Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಹರ್ಷ, ದುನಿಯಾ ವಿಜಯ್ ಜೋಡಿ

$
0
0

ಜೈ ಭಜರಂಗಿ, ವಜ್ರಕಾಯ ಚಿತ್ರಗಳ ಯಶಸ್ಸಿನ ನಂತರ ನಿರ್ದೇಶಕ ಹರ್ಷ, ದುನಿಯಾ ವಿಜಯ್‌ಗೆ ಚಿತ್ರ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್ ಚಿತ್ರ ಎನ್ನುತ್ತಿದ್ದಾರೆ ಹರ್ಷ.

ವಜ್ರಕಾಯ ಚಿತ್ರದ ಯಶಸ್ವಿನ ನಂತರ ನಿರ್ದೇಶಕ ಹರ್ಷ , ಶರಣ್ ಜತೆ ಮಾರುತಿ 800 ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಆ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿಲ್ಲ. ಆಗಲೇ ಅವರು ಮತ್ತೊಂದು ಸಿನಿಮಾ ಶುರು ಮಾಡುವ ಸಿದ್ಧತೆಯಲ್ಲಿದ್ದಾರೆ. ಆ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ. ಕನಕಪುರ ಶ್ರೀನಿವಾಸ್‌ರಿಂದ ದೂರವಾಗಿರುವ ಕೆ.ಪಿ.ಶ್ರೀಕಾಂತ್ ಸ್ವತಂತ್ರವಾಗಿ ಚಿತ್ರ ನಿರ್ಮಾಣ ಮಾಡಲಿದ್ದಾರೆ.

ನಿರ್ದೇಶಕ ಹರ್ಷ, ಶಿವರಾಜ್‌ಕುಮಾರ್ ಜತೆಗೂಡಿ ಜೈ ಭಜರಂಗಿ ಸಿನಿಮಾ ಮಾಡಿದ್ದರು. ಆ ಚಿತ್ರ ಹಿಟ್ ಆಗಿತ್ತು. ಅದೇ ಖುಷಿಯಲ್ಲಿ ವಜ್ರಕಾಯ ಚಿತ್ರ ಮಾಡಿದರು. ಆ ಚಿತ್ರ ಕೂಡ ಹಿಟ್. ಈಗ ಮಾಸ್ ಹೀರೋ ದುನಿಯಾ ವಿಜಯ್ ಜತೆ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರ ಎಂದು ಹೇಳಲಾಗುತ್ತಿದೆ.

ದುನಿಯಾ ವಿಜಯ್‌ಗೆ ಸಿನಿಮಾ ಮಾಡುವ ಸಲುವಾಗಿ ಬಹಳ ದಿನಗಳಿಂದ ಚರ್ಚೆಗಳು ನಡೆಯುತ್ತಿದ್ದವು. ಈಗ ಎಲ್ಲವೂ ಅಂತಿಮಗೊಂಡಿದೆ. ಚಿತ್ರದ ನಾಯಕಿ ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಒಟ್ಟಿನಲ್ಲಿ ಇದೊಂದು ಮಾಸ್ ಸಿನಿಮಾ ಎಂದು ಹೇಳುವುದನ್ನು ಅವರು ಮರೆಯಲಿಲ್ಲ. ಮಾರುತಿ 800 ಸಿನಿಮಾದ ನಂತರ ಈ ಚಿತ್ರವನ್ನು ಕೈಗೆತ್ತಿಕೊಳ್ಳುವೆ. ಶರಣ್ ಅಭಿನಯದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ ಎಂದರು.

ಒಂದರ ಮೇಲೊಂದು ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಿರುವ ಹರ್ಷ ಈಗ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ನಿರ್ದೇಶಕ ಎಂದು ಹೆಸರು ಮಾಡಿದ್ದಾರೆ. ತೆಲುಗಿನ ಮಾಸ್ ಮಹಾರಾಜ ರವಿತೇಜ ನಾಯಕನಾಗಿ ನಟಿಸಿರುವ ಬೆಂಗಾಲಿ ಟೈಗರ್ ಚಿತ್ರದ ಹಾಡೊಂದಕ್ಕೆ ಹರ್ಷ ಕೊರಿಯಾಗ್ರಾಫಿ ಮಾಡಿದ್ದಾರೆ.


Viewing all articles
Browse latest Browse all 7056

Trending Articles