Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸೋಲಿನ ಭೀತಿಯಲ್ಲಿ ಆಸೀಸ್

$
0
0

ದ್ವಿತೀಯ ಟೆಸ್ಟ್: ದಕ್ಷಿಣ ಆಫ್ರಿಕಾ ತಂಡಕ್ಕೆ 241 ರನ್‌ಗಳ ಮುನ್ನಡೆ

ಹೋಬರ್ಟ್: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ’ಕಾಕ್ ಅವರ ಅಮೋಘ ಶತಕದ ಬೆನ್ನೇರಿದ ದಕ್ಷಿಣ ಆಫ್ರಿಕಾ ತಂಡ, ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಇಲ್ಲಿನ ಬೆಲೆರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಸೋಮವಾರ ಹರಿಣಗಳು ಕಾಂಗರೂಗಳ ಮೇಲೆ ಸವಾರಿ ಮಾಡಿದರು. 5 ವಿಕೆಟ್‌ಗೆ 171 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಪ್ರವಾಸಿ ದಕ್ಷಿಣ ಆಫ್ರಿಕಾ, ತನ್ನ ಮೊದಲ ಇನಿಂಗ್ಸ್‌ನಲ್ಲಿ 326 ರನ್‌ಗಳಿಗೆ ಸರ್ವಪತನ ಕಂಡಿತು.

ಈ ಮೂಲಕ ಫಾಫ್ ಡು’ಪ್ಲೆಸಿಸ್ ಬಳಗ 241 ರನ್‌ಗಳ ಬೃಹತ್ ಮುನ್ನಡೆ ತನ್ನದಾಗಿಸಿಕೊಂಡಿತು. ತಂಡದ ಪರ ಡಿ’ಕಾಕ್ (104) 2ನೇ ಟೆಸ್ಟ್ ಶತಕ ದಾಖಲಿಸಿದರೆ, ತೆಂಬಾ ಬವೂಮ (74) ಅರ್ಧಶತಕದ ಕಾಣಿಕೆಯಿತ್ತರು. ಈ ಜೋಡಿ 6ನೇ ವಿಕೆಟ್‌ಗೆ 144 ರನ್ ಸೇರಿಸಿ ತಂಡದ ದೊಡ್ಡ ಮುನ್ನಡೆಗೆ ಕಾರಣರಾದರು.

ಭಾರಿ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಮೊದಲ ಓವರ್‌ನಲ್ಲೇ ಜೋ ಬರ್ನ್ಸ್ (0) ಅವರ ವಿಕೆಟ್ ಕಳೆದುಕೊಂಡಿತು. ವೇಗಿ ಕೈಲ್ ಅಬಾಟ್ ದಾಳಿಯಲ್ಲಿ ಬಲಗೈ ಬ್ಯಾಟ್ಸ್‌ಮನ್ ಬರ್ನ್ಸ್, ವಿಕೆಟ್ ಕೀಪರ್ ಕ್ವಿಂಟನ್ ಡಿ’ಕಾಕ್‌ಗೆ ಕ್ಯಾಚಿತ್ತರು. ಆದರೆ 2ನೇ ವಿಕೆಟ್‌ಗೆ ಡೇವಿಡ್ ವಾರ್ನರ್ (45) ಮತ್ತು ಉಸ್ಮಾನ್ ಖವಾಜ (ಔಟಾಗದೆ 56) 79 ರನ್‌ಗಳ ಜತೆಯಾಟವಾಡಿ ತಂಡವನ್ನು ಆರಂಭಿಕ ಕುಸಿತದಿಂದ ಮೇಲೆತ್ತಿದರು. ದಿನದಂತ್ಯಕ್ಕೆ ಆಸೀಸ್ 2 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದ್ದು, ಅಜೇಯ ಅರ್ಧಶತಕ ಗಳಿಸಿರುವ ಖವಾಜ ಜತೆ ನಾಯಕ ಸ್ಟೀವನ್ ಸ್ಮಿತ್ (ಔಟಾಗದೆ 18) ಕ್ರೀಸ್‌ನಲ್ಲಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ: 85 ಮತ್ತು 36 ಓವರ್‌ಗಳಲ್ಲಿ 121/2 (ಡೇವಿಡ್ ವಾರ್ನರ್ 45, ಉಸ್ಮಾನ್ ಖವಾಜ ಔಟಾಗದೆ 56, ಸ್ಟೀವನ್ ಸ್ಮಿತ್ ಔಟಾಗದೆ 18; ಕೈಲ್ ಅಬಾಟ್ 55ಕ್ಕೆ2).

ದಕ್ಷಿಣ ಆಫ್ರಿಕಾ: 100.5 ಓವರ್‌ಗಳಲ್ಲಿ 326 (ಕ್ವಿಂಟನ್ ಡಿ’ಕಾಕ್ 104, ತೆಂಬಾ ಬವೂಮ 74, ವೆರ್ನಾನ್ ಫಿಲ್ಯಾಂಡರ್ 32; ಜೋಶ್ ಹೇಜಲ್‌ವುಡ್ 89ಕ್ಕೆ6).


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>