Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಟಾಲಿವುಡ್‌ ಹೆಸರಾಂತ ನಟ ಕನ್ನಡಕ್ಕೆ:

$
0
0

ರಾಷ್ಟ್ರ ಪ್ರಶಸ್ತಿ ಪಡೆದ ಕಮಲಿ ಚಿತ್ರದ ನಾಯಕ ಶಫಿ, ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ವಿಠಲ್‌ ಭಟ್‌ ನಿರ್ದೇಶನದ ಚಿತ್ರದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ತಮ್ಮದೇ ಆದ ವಿಭಿನ್ನ ಮ್ಯಾನರಿಸಂ ಮೂಲಕ ಗಮನ ಸೆಳೆದವರು ಟಾಲಿವುಟ್‌ ನಟ ಶಫಿ. ಖಡ್ಗಂ ಸಿನಿಮಾದ ನಟನೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿಯನ್ನೂ ಪಡೆದ ಈ ನಟ, ಕಮಲಿ ಚಿತ್ರದ ನಾಯಕನೂ ಹೌದು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿದೆ. ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಫಿ, ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹ್ಯಾಂಗೋವರ್‌ ಹೆಸರಿನಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ವಿಠಲ್‌ ಭಟ್‌ ನಿರ್ದೇಶನ ಮಾಡುತ್ತಿದ್ದಾರೆ.

ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವ ಶಫಿ, ಈ ಕುರಿತು ಹೇಳಿದ್ದು ಹೀಗೆ, 'ನಿರ್ದೇಶಕರು ಮತ್ತು ನಾನು ಸ್ನೇಹಿತರು. ಬೆಂಗಳೂರಿಗೆ ಬಂದಾಗೆಲ್ಲ ಅವರನ್ನು ಭೇಟಿ ಮಾಡುತ್ತೇನೆ. ಸಿನಿಮಾ ರಂಗದ ಬಗ್ಗೆ ಚರ್ಚೆ ಮಾಡುತ್ತೇವೆ. ಈ ಸಂದರ್ಭದಲ್ಲಿ ವಿಠಲ್‌ ಸಿನಿಮಾ ಮಾಡುತ್ತಿದ್ದೇನೆ ಅಂದರು. ನನಗೂ ಪಾತ್ರ ಮಾಡಲು ಕೇಳಿದರು. ಗೆಳೆಯ ಕರೆದಾಗ ಇಲ್ಲ ಎನ್ನಲಿಕ್ಕೆ ಆಗಲಿಲ್ಲ. ಅಲ್ಲದೇ ನನಗೆ ಸಿಕ್ಕಿರುವ ಪಾತ್ರ ಕೂಡ ವಿಭಿನ್ನವಾಗಿದೆ. ಈ ಕಾರಣಕ್ಕಾಗಿ ನಟಿಸಲು ಒಪ್ಪಿಕೊಂಡೆ' ಅಂತಾರೆ.

ಈ ಚಿತ್ರದಲ್ಲಿ ಶಫಿ ಕ್ರೈಮ್‌ ಇನ್ವೆಸ್ಟಿಗೇಷನ್‌ ಆಫೀಸರ್‌ ಪಾತ್ರ ನಿರ್ವಹಿಸುತ್ತಿದ್ದು, ಮೊದಲ ಬಾರಿಗೆ ಇಂಥದ್ದೊಂದು ಪಾತ್ರವನ್ನು ಪೋಷಿಸುತ್ತಿದ್ದಾರಂತೆ. 'ನಾನು ಇದುವರೆಗೂ ಇನ್ವೆಸ್ಟಿಗೇಷನ್‌ ಆಫೀಸರ್‌ ಪಾತ್ರ ಮಾಡಿರಲಿಲ್ಲ. ಈವರೆಗೂ ನನಗೆ ಸಿಕ್ಕಿರುವ ಪಾತ್ರಗಳು ರಫ್‌ ಅಂಡ್‌ ಟಫ್‌. ಇದು ವಿಶೇಷವಾಗಿದೆ. ಪಾತ್ರದ ಬಗ್ಗೆ ಕೇಳಿದಾಕ್ಷಣ ನಿಜಕ್ಕೂ ರೋಮಾಂಚನ ಆಯಿತು. ನನ್ನನ್ನು ಈ ಪಾತ್ರಕ್ಕೆ ಆಯ್ಕೆಮಾಡಿಕೊಂಡಿದ್ದಕ್ಕೆ ನಿಜಕ್ಕೂ ಖುಷಿ ಆಗುತ್ತಿದೆ' ಅನ್ನುವುದು ಶಫಿ ಮಾತು.

ಈ ತಿಂಗಳು ಕೊನೆಯ ವಾರದಿಂದ ಶೂಟಿಂಗ್‌ ಶುರುವಾಗಲಿದ್ದು, ಮೊದಲ ಹಂತದ ಚಿತ್ರೀಕರಣ ಮೈಸೂರಲ್ಲಿ ನಡೆಯಲಿದೆ. ಶಫಿ ಈ ಹಂತದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.


Viewing all articles
Browse latest Browse all 7056

Trending Articles


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ತುಳು ತೆರೆಗೆ ಸೋನಿಯಾ ಎಂಟ್ರಿ


ಮತ್ತೊಂದು ಬೆಚ್ಚಿಬೀಳಿಸುವ ಘಟನೆ: ಕಬ್ಬಿನಗದ್ದೆಯಲ್ಲಿ ಅತ್ಯಾಚಾರದ ಬಳಿಕ ಪೈಶಾಚಿಕ ಕೃತ್ಯ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>