200 ✅! @karun126 brings up his maiden double hundred in Test cricket #INDvENG pic.twitter.com/MDmFdIlmh2
ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ, 25ರ ಹರೆಯದ ಕರುಣ್ ನಾಯರ್ ಅಜೇಯವಾಗಿ ಈ ಸಾಧನೆ ಮಾಡಿದರು. ಮತ್ತೊಬ್ಬ ಕನ್ನಡಿಗ ಆಟಗಾರ ಕೆ.ಎಲ್.ರಾಹುಲ್ ಅವರು ಭಾನುವಾರ ಕೇವಲ 1 ರನ್‌ನಿಂದ ದ್ವಿಶತಕ ವಂಚಿತರಾಗಿದ್ದರು. ಸೋಮವಾರದ ಆಟದಲ್ಲಿ ನಾಯರ್ 381 ಎಸೆತಗಳನ್ನು ಎದುರಿಸಿ, ಬೌಂಡರಿ ಬಾರಿಸುವ ಮೂಲಕ ಅಜೇಯ ತ್ರಿಶತಕದ ವೈಭವವನ್ನು ಆಚರಿಸಿದರು. ಅವರು ದ್ವಿಶತಕ ದಾಖಲಿಸಿದ್ದೂ ಬೌಂಡರಿ ಹೊಡೆತದ ಮೂಲಕವೇ ಎಂಬುದು ವಿಶೇಷ.
ಕರುಣ್ ನಾಯರ್ ತ್ರಿಶತಕದ ನೆರವಿನಿಂದ ಭಾರತವು 7 ವಿಕೆಟ್ ನಷ್ಟಕ್ಕೆ 759 ರನ್ ದಾಖಲಿಸಿತು. ಈ ಸಂದರ್ಭದಲ್ಲಿ ಭಾರತ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತು. ಇದು ಭಾರತ ತಂಡ ಒಂದು ಇನ್ನಿಂಗ್ಸ್‌ನಲ್ಲಿ ಒಟ್ಟುಗೂಡಿಸಿದ ಗರಿಷ್ಠ ಸ್ಕೋರ್ ಕೂಡ ಆಗಿದೆ. ಇದರೊಂದಿಗೆ ಇಂಗ್ಲೆಂಡ್‌ನ ಪ್ರಥಮ ಇನ್ನಿಂಗ್ಸ್ ಮೊತ್ತಕ್ಕಿಂತ 282 ರನ್ ಮುನ್ನಡೆಯನ್ನೂ ಸಾಧಿಸಿತು. ನಾಳೆ ಒಂದು ದಿನದ ಆಟ ಬಾಕಿ ಇದೆ. ಇಂಗ್ಲೆಂಡನ್ನು ಲಗುಬಗನೇ ಆಲೌಟ್ ಮಾಡಿಸಿದರೆ ಗೆಲುವಿನ ಸಾಧ್ಯತೆಯಿದೆ. ಇಲ್ಲವಾದಲ್ಲಿ, ಪಂದ್ಯವು ಬಹುತೇಕ ಡ್ರಾ ಆಗಲಿದೆ.
ಸ್ಕೋರ್ ಕಾರ್ಡ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.
ಇದಕ್ಕೆ ಮೊದಲು, ಇಂಗ್ಲೆಂಡಿನ ಜೆನ್ನಿಂಗ್ಸ್ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಕರುಣ್ ನಾಯರ್ ಅವರು ತಮ್ಮ ಟೆಸ್ಟ್ ಜೀವನದ ಚೊಚ್ಚಲ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ ದಿಲೀಪ್ ಸರ್ದೇಸಾಯಿ ಹಾಗೂ ವಿನೋದ್ ಕಾಂಬ್ಳಿ ಸಾಲಿಗೆ ಸೇರಿದ್ದರು.
ತಾವಾಡಿದ ಮೊದಲ ಎರಡು ಇನ್ನಿಂಗ್ಸ್‌ಗಳಲ್ಲಿ 4 ಹಾಗೂ 13 ರನ್ ಗಳಿಸಿದ್ದ ಕರುಣ್ ನಾಯರ್, ಮೂರನೇ ಇನ್ನಿಂಗ್ಸ್‌ನಲ್ಲಿ ತ್ರಿಶತಕ ಸಿಡಿಸಿದರು.
ಅಜಿಂಕ್ಯ ರಹಾನೆ ಹಾಗೂ ರೋಹಿತ್ ಶರ್ಮಾ ಅವರು ಫಿಟ್ನೆಸ್ ಸಮಸ್ಯೆಯಿಂದಾಗಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್, ಚೆನ್ನೈಯಲ್ಲಿ ಬ್ಯಾಟಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಮೂರನೇ ಟೆಸ್ಟ್ ಪಂದ್ಯದಲ್ಲಿಯೇ ಉತ್ತಮ ಆಟ ಪ್ರದರ್ಶಿಸಿರುವ ನಾಯರ್ ಭವಿಷ್ಯದ ಬ್ಯಾಟ್ಸ್‌ಮನ್ ಆಗಿ ಭರವಸೆ ಮೂಡಿಸಿದ್ದಾರೆ. ನಾಯರ್ ಅವರು ರವಿಚಂದ್ರನ್ ಅಶ್ವಿನ್ ಜತೆ ಸೇರಿಕೊಂಡು ಆರನೇ ವಿಕೆಟಿಗೆ ಅಜೇಯ 147 ರನ್ ಸೇರಿಸಿದ್ದಾರೆ.
ಮೂರನೇ ದಿನ 311 ಎಸೆತಗಳಲ್ಲಿ 199 ರನ್ ಬಾರಿಸಿದ್ದ ಕೆ.ಎಲ್ ರಾಹುಲ್ ದ್ವಿಶತಕದಿಂದ ವಂಚಿತರಾಗಿದ್ದರು. ಕರುಣ್ ನಾಯರ್ ಜತೆ 161 ರನ್‌ಗಳ ಜತೆಯಾಟ ಬೆಳೆಸಿದ್ದ ರಾಹುಲ್ 199ಕ್ಕೆ ಕ್ಯಾಚ್ ನೀಡಿದ್ದರು.
ಭಾನುವಾರದ ದಿನದ ಆಟ ಅಂತ್ಯಗೊಂಡಾಗ ಭಾರತ 391 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ಪ್ರಥಮ ಇನ್ನಿಂಗ್ಸ್‌ನಲ್ಲಿ 477 ರನ್‌ಗಳಿಗೆ ಇಂಗ್ಲೆಂಡ್ ಆಲೌಟ್ ಆಗಿತ್ತು.
ಬೌಂಡರಿಯ ಮೂಲಕ ತಮ್ಮ 200 ರನ್ ಪೂರೈಸಿದ ನಾಯರ್ ಅವರು ಇಂಗ್ಲೆಂಡ್ ಬೌಲರುಗಳಿಗೆ ಸವಾಲೊಡ್ಡಿದರು. ತ್ರಿಶತಕವನ್ನೂ ಬೌಂಡರಿ ಮೂಲಕವೇ ಸಾಧಿಸಿದರು. ಕೊನೆಯಲ್ಲಿ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿ ಔಟಾದರು. ಭಾರತ 7 ವಿಕೆಟ್ ನಷ್ಟಕ್ಕೆ 759 ರನ್ ದಾಖಲಿಸಿ, ಇಂಗ್ಲೆಂಡನ್ನು ಎರಡನೇ ಇನ್ನಿಂಗ್ಸ್ ಆಡಲು ಆಹ್ವಾನಿಸಿತು. ಭಾರತದ ಇದುವರೆಗಿನ ಗರಿಷ್ಠ ಮೊತ್ತ 726 ರನ್. ಇದೀಗ ಚೆನ್ನೈಯಲ್ಲಿ ಈ ದಾಖಲೆಯನ್ನು ಉತ್ತಮಪಡಿಸಿತು.
ಚೆನ್ನೈ: ಇಂಗ್ಲೆಂಡ್ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಕನ್ನಡಿಗ ಕರುಣ್ ನಾಯರ್ ಅವರು ತಮ್ಮ ಚೊಚ್ಚಲ ಶತಕ ಹಾಗೂ ದ್ವಿಶತಕವನ್ನು ಮೊದಲ ತ್ರಿಶತಕವಾಗಿ ಪರಿವರ್ತಿಸಿ ಹೊಸ ದಾಖಲೆ ಬರೆದಿದ್ದಾರಲ್ಲದೆ, ಭಾರತದ ಪರವಾಗಿ ತ್ರಿಶತಕ ದಾಖಲಿಸಿದ ಅತಿ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಲ್ಲದೆ, ಭಾರತವು ಟೆಸ್ಟ್ ಪಂದ್ಯದಲ್ಲಿ ಗರಿಷ್ಠ ಸ್ಕೋರು ದಾಖಲಿಸುವಲ್ಲಿಯೂ ನೆರವಾದರು.