ಜಾಗ್ವಾರ್ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಮೇಕಿಂಗ್‌ಗಾಗಿ ಹೆಚ್ಚು ಸುದ್ದಿ ಮಾಡುತ್ತಿದೆ. ನಾಯಕ ನಟನಾಗಿ ಎಂಟ್ರಿ ಕೊಡಲಿರುವ ನಿಖಿಲ್ ಕುಮಾರ್ ಹಗಲಿರುಳು ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. --- ಜಾಗ್ವಾರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಜನರು ನಿಖಿಲ್ ಶ್ರಮ ಹಾಗೂ ಬದ್ಧತೆಯನ್ನು ಹೊಗಳುತ್ತಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಿಖಿಲ್ ಬಗ್ಗೆ ಪೋಸ್ಟ್‌ಗಳು ಹರಿದಾಡುತ್ತಿವೆ. 'ಅಪ್ಪ ಸಿಎಂ, ತಾತ ಪಿಎಂ. ಆದ್ರೆ ಇದ್ಯಾವುದನ್ನೂ ತಲೆಯಲ್ಲಿ ಇಟ್ಟಕೊಳ್ಳದೆ ಹಾರ್ಡ್ ವರ್ಕ್ ಮಾಡುತ್ತಿರುವ ನಿಖಿಲ್‌ನಂತಹ ಹೀರೋಗಳು ಸ್ಯಾಂಡಲ್‌ವುಡ್‌ಗೆ ಬೇಕು' ಎಂದು ಬರೆದಿದ್ದಾರೆ. ಚಿತ್ರ ರಿಲೀಸ್ ಆಗುವ ಮೊದಲೇ ತಮಗೆ ಸಿಗುತ್ತಿರುವ ಬೆಂಬಲಕ್ಕೆ ನಿಖಿಲ್ ಖುಷಿಯಾಗಿದ್ದಾರೆ. ಬಲ್ಗೇರಿಯಾದಲ್ಲಿ ಶೂಟಿಂಗ್ ಮುಗಿಸಿ ವಾಪಾಸು ಬಂದಿರುವ ನಿಖಿಲ್ ಸದ್ಯ ಮೈಸೂರಿನಲ್ಲಿದ್ದಾರೆ. ಅಲ್ಲಿನ ಐಟಿ ಕಂಪನಿಯ ಆವರಣದಲ್ಲಿ ಶೂಟಿಂಗ್ ನಡೆಸುತ್ತಿದ್ದಾರೆ. ಆಗಸ್ಟ್ 30ರ ಹೊತ್ತಿಗೆ ಶೂಟಿಂಗ್ ಮುಗಿಸಬೇಕಾದ ಅನಿವಾರ್ಯತೆ ಇವರಿಗಿದೆ. ಹಾಗಾಗಿ ಕಠಿಣ ಶ್ರಮ ಪಡುತ್ತಿದ್ದಾರೆ. ದಿವೊಂದಕ್ಕೆ ಕೇವಲ 4 ಗಂಟೆಗಳಷ್ಟು ನಿದ್ದೆ ಮಾಡಿ ಮತ್ತೆ ಶೂಟಿಂಗ್‌ಗೆ ತಯಾರಾಗುತ್ತಿದ್ದಾರಂತೆ. ತಮ್ಮ ಮಗನ ಚಿತ್ರದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಮುತುವರ್ಜಿ ವಹಿಸುತ್ತಿದ್ದಾರೆ. ಶೂಟಿಂಗ್ ತಾಣಗಳಿಗೆ ಭೇಟಿ ನೀಡುವ ಎಚ್‌ಡಿಕೆ ಅಲ್ಲಿ ಮಗನಿಗೆ ಅಗತ್ಯ ಸಲಹೆ ಸೂಚನೆ ನೀಡುವುದನ್ನು ಮರೆಯುವುದಿಲ್ಲ. ತಮ್ಮ ಇಡೀ ಕುಟುಂಬ ರಾಜಕಾರಣದಲ್ಲಿ ಇದ್ದರೂ ತಾವು ಮಾತ್ರ ನಟನಾಗಬೇಕೆಂಬ ಆಸೆ ಇರುವ ನಿಖಿಲ್‌ರ ಈ ಚಿತ್ರದ ಬಗ್ಗೆ ಜನರಿಗೆ ಕುತೂಹಲವಿದೆ.
↧
ನಿಖಿಲ್‌ಗೆ ನಿದ್ದೆ ಇಲ್ಲ
↧