Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಇಂಡೊ-ಪಾಕ್ ಸರಣಿ ನಿರ್ಧಾರ ಶೀಘ್ರ: ಬಿಸಿಸಿಐ

$
0
0

ಮುಂಬಯಿ: ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಮುಂದಿನ ತಿಂಗಳು ನಡೆಯುವ ಸಾಧ್ಯತೆಯಿದ್ದು, ಕ್ರಿಕೆಟ್ ಅಭಿಮಾನಿಗಳು ಮುಂದಿನ ನಾಲ್ಕೈದು ದಿನ ಸರಣಿಯ ನಿರ್ಧಾರವನ್ನು ಎದುರು ನೋಡಬಹುದು.

ತೂಗುಯ್ಯಾಲೆಯಲ್ಲಿರುವ ದ್ವಿಪಕ್ಷೀಯ ಸರಣಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಂಡಳಿ ಕಾರ್ಯದರ್ಶಿ ಅನುರಾಗ್ ಠಾಕೂರ್, ಸರಣಿ ಬಗೆಗಿನ ತೀರ್ಮಾನಕ್ಕಾಗಿ ಇನ್ನಷ್ಟು ದಿನ ಕಾಯಿರಿ ಉಭಯ ಮಂಡಳಿಗಳ ಮುಖ್ಯಸ್ಥರು ಸ್ಥಳದ ಬಗ್ಗೆ ಹೊಸ ಮಾತುಕತೆ ನಡೆದ ನಂತರ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ,'' ಎಂದಿದ್ದಾರೆ.

ಭಾರತ ಈಗಾಗಲೇ ಪಾಕಿಸ್ತಾನಕ್ಕೆ ಸರಣಿ ಆಡಲು ಆಹ್ವಾನ ನೀಡಿದೆ. ಆದರೆ ಪಾಕಿಸ್ತಾನ ಭಾರತದಲ್ಲಿ ಆಡುವ ಆಹ್ವಾನವನ್ನು ತಿರಸ್ಕರಿಸಿದ್ದು, ಯುಎಇನಲ್ಲಿ ಆಡಲು ಒಪ್ಪಿಗೆ ನೀಡಿದೆ.

**

ವಿಶ್ವಕಪ್‌ನಿಂದ ಚೆನ್ನೈ ಹೊರಗಿಟ್ಟಿಲ್ಲ: ಠಾಕೂರ್

ಮುಂಬಯಿ: ಭಾರತದ ಆತಿಥ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಐಸಿಸಿ ವಿಶ್ವಕಪ್ ಟಿ20 ಟೂರ್ನಿಗೆ ಆತಿಥ್ಯವಹಿಸಿರುವ ಎಂ.ಎ.ಚಿದಂಬರಂ ಕ್ರೀಡಾಂಗಣ ಕೆಲ ಸಮಸ್ಯೆಗಳನ್ನು ಎದುರಿಸುತ್ತಿದೆ.ಆದರೆ ಪ್ರಮುಖ ಸ್ಥಳಗಳಲ್ಲಿ ಒಂದಾಗಿರುವ ಚೆನ್ನೈ ಮೈದಾನವನ್ನು ಟೂರ್ನಿಯಿಂದ ಇನ್ನೂ ಕೈಬಿಟ್ಟಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಠಾಕೂರ್,''ನಾವೆಲ್ಲರು ಗುರುವಾರ ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಕೆಲವು ಪ್ರಮುಖ ಮೈದಾನಗಳಿಗೆ ಆ.25ರ ವರೆಗೆ ಗಡುವು ನೀಡಿದ್ದು, ವರದಿ ಸಲ್ಲಿಸಲು ಸೂಚಿಸಿದ್ದೇವೆ.ಹೀಗಾಗಿ ಅವುಗಳ ಪ್ರಮಾಣಪತ್ರಕ್ಕಾಗಿ ಎದುರು ನೋಡುತ್ತಿದ್ದೇವೆ,''ಎಂದಿದ್ದಾರೆ. ಅಲ್ಲದೆ ಚಿದಂಬರಂ ಕ್ರೀಡಾಂಗಣ ಕೆಲ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.


Viewing all articles
Browse latest Browse all 7056

Trending Articles



<script src="https://jsc.adskeeper.com/r/s/rssing.com.1596347.js" async> </script>