Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಅಗ್ಗವಲ್ಲ ಇದು ಶತಮಾನದ ಮಗ್ಗ!

$
0
0

ಶಿವಲಿಂಗ ಸಿದ್ನಾಳ ಮಹಾಲಿಂಗಪುರ: ಈತನ ವಯಸ್ಸು ಬರೋಬ್ಬರಿ 106. ಸರಕಾರ ಬದಲಾಗಿದೆ, ಅಧಿಕಾರ ಬದಲಾಗಿದೆ, ಸಂಗಡಿಗರೂ ಬದಲಾಗಿದ್ದಾರೆ. ಆದರೆ ಈತ ಮಾತ್ರ ಒಂದು ಶತಕದಿಂದ ತನ್ನ ಕಾಯಕದಲ್ಲಿ ನಿರತನಾಗಿದ್ದಾನೆ. ಎಲ್ಲವೂ ಬದಲಾದರೂ ತಾನು ಬದಲಾಗದೆ ನೇಕಾರನ ಬದುಕಿಗೆ ಆಸರೆಯಾಗಿದ್ದಾನೆ!

ಯಾರೀತ ಎಂಬ ಕುತೂಹಲವೇ? ಮಗ್ಗ, ಗಟ್ಟಿಮುಟ್ಟಾದ ಯಂತ್ರಚಾಲಿತ ಮಗ್ಗ!

ಪಟ್ಟಣದ ಜವಳಿ ಬಜಾರ್‌ ಹಳೆ ಪೋಸ್ಟ್‌ ಆಫೀಸ್‌ ಬಳಿಯ ನೇಕಾರ ಈಶ್ವರ ರಾಮಪ್ಪ ಹಳ್ಳಿ ಎಂಬುವರ ಮನೆಯಲ್ಲಿ ಈ ಮಗ್ಗವಿದೆ. ಇವತ್ತಿಗೂ ಯಾವುದೇ ವ್ಯತ್ಯಯವಿಲ್ಲದೆ ದಿನಕ್ಕೆ ಕನಿಷ್ಠ 5 ಸೀರೆ ನೇಯುವ ಮೂಲಕ ತನ್ನ ವರ್ಚಸ್ಸು ಉಳಿಸಿಕೊಂಡು ಬಂದಿದೆ.

ಅದರ ಕಬ್ಬಿಣದ ಚೆಸ್ಸಿ ಮೇಲೆ ಬಟರ್‌ವರ್ತ್‌ ಅಂಡ್‌ ಡಿಕಿನ್‌ಸನ್‌ ಬರ್ನಲೇ ಎಂದು ಕಂಪನಿ ಹೆಸರು ಬರೆಯಲಾಗಿದೆ. ಅದರ ಜತೆಗೆ 1910 ಮಾಡಲ್‌ ಎಂದು ಇಸ್ವಿಯನ್ನೂ ನಮೂದಿಸಲಾಗಿದೆ.

ಇದನ್ನು ಆಧರಿಸಿ ಮಗ್ಗದ ಆಯುಷ್ಯ ಅಂದಾಜಿಸಲಾಗಿದೆ, ಇದು ಇಂಗ್ಲೆಂಡ್‌ನ ಟೆಕ್ಸ್‌ಟೈಲ್‌ ಇನ್‌ಸ್ಟ್ರುಮೆಂಟ್‌ ಮ್ಯಾನ್ಯುಫಾಕ್ಚರಿಂಗ್‌ ಕಂಪನಿ ಉತ್ಪಾದನೆಯಾಗಿದ್ದು, ಬ್ರಿಟೀಷರ ಕಾಲದಲ್ಲಿ ಭಾರತದ ನೇಕಾರರಿಗೆ ಲಭಿಸಿದೆ ಎನ್ನಲಾಗುತ್ತಿದೆ. ಸಚಿವೆ ಉಮಾಶ್ರೀ ಕೂಡ ಇವರ ಮನೆಗೆ ಭೇಟಿ ನೀಡಿ ಶತಮಾನದ ಯಂತ್ರಮಗ್ಗ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-----------

ಈ ಯಂತ್ರಮಗ್ಗ ಎಲ್ಲಿಂದ, ಯಾವಾಗ ಬಂದಿದೆ ಎಂಬುದು ಗೊತ್ತಿಲ್ಲ. ನಮ್ಮ ತಂದೆ-ತಾಯಿ ಇದರಿಂದಲೇ ನೇಯುತ್ತಿದ್ದರು. ತಲೆಮಾರಿನ ಉದ್ಯೋಗವಾಗಿ ನಾನೂ 30 ವರ್ಷಗಳಿಂದ ಇದೇ ಮಗ್ಗದಿಂದ ನೇಯುತ್ತಿದ್ದೇನೆ. ಯಾವತ್ತೂ ದುರಸ್ತಿ ಮಾಡಿಸಿಲ್ಲ. ಇದು ನನ್ನ ಕುಟುಂಬವನ್ನೇ ಸಲಹುತ್ತಿದೆ. ಇದನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡುವುದಾದರೆ ಮಾರಲು ಸಿದ್ಧನಿದ್ದೇನೆ. ಆಸಕ್ತರು ಮೊ.9008019014 ಸಂಪರ್ಕಿಸಬಹುದು.

-ಈಶ್ವರ ಹಳ್ಳಿ, ನೇಕಾರ

---------------

ಕೇವಲ 10ಗಿ20 ಅಳತೆಯ ಸ್ವಂತ ಜಾಗದಲ್ಲಿ ಈ ಯಂತ್ರಮಗ್ಗ ಅಳವಡಿಸಿ, ಪಕ್ಕದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಈಶ್ವರ ಪತ್ನಿ ರಾಜೇಶ್ವರಿ, ಇಬ್ಬರು ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಇದರಿಂದ ಮಗಳನ್ನು ಮೆರಿಟ್‌ ಆಧಾರದ ಮೇಲೆ ಬಿಎಚ್‌ಎಂಎಸ್‌, ಮಗನನ್ನು ಯೋಗಾ ನ್ಯಾಚ್ಯರೋಪತಿ (ಬಿಎನ್‌ವೈಎಸ್‌) ಓದಿಸುತ್ತಿದ್ದಾರೆ. ಸಂಪ್ರದಾಯಕ್ಕೆ ಹೆಚ್ಚು ಆದ್ಯತೆ ನೀಡುವ ಈ ಕುಟುಂಬದಲ್ಲಿ ಇಂದಿಗೂ ಟಿವಿ ಇಲ್ಲ. ಬದಲಾಗಿ ಹಳೇ ರೇಡಿಯೊದಿಂದ ಎಲ್ಲ ಉಪಯುಕ್ತ ಕಾರ್ಯಕ್ರಮ ಆಲಿಸುತ್ತಾರೆ. ಸಾಹಿತಿ, ಸಂಗೀತಕಾರರೆಂದರೆ ಇವರಿಗೆ ಅಚ್ಚುಮೆಚ್ಚು. ಆಕಾಶವಾಣಿಯಲ್ಲಿ ಸಂದರ್ಶನಕ್ಕೂ ಹೋಗಿ ಬಾನುಲಿಯ ಎಲ್ಲ ಕಲಾವಿದರಿಗೆ ತಾವು ನೇಯ್ದ ಬಟ್ಟೆ ಸ್ಯಾಂಪಲ್‌ ನೀಡಿ ಮನಗೆದ್ದಿದ್ದಾರೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>