Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಜೈನ ಧರ್ಮದಲ್ಲಿ ದಸರಾ

$
0
0

* ರತ್ನರಾಜ ಜೈನ್‌

ಜೈನ ಧರ್ಮದಲ್ಲಿಯೂ ದಸರಾ ಹಬ್ಬದ ಉತ್ಸವ ಇದೆ. ಹತ್ತು ದಿನಗಳ ಕಾಲ ಹತ್ತು ಯಕ್ಷಿಣಿ ದೇವತೆ ಗಳನ್ನು ಷೋಡಶ ವಿಧಗಳಲ್ಲಿ ಅರ್ಚನೆ ಮಾಡಿ ಅಲಂಕೃತ ದೇವಿಯರನ್ನು ಪೂಜಿಸುವರು. ಜೈನರ 24 ತೀರ್ಥಂಕರರಿಗೂ ಯಕ್ಷ ಮತ್ತು ಯಕ್ಷಿಣಿಯರು ಇರುವರು. ತೀರ್ಥಂಕರರ ಬಲಭಾಗದಲ್ಲಿ ಇರುವುದೇ ಯಕ್ಷ . ಎಡಭಾಗದಲ್ಲಿ ಇರುವುದು ಯಕ್ಷಿಣಿಯರು. ತೀರ್ಥಂಕರರ ಪೂಜೆ ಮಾಡಿದರೆ ಇವರು ಫಲ ಕೊಡುವರು. ತೀರ್ಥಂಕರರ ಸೇವಕರು ಆಗಿರುವರು. ಆದರೆ ಜೈನ ಮುನಿ ಮಹಾರಾಜರು ಇವರನ್ನು ಪೂಜಿಸುವುದಿಲ್ಲ. ಕಾರಣ ಅವರ ದೃಷ್ಟಿಯಲ್ಲಿ ಮೋಕ್ಷ ಕ್ಕೆ ಒಂದೇ ದಾರಿ.

ಈ ವರ್ಷದ ನವರಾತ್ರಿಯಲ್ಲಿ ದೇವೀ ಪೂಜೆ ಈ ಕೆಳಗಿನಂತೆ ಮಾಡಲಾಗುವುದು:

ಇಂದು ಅಂದರೆ ಅಕ್ಟೋಬರ್‌ ಒಂದರಂದು ಮೊದಲನೇ ತೀರ್ಥಂಕರ ಶ್ರೀಆದಿನಾಥರ ಯಕ್ಷಿಣಿ ಶ್ರೀಚಕ್ರೇಶ್ವರಿ ದೇವಿಯನ್ನು ಪೂಜಿಸುವರು. ಸೋಮವಾರ 22ನೇ ತೀರ್ಥಂಕರ ಶ್ರೀ ನೇಮಿನಾಥ ಸ್ವಾಮಿಯವರ ಯಕ್ಷಿಣಿ ಶ್ರೀ ಕೂಷ್ಮಾಂಡಿನಿ ದೇವಿ ಅಲಂಕಾರ ಮಾಡಿ ಷೋಡಷೋಪಚಾರಗಳಿಂದ ಪೂಜಿಸುವರು. ಮಂಗಳವಾರ 11 ನೇ ತೀರ್ಥಂಕರ ಶ್ರೀ ಶ್ರೇಯಾಂಸನಾಥ ಸ್ವಾಮಿಯವರ ಯಕ್ಷಿಣಿ ಶ್ರೀಗೌರಿ ದೇವಿ ಯಕ್ಷಿಣಿಯನ್ನು ಪೂಜಿಸುವರು. ಬುಧವಾರ 9ನೇ ತೀರ್ಥಂಕರ ಶ್ರೀಪುಷ್ಪ ದಂತ ಸ್ವಾಮಿಯವರ ಯಕ್ಷಿಣಿ ಶ್ರೀಮಹಾಂಕಾಳಿ ದೇವಿ ಯಕ್ಷಿಣಿ ಯನ್ನು ಪೂಜಿಸುವರು. ಗುರುವಾರ 14 ನೇ ತೀರ್ಥಂಕರ ಶ್ರೀಅನಂತನಾಥ ಸ್ವಾಮಿ ಯವರ ಯಕ್ಷಿಣಿ ಅನಂತಮತಿ ದೇವಿ ಯಕ್ಷಿಣಿ ಪೂಜೆ ಮಾಡುವರು. ಶುಕ್ರವಾರ 8 ನೇ ತೀರ್ಥಂಕರ ಶ್ರೀಚಂದ್ಪಪ್ರಭ ಸ್ವಾಮಿಯವರ ಯಕ್ಷಿಣಿ ಶ್ರೀ ಜ್ವಾಲಾಮಾಲಿನಿ ದೇವಿಯವರನ್ನು ಪೂಜಿಸುವರು. ಶನಿವಾರ 23 ನೇ ತೀರ್ಥಂಕರ ಶ್ರೀಪಾರ್ಶ್ವನಾಥ ಸ್ವಾಮಿ ಯವರ ಯಕ್ಷಿಣಿ ಶ್ರೀಪದ್ಮಾವತಿ ದೇವಿ ಯಕ್ಷಿಣಿಯನ್ನು ಪೂಜಿಸುವರು. ಭಾನುವಾರ ಅಂದರೆ ಅಕ್ಟೋಬರ್‌ 9ರಂದು ತೀರ್ಥಂಕರ ಶ್ರೀಮುನಿಸುವ್ರತ ಸ್ವಾಮಿಯವರ ಯಕ್ಷಿಣಿ ಶ್ರೀಬಹುರೂಪಿಣಿ ಯಕ್ಷಿಣಿ ದೇವಿಯನ್ನು ಪೂಜಿಸುವರು. ಸೋಮವಾರದಂದು 24 ನೇ ತೀರ್ಥಂಕರ ಶ್ರೀಮಹಾವೀರ ಸ್ವಾಮಿಯವರ ಯಕ್ಷಿಣಿ ಶ್ರೀಸಿದ್ಧಾಯಿನಿ ದೇವಿ ಯಕ್ಷಿಣಿಯನ್ನು ಪೂಜಿಸುವರು. ಕೊನೇಯ ದಿನದಂದು 1ಂ ನೇ ತೀರ್ಥಂಕರ ಶ್ರೀಶೀತಲನಾಥ ಸ್ವಾಮಿ ಯವರ ಯಕ್ಷಿಣಿ ಶ್ರೀಸರಸ್ವತಿ ದೇವಿ ಪೂಜಿಸುವರು.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>