Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಸುಳಿ ಚಿತ್ರವಿಮರ್ಶೆ: ಜೀವನ ಪ್ರೀತಿ ಮತ್ತು ಬದುಕಿನ ರೀತಿ

$
0
0

ಕನ್ನಡ ಚಿತ್ರ: ಸುಳಿ

-ಶಶಿಧರ

ಜುಬ್ಬಾದ ಜೇಬಿನಲ್ಲಿ ತುಂಬಿಕೊಂಡ ಕಡಲೇಕಾಯಿ ಮೆಲ್ಲುತ್ತಾ, ಎದುರಿಗೆ ಬಂದವರಿಗೂ ಹಂಚುತ್ತಾ ಪ್ರೀತಿಯಿಂದ ಮಾತನಾಡಿಸುವ ಬುಡೇನ್‌ ಸಾಬ್‌, ಜೀವನ ಪ್ರೀತಿಯ ಸಂಕೇತವಾಗಿ ಕಾಣಿಸುತ್ತಾರೆ. ಪಟ್ಟಣದಿಂದ ದಿನನಿತ್ಯದ ಅಗತ್ಯ ವಸ್ತುಗಳನ್ನು ಕತ್ತೆಗಳ ಮೇಲೆ ಹೊರಿಸಿ ತಂದು ಹಳ್ಳಿಗಳಲ್ಲಿ ಮಾರಾಟ ಮಾಡುವುದು ಬುಡೇನ್‌ ಸಾಹೇಬರ ಕಸುಬು. ಕಾಯಿಲೆಯಿಂದ ನರಳುವವರಿಗೆ ಔಷಧವನ್ನೂ ತಂದುಕೊಡುವ ಅವರೆಂದರೆ ಹಳ್ಳಿಗರಿಗೂ ಪ್ರೀತಿ. ಹೀಗೆ, ಎಲ್ಲರಲ್ಲಿಯೂ ಒಳ್ಳೆಯತನ ಹುಡುಕುವ ಬುಡೇನ್‌ ಸಾಬ್‌ ತನ್ನದಲ್ಲದ ತಪ್ಪಿಗೆ ಸುಳಿಗೆ ಸಿಲುಕುವ ಸಂದರ್ಭ ಎದುರಾಗುತ್ತದೆ.

ಅನಾಥ ಯುವಕನೊಬ್ಬನಿಗೆ ಮಾತು ಬಾರದ ತಮ್ಮ ಪುತ್ರಿಯನ್ನು ಮದುವೆ ಮಾಡಿಕೊಡುವ ಬುಡೇನ್‌ ಸಂಕಷ್ಟಕ್ಕೆ ಸಿಲುಕುತ್ತಾರೆ. ವೈಯಕ್ತಿಕ ನೆಲೆಯ ಸಮಸ್ಯೆ ನಿಧಾನವಾಗಿ ಕೋಮುವಾದದ ರೂಪ ಪಡೆಯುತ್ತದೆ. ಈ ಹಂತದಲ್ಲಿ ಕುಟುಂಬವೊಂದರ ಸಮಸ್ಯೆ ಹೇಗೆ ಹಳ್ಳಿ, ಸಮಾಜದ ಸಮಸ್ಯೆಯಾಗಿ ಕಾಡುತ್ತದೆ ಎನ್ನುವುದನ್ನೂ ನೋಡಬಹುದು. ಸಹಜೀವನ, ಬದುಕಿನ ನೀತಿ ಸಾರುವ ಅವರಿಗೆ ತನ್ನ ಒಳ್ಳೆಯತನ, ಅಮಾಯಕತೆಯೇ ಮುಳುವಾಗುತ್ತದೆ. ಅಂತಿಮವಾಗಿ ಕುಟುಂಬಕ್ಕಿಂತ ಸಮಾಜದ ಹಿತವೇ ಮುಖ್ಯ ಎನ್ನುವ ಸಂದೇಶ ದಾಟಿಸುತ್ತಾರೆ ಬುಡೇನ್‌ಸಾಬ್‌.

ಅಪಾರ ಜೀವನ ಪ್ರೀತಿಯ ಬುಡೇನ್‌ಸಾಬ್‌ ಪಾತ್ರದಲ್ಲಿ ಶ್ರೀನಾಥ್‌ರದ್ದು ಆಪ್ತ ಅಭಿನಯ. ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ಯುವ ಅವರಿಗೆ ಹಿರಿಯ ಪುತ್ರಿಯಾಗಿ ಪ್ರಗತಿ ಉತ್ತಮ ಸಾಥ್‌ ಕೊಟ್ಟಿದ್ದಾರೆ. ನಟನೆಗೆ ಹೆಚ್ಚು ಅವಕಾಶವಿರುವ ಪಾತ್ರವನ್ನು ಸೊಗಸಾಗಿ ನಿಭಾಯಿಸಿರುವ ಅವರು ಭರವಸೆ ಮೂಡಿಸುತ್ತಾರೆ. ಮಠದಯ್ಯನ ಪಾತ್ರದಲ್ಲಿ ಚನ್ನಕೇಶವ ಅವರದ್ದು ಸಹಜ ಅಭಿವ್ಯಕ್ತಿ. ಹಿನ್ನೆಲೆಯಲ್ಲಿ ಕೇಳಿಸುವ 'ಮೂರು ದಿನದ ಬದುಕಲಿ ಯಾಕೆ ಇಂಥ ಗಲಿಬಿಲಿ..' ಎನ್ನುವಂತಹ ಸರಳ ಹಾಡುಗಳು ಕತೆಗೆ ಅಗತ್ಯ ಭೂಮಿಕೆ ಒದಗಿಸುತ್ತವೆ. ಆರ್‌.ಮಂಜುನಾಥ್‌ ಕ್ಯಾಮೆರಾ ಕಣ್ಣಿನಲ್ಲಿ ಚಿಕ್ಕಮಗಳೂರು ಆಸುಪಾಸಿನ ಸುಂದರ ಪರಿಸರ ಸೊಗಸಾಗಿ ಕಾಣಿಸುತ್ತದೆ. ಅಪರೂಪದ ವಸ್ತುವನ್ನು ತೆರೆಗೆ ಅಳವಡಿಸುವಲ್ಲಿ ನಿರ್ದೇಶಕ ಪಿ.ಎಚ್‌.ವಿಶ್ವನಾಥ್‌ ಯಶಸ್ವಿಯಾಗಿದ್ದಾರೆ. ಸದಭಿರುಚಿಯ ಸಿನಿಮಾ ಅಪೇಕ್ಷಿಸುವವರು ನೋಡಬೇಕಾದ ಪ್ರಯೋಗವಿದು.


Viewing all articles
Browse latest Browse all 7056

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!