Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಪಾಕ್‌ ಹುಡುಗಿಗೆ 100 ಬಾರಿ ಆಪರೇಶನ್‌!

$
0
0

ಲಾಹೋರ್‌: ಅಪರೂಪದಲ್ಲೇ ಅಪರೂಪದ ಚರ್ಮ ರೋಗದಿಂದ ಬಳಲುತ್ತಿರುವ ಪಾಕಿಸ್ತಾನದ 25ರ ಹರೆಯದ ಈ ಹುಡುಗಿ, ಬಹುತೇಕ ತನ್ನ ಜೀವಮಾನವನ್ನು ಆಸ್ಪತ್ರೆಗಳಲ್ಲೇ ಸವೆಸುವ ಜತೆಗೆ, 100ನೇ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಎದುರಿಸಿದ್ದಾಳೆ ಎಂದರೆ ನೀವು ನಂಬುತ್ತೀರಾ?

ಹೌದು. ಫೌಜಿಯಾ ಯೂಸುಫ್‌ ಹೆಸರಿನ ಈ ಹುಡುಗಿ ಲಾಹೋರ್‌ನ ಶೇಖ್‌ ಝಾಯೆದ್‌ ಆಸ್ಪತ್ರೆಯಲ್ಲಿ 100ನೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಬಾಲ್ಯದಿಂದಲೇ ಈ ತರುಣಿಗೆ 'ಫೈಬ್ರೊಮಟೊಸಸ್‌' ಹೆಸರಿನ ಅಪರೂಪದ ಚರ್ಮ ರೋಗವಿದೆ.

''ಮತ್ತಷ್ಟು ಶಸ್ತ್ರಚಿಕಿತ್ಸೆ ಮಾಡುವುದಾದರೆ ನಾನು ಸಿದ್ಧಳಿದ್ದೇನೆ. ಆದರೆ, ನನ್ನ ಎಡಗೈ ಕತ್ತರಿಸಲು ಮಾತ್ರ ವೈದ್ಯರಿಗೆ ಅವಕಾಶ ನೀಡುವುದಿಲ್ಲ,'' ಎಂದು ಫೌಜಿಯಾ ತಿಳಿಸಿದ್ದಾಳೆ.

ಆಕೆಯ ಎಡಗೈ ಮೇಲೆ ಫೈಬ್ರೊಮಟೊಸಸ್‌ ಎಂಬ ಚರ್ಮ ರೋಗ ವ್ಯಾಪಿಸಿದೆ.

ಹೋರಾಟವೇ ಇಷ್ಟ:

''ನನ್ನ ಜೀವನ ಉಳಿಸಬೇಕಾದರೆ ಎಡಗೈ ಕತ್ತರಿಸಲೇಬೇಕು ಎಂದು ವೈದ್ಯರು ಹೇಳುತ್ತಿದ್ದಾರೆ. ಏಕೆಂದರೆ ಈ ಅಂಟು ಜಾಡ್ಯ ನನ್ನ ಕುತ್ತಿಗೆ ಸೇರಿದಂತೆ ದೇಹದ ಇತರೆ ಭಾಗಗಳಿಗೂ ಹರಡುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ, ನಾನು ಸಾಯಲು ಸಿದ್ಧ. ಎಡಗೈ ಇಲ್ಲದೆ ಬದುಕಲಾರೆ. ನಾನೊಬ್ಬಳು ಹೋರಾಟಗಾರ್ತಿ. ಮನಬಿಚ್ಚಿ ಹೇಳುತ್ತೇನೆ ಕೇಳಿ.... ಅಂಗವೈಕಲ್ಯ ವ್ಯಕ್ತಿಯಾಗಿ ಬದುಕಲು ನನಗೆ ಇಷ್ಟವಿಲ್ಲ,'' ಎಂದು ಫೌಜಿಯಾ ತಿಳಿಸಿದ್ದಾಳೆ.

ನಾನಿನ್ನೂ ಜೀವಂತವಾಗಿರುವುದೇ ಒಂದು ಪವಾಡ ಎನ್ನುವ ಆಕೆ, ಶೇಖ್‌ ಝಾಯೆದ್‌ ಆಸ್ಪತ್ರೆ ನನ್ನ ಪಾಲಿನ ಎರಡನೇ ಮನೆ. ನನಗೆ ಮೊದಲ ಶಸ್ತ್ರಚಿಕಿತ್ಸೆ ಆದಾಗ ಕೇವಲ 8 ವರ್ಷ. ನಾನು ಈ ಆಸ್ಪತ್ರೆಯಲ್ಲೇ ತುಂಬಾ ಸ್ನೇಹಿತರನ್ನು ಸಂಪಾದಿಸಿದ್ದೇನೆ. ಅವರೆಲ್ಲರೂ ನನ್ನ ಬಗ್ಗೆ ಕಾಳಜಿ ವಹಿಸಿದ್ದಾರೆ ಎನ್ನುತ್ತಾಳೆ.

ಐವರು ಮಕ್ಕಳಲ್ಲಿ ಎರಡನೆಯವಳಾದ ಫೌಜಿಯಾ ಚಿಕಿತ್ಸೆ ಮತ್ತು ಔಷಧಕ್ಕಾಗಿ ತಿಂಗಳಿಗೆ 15 ಸಾವಿರ ರೂ. ಖರ್ಚು ಬರುತ್ತಿದೆ. ದಾನಿಗಳಿಂದಾಗಿ ನಾನಿನ್ನೂ ಬದುಕಿದ್ದೇನೆ. ಅವರೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಫೌಜಿಯಾ ವಿನಮ್ರಳಾಗಿ ತಿಳಿಸಿದ್ದಾಳೆ.

2ನೇ ತರಗತಿಯಲ್ಲಿ ಕಲಿಯುತ್ತಿದ್ದಾಗಲೇ ಆಸ್ಪತ್ರೆ ಸೇರಿದ ಫೌಜಿಯಾ ಆಸ್ಪತ್ರೆಯ ಎಲ್ಲಾ ವಿಭಾಗಗಳಿಗೂ ಪರಿಚಿತಳಾಗಿದ್ದಾಳೆ. ಇದೊಂದು ವಿಶೇಷ ಪ್ರಕರಣ ಎನ್ನುತ್ತಾರೆ ಆರ್ಥೋಪೆಡಿಕ್‌ ವಿಭಾಗದ ಪ್ರಾಧ್ಯಾಪಕ ಮತ್ತು ತಜ್ಞವೈದ್ಯ ಡಾ. ಶಫೀಖ್‌ ಅಹ್ಮದ್‌.

ಎಡಗೈಗೆ 55 ಆಪರೇಷನ್‌:

ಶಫೀಖ್‌ ಫೌಜಿಯಾ ಎಡಗೈ ಮೇಲೆ 55 ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ವಿಶ್ವದ ವೈದ್ಯ ಲೋಕದಲ್ಲೇ ಇದೊಂದು ಅಪರೂಪದ ಪ್ರಕರಣ. ಎಡಗೈನ ರೋಗದ ಭಾಗಕ್ಕೆ ಕಸಿ ಮಾಡುವ ಪ್ರತಿ ಶಸ್ತ್ರಚಿಕಿತ್ಸೆಗೆ ಆಕೆಯ ಕಾಲಿನಿಂದ ತೆಗೆದುಕೊಳ್ಳಲಾದ ಚರ್ಮದ ಭಾಗದಲ್ಲೂ ಈ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕ ಮತ್ತು ದಿಗ್ಭ್ರಮೆ ಮೂಡಿಸಿದೆ ಎನ್ನುತ್ತಾರೆ ಶಫೀಖ್‌.

100 ಶಸ್ತ್ರಚಿಕಿತ್ಸೆಗಳ ನಂತರ ಇದೀಗ ಆಕೆಯ ರೋಗ ಪರಿಸ್ಥಿತಿ ವಿಷಮಾವಸ್ಥೆಗೆ ಬಂದಿದೆ. ನಮಗೀಗ ಆಕೆಯ ರೋಗ ಸವಾಲಾಗಿ ಪರಿಣಮಿಸಿದೆ. ಔಷಧಗಳ ಅಡ್ಡ ಪರಿಣಾಮಗಳು ಉಂಟಾಗುತ್ತಿವೆ. ಜತೆಗೆ, ಆಕೆಯ ದೇಹದಿಂದ ಚರ್ಮ ಲಭ್ಯವಾಗುತ್ತಿಲ್ಲ ಎಂದು ಶಫೀಖ್‌.

ಫೌಜಿಯಾ ಜೀವದ ಬಗ್ಗೆ ಚಿಂತೆ ಮೂಡಿಸಿದೆ. ಆಕೆಯ ಎಡಗೈಗೆ ಕಸಿ ಮಾಡಲು ದೇಹದ ಯಾವುದೇ ಭಾಗದಲ್ಲಿ ತಾಜಾ ಚರ್ಮ ಉಳಿದಿಲ್ಲ. ಕೃತ ಚರ್ಮ ಕಸಿಯೊಂದೇ ನಮದೆ ಉಳಿದಿರುವ ದಾರಿ. ಆದರೆ ಈ ಸೌಲಭ್ಯ ಪಾಕಿಸ್ತಾನದಲ್ಲಿ ಇಲ್ಲ. ವಿದೇಶಕ್ಕೆ ಹೋಗಬೇಕು. ಆದರೆ ಅಲ್ಲಿ ಅದು ದುಬಾರಿ ಎನ್ನುತ್ತಾರೆ ಶಫೀಖ್‌.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>