Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಕ್ರೇಜಿ ಬಾಯ್ ಚಿತ್ರ ವಿಮರ್ಶೆ: ಈತ ಕಲರ್‌ಫುಲ್ ಕ್ರೇಜಿ ಬಾಯ್

$
0
0

ಕನ್ನಡ ಚಿತ್ರ


* ಶರಣು ಹುಲ್ಲೂರು

ತಮ್ಮದು ಕಾಲೇಜು ಹುಡುಗ ಹುಡುಗಿಯರಿಗಾಗಿ ಮಾಡಿದ ಸಿನಿಮಾ ಎಂದು ನಂಬಿಸುತ್ತಲೇ, ಬಹುತೇಕವಾಗಿ ಮಚ್ಚು-ಲಾಂಗ್‌ಗಳ ಕತೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. 'ಕ್ರೇಜಿ ಬಾಯ್' ಸಿನಿಮಾ ಹಾಗಿಲ್ಲ. ಪಕ್ಕಾ ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಚಿತ್ರ ಮಾಡಿದ್ದಾರೆ ನಿರ್ದೇಶಕ ಮಹೇಶ್ ಬಾಬು.

ಕಾಲೇಜಿನಲ್ಲಿ ನಡೆಯುವ ಕತೆ ಹೇಳುತ್ತಲೇ, ಪೋಷಕರ ಹೃದಯವನ್ನೂ ಗೆಲ್ಲುವಲ್ಲಿ ನಿರ್ದೇಶಕರು ಯಶಸ್ವಿ ಆಗುತ್ತಾರೆ. ಹೀಗಾಗಿ 'ಕ್ರೇಜಿ ಬಾಯ್' ಎಲ್ಲರ ಎದೆಯಲ್ಲೂ ಕಮಾಲ್ ಮಾಡುತ್ತಾನೆ. ಕಲರ್ ಕಲರ್ ಚಿತ್ತಾರ ಬಿಡಿಸುತ್ತಲೇ, ಕಾಲೇಜು ದಿನಗಳನ್ನು ನೆನಪಿಸುತ್ತಾನೆ. ಯುವ ಪ್ರೇಮಿಗಳ ಕನಸಲ್ಲಿ ಕವನ ಗೀಚುತ್ತಾನೆ. ಲವರ್ಸ್‌ ಅಂದರೆ ಹೀಗೆಯೇ ಇರಬೇಕು ಎನ್ನುವ ಮುದ್ರೆ ಒತ್ತುತ್ತಾನೆ. ಹೀಗಾಗಿ ಸಿನಿಮಾ ಇಷ್ಟವಾಗುತ್ತದೆ.

ನಿರ್ದೇಶಕರು ಸಾದಾ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದರೂ, ಅದನ್ನು ಹೇಳುವ ರೀತಿ ಚೆನ್ನಾಗಿದೆ. ಸರಿಯಾದ ಪಾತ್ರಧಾರಿಗಳ ಮೂಲಕ ಅದನ್ನು ನೋಡುಗರ ಮನಸಿಗೆ ದಾಟಿಸುತ್ತಾರೆ. ಅಳೆದು ತೂಗಿ ನಟರಿಂದ ಪಾತ್ರ ಮಾಡಿಸಿದ್ದರಿಂದ ಯಾವ ನಟರೂ ಬೋರ್ ಹೊಡೆಸುವುದಿಲ್ಲ. ಕತೆಯೊಂದಿಗೆ ಹಾಡು, ಹಾಡಿನೊಂದಿಗೆ ಕತೆ ಸಾಗುವುದರಿಂದ ಸಿನಿಮಾ ಜಾಲಿಯಾಗಿಯೇ ಸಾಗುತ್ತದೆ.

ಆತ ಅರ್ಜುನ್ (ದಿಲೀಪ್ ಪ್ರಕಾಶ). ಅಪ್ಪನಿಗಾಗಿ ಪ್ರಾಣವನ್ನೇ ಕೊಡುವ ಮಗ. ಇವರದ್ದು ಮಧ್ಯಮ ವರ್ಗದ ಕುಟುಂಬ. ಆಕೆ ಶ್ರೀಮಂತ ಹುಡುಗಿ ನಂದು (ಆಶಿಕಾ). ಅಣ್ಣನನ್ನೆ ತಂದೆಯಂದು ನಂಬಿರುವಾಕೆ. ಅರ್ಜುನ್ ಮತ್ತು ನಂದು ಒಂದೇ ಕಾಲೇಜಿನಲ್ಲಿ ಓದುತ್ತಿರುತ್ತಾರೆ. ಸ್ನೇಹದೊಂದಿಗೆ ಶುರುವಾಗುವ ಸಲುಗೆ ಆ ನಂತರ ಪ್ರೇಮಕ್ಕೆ ತಿರುಗುತ್ತದೆ. ಅಂತಸ್ತಿನ ವಿಚಾರವಾಗಿ ಪ್ರೇಮಿಗಳು ದೂರವಾಗುವ ಸ್ಥಿತಿಯೂ ಬಂದೊದಗುತ್ತದೆ. ಅಪಾರವಾಗಿ ತಾನು ಪ್ರೀತಿಸುತ್ತಿದ್ದ ತಂದೆಗೆ ನಂದು ಕುಟುಂಬದಿಂದ ಅವಮಾನವೂ ಆಗುತ್ತದೆ. ತನ್ನ ಪ್ರೀತಿ ಉಳಿಸಿಕೊಳ್ಳಲು ಅರ್ಜುನ್, ತನ್ನ ಹುಡುಗಿಯ ಹಿಂದೆ ಹೋಗುತ್ತಾನಾ ಅಥವಾ ತಂದೆಗಾಗಿ ಪ್ರೀತಿಯನ್ನು ತ್ಯಾಗ ಮಾಡುತ್ತಾನಾ ಅನ್ನುವುದೇ ಸಿನಿಮಾ. ಕತೆ ಹಳೆಯದಾದರೂ ನಿರೂಪಣೆ ಹೊಸದಾಗಿದೆ.

ನಾಯಕ ದಿಲೀಪ್‌ಗೆ ಇದು ಚೊಚ್ಚಲ ಸಿನಿಮಾ. ಆದರೂ, ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆಶಿಕಾ ಕೂಡ ಅಷ್ಟೇ ಭರವಸೆ ಮೂಡಿಸುತ್ತಾರೆ. ತಂದೆಯ ಪಾತ್ರದಲ್ಲಿ ರಂಗಾಯಣ ರಘು, ಡ್ರಾಮಾ ಮಾಸ್ಟರ್ ಆಗಿ ಸಾಧು ಕೋಕಿಲಾ, ನಾಯಕನ ಗೆಳೆಯನಾಗಿ ಪವನ್, ನಾಯಕಿಯ ಅಣ್ಣನಾಗಿ ರವಿಶಂಕರ್ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿ ಪ್ರತಿ ಫ್ರೇಮ್‌ನ್ನು ಚಂದ ಮಾಡಿದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಮೂಡಿ ಬಂದು ಮೂರು ಹಾಡುಗಳು ಗುನುಗುತ್ತವೆ. ಇವುಗಳ ಜತೆ ಚಿತ್ರದಲ್ಲಿ ಕೆಲವು ಮೈನಸ್ ಪಾಯಿಂಟ್‌ಗಳೂ ಇವೆ. ಮೊದಲ ಸಿನಿಮಾದಲ್ಲೇ ನಾಯಕನಿಗೆ ಭಾರವಾಗುವಂತಹ ಡೈಲಾಗ್ ಹೇಳಿಸಿದ್ದಾರೆ. ಹಾಗಾಗಿ ಕೆಲವು ಕಡೆ ಪಾತ್ರಕ್ಕೂ ಸಂಭಾಷಣೆಗೂ ಹೊಂದಾಣಿಕೆ ಅನಿಸುವುದಿಲ್ಲ. ತೀವ್ರ ಪ್ರೀತಿಯನ್ನು ತೋರಿಸಲು ಮತ್ತಷ್ಟು ದೃಶ್ಯಗಳು ಬೇಕು ಅನಿಸುತ್ತವೆ.

ಯೂತ್ಸ್ ಇಷ್ಟಪಡುವ ಎಲ್ಲಾ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಮನರಂಜನೆಯ ಜತೆಗೆ ಮತ್ತೆ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳಬೇಕೆಂದವರು 'ಕ್ರೇಜಿ ಬಾಯ್' ಆಗಬಹುದು.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>