ಸಾರ್ಬ್ರುಕನ್ (ಜರ್ಮನಿ): ಸಾಯಿ ಪ್ರಣೀತ್ ಇಲ್ಲಿ ನಡೆಯುತ್ತಿರುವ ಬಿಟ್‌ಬರ್ಗರ್ ಬ್ಯಾಡ್ಮಿಂಟನ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಳ್ಳುವ ಮೂಲಕ ಭಾರತದ ಸವಾಲು ಕೊನೆಗೊಂಡಂತಾಗಿದೆ.
ಇಲ್ಲಿನ ಸಾರ್ಲ್ಯಾಂಧಲ್ ಸಾರ್ಬ್ರುಕನ್‌ನಲ್ಲಿ ಗುರುವಾರ ತಡರಾತ್ರಿ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ 16ನೇ ಶ್ರೇಯಾಂಕಿತ ಸಾಯಿ ಪ್ರಣೀತ್ 17-21, 21-6, 21-18 ಗೇಮ್‌ಗಳಿಂದ ಇಂಗ್ಲೆಂಡ್‌ನ ಐದನೇ ಶ್ರೇಯಾಂಕಿತ ರಾಜೀವ್ ಔಸೆಫ್ ವಿರುದ್ಧ 50 ನಿಮಿಷಗಳಲ್ಲಿ ಸೋಲು ಕಂಡರು. ಈ ಮೂಲಕ ಸಾಯಿ ಪ್ರಣೀತ್ 0-1ರಿಂದ ಹಿನ್ನಡೆ ಅನುಭವಿಸಿದರು.
ಮೊದಲ ಗೇಮ್ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಸಾಯಿ ಪ್ರಣೀತ್, ದ್ವಿತೀಯ ಮತ್ತು ನಿರ್ಣಾಯಕ ಗೇಮ್‌ನಲ್ಲಿ ಅದೇ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಎಡವಿದರು.
↧
ಬ್ಯಾಡ್ಮಿಂಟನ್: ಸಾಯಿ ಪ್ರಣೀತ್‌ಗೆ ಸೋಲು
↧