Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ರಾಸ್ಬರ್ಗ್‌ ಜಪಾನೀಸ್‌ ಚಾಂಪಿಯನ್‌

$
0
0

ಫಾರ್ಮುಲಾ 1: ಜಪಾನೀಸ್‌ ಗ್ರ್ಯಾನ್‌ ಪ್ರಿ ರೇಸ್‌

ಸುಜುಕಾ (ಜಪಾನ್‌): ಅಮೋಘ ಚಾಲನಾ ಕೌಶಲ್ಯ ಮೆರೆದ ಮರ್ಸಿಡೀಸ್‌ ತಂಡದ ಚಾಲಕ ಜರ್ಮನಿಯ ನಿಕೊ ರಾಸ್ಬರ್ಗ್‌, ಇಲ್ಲಿ ನಡೆದ ಜಪಾನೀಸ್‌ ಗ್ರ್ಯಾನ್‌ ಪ್ರಿ ರೇಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಸುಜುಕಾ ಅಂತಾರಾಷ್ಟ್ರೀಯ ರೇಸಿಂಗ್‌ ಸರ್ಕಿಟ್‌ನಲ್ಲಿ ಗಂಟೆಗೆ 212.728 ಕಿ.ಮೀ ಸರಾಸರಿ ವೇಗದಲ್ಲಿ 53 ಲ್ಯಾಪ್‌ಗಳನ್ನು 1 ಗಂಟೆ, 26 ನಿಮಿಷ, 43.333 ಸೆಕೆಂಡ್‌ಗಳಲ್ಲಿ ಪೂರೈಸಿದ ರಾಸ್ಬರ್ಗ್‌ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಇದರೊಂದಿಗೆ ಪ್ರಸಕ್ತ ಸಾಲಿನ ವಿಶ್ವಚಾಂಪಿಯನ್‌ಷಿಪ್‌ ರೇಸ್‌ನಲ್ಲಿ 313 ಅಂಕಗಳೊಂದಿಗೆ ತಮ್ಮ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ.

ವಿಶ್ವ ಚಾಂಪಿಯನ್‌ಷಿಪ್‌ ಮೇಲೆ ಕಣ್ಣಿಟ್ಟಿರುವ ಹಾಲಿ ಚಾಂಪಿಯನ್‌ ಮರ್ಸಿಡೀಸ್‌ ತಂಡದ ಬ್ರಿಟನ್‌ ಚಾಲಕ ಲೂಯಿಸ್‌ ಹ್ಯಾಮಿಲ್ಟನ್‌(280 ಅಂಕ), +5.776 ಸೆಕೆಂಡ್‌ಗಳ ಹಿನ್ನಡೆಯಲ್ಲಿ ತೃತೀಯ ಸ್ಥಾನಕ್ಕೆ ತೃಪ್ತಿ ಪಡುವಂತಾಯಿತು. ರೆಡ್‌ಬುಲ್‌ ತಂಡದ ಚಾಲಕ ಮ್ಯಾಕ್ಸ್‌ ವೆಸ್ರ್ಟಾಪನ್‌ (+4.978) ದ್ವಿತೀಯ ಸ್ಥಾನ ಪಡೆಯುವಲ್ಲಿ ಸಫಲರಾದರು. ಫೆರಾರಿ ತಂಡದ ಅನುಭವಿ ಚಾಲಕರಾದ ಜರ್ಮನಿಯ ಸೆಬಾಸ್ಟಿಯನ್‌ ವೆಟಲ್‌ (+20.269) ಮತ್ತು ಫಿನ್ಲೆಂಡ್‌ನ ಕಿಮಿ ರೈಕೊನೆನ್‌ (+28.370) ಕ್ರಮವಾಗಿ 4ನೇ ಮತ್ತು 5ನೇ ಸ್ಥಾನದಲ್ಲಿ ರೇಸ್‌ ಪೂರೈಸಿದರು. ರೆಡ್‌ಬುಲ್‌ ತಂಡದ ಮತ್ತೊಬ್ಬ ಚಾಲಕ ಆಸ್ಪ್ರೇಲಿಯಾದ ಡೇನಿಯಲ್‌ ರಿಕಾರ್ಡೊ (+33.941) 6ನೇ ಸ್ಥಾನ ಗಿಟ್ಟಿಸಿದರು.

ಫೋರ್ಸ್‌ ಇಂಡಿಯಾಗೆ ಯಸಸ್ಸು

ಸ್ಥಿರ ಪ್ರದರ್ಶನ ನೀಡುತ್ತಿರುವ ಫೋರ್ಸ್‌ ಇಂಡಿಯಾದ ಚಾಲಕರಾದ ಜರ್ಮನಿಯ ನಿಕೊ ಹಲ್ಕೇನ್‌ಬರ್ಗ್‌ (8ನೇ ಸ್ಥಾನ) ಮತ್ತು ಮೆಕ್ಸಿಕೊದ ಸೆರ್ಗಿಯೊ ಪೆರೇಜ್‌ (7ನೇ ಸ್ಥಾನ) ತಂಡಕ್ಕೆ ಒಟ್ಟಾರೆ 10 ಅಂಕಗಳನ್ನು ತಂದುಕೊಡುವಲ್ಲಿ ಸಫಲರಾದರು. ಇದರೊಂದಿಗೆ ಕಂಸ್ಟ್ರಕ್ಟರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 134 ಅಂಕಗಳನ್ನು ಗಳಿಸಿರುವ ಫೋರ್ಸ್‌ ಇಂಡಿಯಾ 4ನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಪಟ್ಟಿಯಲ್ಲಿ 588 ಅಂಕಗಳೊಂದಿಗೆ ಮರ್ಸಿಡೀಸ್‌ ಅಗ್ರಸ್ಥಾನದಲ್ಲಿದೆ.


Viewing all articles
Browse latest Browse all 7056

Trending Articles


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಕಾರಿನಲ್ಲೇ 19 ದೇಶ ಸುತ್ತಿದ್ದಾರೆ ಈ ದಂಪತಿ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>