Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ನಾಲ್ಕನೇ ದಿನವೂ ಮಳೆಯೇ ಮೇಲುಗೈ

$
0
0

ಒಂದೂ ಎಸೆತ ಕಾಣದೆ ರದ್ದಾದ ನಾಲ್ಕನೇ ದಿನದಾಟ
ಬೆಂಗಳೂರು: ಮಳೆ ಮತ್ತು ತೇವಾಂಶದಿಂದಾಗಿ ಇಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಸತತ ಮೂರನೇ ದಿನವೂ ಒಂದೂ ಎಸೆತ ಕಾಣದೆ ನಾಲ್ಕನೇ ದಿನದಾಟ ರದ್ದುಗೊಂಡಿತು.

ಇದರಿಂದಾಗಿ ಮೂರು ದಿನಗಳ ಕಾಲ ಮಳೆಯ ಆಟವೇ ಮುಂದುವರಿದುದರಿಂದ ಪಂದ್ಯ ಡ್ರಾ ಆಗುವುದು ಖಚಿತವಾಯಿತು.

ಎರಡು ಮತ್ತು ಮೂರನೇ ದಿನದಾಟ ಮಳೆ ಮತ್ತು ಮಂದ ಬೆಳಕಿನ ಕಾರಣ ರದ್ದಾಗಿತ್ತು. ನಾಲ್ಕನೇ ದಿನ ಮೂರು ಭಾರಿ ಫೀಲ್ಡ್ ಅಂಪೈರ್‌ಗಳು ಪಿಚ್ ಮತ್ತು ಔಟ್ ಫೀಲ್ಡ್ ಪರಿಶೀಲಿಸಿದ ನಂತರ ಅಧಿಕೃತವಾಗಿ 2.30ಕ್ಕೆ ದಿನದಾಟವನ್ನು ರದ್ದುಗೊಳಿಸಿದರು.

ಒಂದು ವೇಳೆ ಐದನೇ ದಿನವಾದ ಬುಧವಾರ ಪಂದ್ಯದ ಮಳೆ ಅಡ್ಡಿಪಡಿಸದಿದ್ದರೆ, ಬೆಳಗ್ಗೆ 9.15ಕ್ಕೆ ಪಂದ್ಯ ಮುಂದುವರಿಯಲಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಯಿತು.

ಇದರೊಂದಿಗೆ ಪಂದ್ಯದ ಮೊದಲ ದಿನವೇ 214 ರನ್‌ಗೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ಇದು ನೆರವಾದರೆ, ವಿಕೆಟ್ ನಷ್ಟವಿಲ್ಲದೆ 80 ರನ್‌ಗಳಿಸಿದ್ದ ಭಾರತಕ್ಕೆ ಹಿನ್ನಡೆಯಾದಂತಾಯಿತು. ಐದನೇ ದಿನವೂ ಮಳೆಯಿಂದಾಗಿ ರದ್ದಾಗುವ ಸಾಧ್ಯತೆ ಇದ್ದು, ಪಂದ್ಯ ಬಹುತೇಕ ಡ್ರಾಗೊಳ್ಳುವುದು ಖಚಿತವಾಗಿದೆ.

ವರುಣ ಬೆಳಗ್ಗೆಯಿಂದ ಭೋಜನ ವಿರಾಮದ ವರೆಗೂ ಬಿಡುವು ಕೊಟ್ಟಿದ್ದರಿಂದ ಕ್ರೀಡಾಂಗಣದ ಸಿಬ್ಬಂದಿ ಔಟ್ ಫೀಲ್ಡ್‌ನಲ್ಲಿದ್ದ ನೀರನ್ನು ತೆಗೆದು ಪಂದ್ಯಕ್ಕೆ ಅಣಿಗೊಳಿಸಿದರು. 9.30 ಮತ್ತು 11.30ಕ್ಕೆ ಎರಡು ಬಾರಿ ಫೀಲ್ಡ್ ಅಂಪೈರ್‌ಗಳಾದ ಇಯಾನ್ ಗೌಲ್ಡ್ ಮ್ತತು ರಿಚರ್ಡ್ ಕೆಟೆಲ್‌ಬೋರ್ಗ್ ಔಟ್ ಪೀಲ್ಡ್‌ನ ತೇವಾಂಶ ಪರಿಶೀಲಿಸಿದರು. ತೇವಾಂಶ ಇನ್ನು ಇದ್ದ ಕಾರಣ ಮತ್ತೆ 1ಗಂಟೆಗೆ ಪರಿಶೀಲನೆಯನ್ನು ಮುಂದೂಡಿದರು. ನಂತರ ಔಟ್ ಫೀಲ್ಡ್ ಪರಿಶೀಲಿಸಿ ಪಂದ್ಯದ ಆರಂಭವನ್ನು 2 ಗಂಟೆಗೆ ನಿಗದಿಗೊಳಿಸಿದರು. ಆದರೆ 1.30ಕ್ಕೆ ಸಣ್ಣದಾಗಿ ಇಣುಕಿದ ಮಳೆ ಒಂದು ತಾಸು ಕಳೆದರೂ ನಿಲ್ಲದ ಕಾರಣ ಅಂತಿಮವಾಗಿ ದಿನದಾಟವನ್ನು ರದ್ದುಪಡಿಸಲಾಯಿತು.

ಆಯ್ದ ಶಾಲೆಗಳಿಗೆ ಉಚಿತ ಪಾಸ್ ನೀಡಿದ್ದರಿಂದ ಮಳೆ ಬರುವ ಮುನ್ಸೂಚನೆ ಇದ್ದರೂ ಸಾವಿರಕ್ಕೂ ಅಧಿಕ ಮಕ್ಕಳು ಮೈದಾನಕ್ಕೆ ಆಗಮಿಸಿ ಪಂದ್ಯ ಆರಂಭವಾಗುವುದನ್ನೇ ಎದುರು ನೋಡುತ್ತಿದ್ದರು. ಆದರೆ ಮಳೆ ಮಾತ್ರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಟೀಮ್ ಇಂಡಿಯಾದ ಆಟಗಾರರು ಪಂದ್ಯ ಆರಂಭವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆ ನಡೆಸಿದ ಫುಟ್ಬಾಲ್ ಅಭ್ಯಾಸವೇ ಅವರ ಪಾಲಿಗೆ ಸಿಕ್ಕ ಸೌಭಾಗ್ಯ.


Viewing all articles
Browse latest Browse all 7056

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಕಾರಿನಲ್ಲೇ 19 ದೇಶ ಸುತ್ತಿದ್ದಾರೆ ಈ ದಂಪತಿ


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>