ನೂರು ಜನ್ಮಕೂ ಚಿತ್ರದ ನಂತರ ಸಂತೋಷ್ ಸಿನಿಮಾರಂಗದಿಂದಲೇ ಕಣ್ಮರೆಯಾಗಿದ್ದರು. ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಇವರು, ಆನಂತರ ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಮತ್ತೆ ಅವರು ಕಿರುತೆರೆಯಲ್ಲೇ ಮುಂದುವರೆದರು. ರಿಯಾಲಿಟಿ ಶೋವೊಂದರ ನಿರೂಪಕರಾದರು. ಈಗ ಸಂತೋಷ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. 'ಜಿಗರ್ ಥಂಡಾ' ಸಿನಿಮಾ ಖ್ಯಾತಿಯ ಶಿವಗಣೇಶ್ ನಿರ್ದೇಶನದ ಹೊಸ ಚಿತ್ರಕ್ಕೆ ಇವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲವಾದರೂ ಮುಂದಿನ ತಿಂಗಳಿಂದ ಶೂಟಿಂಗ್ ಶುರುವಾಗಲಿದೆ. 'ನಿರ್ದೇಶಕರು ಹೇಳಿದ ಕತೆ ತುಂಬಾ ಹಿಡಿಸಿತು. ಹೀಗಾಗಿ ಚಿತ್ರ ಮಾಡಲು ಒಪ್ಪಿಕೊಂಡೆ' ಅಂತಾರೆ ಸಂತೋಷ. ಈ ಹಿಂದೆಯಷ್ಟೇ ಪ್ರಜ್ವಲ್ ದೇವರಾಜ್ ಅವರ 'ಭುಜಂಗ' ಸಿನಿಮಾದಲ್ಲಿ ಪುಟ್ಟದೊಂದು ಪಾತ್ರ ನಿರ್ವಹಿಸಿದ್ದ ಸಂತೋಷ, ಈ ಬಾರಿ ನಾಯಕನಾಗಿ ತೆರೆಗೆ ಮರಳುತ್ತಿದ್ದಾರೆ.
↧
ಮರಳಿದ ಸಂತೋಷ
↧