ಕಾರವಾರ:ಇಲ್ಲಿ ಪ್ರಸಿದ್ಧ ಅಶ್ವತ್ಥನಾರಾಯಣ ಮಹಾಗಣಪತಿ,ಚಂದ್ರಾದೇವಿ,ಸಾಯಿಮಂದಿರ,ಕೋಟೇಶ್ವರ,ದೇವತೆದೇವಸ್ಥಾನ,ಬ್ರಹ್ಮದೇವಸ್ಥಾನ ಮುಂತಾದ ಪ್ರಮುಖ ದೇವಾಲಯಗಳು ಇವೆ. ಎರಡು ಸರಕಾರಿಕನ್ನಡ ಶಾಲೆ, 3 ಅಂಗನವಾಡಿ ಕೇಂದ್ರ ತೆರೆಯಲಾಗಿದೆ.ಅದರಲ್ಲಿ 2 ಕೇಂದ್ರಗಳಿಗೆ ಸ್ವಂತ ಕಟ್ಟಡ ಹಾಗೂ ಒಂದು ಬಾಡಿಗೆಕಟ್ಟದಲ್ಲಿ ನಡೆಯುತ್ತಿದೆ.ಆದರೆ ಇಲ್ಲಿನ ರಸ್ತೆ ಪಕ್ಕದಲ್ಲಿ ಚರಂಡಿಗಳಿಲ್ಲದೇ,ಮಳೆಗಾಲದಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗದೇ, ಸಾರ್ವಜನಿಕರು ಬಹಳ ತೊಂದರೆ ಅನುಭವಿಸಬೇಕಾಗುತ್ತದೆ. ಇಲ್ಲಿನ ರಸ್ತೆಗಳಿಗೆ ಡಾಂಬರೀಕರಣಗೊಳಿಸಿ ದಶಕಗಳೇ ಉರುಳಿವೆ. ಆದರೆ ರಸ್ತೆಗಳ ಡಾಂಬರು ಕಿತ್ತು ಹೋಗಿ ರಸ್ತೆಯ ದುಸ್ಥಿತಿ ಹೇಳತೀರದು.ನಗರಸಭೆ ಮಾತ್ರ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ ಎಂದು ಇಲ್ಲಿನ ಸಾರ್ವಜನಿಕರ ಆರೋಪ. ಮುಖ್ಯವಾಗಿ ಚಂದ್ರಾದೇವಿ ರಸ್ತೆಯ ಸ್ಥಿತಿ ದುಸ್ಥಿತಿಯಲ್ಲಿದೆ. ಇದೇ ರಸ್ತೆಗೆ ಎರಡು ಕಿರು ಸೇತುವೆಗಳಿದ್ದು,ಸೇತುವೆಯ ಅಡಿಯಲ್ಲಿ ಹಾಕಿರುವ ಸಿಮೆಂಟ್ ಪೈಪ್‌ಗಳು ಮಣ್ಣಿನಲ್ಲಿ ಹೂತು ಹೋಗಿವೆ. ಈ ಭಾಗದಲ್ಲಿ ಈ ಕಿರು ಸೇತುವೆ ತಗ್ಗು ಪ್ರದೇಶದಲ್ಲಿದೆ.ಹೀಗಾಗಿ ಇಲ್ಲಿಂದ ನೀರು ಸರಿಯಾಗಿ ಹರಿಯದೇ, ಮಳೆಗಾಲದಲ್ಲಿ ಭಾರಿ ಮಳೆಗೆ ನೀರು ರಸ್ತೆ ಮೇಲೆ ನಿಲ್ಲುತ್ತದೆ.ಇದರಿಂದ ಕಿರು ಸೇತುವೆ ಮೇಲಿನ ಡಾಂಬರು ಕಿತ್ತು ಹೋಗಿದೆ.ಡಾಂಬರೀಕರಣ ಮಾಡುವುದು ಅವಶ್ಯಕವಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಾರೆ. ನೀರಿಗೆ ತೊಂದರೆ ಇಲ್ಲ: ಇಲ್ಲಿ ಜನರು ಹೆಚ್ಚಾಗಿ ಬಾವಿ ನೀರನ್ನು ಉಪಯೋಗಿಸುತ್ತಾರೆ. ಆದರೆ ನಗರಸಭೆ ನಲ್ಲಿ ನೀರಿನ ಸಂಪರ್ಕವನ್ನೂ ಪಡೆದಿದ್ದಾರೆ. ಅಂತರ್ಜಲ ತುಂಬ ಮೇಲಿದ್ದು,ಬಾವಿಯಲ್ಲಿ ನೀರಿಗೆ ಬರವಿಲ್ಲ.ಇಲ್ಲಿ ಬಯಲು ಪ್ರದೇಶ ಹೆಚ್ಚಿದ್ದು, ಮನೆಗಳು ಕೂಡ ಬಹಳ ಅಂತರದಲ್ಲಿವೆ.ಇದರಿಂದ ಬಾವಿಯಲ್ಲಿ ಶುದ್ಧ ನೀರು ಪಡೆಯಬಹುದು ಎಂದು ಸ್ಥಳೀಯರು ತಿಳಿಸುತ್ತಾರೆ.
↧
ಈ ಏರಿಯಾದಲ್ಲಿ ಡಾಂಬರ್ ಭಾಗ್ಯವೇ ಇಲ್ಲ
↧