Quantcast
Channel: ರಾಜ್ಯ - vijaykarnataka indiatimes
Viewing all articles
Browse latest Browse all 7056

ಚಕ್ರವ್ಯೂಹದ ಚಮಕ್‌

$
0
0

* ಪದ್ಮಿನಿ ಜೈನ್‌ ಎಸ್‌.

ಪುನೀತ್‌ ರಾಜ್‌ಕುಮಾರ್‌ ನಟಿಸಿರುವ ಬಹುನಿರೀಕ್ಷಿತ ಚಿತ್ರ 'ಚಕ್ರವ್ಯೂಹ'ದ ರಹಸ್ಯ ಇಂದು ತೆರೆಯ ಮೇಲೆ ಅನಾವರಣಗೊಳ್ಳುತ್ತಿದೆ.

ಕರ್ನಾಟಕವಷ್ಟೇ ಅಲ್ಲದೆ ಹೊರರಾಜ್ಯ ಹಾಗೂ ವಿದೇಶಗಳಲ್ಲಿಯೂ ಇದು ರಿಲೀಸ್‌ ಆಗುತ್ತಿದೆ. ಈಗಾಗಲೇ ಆಸ್ಪ್ರೇಲಿಯಾದಲ್ಲಿ ಚಿತ್ರದ ಪ್ರೀಮಿಯಮ್‌ ಷೋ ಆಗಿದ್ದು ಲಂಡನ್‌, ನ್ಯೂಝಿಲ್ಯಾಂಡ್‌, ಅಮೆರಿಕ, ಕುವೈತ್‌, ಬೆಹರಾನ್‌ ಸೇರಿದಂತೆ 50 ದೇಶಗಳಲ್ಲಿ ಬಿಡುಗಡೆ ಆಗಲಿದೆ. 'ಪರಭಾಷಾ ಚಿತ್ರಗಳು ಬೇರೆ ಬೇರೆ ದೇಶಗಳಲ್ಲಿ ಬಿಡುಗಡೆಯಾಗುತ್ತಿವೆ. ಈ ವಿಷಯದಲ್ಲಿ ಕನ್ನಡ ಚಿತ್ರಗಳು ಏಕೆ ಹಿಂದೆ ಬೀಳಬೇಕು? ಸ್ಯಾಂಡಲ್‌ವುಡ್‌ ಚಿತ್ರಗಳ ಮಾರ್ಕೆಟಿಂಗ್‌ ಲೆವಲ್‌ ಅನ್ನೂ ಎತ್ತರಿಸಬೇಕು' ಎನ್ನುತ್ತಾರೆ ಈ ಚಿತ್ರದ ನಿರ್ದೇಶಕ ಎಮ್‌. ಸರವಣ್‌.

'ಚಕ್ರವ್ಯೂಹ' ಚಿತ್ರ ತಮಿಳಿನ 'ಇವನ್‌ ವೇರಾಮತಿರಿ'ಯ ರಿಮೇಕ್‌. ತಮಿಳಿನಲ್ಲಿಯೂ ಈ ಚಿತ್ರವನ್ನು ಸರವಣನ್‌ ಅವರೇ ನಿರ್ದೇಶಿಸಿದ್ದಾರೆ. ಆದರೆ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿ ಹೊಸ ರೂಪ ಕೊಟ್ಟಿದ್ದಾರೆ.

'ಈ ಚಿತ್ರದಲ್ಲಿ ಸಾಮಾಜಿಕ ಪಿಡುಗೊಂದರ ಸುತ್ತ ಹೆಣೆದ ಕತೆಯಿದೆ. ಸಮಾಜದಲ್ಲಿ ಏನೇ ತೊಂದರೆ ಎದುರಾದರೂ ಹೇಗೆ ಒಂದಾಗಿ ಹೋರಾಡಬೇಕು ಎಂದು ಕತೆಯಲ್ಲಿ ತೋರಿಸಲಾಗಿದೆ. ಅಲ್ಲದೆ ಜೂನಿಯರ್‌ ಎನ್‌.ಟಿ.ಆರ್‌. ಹಾಗೂ ಕಾಜಲ್‌ ಅಗರ್ವಾಲ್‌ ಹಾಡುಗಳು ಚಿತ್ರದ ಸ್ಪೆಷಾಲಿಟಿ. ಪುನೀತ್‌ ಈವರೆಗೂ ಮಾಡಿರದ ಡಿಫರೆಂಟ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ನೋಡದೆ ಇದ್ದರೆ ಒಂದು ಉತ್ತಮ ಅಭಿರುಚಿಯ ಚಿತ್ರವನ್ನು ಮಿಸ್‌ ಮಾಡಿಕೊಳ್ಳುವುದು ಖಂಡಿತ' ಎಂದು ತನ್ನ ಸಿನಿಮಾದ ಸ್ಪೆಷಾಲಿಟಿ ವಿವರಿಸಿತ್ತಾರೆ ಡೈರೆಕ್ಟರ್‌.

'ಪ್ರತಿ ಚಿತ್ರವೂ ನನಗೆ ಹೊಸ ಪರೀಕ್ಷೆ ಇದ್ದ ಹಾಗೆ. ರಿಲೀಸ್‌ ಡೇಟ್‌ ಹತ್ತಿರವಾಗುತ್ತಿದ್ದಂತೆ ನಾನು ನರ್ವಸ್‌ ಆಗುತ್ತೇನೆ' ಎನ್ನುತ್ತಾರೆ ನಾಯಕ ಪುನೀತ್‌. ಅಂದಹಾಗೆ 'ಚಕ್ರವ್ಯೂಹ' ಚಿತ್ರ ಮೊದಲೇ ಹೇಳಿದ್ದ ರಿಲೀಸ್‌ ಡೇಟ್‌ಗಿಂತ ಒಂದು ವಾರ ತಡವಾಗಿ ಬಿಡುಗಡೆ ಆಗುತ್ತಿದೆ. ಇದಕ್ಕೆ ಕಾರಣ ನಿರ್ದೇಶಕರಿಗೆ ಚಿತ್ರವನ್ನು ಇನ್ನೂ ಚೆನ್ನಾಗಿ ಪ್ರೆಸೆಂಟ್‌ ಮಾಡಬೇಕೆಂಬ ಆಸೆ ಇದ್ದದ್ದು. ಚಿತ್ರದ ಗುಣಮಟ್ಟಕ್ಕಾಗಿ ಮತ್ತೊಂದು ವಾರ ಸಮಯ ತೆಗೆದುಕೊಂಡು ಕೆಲಸ ಮಾಡಿದ್ದಾರೆ.

ಇನ್ನು ನಾಯಕಿ ರಚಿತಾ ರಾಮ್‌ಗೂ ಇದೊಂದು ಡಿಫರೆಂಟ್‌ ಅನುಭವ. 'ಸ್ಟಾರ್‌ ನಟರ ಜತೆಗೆ ನಟಿಸುವ ಕೆಲಸ ತುಂಬ ಚಾಲೆಂಜಿಂಗ್‌. ಅವರ ನಿರೀಕ್ಷೆಗೆ ಮೀರಿ ನಾವು ಪರ್ಫಾಮೆನ್ಸ್‌ ನೀಡಬೇಕಾಗುತ್ತದೆ. ಚಿತ್ರದಲ್ಲಿ ಯಾವುದೂ ಕೃತಕ ಅನಿಸದೆ, ಎಲ್ಲವೂ ನ್ಯಾಚುರಲ್‌ ಆಗಿ ಮೂಡಿಬಂದಿದೆ. ಅದು ನಿರ್ದೇಶಕರ ತಾಕತ್ತು' ಎನ್ನುತ್ತಾರೆ ಈ ನಟಿ.

ರಂಗಾಯಣ ರಘು, ಭವ್ಯಾ, ಸಾಧು ಕೋಕಿಲಾ, ಅಭಿಮನ್ಯು ಸಿಂಗ್‌ ಹಾಗೂ ತಮಿಳು ನಟರಾದ ಅರುಣ್‌ ವಿಜಯ್‌, ಬ್ರಹ್ಮಾನಂದಮ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌. ತಮನ್‌ ಸಂಗೀತ ನಿರ್ದೇಶನ, ಷಣ್ಮುಗ ಸುಂದರಂ ಅವರ ಛಾಯಾಗ್ರಹಣವಿದೆ. ಸನ್‌ಶೈನ್‌ ಕ್ರಿಯೇಷನ್‌ನಡಿ ಕೆ.ಎನ್‌. ಲೋಹಿತ್‌ ನಿರ್ಮಾಣ ಮಾಡಿದ್ದಾರೆ.

-----

ತಮಿಳು ಚಿತ್ರದ ಮೂಲ ಕತೆಯನ್ನು ಹಾಗೇ ಇಟ್ಟುಕೊಂಡು ಉಳಿದ ಅಂಶಗಳನ್ನು ಬದಲಾಯಿಸಿದ್ದೇವೆ. ಎಲ್ಲಿಯೂ ಇದು ರಿಮೇಕ್‌ ಅನಿಸುವ ಫೀಲ್‌ ನೀಡದಂತೆ ಇಲ್ಲಿನ ಪರಿಸರಕ್ಕೆ ಹೊಂದುವ ಹಾಗೆ ಚಿತ್ರ ಮಾಡಿದ್ದೇವೆ.

- ಎಮ್‌. ಸರವಣನ್‌, ನಿರ್ದೇಶಕ


Viewing all articles
Browse latest Browse all 7056

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ಪ್ರೀ ವೆಡ್ಡಿಂಗ್ ಶೂಟ್ ಬಳಿಕ ಕೊಲೆ ಸಂಚು: ಪುಣೆಯಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ….!


LGBT ಗಳ ಲೈಂಗಿಕ ಆಸಕ್ತಿಯು ನೈಸರ್ಗಿಕವಾಗಿ ಬಂದಿರುವುದಲ್ಲವೇ….!


ಸೆಕ್ಸ್, ಸೆಕ್ಸ್.. ಎಂದು ಹಾತೊರೆಯುತ್ತಿದ್ದ ಬಾಯ್ ಫ್ರೆಂಡ್ ನ ಕತ್ತುಹಿಸುಕಿ ಕೊಂದ್ಳು..!


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಅದೊಂದು ಸಣ್ಣ ಮುಂಜಾಗ್ರತೆ ವಹಿಸಿದ ಕಾರಣಕ್ಕೆ 'ಹೆಂಡತಿಯ ಗುಲಾಮ'ನಾದ ಗಂಡ..!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮದುವೆ ನಂತರ ಬ್ಲೂ ಫಿಲಂ ನೋಡಿದರೆ ಏನಾಗುತ್ತೆ?


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ನಟಿ ರಚಿತಾ ರಾಮ್ ಆಸೆ ಏನು ಗೊತ್ತಾ…!


ಕಾರ್ಪೋರೇಟರ್ ಅವ್ವ ಮಾದೇಶ  ಜೀವಾವಧಿ ಶಿಕ್ಷೆಗೆ ಕಾರಣವಾದ ` ಜೋಡಿ ಕೊಲೆ’ಯ  ಇನ್ ಸೈಡ್ ಸ್ಟೋರಿ…


ಜು.25 ರಂದು ಮತ್ತೆ ದೆಹಲಿಗೆ ಸಿಎಂ ಮತ್ತು ಡಿಸಿಎಂ


ಚಿಕ್ಕ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ಪಾಠ ಮಾಡಿದ ಯೋಗೀಶ್ ಮಾಸ್ಟರ್ –ವಿಡಿಯೋ ವೈರಲ್


ಹಾಸ್ಯ : ಪಿತೃ ಪಕ್ಷದಲ್ಲಿ ಭರ್ಜರಿ ಭೋಜನಕ್ಕೆ ಮುನ್ನ ಕಾಗೆಗಳ ಮೀಟಿಂಗು!


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಲವ್, ಸೆಕ್ಸ್, ದೋಖಾ: ಖಾಸಗಿ ವಿಡಿಯೋ ಮಾಡಿ ಮಹಿಳೆ ಮೇಲೆ ಹಲ್ಲೆ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


The Ashtanga Key - Surya Namaskar


ಅತ್ತಿಗೆ–ಮೈದುನ ಅಕ್ರಮ ಸಂಬಂಧ, ಆಮೇಲೇನಾಯ್ತು ಗೊತ್ತಾ…?



<script src="https://jsc.adskeeper.com/r/s/rssing.com.1596347.js" async> </script>