿ ಸಿಗರೇಟು ಸಿನಿಮಾ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡುತ್ತಲೇ, ಮನಸ್ಸಿಗೆ ಘಾಟು ಮೂಡಿಸುತ್ತದೆ. 'ಧೂಮಪಾನ ಆರೋಗ್ಯಕ್ಕೆ ಹಾನಿಕರ'ಎಂದು ತಿಳಿಸುವ ಅತಿ ಉದ್ದದ್ದ ಡಾಕ್ಯುಮೆಂಟರಿ ಚಿತ್ರ ಅನಿಸುತ್ತದೆ.

ಲಕ್ಕಿ ಶಂಕರ್ ಪ್ರತಿಭಾವಂತ ನಿರ್ದೇಶಕ ಅನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಈ ಹಿಂದಿನ ನೈಂಟಿ ಮತ್ತು ದೇವ್ರಾಣೆ ಚಿತ್ರಗಳು ಕುಡಿತ ಮತ್ತು ಮೌಢ್ಯತೆಯ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದವು. ಸಿಗರೇಟ್ ಚಿತ್ರವು ಅದೇ ಹಾದಿಯಲ್ಲೇ ಸಾಗಿಬಂದಿದ್ದರೂ, ಪೇಲವ ಚಿತ್ರಕತೆಯಿಂದಾಗಿ ರುಚಿಸದು.

ಸಿಗರೇಟ್ ಸೇವನೆ ಹಾನಿಕರ ಅನ್ನುವುದನ್ನು ವಿವಿಧ ಉದಾಹರಣೆ ಕೊಟ್ಟು ಹೇಳುವ ನಾಯಕ (ನಾಗಶೇಖರ್)ನ ಮಾತಿನಲ್ಲಿ ಯಾವುದೇ ಹೊಸತಿಲ್ಲ. ಈಗಾಗಲೇ ಅವೆಲ್ಲವೂ ಪರಿಚಿತ ಸಂಗತಿಗಳೆ. ಇದರ ಜತೆಗೊಂದು ಲವ್‌ಸ್ಟೋರಿ ಇದೆ. ಸಾಧು ಕೋಕಿಲಾ ಮತ್ತು ನಾಗ್ ಶೇಖರ್‌ರ ಹಾಸ್ಯ ಸನ್ನಿವೇಶಗಳಿವೆ. ಹೀಗಾಗಿ ಅಲ್ಲಲ್ಲಿ ಕೊಂಚ ನಿರಾಳತೆ ಸಿಗುತ್ತದೆ. ಈ ಸಿನಿಮಾದ ಮೂಲಕ ಪರಿಚಿತವಾದ ರಕ್ಷಿತಾ ಪೊನ್ನಮ್ಮ ನಟನೆಯಲ್ಲಿ ಪಳಗಬೇಕಿದೆ. ರೂಪಶ್ರೀ ಕೂಡ ಪಾತ್ರ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಪಂಚಿಂಗ್ ಡೈಲಾಗ್, ವಿಶೇಷ ಅನಿಸುವ ದೃಶ್ಯಗಳು, ಉತ್ತಮವಾದ ಹಿನ್ನೆಲೆ ಸಂಗೀತ ಇರದ ಕಾರಣ ಸಿಗರೇಟ್ ಹಾನಿಕಾರ ಅನಿಸುತ್ತದೆ.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>