ತಾಪ್ಸಿ ಪನ್ನು ಇದೀಗ ತುಂಬ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಪಿಂಕ್ ಹಿಂದಿ ಚಿತ್ರದಲ್ಲಿನ ಅವರ ಅಭಿನಯಕ್ಕೆ ತುಂಬ ಪ್ರಶಂಸೆ ವ್ಯಕ್ತವಾಗಿದ್ದು ಹಾಗೂ ಈ ಸಿನಿಮಾದ ನಂತರ ತಾಪ್ಸಿಗೆ ಹೊಸ ಚಿತ್ರಗಳಿಗೆ ಆಫರ್ ಬಂದಿದ್ದು. ಯೆಸ್, ದಕ್ಷಿಣ ಭಾರತದ ಸಿನಿಮಾಗಳು ಮಾತ್ರವಲ್ಲ ಹಿಂದಿಯಲ್ಲಿ ನಟಿಸಿದ ನಂತರವೂ ತಾಪ್ಸಿಗೆ ಹೇಳಿಕೊಳ್ಳುವಂಥ ಪ್ರಶಂಸೆ ಬಂದಿರಲಿಲ್ಲ. ಇವರನ್ನು ಪ್ರತಿಭಾವಂತೆ ಅಂತ ಗುರುತಿಸಿರಲಿಲ್ಲ. ಆದರೆ ಪಿಂಕ್ ಚಿತ್ರದ ನಂತರ ಈ ನಟಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು. 'ಕಳೆದ ಆರು ವರ್ಷಗಳಲ್ಲಿ ನಾನು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ. ಇಷ್ಟಾದರೂ ಚಿತ್ರರಂಗದಲ್ಲಿ ನನ್ನನ್ನು ಹೊಸಬಳಂತೆಯೇ ನೋಡಲಾಗುತ್ತಿತ್ತು. ಹೀಗಾಗಿ ಕೆಲವು ಬಾರಿ ತುಂಬ ಕಷ್ಟವೂ ಎನಿಸುತ್ತಿತ್ತು. ಅಷ್ಟೇ ಅಲ್ಲ, 'ಚಷ್ಮೆ ಬದ್ದೂರ್'ನಂತಹ ಹಿಂದಿ ಚಿತ್ರದಲ್ಲಿ ನಟಿಸಿದ್ದರೂ ಬಾಲಿವುಡ್ ಕೂಡ ನನ್ನೆಡೆ ಹೊಸಬಳಂತೆ ನೋಡಿತು. ಈಗ ಆ ದೇವರು ಕಣ್ಣು ತೆರೆದಿದ್ದಾನೆ. ಪಿಂಕ್ ಚಿತ್ರದ ನಂತರ ಒಂದಿಷ್ಟು ಆಫರ್‌ಗಳು ಬಂದಿವೆ' ಎನ್ನುತ್ತಾರೆ ತಾಪ್ಸಿ. ಸದ್ಯ ನೀರಜ್ ಪಾಂಡೆ ಅವರ 'ನಾಮ್ ಶಬಾನಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೊಸ ಚಿತ್ರಗಳಿಗೆ ಆಫರ್‌ಗಳು ಬಂದರೂ ತುಂಬ ಚ್ಯೂಸಿಯಾಗಿ ಸಿಲೆಕ್ಟ್ ಮಾಡುವುದಾಗಿ ಹೇಳುತ್ತಾರೆ ಈ ನಟಿ.
↧
ತಾಪ್ಸಿಗೆ ಅದೃಷ್ಟ ತಂದ ಪಿಂಕ್
↧