ನವರಾತ್ರಿ ರಂಗಿನ ಒಂಬತ್ತು ಬಣ್ಣಗಳಲ್ಲಿ ಇಂದಿನ ಬಣ್ಣ ಹಸಿರು. ಈ ಬಣ್ಣದ ಸೀರೆಯುಟ್ಟು ಇಂದಿನ ವಿಜಯ ಕರ್ನಾಟಕ ಮುಖಪುಟದಲ್ಲಿ ಮಿಂಚುತ್ತಿದ್ದಾರೆ ನಟಿ ಆಶಿಕಾ. ಕ್ರೇಜಿ ಬಾಯ್ಸ್ ಸಿನಿಮಾದ ಮೂಲಕ ಇವರು ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಇವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ಮಹೇಶ್ ಬಾಬು. ಆಶಿಕಾ ಹುಟ್ಟಿ ಬೆಳೆದಿದ್ದು ತುಮಕೂರಿನಲ್ಲಿ. ಸದ್ಯ ಬೆಂಗಳೂರಿನಲ್ಲಿ ಬಿ.ಕಾಂ. ಓದುತ್ತಿದ್ದಾರೆ. ಇವರು ಹತ್ತನೇ ತರಗತಿ ಓದುವ ಸಂದರ್ಭದಲ್ಲೇ ಸಿನಿಮಾದಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಆಸಕ್ತಿ ಇರದ ಕಾರಣ ತಪ್ಪಿಸಿಕೊಂಡಿದ್ದರು. ಅದಾದ ನಾಲ್ಕು ವರ್ಷಗಳ ನಂತರ ಮತ್ತೆ ಸಿನಿಮಾರಂಗವನ್ನೇ ಅರಿಸಿ ಬಂದಿದ್ದು ವಿಶೇಷ. ಚಿಕ್ಕಂದಿನಿಂದಲೂ ಆಶಿಕಾಗೆ ಡಾನ್ಸ್ ಮೇಲೆ ಪ್ರೀತಿ. ನೃತ್ಯದಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ. ಈಗಲೂ ನಾನಾ ಬಗೆಯ ಡಾನ್ಸ್‌ಗಳನ್ನು ಕಲಿಯುತ್ತಲೇ ಇದ್ದಾರೆ. ಅಷ್ಟೇ ಅಲ್ಲ, ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ದ್ವಿತೀಯ ಪಿಯುಸಿ ಮುಗಿಸುವ ಹೊತ್ತಿಗೆ ಸೌಂದರ್ಯ ಸ್ಪರ್ಧೆಯೊಂದು ಏರ್ಪಾಡಾಗಿತ್ತು. ಅದರಲ್ಲಿ ಮೊದಲ ರನ್ನರ್ ಅಪ್ ಆಗಿದ್ದರು.
↧
ನವರಂಗ್ ತಾರೆ - ಆಶಿಕಾ
↧