ಮದ್ದೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು 2008, 2013ರ ಸಾರ್ವತ್ರಿಕ ಚುನಾವಣೆ ವೇಳೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತÜಲೇ ಬಂದಿದ್ದು 2018ರಲ್ಲಿ ಅದು ಫಲಿಸಿದಲ್ಲಿ ತಮಗೆ ಬೇಸರವಿಲ್ಲವೆಂದು ಜೆಡಿಎಸ್‌ನಿಂದ ಅಮಾನತುಗೊಂಡ ಶಾಸಕ ಎನ್. ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಬೆಸಗರಹಳ್ಳಿಯಲ್ಲಿ ಮಾತನಾಡಿದ ಅವರು 2018ರ ಚುನಾವಣೆ ಬಳಿಕ ತಾವೇ ಮುಖ್ಯಮಂತ್ರಿಯಾಗುವುದಾಗಿ ಯಾವ ಗಣಿತ ಲೆಕ್ಕದಲ್ಲಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆಂಬುದು ತಿಳಿದಿಲ್ಲ ಎಂದರು. ಕಾಂಗ್ರೆಸ್ ಪಕ್ಷ ಸೇರಿ ಮುಂದಿನ ಚುನಾವಣೆ ಎದುರಿಸಬೇಕೆ, ಬೇಡವೇ ಎಂಬುದರ ಕುರಿತು ಕ್ಷೇತ್ರದ ಜನತೆ, ಕಾರ್ಯಕರ್ತರು, ಜಿಲ್ಲೆಯ ಮುಖಂಡರೊಡನೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದರು. ನಮ್ಮ ಮುಖಂಡರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷ ದಿಂದ ಅಮಾನತುಗೊಂಡಿರುವ ಶಾಸಕರ ಕುರಿತಾಗಿ ಈವರೆವಿಗೆ ಹೇಳಿರುವ ಹೇಳಿಕೆಗಳನ್ನು ಗಮನಿಸಿದ್ದು, ಪಕ್ಷಕ್ಕೆ ಮರುಸೇರ್ಪಡೆ ಸಂಬಂಧ ನಾವು ಎಂದೂ ದುಂಬಾಲು ಬಿದ್ದಿಲ್ಲವೆಂದು ಸ್ಪÜಷ್ಟಪಡಿಸಿದರು. ಮಾಜಿ ಶಾಸಕ ಕೆ. ಸುರೇಶ್‌ಗೌಡ ಅವರ ಆರೋಪ ಕುರಿತಾಗಿ ಮಾತನಾಡುವುದಿಲ್ಲವೆಂದ ಅವರು, 25 ವರ್ಷಗಳ ರಾಜಕೀಯ ಜೀವನದಲ್ಲಿ ತಾನು ಯಾವುದೇ ಪಕ್ಷ ದ ಕಾರ್ಯಕರ್ತರಿಗೆ ಕಿರುಕುಳ ನೀಡದಿರುವ ಕುರಿತಾಗಿ ಕ್ಷೇತ್ರ ಮತ್ತು ಜಿಲ್ಲೆಯ ಜನರಿಗೆ ತಿಳಿದಿದೆ. ಇದಕ್ಕಾಗಿ ಯಾರಿಂದಲೂ ಪ್ರಮಾಣಪತ್ರ ಬೇಕಿಲ್ಲವೆಂದರು. ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ ನಾವು ಯಾವುದೇ ಪಕ್ಷ ದಲ್ಲಿದ್ದರೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಒಳಿತನ್ನೇ ಬಯಸುತ್ತೇವೆ ಎಂದರು. ಈ ವೇಳೆ ರಾಮನಗರ ಮಾಜಿ ಶಾಸಕ ರಾಜಣ್ಣ, ಡಿ. ಕರಡೀಗೌಡ ಪ್ರತಿಷ್ಠಾನದ ಅಧ್ಯಕ್ಷ ವಿ.ಕೆ. ಜಗದೀಶ್, ಕೋಣಸಾಲೆ ಸಿದ್ದು ಹಾಜರಿದ್ದರು.
↧
ಎಚ್‌ಡಿಕೆ ಸಿಎಂ ಆದರೆ ಬೇಸರವಿಲ್ಲ: ಸಿಆರ್‌ಎಸ್
↧