Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಆರ್‌ಬಿಐ ಸೂಚನೆ: ತೀರದ ಬವಣೆ

$
0
0

ಅಧಿಕ ಮೊತ್ತದ ಹಳೆ ನೋಟು ಇರುವವರಿಗೆ ಎದುರಾಗಿದೆ ಸಂಕಷ್ಟ

ಹೊಸದಿಲ್ಲಿ: ಇನ್ನೂ ಟೈಮಿದೆ, ನಿಧಾನಕ್ಕೆ ಡೆಪಾಸಿಟ್ ಮಾಡುವ ಎಂದು ಯೋಚಿಸಿ ಹಳೆಯ 500 ಹಾಗೂ 1000 ರೂಪಾಯಿ ಇಟ್ಟುಕೊಂಡವರಿಗೆ ಸಂಕಷ್ಟ ಎದುರಾಗಿದೆ. ನಿಮ್ಮಲ್ಲಿರುವ ನಿಷೇಧಿತ ನೋಟುಗಳನ್ನು ಒಮ್ಮಲೇ ಜಮಾ ಮಾಡಿ ಎಂಬ ಆರ್‌ಬಿಐ ಆದೇಶ ಮೇರೆಗೆ ಬ್ಯಾಂಕಿಗೆ ಹೋದರೆ 5000 ರೂಪಾಯಿಗಿಂತ ಅಧಿಕ ಹಣವನ್ನು ಜಮಾ ಮಾಡಲು ಬ್ಯಾಂಕ್ ನ ಸಿಬ್ಬಂದಿಗಳು ಒಪ್ಪುತ್ತಿಲ್ಲ.

ಯಾರು 5000 ರೂಪಾಯಿಗಿಂತ ಅಧಿಕ ಹಣವನ್ನು ಖಾತೆಗೆ ಹಾಕಲು ಬರುವವರನ್ನು ಇಬ್ಬರು ಬ್ಯಾಂಕಿನ ಸಿಬ್ಬಂದಿಗಳು ಆ ಹಣದ ಮೂಲದ ಬಗ್ಗೆ ಪ್ರಶ್ನೆಗಳನ್ನು ಕೇಳಿ, ಆ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರ ಸಿಕ್ಕರೆ ಮಾತ್ರ ಜಮಾ ಮಾಡಿ ಎಂದು ಆರ್‌ಬಿಐ ಹೇಳಿದರೂ ಹೆಚ್ಚಿನ ಬ್ಯಾಂಕ್‌ಗಳಲ್ಲಿ ಅಧಿಕ ಮೊತ್ತದ ಹಣವನ್ನು ಕಟ್ಟಿಸಿಕೊಳ್ಳುವ ರಿಸ್ಕ್ ತೆಗೆದುಕೊಳ್ಳಲು ಅಲ್ಲಿಯ ಸಿಬ್ಬಂದಿಗಳು ಸಿದ್ಧರಿಲ್ಲ, ಇದರಿಂದ ರೂ 5000ಕ್ಕಿಂತ ಅಧಿಕ ಹಳೆಯ ನೋಟನ್ನು ಹೊಂದಿರುವವರು ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದಾರೆ.

ಸೋಮವಾರದಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಳೆಯ ನೋಟಿನ ಮೊತ್ತ ಎಷ್ಟೇ ಇರಲಿ, ಒಂದೇ ಬಾರಿ ಜಮಾ ಮಾಡುವುದಾದರೆ ಯಾವುದೇ ಪ್ರಶ್ನೆ ಕೇಳುವುದಿಲ್ಲ ಎಂದು ಹೇಳಿದರೂ, ಆರ್‌ಬಿಐನಿಂದ ಈ ಕುರಿತು ಯಾವುದೇ ಲಿಖಿತ ಆದೇಶ ಬಂದಿಲ್ಲ. ಆದ್ದರಿಂದ ದೊಡ್ಡ ಮೊತ್ತದ ಹಣವನ್ನು ಕಟ್ಟಿಸಿ ಅದರಿಂದ ಮುಂದೆ ಬರಬಹುದಾದ ತನಿಖಾ ರಿಸ್ಕ್ ತೆಗೆದುಕೊಳ್ಳಲು ಬ್ಯಾಂಕ್ ಸಿಬ್ಬಂದಿಗಳು ತಯಾರಿಲ್ಲ.

ಅಧಿಕ ಮೊತ್ತದ ಹಳೆಯ ನೋಟುಗಳನ್ನು ಹೊಂದಿರುವವರಿಗೆ ಮಾತ್ರ ಮುಂದೇನು ಎಂದು ತಿಳಿಯದಾಗಿದೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>