ಹೊಸದಿಲ್ಲಿ: ಜಾಗತಿಕ ಮೊಬೈಲ್ ಮಾರುಕಟ್ಟೆಯ ದಿಗ್ಗಜ ಆ್ಯಪಲ್ ಕಂಪನಿಯ ಬಹು ನಿರೀಕ್ಷೆಯ ನೂತನ ಐಫೋನ್7 ಮತ್ತು ಐಫೋನ್ 7 ಪ್ಲಸ್ ಭಾರತದಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ಕಳೆದ ತಿಂಗಳು ಜಾಗತಿಕ ಮಾರುಕಟ್ಟೆಯಲ್ಲಿ ಐಫೋನ್7 ಬಿಡುಗಡೆಯಾಗಿತ್ತು. ಐಫೋನ್ 7 32ಜಿಬಿ,128ಜಿಬಿ ಮತ್ತು 256ಜಿಬಿ ಮಾದರಿಯಲ್ಲಿ ದೊರೆಯುತ್ತಿದ್ದು, ಇದರ ಬೆಲೆ ಅನುಕ್ರಮವಾಗಿ 60,000 ರೂ, 70,000ರೂ. ಹಾಗೂ 80,000 ರೂ.ಗಳಾಗಿದೆ. ಐಫೋನ್ 7ಪ್ಲಸ್ ದರ 72,000 ರೂ.ಗಳಿಂದ ಆರಂಭವಾಗುತ್ತದೆ. ಏರ್‌ಟೆಲ್ ಈ ಎರಡೂ ಐಫೋನ್‌ಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಿದೆ. ಐಫೋನ್ 7 ಜತೆಗೆ ಆ್ಯಪಲ್ ತನ್ನ ಹೊಸ ಸ್ಮಾರ್ಟ್‌ವಾಚ್‌ಗಳನ್ನೂ ಬಿಡುಗಡೆಗೊಳಿಸಿದೆ. ಆನ್‌ಲೈನ್ ರಿಟೇಲರ್ ಹಾಗೂ ಆ್ಯಪಲ್‌ನ ರಿಟೇಲ್ ಮಳಿಗೆಗಳಲ್ಲಿ ಐಫೋನ್7 ಖರೀದಿಸಬಹುದು.
↧
ಭಾರತದಲ್ಲಿ ಐಫೋನ್ 7 ಬಿಡುಗಡೆ
↧